
ಜೀವನದಲ್ಲಿ ನಾವು ಬಯಸದಿದ್ದದ್ದು, ನಮಗೇ ಹಿಡಿಸದಿದ್ದದ್ದು ಸಂಭವಿಸಿಬಿಡುತ್ತದೆ. ನನ್ನ ಬಾಳಿನಲ್ಲೂ ಹೀಗೆಯೇ ಆಯಿತು. ರುಮಾ?…. ಹೌದು. ಅದು ನನ್ನ ಹೆಸರು. ನೀವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಯೇ ಇರುತ್ತೀರಿ. ಆದರೆ ರಾಮಾಯಣದ ಮಹಾಕಥನದಲ್ಲಿ ನಾನು ಎಲ್ಲಿಯೋ ಕಳೆದುಹೋದವಳು. ನಿಮ್ಮ ಕಣ್ಣಿಗೆ ಬಿದ್ದಿರಲಾರೆ. ಹಾಗೆ ನೋಡಿದರೆ ಉಳಿದವರ ಕಣ್ಣಿಗೆ ಬೀಳಬೇಕಾದಷ್ಟು ದೊಡ್ಡ ಸಾಧನೆ ಮಾಡಿದವಳಲ್ಲ ನಾನು. ಗುರುತಿಸಿಕೊಳ್ಳಬೇಕು ಎಂಬ ಹಂಬಲವಿದ್ದವಳೂ ಅಲ್ಲ. ನನ್ನ ಕಥೆಯೂ ತುಂಬ ಚಿಕ್ಕದು. ಕಿಷ್ಕಿಂಧೆಯೆಂಬ ವಾನರ ರಾಜ್ಯವಿತ್ತು. ಅಲ್ಲಿಯ ದೊರೆ ವಾಲಿ. ಅವನ ತಮ್ಮ […]