
ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಜಟಿಲವಾದದ್ದು ಮತ್ತು ತೀಕ್ಷ್ಣಮತಿಯನ್ನು ಅಪೇಕ್ಷಿಸುವ ಸಚಿವಖಾತೆ ‘ರಕ್ಷಣಾ ಮಂತ್ರಾಲಯ’. ಅಂತಹ ಮಹತ್ತರ ಮಂತ್ರಾಲಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಅವರು ಹೊಂದಿದ್ದಾರೆ. ‘ಉತ್ಥಾನ’ ಮಾಸಪತ್ರಿಕೆಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮಾನ್ಯ ಸಚಿವರ ಸಂದರ್ಶನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ದೇಶದ ರಕ್ಷಣಾ ವ್ಯವಸ್ಥೆಯ ಹೆಚ್ಚಿನ ಗುಣವತ್ತತೆಗಾಗಿ ಕೇಂದ್ರಸರ್ಕಾರ ಕೈಗೊಳ್ಳುತ್ತಿರುವ ಹಲವು ಉಪಕ್ರಮಗಳ ಬಗೆಗೆ ವಿವರಣೆ ನೀಡಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಪ್ರಶ್ನೆ: […]