
ಎರಡು ವರ್ಷಗಳ ಹಿಂದೆ ೨೦೧೪ರ ಮೇ ತಿಂಗಳಿನ ಒಂದು ದಿನ ಗುಜರಾತಿನ ಭಾರತೀಯ ಜನತಾ ಪಕ್ಷದ ನಾಯಕ ನರೆಂದ್ರ ಭಾಯ್ ಮೋದಿ ಅವರು ದೇಶದ ಸಂಸದ್ಭವನವನ್ನು ಪ್ರವೇಶಿಸಿದ ಸಂದರ್ಭ ಭಾವನಾತ್ಮಕ ಕ್ಷಣಗಳನ್ನು ತಂದುಕೊಟ್ಟಿತ್ತು. ಸ್ವತಃ ಅವರು ಕೂಡ ಭಾವುಕರಾಗಿದ್ದರು. ಸಂಸದ್ಭವನದ ಮೆಟ್ಟಿಲಿನಲ್ಲಿ ತಲೆಬಾಗಿ ನಮಿಸಿ ಅವರು ಒಳಗೆ ಪ್ರವೇಶಿಸಿದರು. ಭಾವುಕತೆಗೆ ಮುಖ್ಯ ಕಾರಣ ಅವರು ಮೊದಲ ಬಾರಿಗೆ ದೇಶದ ಪ್ರಜಾಸತ್ತೆಯ ಆ ಪರಮ ಮಂದಿರವನ್ನು ಓರ್ವ ಸದಸ್ಯನಾಗಿ ಪ್ರವೇಶಿಸುತ್ತಿದ್ದರು; ಮತ್ತು ಆಗಲೇ ಅದರ ಪರಮೋಚ್ಚ ನಾಯಕ ಆಗುವವರಿದ್ದರು. […]