
ಕಶ್ಮೀರ ಆವಿರ್ಭಾವವಾದಾಗಿನಿಂದ ಈ ಪ್ರದೇಶದಲ್ಲಿ ನಮ್ಮ ವಂಶದವರು ಸ್ಥಿರವಾಗಿ ಇದ್ದಾರೆ. ಈಗ ನಾವು ಇದ್ದೇವೆ, ಮುಂದೆಯೂ ಇರುತ್ತೇವೆ. ನಮ್ಮ ಪ್ರಭು ಪರಮೇಶ್ವರನೂ ಇಲ್ಲಿಯೆ ಇರುತ್ತಾನೆ. ನಿಮ್ಮಂತಹ ತಾತ್ಕಾಲಿಕ ಪ್ರಭುಗಳೊಡನೆ ನಮಗೆ ಸಂಬಂಧವಿಲ್ಲ. ನಮ್ಮ ಸಂಬಂಧ ಇರುವುದು ನಮ್ಮ ದೈವದೊಡನೆ ಮಾತ್ರ. ಸನಾತನಧರ್ಮದೊಡನೆ ಮಾತ್ರ.