
ಗತಶತಮಾನದಲ್ಲಾದ ಮಹಾಯುದ್ಧಗಳಂತೆ ಈಗಿನ ದಿನಗಳಲ್ಲಿ, ಈಗಿನ ಜಗದ್ವ್ಯಾಪಾರದಲ್ಲಿ ಆಗುವುದು ಅಸಾಧ್ಯ. ಹಾಗೇನಾದರೂ ಆಗುವುದನ್ನು ತಡೆಯಲೆಂದೇ ಆಧುನೀಕರಣಗೊಂಡ ಶಕ್ತಿಯುತ, ಸದಾ ಸನ್ನದ್ಧ, ಅಣ್ವಸ್ತ್ರಸಹಿತವಾದ ಸಶಸ್ತ್ರಬಲಗಳ ಸಂಘಟನೆ ಮತ್ತು ಅವುಗಳನ್ನು ಉಪಯೋಗಿಸುವ ಯುಕ್ತಿ, ತಂತ್ರ, ವಿಧಾನಗಳ, ಸ್ಪಷ್ಟೀಕರಣದ ಪ್ರದರ್ಶನ ಇವು ನಮ್ಮ ಎದುರಾಳಿಗಳಿಗೆ ಮತ್ತು ಜಗತ್ತಿಗೆ ಮನದಟ್ಟಾಗುವಂತಿರಬೇಕು. ಅಂತಹ ಯುದ್ಧಸನ್ನದ್ಧತೆ ನಮ್ಮಲ್ಲಿದೆಯೆ? – ಹಿರಿಯ ಲೇಖಕ, ಸೇನಾಪಡೆಯ ನಿವೃತ್ತ ಅಧಿಕಾರಿ ಲೆ|| ಜ|| ಎಸ್.ಸಿ. ಸರದೇಶಪಾಂಡೆಯವರು `ಉತ್ಥಾನ’ಕ್ಕಾಗಿ ಬರೆದ ಒಂದು ಮಾಹಿತಿಪೂರ್ಣ ವಿಶೇಷ ಲೇಖನ ಇಲ್ಲಿದೆ….