ತ್ವಯಿ ರಕ್ಷತಿ ರಕ್ಷಕೈಃ ಕಿಮನ್ಯೈಃ ತ್ವಯಿ ಚಾರಕ್ಷತಿ ರಕ್ಷಕೈಃ ಕಿಮನ್ಯೈಃ| ಇತಿ ನಿಶ್ಚಿತಧೀಃ ಶ್ರಯಾಮಿ ನಿತ್ಯಂ ನೃಹರೇ ವೇಗವತೀತಟಾಶ್ರಯಾಂ ತ್ವಾಮ್ || “ನೀನು ನಮ್ಮನ್ನು ರಕ್ಷಿಸುತ್ತಿರುವಾಗ ಬೇರೆ ರಕ್ಷಕರಿಂದ ಏನು ಆಗಬೇಕಿದೆ? ನೀನೇ ರಕ್ಷಿಸದಿದ್ದಲ್ಲಿ ಇತರ ರಕ್ಷಕರಿಂದ ಏನು ತಾನೇ ಆದೀತು? ಹೀಗೆ ನಿಶ್ಚಯಿಸಿಕೊಂಡು ವೇಗವತೀ ನದೀ ತೀರದಲ್ಲಿ ನೆಲಸಿರುವ ನರಸಿಂಹನ ಸ್ವರೂಪದ ಭಗವಂತನೇ, ನಾನು ಸದಾ ಆಶ್ರಯಿಸುವುದು ನಿನ್ನನ್ನೇ.” ದಕ್ಷಿಣಭಾರತದ ಒಂದು ದೊಡ್ಡ ಕೆರೆ. ಅದೊಂದು ವರ್ಷ ಕುಂಭದ್ರೋಣ ಮಳೆ ಸುರಿದು ಕೆರೆಯ ಕಟ್ಟೆ ಒಡೆಯುವ […]
ದೀಪ್ತಿ
Month : January-2024 Episode : Author :