
ಕಷ್ಟವೆಂದು ಅವರ ಬಳಿ ಬಂದವರಿಗೆ ಅವರು ವಿಶೇಷ ಜಪ ಮಾಡಿ ಸಮರ್ಪಣೆ ಮಾಡಿಬಿಡುತ್ತಿದ್ದರು. ಕಷ್ಟಗಳು ಮಂಜಿನಂತೆ ಕರಗಿಹೋಗುವುದನ್ನು ನೋಡಿ ಆನಂದಿಸುತ್ತಿದ್ದರು. ಸ್ವತಃ ತಮಗೇ ಕಷ್ಟ ಬಂದಾಗ ಗುರುವಿನ ಮುಂದೆ ಹೋಗಿ ಕಣ್ಣೀರಾಗಿಬಿಡುತ್ತಿದ್ದರು. ಸ್ವಾಮಿ ಹರ್ಷಾನಂದಜೀಯವರನ್ನು ‘ಇವರು ಹೀಗೇ’ ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ಹೀಗೆಂದು ನಿಶ್ಚಯಿಸುವ ವೇಳೆಗೆ ಅವರ ಮತ್ತಾವುದೋ ಗುಣ ನಿಮ್ಮನ್ನು ಆಕರ್ಷಿಸಿರುತ್ತದೆ. ಅದೇ ಸತ್ಯವೆಂದು ಭಾವಿಸಿ ಮುಗಿಸುವ ವೇಳೆಗೆ ಮತ್ತೊಂದೆಡೆಗೆ ಸೆಳೆಯಲ್ಪಟ್ಟಿರುತ್ತೀರಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರು ವಿವೇಕಾನಂದರು ಕಟ್ಟಿಕೊಟ್ಟ ಸಂನ್ಯಾಸತ್ತ್ವದ ಮೌಲ್ಯಗಳ […]