…ನಾನು ಕೀಚಕನ ಅಕ್ಕನಾಗಿ ಹೇಗೇ ವರ್ತಿಸಿರಲಿ, ಒಬ್ಬಳು ಹೆಣ್ಣಾಗಿ ಸರಿಯಾದುದನ್ನೇ ಮಾಡಿದ್ದೇನೆ ಎಂಬ ಸಮಾಧಾನ ಅಂತರಂಗವನ್ನು ತುಂಬಿಕೊಳ್ಳತೊಡಗಿತು…. ಕೀಚಕನ ಹೆಣವನ್ನು ಅಂಗಳದಲ್ಲಿ ಮಲಗಿಸಿದ್ದರು. ಅಯ್ಯೋ! ಅದನ್ನು ಹೆಣವೆಂದಾದರೂ ಹೇಳಬಹುದೇ? ಅಷ್ಟು ದೂರಕ್ಕೇ ಭೀತಿ ಹುಟ್ಟಿಸುವಷ್ಟು ವಿಕಾರವಾಗಿತ್ತು. ಕೈ ಕಾಲುಗಳೆಲ್ಲಿವೆ ಎಂದೇ ತಿಳಿಯುತ್ತಿರಲಿಲ್ಲ. ತಲೆಯನ್ನು ಹೊಟ್ಟೆಯೊಳಕ್ಕೆ ತೂರಿಸಲಾಗಿತ್ತು. ಮಾಂಸದ ಮುದ್ದೆಯೊಂದನ್ನು ನೋಡಿದ ಹಾಗೆ ಕಾಣುತ್ತಿತ್ತು. ಇಡೀ ಕೆಂಪು ನೆತ್ತರು ಹರಿದು ತೊಯ್ದ ಮುದ್ದೆ. ಅಬ್ಬಾ ಎಷ್ಟು ಭೀಕರ! ನಾನು ನಿಂತಲ್ಲೇ ನಡುಗಿದೆ. “ಹೇಗಾಯಿತು ಇದು?” ನನ್ನ ಗಂಡ ಕಾವಲಭಟರನ್ನು […]
ಸುದೇಷ್ಣಾ
Month : February-2015 Episode : ಸುದೇಷ್ಣಾ 3 Author : ರಾಧಾಕೃಷ್ಣ ಕಲ್ಚಾರ್