
ಪೆಟ್ಟು ತಿನ್ನುತ್ತಲೇ ಕಣ್ಣೀರಿನಿಂದಲೇ ಬದುಕು ದೂಡುವ ಇವರ ಜೀವನವನ್ನು ಹತ್ತಿರದಿಂದ ಕಂಡಾಗ ಇವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ತಾಳ್ಮೆ, ಧೈರ್ಯ, ಧೃತಿ, ನಿರ್ಲಿಪ್ತತೆಗಳಿಗೆ ವಿದ್ಯಾವಂತರು ಕೂಡ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಅವಳು ಒಂದೇ ಒಂದು ದಿನ ಬರದಿದ್ದರೂ ಮನಸ್ಸೆಲ್ಲ ಇರಿಸುಮುರಿಸು, ಎಲ್ಲರ ಮೇಲೂ ಎಲ್ಲದರ ಮೇಲೂ ವಿನಾಕಾರಣ ಹರಿಹಾಯುವಂಥ ಅಸಮಾಧಾನದ ಸಿಟ್ಟು. ಅವಳು ಒಂದು ದಿನ ಮನೆಗೆ ಬರಲಿಲ್ಲವೆನ್ನಿ, ಇಡೀ ಮನೆಯೆಲ್ಲವೂ ಸ್ನಾನವೇ ಮಾಡದಂತೆ ಬಹಳ ಗಲೀಜಾಗಿ ಕೊಳಕಾಗಿ ಕಾಣಬರುತ್ತದೆ. ಅವಳು ಬಾರದೇ ಉಳಿದ ದಿನ ಅಡಿಗೆಮನೆಯಂತೂ […]