ನಗರೀಕರಣದ ಪರಿಣಾಮಗಳು
Month : April-2015 Episode : Author :
Month : April-2015 Episode : Author :
Month : April-2015 Episode : Author : ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಬೆಳ್ತಂಗಡಿ
ಒಂದು ಹಳ್ಳಿಗೆ ಹೋಗಿದ್ದೆ. ಹತ್ತಾರು ಎಕರೆಗಳಲ್ಲಿ ಅವರು ವೈವಿಧ್ಯಮಯ ಕೃಷಿ ಮಾಡುತ್ತಿದ್ದರು. ಫಲಭಾರದಿಂದ ತೂಗುತ್ತಿದ್ದ ಅಡಕೆಮರಗಳು, ಗೊನೆ ಹೊತ್ತು ತೊನೆಯುತ್ತಿರುವ ತೆಂಗುಗಳು, ಕೃಷಿಮೇಳದಲ್ಲಿ ಮೊದಲ ಬಹುಮಾನ ತಂದುಕೊಟ್ಟ ಅಷ್ಟೆತ್ತರದ ಬಾಳೆಗೊನೆಗಳು, ಸಾಲಾಗಿ ಬರುತ್ತಿದ್ದ ದನಗಳು ಎಲ್ಲವೂ ಇದ್ದ ಅವರಲ್ಲಿ ಕೈಗೊಬ್ಬ ಕಾಲಿಗೊಬ್ಬ ಕೆಲಸದವನೂ ಇದ್ದ. ಕುತೂಹಲದಿಂದ ಕೇಳಿದ್ದೆ, “ಕೆಲಸಕ್ಕೆ ಬೇಕಾದಷ್ಟು ಜನ ನಿಮಗೆ ಸಿಗುತ್ತಾರಾ?” ಅವರು, “ನನಗೆ ಕೆಲಸದ ಜನಕ್ಕೆ ದರಿದ್ರವೇ ಇಲ್ಲ. ಸಂಬಳ ಮಾತ್ರವಲ್ಲ, ವರ್ಷಕ್ಕೊಮ್ಮೆ ಬೋನಸ್ ಅಂತ ಪಾತ್ರೆಗಳನ್ನು ಕೊಡುತ್ತೇನೆ. ಅವರಲ್ಲಿ ಮದುವೆಯಾಗುವುದಾದರೆ ಹತ್ತು […]
Month : March-2015 Episode : Author :
ಗಮನ ಸೆಳೆದ ಇತ್ತೀಚಿನ ಎರಡು ವರದಿಗಳು ಹೀಗಿವೆ: ವರದಿ ೧: ಬೆಂಗಳೂರಿನ ಪರಪ್ಪನ ಅಗ್ರಹಾರ ಎದುರಿಗೆ ಜೈಲುವಾಸಿಗಳೇ ನಿರ್ಮಿಸಿದ ಒಂದು ಬೇಕರಿ. ಸ್ಥಳದಲ್ಲಿ ಜಮಾಯಿಸುತ್ತಿದ್ದ ಪತ್ರಕರ್ತರ, ಪೊಲೀಸು ಅಧಿಕಾರಿಗಳ ಹಸಿವು ತಣಿಸುತ್ತಿರುವ ಈ ಪುಣ್ಯಕಾರ್ಯದ ಯೋಚನೆ ಬಂದಿದ್ದೂ ಅಲ್ಲಿನ ಜೈಲುವಾಸಿಗಳಿಗೇ! ಐವತ್ತಕ್ಕೂ ಹೆಚ್ಚು ಖೈದಿಗಳು ಸೇರಿ ಆಧುನಿಕ ಯಂತ್ರೋಪಕರಣಗಳಿಂದ ಕೇಕ್, ಬ್ರೆಡ್ ಇನ್ನಿತರ ಆಹಾರ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟಕ್ಕಿಡುತ್ತಿದ್ದಾರೆ. ತಂದಿಡುವ ತಿನಿಸುಗಳೂ ಫಟಾಫಟ್ ಎಂಬಂತೆ ಖಾಲಿಯಾಗುತ್ತಿವೆಯಂತೆ. ದಿನಾಂತ್ಯಕ್ಕೆ ಉಳಿದ ಆಹಾರೋತ್ಪನ್ನಗಳನ್ನು ಮರುದಿನ ಮಾರಾಟ ಮಾಡಲಾಗುವುದಿಲ್ಲ.
Month : February-2015 Episode : Author : ಇಂದಿರಾ ಹಾಲಂಬಿ ಉಡುಪಿ.
ಮಾನವಜೀವಿಯನ್ನು ಮಗುವಾಗಿರುವಾಗ ಪೋಷಿಸಿ ಬೆಳೆಸಲು, ಖಾಯಿಲೆ ಬಿದ್ದಾಗ ಗುಣಪಡಿಸಿ ದೇಹ ಪುಷ್ಟವಾಗಿಸಲು ಅಮೃತದಂತಹ ಹಾಲು ನೀಡುವವಳು ಗೋಮಾತೆ. ಪರಿಶುದ್ಧ ಪಾನೀಯವೆಂದರೆ ಹಾಲು. ಮೊಸರು, ಬೆಣ್ಣೆ, ತುಪ್ಪ ಎಲ್ಲವೂ ಅಮೃತಸಮಾನ ಆಹಾರವಸ್ತುಗಳು. ಗೋವಿನ ಸೆಗಣಿಯು ಕ್ರಿಮಿನಾಶಕ ಗುಣ ಹೊಂದಿದೆ. ಗೋಮೂತ್ರವು ಆಯುರ್ವೇದ ವೈದ್ಯಕೀಯದಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳಿಗೆ ಬೇಕಾಗಿರುವುದು ಆಧುನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಜೀವಮಾನವಿಡೀ ಮಾನವನಿಗಾಗಿ ದುಡಿದು ಸವೆಯುವ ಗೋಸಂತತಿಯು ಪ್ರತಿಫಲವಾಗಿ ಬಯಸುವುದು ಹಾದಿಬೀದಿಯಲ್ಲಿರುವ ಹುಲ್ಲು, ಸೊಪ್ಪು, ಕಲಗಚ್ಚು ನೀರು ಮಾತ್ರ. ಎತ್ತುಗಳು ಬಂಡಿ ಎಳೆಯುವ, ಗದ್ದೆ ಉಳುವ, […]