‘ಇದು ನನ್ನದು, ಅದು ನನ್ನದು’ ಎನ್ನುತ್ತ ವ್ಯಕ್ತಿಗಳಿಗೋ, ವಸ್ತುಗಳಿಗೋ ಬಲವಾಗಿ ಅಂಟಿಕೊಳ್ಳುವ ಮೋಹದ ಪ್ರವೃತ್ತ್ತಿಯನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ? ಶತ್ರುವನ್ನು ಮಿತ್ರನನ್ನಾಗಿ ಪರಿವರ್ತಿಸುವುದು ಹೇಗೆ?
ಮೋಹ ಅರಿಷಡ್ವರ್ಗಗಳಲ್ಲಿ ಒಂದು. ಇದು ಮನುಷ್ಯನ ಸಾಧನೆಗೆ ಬಹುದೊಡ್ಡ ಅಡ್ಡಿ. ಎಂತಹ ಉನ್ನತಿಗೇರಿದ ಸಂತರೂ, ಸಾಧಕರೂ ಮೋಹಪಾಶದಿಂದಾಗಿ ಅವನತಿ ಹೊಂದಿದ ಉದಾಹರಣೆಗಳು ಅನೇಕ. ಅಹಂಕಾರವನ್ನಾದರೂ ಗೆಲ್ಲಬಹುದು; ಆದರೆ ಮಮಕಾರವನ್ನು ಗೆಲ್ಲುವುದು ಕಷ್ಟ.
ಅರಿಷಡ್ವರ್ಗದಲ್ಲಿ ಕಾಮವೊಂದು ಅಗ್ನಿ, ಕ್ರೋಧವೊಂದು ಅಗ್ನಿ. ಆದರೆ ಮೋಹವು ಅಗ್ನಿಯಲ್ಲ, ಪಾಶ. ಏಕೆಂದರೆ ಕಾಮಕ್ರೋಧಗಳು ಉದ್ರೇಕಗೊಂಡಾಗ ಅವು ನಮ್ಮ ವ್ಯಕ್ತಿತ್ವವನ್ನೇ ಸುಡುತ್ತವೆ. ಆದರೆ ಈ ರೀತಿಯಲ್ಲಿ ಮೋಹವು ನಮ್ಮನ್ನು ಸುಡುವುದಿಲ್ಲ; ಬದಲಾಗಿ ಬಿಗಿಯುತ್ತದೆ, ಬಂಧಿಸುತ್ತದೆ. ಕಾಮ, ಕ್ರೋಧಗಳು ನಮ್ಮ ಮನಸ್ಸನ್ನು ಕೆಡಿಸಿದರೆ ಮೋಹವು ಹೃದಯವನ್ನು ಹಿಂಡುತ್ತದೆ. ನನ್ನವರು ತನ್ನವರು, ನನ್ನದು ತನ್ನದು ಎಂಬ ಭಾವವೇ ಮೋಹ.
ಸಂಸಾರದ ಸಂಬಂಧಗಳನ್ನು ಅತಿಯಾಗಿ ಹಚ್ಚಿಕೊಂಡಾಗ ಮೋಹದ ಬಲೆಗೆ ಬೀಳುತ್ತೇವೆ. ಈ ಸಂಬಂಧಗಳು ಶಾಶ್ವತವಲ್ಲವೆಂದು ಮೊದಲು ತಿಳಿದುಕೊಳ್ಳಬೇಕು. ನಶ್ವರವನ್ನು ನೆಚ್ಚಿಕೊಂಡಷ್ಟೂ ನಿರಾಶರಾಗುವುದು ಹೆಚ್ಚು. ತಾತ್ಕಾಲಿಕ ಸತ್ಯದ ಮೇಲಿನ ಮೋಹವನ್ನು ಶಾಶ್ವತ ಸತ್ಯದ ಮೇಲಿನ ಪ್ರೇಮವನ್ನಾಗಿ ಪರಿವರ್ತಿಸಿದರೆ ಮನುಷ್ಯನ ಬದುಕು ಸ್ವರ್ಗವಾಗುತ್ತದೆ.
ಭಗವಂತನನ್ನರಸುವ ಕಾರ್ಯದಲ್ಲಿ ಸಾಧಕನಿಗೆ ಅಡ್ಡಿ ಬರುವ ಕೌಟುಂಬಿಕ ವ್ಯಾಮೋಹವು ಮೋಸಗೊಳಿಸುವಂತಹದ್ದು ಎಂಬುದನ್ನು ಸನಾತನಧರ್ಮ ಮಾತ್ರ ಅಲ್ಲ, ಪಾಶ್ಚಾತ್ಯ ಅನುಭಾವಿಗಳೂ ಹೇಳಿದ್ದಾರೆ.
ವಿಭಿನ್ನ ದೃಷ್ಟಿ
ಆದರೆ ಋಷಿಮುನಿಗಳ, ಸಾಧು-ಸಂತರ, ಅನುಭಾವಿಗಳ ಮಾತನ್ನು ಜನಸಾಮಾನ್ಯರು ಪಾಲಿಸುವುದು ಕಷ್ಟ. ಯಾಕೆಂದರೆ ಮಹಾಪುರುಷನಿಗೆ ಕ್ಷುಲ್ಲಕವೆನಿಸಿದ್ದು ಸಾಮಾನ್ಯನಿಗೆ ಅಮೂಲ್ಯವೆನಿಸುತ್ತದೆ. ಅನುಭಾವಿಗಳ ಪ್ರಕಾರ ಈ ಜಗತ್ತು ಮಿಥ್ಯೆಯಾದರೆ ಜನಸಾಮಾನ್ಯರ ಪಾಲಿಗೆ ಸಂಸಾರವೇ ಸತ್ಯ. ತನ್ನ ಸಂಸಾರದ ನೊಗವನ್ನು ತಾನು ಎಳೆಯದೆ ಬೇರೆ ಯಾರು ಎಳೆಯುವುದು? ತನ್ನ ಸಂಸಾರವನ್ನು ತಾನೇ ಸಾಕುವುದು ಎಂಬ ಭ್ರಮೆ ಆತನಿಂದ ಎಂಥೆಂತಹ ಕಾರ್ಯಗಳನ್ನೂ ಮಾಡಿಸಿಬಿಡುತ್ತದೆ. ಸರ್ವಜ್ಞನ ತ್ರಿಪದಿಯೊಂದು ಹೇಳುತ್ತದೆ:
ಜೊಳ್ಳು ಮನುಜರು ನಾವು ಸುಳ್ಳು ಸಂಸಾರದೊಳು|
ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ|
ಹೊರಳಾಡುತಿಹೆವು – ಸರ್ವಜ್ಞ||
ಸಮಯ ಸರಿದಂತೆ ಸಂಸಾರದ ಬಗ್ಗೆ ಅನುಭಾವಿಗಳ ಮಾತು ನಿಜ ಎಂಬುದಾಗಿ ಮನುಷ್ಯನ ಅನುಭವಕ್ಕೆ ಬರುತ್ತದೆ. ಸಂಸಾರ ಬರಿ ನಿಸ್ಸಾರ ಎಂಬುದು ಆತನಿಗೆ ತಡವಾಗಿಯಾದರೂ ಜ್ಞಾನೋದಯವಾಗುತ್ತದೆ.
ಅಕ್ಕಮಹಾದೇವಿಯ ವಚನವೊಂದು ಹೀಗಿದೆ –
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ,
ಏವೆನಯ್ಯ, ಏವೆನಯ್ಯ
ಅಂದಂದಿನ ದಂದುಗಕ್ಕೆ
ಏವೆನಯ್ಯ, ಏವೆನಯ್ಯ
ಬೆಂದೊಡಲು ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ ಕೊಲ್ಲು,
ಕಾಯಿ ನಿಮ್ಮ ಧರ್ಮ.
ಸಂಸಾರವನ್ನು ತೊರೆದು ಬಂದರೂ ಅದರ ವಾಸನೆ ಅಕ್ಕನನ್ನೂ ಬಿಡಲಿಲ್ಲ. ಅದರಿಂದಾಗಿ ನೊಂದುಕೊಂಡ ಆಕೆ ಚೆನ್ನಮಲ್ಲಿಕಾರ್ಜುನನಲ್ಲಿ ದೀನಳಾಗಿ ಮೊರೆ ಇಡುತ್ತಾಳೆ. ನಿನ್ನತ್ತ ಬರಲು ಮನಸ್ಸು ಮಾಡಿರುವ ನನಗೆ ಈ ಬೆಂಬಿಡದೆ ಕಾಡುವ ಸಂಸಾರದ ಅಂದಂದಿನ ದಂದುಗಕ್ಕೆ ಏಗುವುದರಲ್ಲಿಯೇ ಜೀವನ ಸವೆದುಹೋಗಿಬಿಟ್ಟಿರುತ್ತದೆ ಎಂದು ಪ್ರಲಾಪಿಸುತ್ತಾಳೆ. ಹೀಗೆ ಮೋಹದ ಬಾಧೆ ಉನ್ನತ ಸಾಧಕರನ್ನೂ ಬಿಟ್ಟಿಲ್ಲ.
ಬಹಳ ಹಿಂದೆ ಕರ್ನಾಟಕದ ಹಳ್ಳಿಯೊಂದರಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕಾರಣಾಂತರಗಳಿಂದ ಬದುಕಿನಲ್ಲಿ ಬೇಸರ ಬಂದುಬಿಟ್ಟಿತಂತೆ. ಊರು ಬಿಟ್ಟರು. ದೂರದ ಹಿಮಾಲಯ ಬೆಟ್ಟಗಳನ್ನು ತಲಪಿದರು. ಅಲ್ಲಿನ ಪರ್ವತದ ತಪ್ಪಲಿನಲ್ಲಿ, ಗಂಗಾ ನದೀತೀರದಲ್ಲಿ, ಪುಟ್ಟ ಗುಡಿಸಲನ್ನು ಕಟ್ಟಿಕೊಂಡು ಏಕಾಂಗಿಯಾಗಿ ಇರತೊಡಗಿದರು. ಗುಡಿಸಲಿನ ವಾಸ, ಗಂಗಾಸ್ನಾನ ಇಡೀ ದಿನ ಧ್ಯಾನ-ಅಧ್ಯಯನಗಳಲ್ಲಿರುತ್ತಿದ್ದರು. ಅಲ್ಲಿನ ಇನ್ನಿತರ ಸಾಧು-ಸಂನ್ಯಾಸಿಗಳು ಇವರನ್ನು ‘ಬೈರಾಗಿ’ ಎಂದೇ ಕರೆಯುತ್ತಿದ್ದರು. ಹೀಗೆ ಹಿಮಾಲಯಕ್ಕೆ ಬಂದು ಎಷ್ಟು ವರ್ಷಗಳಾದವೆಂಬುದರ ಲೆಕ್ಕವೂ ಅವರಿಗೆ ಇಲ್ಲದಷ್ಟು ವರ್ಷಗಳು ಕಳೆದುಹೋದವು.
ಒಮ್ಮೆ ಬೈರಾಗಿಯವರು ನದೀತೀರದ ಬಂಡೆಯೊಂದರಲ್ಲಿ ಕುಳಿತುಕೊಂಡಿದ್ದರು. ಪಕ್ಕದಲ್ಲಿದ್ದ ಮತ್ತೊಂದು ಬಂಡೆಯ ಮೇಲೆ ಪ್ರವಾಸಿಗರ ತಂಡವೊಂದು ಬಿಡಾರ ಹೂಡಿತ್ತು. ತಂಡದವರು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಎಷ್ಟೋ ವರ್ಷಗಳಿಂದ ಹಿಮಾಲಯದ ಪಹಾಡಿ ಭಾಷೆಯನ್ನು ಕೇಳುತ್ತ ಬಂದಿದ್ದ ಬೈರಾಗಿಯ ಕಿವಿಗೆ ತಂಡದವರ ಕನ್ನಡ ಮಾತು ಮಧುರವಾಗಿ ಕಂಡಿತು. ಭಾಷಾಮೋಹ ಅವರನ್ನು ಸೆಳೆಯಿತು. ಬೈರಾಗಿಯವರು ಎದ್ದು ಹೋಗಿ ತಂಡದವರೊಡನೆ ಕನ್ನಡದಲ್ಲಿ ನೀವು ಯಾವ ಊರಿನವರು? ಎಂದು ಕೇಳಿದರು. ಹಿಮಾಲಯದ ಬೈರಾಗಿಯೊಬ್ಬರು ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಕೇಳಿ ತಂಡದವರಿಗೂ ಆಶ್ಚರ್ಯ. ಅವರು ನಾವು ಕರ್ನಾಟಕದ ಇಂತಹ ಹಳ್ಳಿಯವರು” ಎಂದರು. ಆ ಹಳ್ಳಿಯ ಹೆಸರನ್ನು ಕೇಳಿದ ತಕ್ಷಣ ಬೈರಾಗಿಯವರಿಗೆ ಏನೇನೊ ನೆನಪು ತೆರೆದುಕೊಂಡಿತು. ಏಕೆಂದರೆ ಅದು ಅವರದ್ದೇ ಹಳ್ಳಿ! ತಕ್ಷಣ ಬೈರಾಗಿಯವರು ನಿಮ್ಮೂರಿನ ಸಂತೆಬೀದಿಯಲ್ಲಿ ಇಂತಹ ಕುಟುಂಬವೊಂದಿತ್ತಲ್ಲವೇ, ಅವರು ಹೇಗಿದ್ದಾರೆ? ಎಂದು ಕೇಳಿದರು.
ತಂಡದವರು ‘ಓಹ್, ಕುಟುಂಬದ ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿದ್ದಾರೆ. ಒಂದಷ್ಟು ಭೂಮಿ-ಗದ್ದೆ ಮಾಡಿಕೊಂಡು ಅನುಕೂಲವಾಗಿ ಚೆನ್ನಾಗಿದ್ದಾರೆ’ ಎಂದಾಗ, ಬೈರಾಗಿಯವರ ಮುಖ ಆನಂದದಿಂದ ಅರಳಿತ್ತು. ಅವರು ‘ಬಹಳ ಸಂತೋಷ, ಕುಟುಂಬದ ಹಿರಿಯರು ಹೇಗಿದ್ದಾರೆ?’ ಎಂದು ಕೇಳಿದರು. ತಂಡದವರು ‘ಅಯ್ಯೋ! ಆ ಕುಟುಂಬದ ಹಿರಿಯರೊಬ್ಬರು ಬಹಳ ವರ್ಷಗಳ ಹಿಂದೆ ಊರು ಬಿಟ್ಟು ಹೊರಟುಹೋದರಂತೆ; ಎಲ್ಲಿ ಹೋದರೋ ಏನೊ! ಅನಂತರ ಅವರ ಹೆಂಡತಿ ಕಷ್ಟಪಟ್ಟು ಸಂಸಾರವನ್ನು ನಡೆಸಿದರು. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿಸಿದರು. ಕಳೆದ ವರ್ಷ ಆಕೆ ತೀರಿಕೊಂಡರು. ಸಾಯುವಾಗಲೂ ಆಕೆ ಗಂಡನನ್ನು ನೆನಪಿಸಿಕೊಂಡು ಗೋಳಾಡಿದರು’ ಎಂದೆಲ್ಲ ಹೇಳಿ ಬಂಡೆಯಿಂದ ಎದ್ದು ಹೊರಟುಹೋದರು. ಆದರೆ ಕರುಳು ಹಿಂಡಿದಂತಾದ ಬೈರಾಗಿಯವರು ಬಹಳ ಹೊತ್ತಿನವರೆಗೂ ಬಂಡೆಯ ಮೇಲೆಯೇ ಅಳುತ್ತಾ ಕುಳಿತಿದ್ದರು.
ಈ ಭವಬಂಧನದಿಂದ ಪಾರಾಗಬೇಕೆಂದು ಸಂಸಾರವನ್ನು ತೊರೆದು ಸಂನ್ಯಾಸವನ್ನು ಸ್ವೀಕರಿಸಿದ್ದರು. ಸಂನ್ಯಾಸಿಯಾದ ಮೇಲೆ ಹಿಮಾಲಯದ ತಪ್ಪಲಲ್ಲಿ ಏಕಾಂಗಿಯಾಗಿ ಹಲವಾರು ವರ್ಷ ಸಾಧನೆಯನ್ನೂ ಮಾಡಿದ್ದರು. ಆದರೆ ಎಲ್ಲ ಬಿಟ್ಟಂತೆ ಕಂಡುಬಂದ ಬೈರಾಗಿ ಸಂಸಾರದ ಮೋಹ ಬಿಡಲಿಲ್ಲ. ಊರಿನಲ್ಲಿರುವ ಸಂಸಾರದ ವಾರ್ತೆಯನ್ನು ಕೇಳಿದ ತಕ್ಷಣ ಹಿಮಾಲಯವನ್ನು ಮರೆತರು, ಗಂಗೆಯ ನೀರನ್ನು ಮರೆತರು, ತನ್ನ ಮಡದಿ ಮಕ್ಕಳನ್ನು ನೆನೆದು ಕಣ್ಣೀರು ಸುರಿಸಿದರು. ಸಂಸಾರದ ಮೋಹ ಎಂಬುದು ಅಷ್ಟು ಬಲವತ್ತರವಾದದ್ದು.
ಗರುಡಪುರಾಣ ಸಂಸಾರಮೋಹದ ಬಗ್ಗೆ ಈ ರೀತಿ ಹೇಳುತ್ತದೆ –
ಲೋಹದಾರುಮಯೈಃ ಪಾಶೈಃ ಬದ್ಧೋ ಬಂಧಾತ್ ವಿಮುಚ್ಯತೇ|
ಪುತ್ರದಾರಮಯೈಃ ಬದ್ಧೋ ಕದಾಚನ ನ ಮುಚ್ಯತೇ||
ಲೋಹ, ಮರದ ಹಗ್ಗಗಳಿಂದ ಬಂಧಿತನಾದವನು ಸುಲಭವಾಗಿ ಬಿಡುಗಡೆ ಹೊಂದುತ್ತಾನೆ. ಮಗ, ಹೆಂಡತಿಯ ಮೋಹದಿಂದ ಬಂಧಿತನಾದವನು ಬಿಡುಗಡೆ ಹೊಂದಲಾರ.
ಮಾಯಾ ಜಾಲ
ಮೋಹ ಎಂಬುದು ಒಂದು ರೀತಿಯಲ್ಲಿ ಮಾಯೆ. ಭಗವಂತನ ಸೃಷ್ಟಿಯೆಲ್ಲವೂ ಮಾಯೆಯಿಂದ ಆವರಿಸಿದೆ ಎಂದ ಮೇಲೆ ಮನುಷ್ಯನೂ ಇದಕ್ಕೆ ಹೊರತಾಗಿರಲು ಸಾಧ್ಯವಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಮೋಹದ ಬಲೆಯೊಳಗೆ ನಾವೆಲ್ಲರೂ ಭದ್ರವಾಗಿರಲು ಬಯಸುತ್ತೇವೆ. ಮೋಹದ ಒಳಹೊಕ್ಕಷ್ಟೂ ನಾವು ಇನ್ನಷ್ಟು ಬಂಧಿತರಾಗುತ್ತೇವೆ. ಬಂಧನವನ್ನೇ ನಾವು ಭದ್ರತೆ ಎಂಬುದಾಗಿ ಭ್ರಮಿಸುತ್ತೇವೆ. ಈ ಮೋಹವೆಂಬ ಮಾಯೆ ಎಲ್ಲರನ್ನೂ ವಿವೇಕಶೂನ್ಯರನ್ನಾಗಿಸುತ್ತದೆ. ಈ ಮಾಯೆಯನ್ನೇ ಭುವನಮೋಹಿನೀ ಮಾಯೆಯೆನ್ನುವುದು. ಸಾಕ್ಷಾತ್ ವಿಷ್ಣುವೂ ಕೂಡ ಮೋಹಿನಿಯ ರೂಪ ತಾಳಿಯೇ ಭಸ್ಮಾಸುರನನ್ನು ಬೂದಿ ಮಾಡಿದ್ದು! ಮೋಹಕ್ಕೆ ಎಂತಹ ಚುಂಬಕ ಶಕ್ತಿಯಿದೆಯೆಂದರೆ ಅದು ನಮ್ಮನ್ನೇ ಅದರತ್ತ ಸೆಳೆದು ಸುಟ್ಟು ಭಸ್ಮಮಾಡುತ್ತದೆ. ಇದು ಹೇಗೆಂದರೆ ಕೀಟಗಳು ಬೆಂಕಿಯ ಮೋಹಕ್ಕೆ ಒಳಗಾಗಿ ತಮ್ಮನ್ನೇ ತಾವು ನಾಶ ಮಾಡಿಕೊಂಡ ಹಾಗೆ!
ಮೋಹಿನಿಯು ನಗುನಗುತ್ತ ನರ್ತನಗೈಯುತ್ತಲೇ ಅತ್ಯಂತ ಬಲಶಾಲಿಯಾಗಿದ್ದ ಭಸ್ಮಾಸುರನನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಬಿಟ್ಟಳು. ಆ ಅಸುರನೂ ಕೂಡ ನಿಜವಾಗಿಯೂ ಈ ಮೋಹಿನಿ ಯಾರೆಂಬುದನ್ನೇ ಅರಿಯದೆ ಅವಳ ಮೋಹಪಾಶದೊಳಗೆ ಸುಲಭವಾಗಿ ಸಿಲುಕಿ ತನ್ನ ರಾಜತ್ವದ ಸ್ಥಾನಮಾನವನ್ನೂ ಮರೆತ. ಅಷ್ಟೇ ಅಲ್ಲ, ತನ್ನನ್ನು ಇಷ್ಟೊಂದು ಕುಣಿಸುತ್ತಿರುವ ಈ ಮೋಹಿನಿ ಯಾರಿರಬಹುದೆಂಬ ಅರಿವು ಮೂಡುವ ಮೊದಲೇ ತಾನೇ ಭಸ್ಮನಾಗಿಬಿಟ್ಟ. ನಮಗೂ ಈ ಭಸ್ಮಾಸುರನಿಗೂ ವ್ಯತ್ಯಾಸವೇನಿದೆ? ನಾವೆಲ್ಲರೂ ಮೋಹದ ಪಾಶಕ್ಕೆ ಸಿಲುಕಿಕೊಂಡು ಈ ಜಗತ್ತಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದೇವೆ. ಕೊನೆಗೊಂದು ದಿನ ಭಸ್ಮವಾಗಿ ಹೇಳಹೆಸರಿಲ್ಲದಂತಾಗುತ್ತೇವೆ. ನಮ್ಮಲ್ಲಿರುವ ಮೋಹವನ್ನು ಭಸ್ಮ ಮಾಡಬೇಕೇ ವಿನಾ ನಾವೇ ಭಸ್ಮವಾಗಬಾರದು. ನಿರ್ಲಿಪ್ತನಾಗಿ, ನಿರ್ಮೋಹಿಯಾಗಿ ಮೋಹವನ್ನೇ ಭಸ್ಮಮಾಡುವ ಈಶ್ವರನೇ ನಮಗೆ ಆದರ್ಶವಾಗಬೇಕು. ಮೋಹವೇ ನಮ್ಮನ್ನು ಪುನಃ ಪುನಃ ಜನನ-ಮರಣ ಎಂಬ ಚಕ್ರಕ್ಕೆ ಸಿಲುಕಿಸುವುದು.
ಋಷಭದೇವನ ಮಗನಾದ ಭರತನು ತಂದೆಯಂತೆಯೆ ದೊಡ್ಡ ದೈವಭಕ್ತ. ಆತನು ದೇವರ ಪೂಜೆಯೆಂಬ ಭಾವನೆಯಿಂದ ಕರ್ಮಗಳನ್ನು ಮಾಡಿದನೇ ಹೊರತು, ಆತನಿಗೆ ಯಾವ ಭೋಗಭಾಗ್ಯಗಳ ಆಸೆಯೂ ಇರಲಿಲ್ಲ. ಇದರಿಂದ ಆತನ ಮನಸ್ಸು ಪರಿಶುದ್ಧವಾಯಿತು. ಆತನ ಭಕ್ತಿ ಬೆಳೆದು ಭಕ್ತಿಯೋಗವಾಯಿತು. ಆತನು ತನ್ನ ರಾಜ್ಯವನ್ನು ಮಕ್ಕಳಿಗೆ ಹಂಚಿಕೊಟ್ಟು, ಪುಲಹ ಋಷಿಯ ಆಶ್ರಮಕ್ಕೆ ಹೊರಟುಹೋದ.
ಪುಲಹಾಶ್ರಮವು ಬಹು ಪವಿತ್ರವಾದುದು. ಭರತನು ಅಲ್ಲಿ ಗಂಡಕೀನದಿಯ ತೀರದಲ್ಲಿ ತನ್ನ ಆಶ್ರಮವನ್ನು ಮಾಡಿಕೊಂಡು, ತಪೋನಿರತನಾದನು. ಮೂರುಹೊತ್ತು ನದಿಯಲ್ಲಿ ಸ್ನಾನ, ಹೂ ತುಳಸಿಗಳಿಂದ ದೇವರ ಪೂಜೆ, ಗೆಡ್ಡೆ ಗೆಣಸುಗಳ ಆಹಾರ, ಸದಾ ದೇವರ ಧ್ಯಾನ – ಇದು ಆತನ ದಿನಚರಿ. ದಿನದಿನಕ್ಕೂ ಆತನ ಮನಸ್ಸು ಏಕಾಗ್ರವಾಗುತ್ತ ಹೋಯಿತು. ಆತನ ಅಂತರಂಗ ಆನಂದದಿಂದ ತುಂಬಿ, ದೈವಸಾಕ್ಷಾತ್ಕಾರ ಮಾಡಿಕೊಳ್ಳುವ ದಿನ ಹತ್ತಿರವಾಗುತ್ತಿತ್ತು.
ಒಮ್ಮೆ ಆತನು ಓಂಕಾರವನ್ನು ಜಪಿಸುತ್ತ ಕುಳಿರುವಾಗ, ಒಂದು ಹೆಣ್ಣು ಜಿಂಕೆ ನೀರು ಕುಡಿಯಲೆಂದು ಬಂದದ್ದು ಸಿಂಹದ ಗರ್ಜನೆಯಿಂದ ಭಯಗೊಂಡು, ನೀರನ್ನೂ ಕುಡಿಯದೆ ಆಚೆಗೆ ಓಡಿಹೋಗಲು ಯತ್ನಿಸಿತು. ತುಂಬುಗರ್ಭಿಣಿಯಾಗಿದ್ದ ಆ ಜಿಂಕೆ, ಹೆದರಿಕೆಯಿಂದ ಹಾರಿದ ರಭಸಕ್ಕೆ ಗರ್ಭಸ್ರಾವವಾಗಿ ಅದರ ಮರಿ ಹೊಳೆಯಲ್ಲಿ ಬಿತ್ತು. ತಾಯಿ ಜಿಂಕೆ ದಡವೇರಿ ಸತ್ತುಬಿತ್ತು. ಜಪದಲ್ಲಿ ಕುಳಿತಿದ್ದ ಭರತಋಷಿ ಹೊಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಜಿಂಕೆಯ ಮರಿಯನ್ನು ತನ್ನ ಆಶ್ರಮಕ್ಕೆ ಕೊಂಡೊಯ್ದನು. ಆತನ ಈ ದಯಾಗುಣವೇ ಮೋಹವಾಗಿ ಆತನ ದುರ್ಗತಿಗೆ ಕಾರಣವಾಯಿತು. ವೈರಾಗ್ಯದಿಂದ ಎಲ್ಲವನ್ನೂ ತ್ಯಜಿಸಿದ್ದ ಆತನಿಗೆ, ತಾನು ಬದುಕಿಸಿದ ಜಿಂಕೆಯ ಮರಿಯಲ್ಲಿ ಅಪಾರವಾದ ಮಮತೆ ಹುಟ್ಟಿತು. ಅದರದೇ ಹಿತಚಿಂತನೆಯಿಂದ ಆತನ ಸ್ನಾನ, ಧ್ಯಾನ, ಪೂಜೆಗಳು ಹಿಂದೆ ಬಿದ್ದು, ಕ್ರಮೇಣ ನಿಂತೇ ಹೋದವು. ಹುಲ್ಲೆಯ ಮರಿಯ ಮೇಲಿನ ಮಮಕಾರವೇ ಆತನಿಗೆ ಪ್ರಾರಬ್ಧಕರ್ಮವಾಗಿ ಪರಿಣಮಿಸಿತು.
ಹೀಗಿರಲು, ಇಲಿಯ ಬಿಲವನ್ನು ಹೊಗುವ ಹಾವಿನಂತೆ ಮೃತ್ಯುವು ಆತನ ದೇಹವನ್ನು ಪ್ರವೇಶಿಸಿತು. ಆತನು ಸಾಯುವ ಕಾಲದಲ್ಲಿ ಆ ಜಿಂಕೆಯ ಮರಿಯು ಆತನ ಪಕ್ಕದಲ್ಲಿಯೇ ಕುಳಿತು ಕಣ್ಣೀರಿಡುತ್ತಿತ್ತು. ಅದನ್ನು ನೋಡುತ್ತಾ, ಅದರ ಚಿಂತೆಯಲ್ಲೇ ಆತ ಪ್ರಾಣಬಿಟ್ಟ. ಇದರ ಫಲವಾಗಿ ಆತ ಮರುಜನ್ಮದಲ್ಲಿ ಜಿಂಕೆಯಾಗಿ ಹುಟ್ಟಬೇಕಾಯಿತು. ಯಾರು ರಾಜ್ಯವನ್ನು, ಸಂಸಾರವನ್ನು ಬಿಟ್ಟು ಮುಕ್ತಿಗಾಗಿ ಸಾಧನೆ ಮಾಡುತ್ತಿದ್ದನೋ, ಆತನು ಕೇವಲ ಒಂದು ಜಿಂಕೆಯ ಮರಿಯ ಮೋಹದಿಂದ ಜಿಂಕೆಮರಿಯಾಗಿ ಪುನಃ ಹುಟ್ಟಬೇಕಾಯಿತು.
ವಿಭಿನ್ನ ವ್ಯಾಪ್ತಿ
ಮೋಹ ಎಂಬುದು ಯಾರನ್ನೂ ಬಿಟ್ಟಿಲ್ಲ. ಜನಸಾಮಾನ್ಯರಿಂದ ಹಿಡಿದು ಕವಿಗಳು, ವಿದ್ವಾಂಸರು, ವಿಜ್ಞಾನಿಗಳು, ರಾಜಕಾರಣಿಗಳು, ಸಂನ್ಯಾಸಿಗಳು ಎಲ್ಲರನ್ನೂ ಮೋಹ ತನ್ನ ಪಾಶದಲ್ಲಿ ಬಂಧಿಸಿದೆ. ಒಬ್ಬೊಬ್ಬರಿಗೆ ಒಂದೊಂದರ ಮೋಹ ಇರಬಹುದು. ಕೆಲವರಿಗೆ ಕೀರ್ತಿಯ ಮೋಹ, ಇನ್ನು ಕೆಲವರಿಗೆ ಪುತ್ರವ್ಯಾಮೋಹ, ಮತ್ತೆ ಕೆಲವರಿಗೆ ಅಧಿಕಾರಮೋಹ, ಹಣದ ವ್ಯಾಮೋಹ ಇರುತ್ತದೆ.
ಕುರ್ಚಿಯ ಮೋಹ ಜಗತ್ತಿನ ಯಾವ ಜನರನ್ನೂ ಬಿಟ್ಟಿಲ್ಲವೆಂದು ತೋರುತ್ತದೆ. ಸೂರ್ಯನ ಬೆಳಕು ಬೀಳುವ ನೆಲದ ಮೇಲೆ ಜನರು ಎಲ್ಲೆಲ್ಲಿ ಇರುವರೋ ಅಲ್ಲೆಲ್ಲ ಈ ಕುರ್ಚಿಯ ವ್ಯಾಮೋಹ ತುಂಬಿಕೊಂಡಿದೆ. ಕುರ್ಚಿಯು ಅಧಿಕಾರ ಹಾಗೂ ಅಂತಸ್ತುಗಳ ದ್ಯೋತಕವೆನಿಸಿದೆ. ತನ್ನ ಮಗನಿಗೇ ಸಿಂಹಾಸನ ಸಿಗಬೇಕೆನ್ನುವ ಕೈಕೇಯಿಯ ಮಹತ್ತ್ವಾಕಾಂಕ್ಷೆಯೇ ರಾಮನನ್ನು ಅರಣ್ಯಕ್ಕೆ ಅಟ್ಟಿ ರಾಮಾಯಣಕ್ಕೆ ಕಾರಣವೆನಿಸಿತು. ಪತ್ನಿಯ ಮೇಲಿನ ವ್ಯಾಮೋಹವು ದಶರಥನನ್ನು ಮೂಕನನ್ನಾಗಿ ಮಾಡಿತು; ತನ್ನ ಮಾತು ನೆರವೇರಲೆಂದು ಸಿಂಹಾಸನವೇರಬೇಕಿದ್ದ ರಾಮನನ್ನು ಕಾಡಿಗೆ ಕಳಿಸುವಂತೆ ಮಾಡಿತು. ಮಕ್ಕಳ ಮೇಲಿನ ಮೋಹ ಕುರುಡ ಧೃತರಾಷ್ಟ್ರನನ್ನು ಇನ್ನೂ ಹೆಚ್ಚು ಕುರುಡನನ್ನಾಗಿ ಮಾಡಿತು. ಹೊರಗಣ್ಣು ಮಾತ್ರವಲ್ಲ ಒಳಗಣ್ಣು ಕೂಡ ಕುರುಡಾಯಿತು; ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು.
ಸಿಂಹಾಸನದ ಮೋಹವೇ ಮೊಗಲ ಸಾಮ್ರಾಜ್ಯ ದುರ್ಬಲಗೊಳ್ಳುವುದಕ್ಕೆ, ಕೊನೆಗೆ ಹಾಳಾಗುವುದಕ್ಕೆ ಕಾರಣವೆನಿಸಿತು. ಸಿಂಹಾಸನದ ವ್ಯಾಮೋಹವು ತಂದೆ ಮಕ್ಕಳನ್ನು ಅಗಲಿಸಿತು. ಸಹೋದರರನ್ನು ದಾಯಾದಿಗಳನ್ನಾಗಿ ಮಾಡಿತು. ಒಡಹುಟ್ಟಿದವರನ್ನು ಕೊಲ್ಲಿಸಿ, ತಂದೆಯನ್ನು ಸೆರೆಮನೆಯಲ್ಲಿರಿಸಿ ರಾಜ್ಯಭಾರ ಮಾಡಿದ ಔರಂಗಜೇಬನ ರಕ್ತಸಿಕ್ತ ಕಥೆ ಇತಿಹಾಸದಲ್ಲಿ ದಾಖಲಾಗಿದೆ.
ಆಧುನಿಕ ಕಾಲದಲ್ಲೂ ಧೃತರಾಷ್ಟ್ರರಂತಹ, ಔರಂಗಜೇಬನಂತಹ ರಾಜಕಾರಣಿಗಳೇ ತುಂಬಿದ್ದಾರೆ. ತನ್ನ ಅನಂತರ ಅಧಿಕಾರದಲ್ಲಿ ತನ್ನ ಮಗನೇ ಇರಬೇಕೆಂಬ ವ್ಯಾಮೋಹ ಅವರಿಗೆ. ಇಂತಹವರ ಪಟ್ಟಿಮಾಡಿದರೆ ಬರೆದು ಮುಗಿಯಲಿಕ್ಕಿಲ್ಲ.
ಅರಿಷಡ್ವರ್ಗಗಳಲ್ಲಿ ಯಾವುದನ್ನು ಬೇಕಾದರೂ ಗೆಲ್ಲಬಹುದು; ಆದರೆ ಪುತ್ರವ್ಯಾಮೋಹದ ಮೇಲೆ ಜಯ ಸಾಧಿಸುವುದು ಬಹಳ ಕಷ್ಟ. ಈ ಮೋಹಬಂಧನ ಎಂಥ ಆಭಾಸ ಮಾಡುತ್ತದೆನ್ನಲು ಗೋಂದಾವಲೇಕರ್ ಮಹಾರಾಜರು ರೋಚಕ ಕಥೆಯೊಂದನ್ನು ಹೇಳುತ್ತಿದ್ದರು.
ಎಲ್ಲವನ್ನು ಈಶ್ವರನಿಗೆ ಅರ್ಪಣೆ ಮಾಡುವುದರಿಂದಲೇ ಆನಂದದ ಪ್ರಾಪ್ತಿ ಎಂದು ಸಾಧುಗಳೊಬ್ಬರು ಜನರಿಗೆ ಸದಾ ಉಪದೇಶ ಮಾಡುತ್ತಿದ್ದರಂತೆ. ಅದರಿಂದ ಪ್ರಭಾವಿತಳಾದ ಶಿಷ್ಯೆಯೊಬ್ಬಳು ತನ್ನ ಮಗನನ್ನೇ ಗುರುಗಳಿಗೆ ಸಮರ್ಪಿಸಿದಳು. ಸಾಧುಗಳು ಅಕ್ಕರೆಯಿಂದ ಹುಡುಗನ ಪೋಷಣೆ ಮಾಡುತ್ತಿದ್ದರು. ಕಾಲಕ್ರಮದಲ್ಲಿ ಹುಡುಗನಿಗೆ ಆಶ್ರಮದಲ್ಲಿ ಉಪನಯನವನ್ನು ಮಾಡಿದರು. ಆಗ ಎಲ್ಲರೂ ಸಂಭ್ರಮದಲ್ಲಿದ್ದಾಗ, ಹುಡುಗನ ತಾಯಿ ಅಳುತ್ತಿದ್ದಳು, ಏಕೆ ಅಳುತ್ತಿದ್ದುದೆಂದು ಆಕೆಯನ್ನು ಸಾಧುಗಳು ವಿಚಾರಿಸಿದರು. ಮುಂಜಿಯಲ್ಲಿ ಹುಡುಗನಿಗೆ ಸಾಧುಗಳು ಬಂಗಾರದ ಸರ ಮಾಡಿಸಿ ಹಾಕಿರಲಿಲ್ಲವೆಂಬುದು ಆಕೆಯ ದುಃಖಕ್ಕೆ ಕಾರಣವಾಗಿತ್ತು! ಸಾಧುಗಳು ಆಕೆಗೆ ಹೇಳಿದರು: ತಾಯಿ, ನೀನು ಹುಡುಗನನ್ನು ನನಗೆ ಒಪ್ಪಿಸಿದ ಮೇಲೆ ಅವನು ನನಗೆ ಸೇರಿದವನು. ಹೀಗಿರುವಾಗ, ಅವನಿಗೆ ಸರ ಇಲ್ಲವೆಂದು ನೀನು ಏಕೆ ಅಳಬೇಕು? ಈಗ ಅಳುವ ಅಧಿಕಾರ ನನ್ನದು – ಹೀಗೆ ಹೇಳಿ ಸಾಧುಗಳು ತಾವೇ ಅಳತೊಡಗಿದಾಗ ಅಲ್ಲಿ ನೆರೆದಿದ್ದವರೆಲ್ಲ ಘೊಳ್ಳನೆ ನಕ್ಕರು. ಪ್ರಾಯಶಃ ಆ ತಾಯಿ ಆಗ ತನ್ನ ಅಳುವನ್ನು ನಿಲ್ಲಿಸಿರಬೇಕು!
ತಾರಕ ಮಂತ್ರ
ಮೋಹವನ್ನು ಗೆಲ್ಲುವುದು ಕಷ್ಟವಾದರೂ ಅಸಾಧ್ಯವಲ್ಲ ಎಂಬುದಾಗಿ ಮಹಾತ್ಮರು ತಮ್ಮ ಜೀವನದಿಂದಲೇ ತೋರಿಸಿಕೊಟ್ಟಿದ್ದಾರೆ. ಅದೇ ನಮಗೆ ದಾರಿದೀಪ.
ಒಮ್ಮೆ ಗೋವಿಂದಭಟ್ಟರು ಶಿಷ್ಯನಾದ ಶಿಶುನಾಳ ಶರೀಫ ಮತ್ತು ಇತರ ಶಿಷ್ಯರೊಡನೆ ಪ್ರಯಾಣ ಮಾಡುತ್ತಿದ್ದರು. ದಾರಿಯಲ್ಲಿ ಒಂದು ಚಿನ್ನದ ಕಡಗ ಬಿದ್ದಿತ್ತು. ಹೊನ್ನು ಮಣ್ಣುಗಳಿಗೆ ಮನಸೋಲಬಾರದೆಂದು ಬೋಧಿಸಿದ್ದ ಭಟ್ಟರು ಶಿಷ್ಯರ ಗಮನ ಕಡಗದ ಮೇಲೆ ಬೀಳದಿರಲೆಂದು ಶರೀಫರಿಗೆ ‘ಲೋ ಶರೀಫಾ, ಆ ಕಡೆ ಇರುವ ಎಕ್ಕದ ಗಿಡದಿಂದ ಎಲೆಗಳನ್ನು ಕಿತ್ತು ತಾ’ ಎಂದು ಆಜ್ಞಾಪಿಸಿದರು. ಶರೀಫ ಆ ಕಡೆ ಹೋದಕೂಡಲೇ, ಚಿನ್ನದ ಬಳೆಯನ್ನು ಒಂದು ತಗ್ಗು ತೋಡಿ ಅದರಲ್ಲಿರಿಸಿ ಅದರ ಮೇಲೆ ಮಣ್ಣು ಮುಚ್ಚಿದರು. ಶರೀಫನು ಎಕ್ಕದ ಎಲೆ ಕಿತ್ತು ತರುವಾಗ ಆ ಮುಚ್ಚಿದ ಮಣ್ಣಗುಡ್ಡೆಯ ಮೇಲೆ ವಾಂತಿ ಮಾಡಿದ. ಗೋವಿಂದಭಟ್ಟರಿಗೆ ಹೀಗೇಕೆ ವಾಂತಿ ಮಾಡಿಕೊಂಡನೆಂದು ತಿಳಿಯದೆ, ಕಾರಣ ಕೇಳಿದರು. ಅದಕ್ಕೆ ಶರೀಫ, ಸ್ವಾಮಿ, ನಾನು ಚಿನ್ನಕ್ಕೆ ಮನಸ್ಸು ಕೊಟ್ಟೆನೆಂದು ಹೆದರಿ ಚಿನ್ನದ ಕಡಗವನ್ನು ಗುಂಡಿ ತೋಡಿ ಮಣ್ಣು ಮುಚ್ಚಿದಿರಿ. ನನಗೆ ಆ ರೀತಿಯ ಭಯವಿಲ್ಲ. ಆದರೆ ನಿಮ್ಮ ಇತರ ಶಿಷ್ಯರು ಹಿಂದೆ ಬರುತ್ತಿದ್ದಾರೆ. ಅವರು ಕುತೂಹಲದಿಂದ ಆ ಗುಡ್ಡೆಯನ್ನು ಕೆದಕಿ ನೋಡಬಹುದು. ಚಿನ್ನ ಕಂಡು ಅವರ ಮನಸ್ಸು ಚಂಚಲವಾಗಬಹುದು. ಹಾಗಾಗದಿರಲೆಂದು ನಾನು ಆ ಗುಡ್ಡೆಯ ಮೇಲೆ ವಾಂತಿ ಮಾಡಿಕೊಂಡೆ ಎಂದ. ಅದಕ್ಕೆ ಭಟ್ಟರು, “ಬಯಸಿ ತಿಂದ ಅನ್ನವೆಲ್ಲ ಹೊರಗೆ ಹೋಯಿತಲ್ಲೋ!” ಎಂದು ತಮಾಷೆ ಮಾಡಿದರು. ಅದಕ್ಕೆ ಶರೀಫ ನೀಡಿದ ಉತ್ತರ ಹೃದಯಸ್ಪರ್ಶಿಯಾಗಿತ್ತು. ಅವನು ಹೇಳಿದ, “ನಾನು ವಾಂತಿಮಾಡಿದ್ದು ಅನ್ನವಲ್ಲ ಗುರುಗಳೇ! ಅದು ಒಳಗಿದ್ದ ಮಾಯೆ ಮೋಹಗಳ ಕಲ್ಮಶ. ನಿಮ್ಮ ಅನುಗ್ರಹದಿಂದ ಅದು ಹೊರಕ್ಕೆ ಹೋಯಿತು.
ಹೀಗೆ ನಾವು ಸಜ್ಜನರ ಸಂಗದಲ್ಲಿ, ಗುರುಗಳ ಸಾನ್ನಿಧ್ಯದಲ್ಲಿ ಮೋಹವನ್ನು ಗೆಲ್ಲಬಹುದು. ಗುರುಗಳ, ಸಜ್ಜನರ ಸತ್ಸಂಸ್ಕಾರ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಮೋಹದ ಪಾಶದಿಂದ ಪಾರಾಗಬೇಕಾದರೆ ಈ ಮೋಹವನ್ನೇ ಉದಾತ್ತಗೊಳಿಸಬೇಕು, ಉನ್ನತಿಗೇರಿಸಬೇಕು. ನಾವು ಮನುಷ್ಯನನ್ನು ಕೇವಲ ಮನುಷ್ಯನನ್ನಾಗಿ ಪ್ರೀತಿಸಿದರೆ ಅದು ಮೋಹ; ಆದರೆ ಮನುಷ್ಯನನ್ನು ಭಗವತ್ಸ್ವರೂಪಿಗಳಂತೆ ಕಂಡು ಪ್ರೀತಿಸಿದರೆ ಅದು ಪ್ರೇಮ. ಮೋಹ ಎನ್ನುವುದು ಬಂಧನಕ್ಕೆ ಕಾರಣವಾದರೆ, ಪ್ರೇಮ ಎನ್ನುವುದು ಬಿಡುಗಡೆಗೆ, ಎಂದರೆ ಮುಕ್ತಿಗೆ ಕಾರಣವಾಗುತ್ತದೆ.
ನಾವು ಸದಾ ಎಚ್ಚರದಿಂದ ಬದುಕಿದರೆ ಈ ಮೋಹದ ಪಾಶಕ್ಕೆ ಬೀಳದೆ ಇರಬಹುದು. ನಮ್ಮ ವಿವೇಕವನ್ನು ಸದಾ ಜಾಗೃತವಾಗಿಟ್ಟು ವಿವೇಚನಾಶಕ್ತಿಯಿಂದ ಬದುಕಿದರೆ ಮೋಹ ನಮ್ಮನ್ನು ಬಾಧಿಸುವುದಿಲ್ಲ. ‘ಇದು ನನ್ನದು, ಅದು ನನ್ನದು’ ಎನ್ನುತ್ತ ವ್ಯಕ್ತಿಗಳಿಗೋ, ವಸ್ತುಗಳಿಗೋ ಬಲವಾಗಿ ಅಂಟಿಕೊಳ್ಳುವ ಮೋಹದ ಪ್ರವೃತ್ತ್ತಿಯನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ? ಶತ್ರುವನ್ನು ಮಿತ್ರನನ್ನಾಗಿ ಪರಿವರ್ತಿಸುವುದು ಹೇಗೆ? ‘ಪರಮಾತ್ಮನೇ ನನ್ನವನು’ ಎಂದು ಬಲವಾಗಿ ಭಾವಿಸುವುದರ ಮೂಲಕ! ಲೌಕಿಕ ಅನಿತ್ಯಗಳ ಬಗ್ಗೆ ಮೋಹಗೊಂಡರೆ ಕೊನೆಗೊಂದು ದಿನ ಹತಾಶೆ ಕಟ್ಟಿಟ್ಟದ್ದು. ಆದರೆ ನಿತ್ಯಸತ್ಯವಾದ ಪರಮಾತ್ಮನಲ್ಲಿ ಮೋಹವನ್ನಿಟ್ಟಾಗ ಕ್ರಮೇಣ ಅದು ಭಗವದನುರಾಗವಾಗಿ ಪರಿವರ್ತನೆಗೊಂಡು ಸಾಧಕನನ್ನು ಮುಕ್ತಿಯೆಡೆಗೆ ಮುನ್ನಡೆಸುತ್ತದೆ.
ಕೇವಲ ಮನುಷ್ಯಪ್ರಯತ್ನದಿಂದ ಈ ಮಾಯೆಯನ್ನು, ಮೋಹವನ್ನು ಜಯಿಸಲು ಆಗುವುದಿಲ್ಲ. ನಮ್ಮ ಪ್ರಯತ್ನಕ್ಕೆ ದೈವಕೃಪೆಯೂ ಬೇಕಾಗುತ್ತದೆ. ಆದ್ದರಿಂದ ಮಹಾಮಾಯೆಯ ಪ್ರಭುವಾದ ಪರಮಾತ್ಮನಿಗೆ ಶರಣುಹೊಗುವುದರಿಂದ ಮಾತ್ರವೇ ಮೋಹವೆಂಬ ಸಮ್ಮೋಹಿನಿಯ ಬಿಗಿಮುಷ್ಟಿಯಿಂದ ಬಿಡಿಸಿಕೊಂಡು ಅಮೃತಸ್ವರೂಪಿಗಳೂ ಪ್ರೇಮಸ್ವರೂಪಿಗಳೂ ಆಗಬಹುದು. ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಇದನ್ನೇ ಹೇಳಿದ್ದಾನೆ –
ಮಾಮೇವ ಯೇ ಪ್ರಪದ್ಯಂತೇ
ಮಾಯಾಮೇತಾಂ ತರಂತಿ ತೇ||
ಯಾರು ನನಗೆ ಶರಣಾಗುವರೋ ಅವರು ಈ ಮಾಯೆಯನ್ನು ದಾಟುವರು.
ನಾವು ನಮ್ಮನ್ನು ಕುರಿತು ವಿಚಾರ ಮಾಡುವುದಿಲ್ಲ. ನಿಜವಾಗಿ ಅನಾದಿಯಾದ ಅಜ್ಞಾನವು ನಮ್ಮನ್ನು ದುಃಖೀಗಳನ್ನಾಗಿ ಮಾಡಿದೆ. ನಾನು ಎಂದರೆ ಆತ್ಮ. ನನಗಿಂತ ಬೇರೆಯಾದುದು ಅನಾತ್ಮ. ಆತ್ಮನಲ್ಲಿ ಆರೋಪಿತವಾದ ಅನಾತ್ಮ ವಿಷಯಗಳನ್ನು ತೆಗೆದು ಹಾಕಿದರೆ ಆಗ ಪರಿಶುದ್ಧವಾದ ಕೇವಲ ಆತ್ಮತತ್ವವು ಗೋಚರವಾಗುತ್ತದೆ. ಈ ಪರಿಶುದ್ಧವಾದ ಆತ್ಮವು ಎಲ್ಲಾ ಶರೀರಗಳಲ್ಲಿಯೂ ಒಂದೇ ಆಗಿದೆ. ಇದೇ ಬ್ರಹ್ಮ. ಇದು ಸರ್ವಜ್ಞ, ಸರ್ವಶಕ್ತ, ಇದಕ್ಕೆ ದೇಶ ಕಾಲಗಳ ಪರಿಧಿಯಿಲ್ಲ. ಇದು ಅನಂತ. ಮಾಯೆಯೆಂಬ ಆವರಣದಿಂದಾಗಿ ಈ ವಾಸ್ತವವನ್ನು ನಾವು ತಿಳಿದಿಲ್ಲ. ಮಾಯೆಯ ನಿಃಶೇಷವಾಗಿ ನಾಶವಾದಾಗ ಜೀವಿಗೆ ಯಾವ ಪ್ರಾಪಂಚಿಕ ದುಃಖಗಳೂ ಇರುವುದಿಲ್ಲ. ನಿದ್ದೆಯಿಂದ ಎಚ್ಚೆತ್ತವನಿಗೆ ಸ್ವಪ್ನಕಾಲವೆಲ್ಲಿ? ಅದು ಕೇವಲ ತನ್ನ ಸಚ್ಚಿದಾನಂದ ಸ್ವರೂಪದಲ್ಲಿರುವ ಪರಮೋಚ್ಚ ಸ್ಥಿತಿ! ಇಂಥಹ ಬ್ರಾಹ್ಮಿà ಸ್ಥಿತಿಯು ನಮ್ಮ ಜೀವನದ ಲಕ್ಷ್ಯವಾಗಬೇಕು. ನಮ್ಮ ಎಲ್ಲ ಕರ್ಮಾಚರಣೆಗಳು ಆಗ ಸಾರ್ಥಕ. ಇದು ಶಂಕರರ ಉಪದೇಶದ ಸಾರ.
ಆತ್ಮತತ್ವವು ಅಣುವಿಗಿಂತ ಅಣುವಾಗಿಯೂ ,ಮಹತ್ತಿಗಿಂತ ಮಹತ್ತಾಗಿಯೂ ,ಪ್ರತಿ ಜೀವಿಯ ಕುರಹದಲ್ಲಿಯೂ ವಾಸಿಸುತ್ತಿದೆ .ಮನೋಬುದ್ಧೀಂದ್ರಿಯಗಳ ಕರುಣೆಯಿಂದ ಯಾರು ಸಂಕಲ್ಪ ವಿಕಲ್ಪಗಳಿಂದ ವಿಮುಕ್ತನಾಗುತ್ತಿದ್ದಾನೋ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡು ಜ್ಞಾನಿಯು ತನ್ನಲ್ಲಿ ತಾನು ಸ್ಥಿರನಾಗಿ ನಿಲುವುದೇ ಸಚ್ಚಿದಾನಂದ ಸ್ವರೂಪನಾದ
ನಾನು ಯಾರು ಜಾಗದಲ್ಲಿಯೇ ಆತ್ಮ ವಿಚಾರವನ್ನು, ಶುದ್ಧ ಅರಿವೇ ನಾನು. ಈ ಅರಿವಿನ ಸ್ವರೂಪವೇ ಸಚ್ಚಿದಾನಂದ (ಸತ್, ಚಿತ್, ಆನಂದ). ನಾನು ನನ್ನನ್ನು ಅರಿತುಕೊಂಡಾಗ ನಾನು (ಪರಬ್ರಹ್ಮ) ನನ್ನೊಳಗಿತ್ತು.” ನಾನು ಯಾರು- ನಾನು ಯಾವ ಕಾರಣಕ್ಕಾಗಿ ಹುಟ್ಟಿದ್ದೇನೆ ಎಂಬುದು ಕೆಲವರಿಗೆ ಅರಿವಾಗುವುದರಲ್ಲಿ ಜೀವನವೇ ಮುಗಿದಿರುತ್ತದೆ. ಆದರೆ ನಾವು ಬದುಕಿರುವಾಗ ನಡೆಯುವ ಎಲ್ಲ ಘಟನೆಗಳು “ನಾನು’ವಿನಿಂದಲೇ ಪ್ರಾರಂಭವಾಗಿ “ನಾನು’ ವಿನಿಂದಲೇ ಮುಗಿಯುತ್ತವೆ. ಅಧ್ಯಾತ್ಮದಲ್ಲಿ “ನಾನು’ ಅಂದರೆ ಆತ್ಮ. ಆತ್ಮ ಅಂದರೆ ಬ್ರಹ್ಮ. “ನಾನು’ ಅಂದರೆ ಬ್ರಹ್ಮ. ಪರಮಾತ್ಮನನ್ನು ಅರಿತುಕೊಳ್ಳಬೇಕೆಂಬುದರ ಆಶಯ “ನನ್ನನ್ನು’ ಅರಿತುಕೊಳ್ಳುವುದೇ. ಮೋಕ್ಷ ಅಂದರೂ ಇದೇ. ಇದನ್ನೇ ಬ್ರಹ್ಮಜ್ಞಾನ ಎನ್ನುತ್ತಾರೆ. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ವಿಜ್ಞಾನ, ಸಮಾಜಶಾಸ್ತ್ರ ಇತ್ಯಾದಿ ಪ್ರತಿಪಾದಿಸುವುದೂ ಇದನ್ನೇ.
ಮನುಷ್ಯನಲ್ಲಿ ನಾನು ಬ್ರಹ್ಮವಾಗಿದ್ದೇನೆ ” ” ನಿತ್ಯ ಶುದ್ಧನಾಗಿದ್ದೇನೆ” ಎನ್ನುವುದು, ಮಾತಿನಿಂದ ಹೇಳಿವುದು, ಮನಸ್ಸಿನಿಂದ ಧ್ಯಾನಿಸುವುದು ಯಾವುದೂ ಇಲ್ಲ. ಈ.ಜಗತ್ತೆಲ್ಲವೂ ಸಚ್ಚಿದಾನಂದ ಸ್ವರೂಪವಾದ ಬ್ರಹ್ಮದಿಂದ ವ್ಯಾಪ್ತವಾಗಿದೆ.ನಾನು, ನನಗಿಂತ ಬೇರೆಯಾದದ್ದು, ಆಕಾಶ, ಎಲ್ಲವೂ ಸಚ್ಚಿದಾನಂದವಾಗಿದೆ. ನೀನು ” ಎನ್ನುವುದು ಇರುವಾಗ ” ನಾನು ” ಎನ್ನುವುದು ಇರುತ್ತದೆ. ನೀನು ಎನ್ನುವುದು ಇಲ್ಲವಾದರೆ, ನಾನು ಎನ್ನುವುದೂ ಇಲ್ಲ. ” ಇದು ” ಎನ್ನುವುದು ” ಅದೇ ” (ಬ್ರಹ್ಮವೇ)ಆಗಿರುವಾಗ ” ಅದು ” ಎನ್ನುವುದು “ಇದೇ ” ಆಗಿರುತ್ತದೆ.
ಆತ್ಮ ಸೂಕ್ಷ್ಮಾತಿ ಸೂಕ್ಷ್ಮ ಪ್ರಕಾಶ ಸ್ವರೂಪವೂ ಆದ ಆತ್ಮಚೈತನ್ಯಶಕ್ತಿ ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಹೇದು ತಿಳುದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ
ಅಧ್ಯಾತ್ಮ’ ಎಂದರೆ ಆತ್ಮವನ್ನು ಕುರಿತಾದುದು. ಆತ್ಮ ಎಂದರೆ ಮೂಲಚೈತನ್ಯ. ಸೃಷ್ಟಿಯ ಎಲ್ಲ ವಿವರಗಳ ಹಿಂದಿರುವ ಕಾರಣಶಕ್ತಿಯೇ ಅದು. ಅದರ ಹುಡುಕಾಟವನ್ನು ಮಾಡುವ ಎಲ್ಲ ಪ್ರಕ್ರಿಯೆಗಳೂ ಆಧ್ಯಾತ್ಮಿಕತೆ ಎನಿಸಿಕೊಳ್ಳುತ್ತವೆ.
ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ಆತ್ಮ, ಚೈತನ್ಯ. ಈ ಆತ್ಮ, ಈ ಚೈತನ್ಯ, ಬದಲಾಗುವುದಿಲ್ಲ, ನಾಶವಾಗುವುದಿಲ್ಲಜಾಗ್ರತ್ , ಸ್ವಪ್ನ , ಸುಷುಪ್ತಿ ಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ .. ಆತ್ಮ ಸೂಕ್ಷ್ಮಾತಿ ಸೂಕ್ಷ್ಮ ಪ್ರಕಾಶ ಸ್ವರೂಪವೂ ಆದ ಆತ್ಮಚೈತನ್ಯ ಶಕ್ತಿ