‘ರಾಜತರಂಗಿಣಿ ಕಥಾವಳಿ’ ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ ಕಶ್ಮೀರದ ಕಲ್ಹಣನು ಕ್ರಿ.ಶ. ೧೨ನೇ ಶತಮಾನದ ಮಧ್ಯಭಾಗದಲ್ಲಿ ರಚಿಸಿದ ‘ರಾಜತರಂಗಿಣಿ’. ಸಂಸ್ಕೃತಕವಿಗಳು ಇತಿಹಾಸಕ್ಕೂ ಮಹತ್ತ್ವ ನೀಡಿರುವುದಕ್ಕೆ ಒಂದು ಉಜ್ಜ್ವಲ ನಿದರ್ಶನ, ಎಂಟು ‘ತರಂಗ’ಗಳಲ್ಲಿ ಹತ್ತಿರಹತ್ತಿರ ಎಂಟು ಸಾವಿರ ಪದ್ಯಗಳಲ್ಲಿ ಹರಡಿಕೊಂಡಿರುವ ಈ ಕಾವ್ಯ. ಪ್ರಾಚೀನಕಾಲದ ಘಟನೆಗಳನ್ನು ಇತಿಹಾಸಮರ್ಯಾದೆಯಿಂದ ದಾಖಲೆ ಮಾಡಿರುವ ಅಪೂರ್ವಗ್ರಂಥ ಇದು.
ರಾಜತರಂಗಿಣಿ ಕಥಾವಳಿ
Month : April-2015 Episode : Author : ಎಸ್.ಆರ್. ರಾಮಸ್ವಾಮಿ