ಕಳೆದ ಆರು ತಿಂಗಳಲ್ಲಿ ಕೊರೋನಾ ವಿಷಾಣು ನಿರ್ವಹಣೆಗೆ ಆದ್ಯತೆ ನೀಡಬೇಕಾಗಿ ಬಂದುದರ ಅನಿವಾರ್ಯತೆಯಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಒಂದಷ್ಟುಮಟ್ಟಿನ ಹಿನ್ನಡೆಯಾದದ್ದು ಸಹಜ. ಹೇಗೊ ಬಂದೊದಗಿದ ವಿಕಟ ಪರಿಸ್ಥಿತಿಗೆ ಪ್ರಧಾನಿಯವರ ಸಕಾಲಿಕ ಕರೆಗೆ ಓಗೊಟ್ಟು ದೇಶದ ಜನತೆಯೆಲ್ಲ ಸಂಯಮವನ್ನೂ ಕ್ಷಮತೆಯನ್ನೂ ಮೆರೆದಿರುವುದು ಮೇಲ್ಮಟ್ಟದ ಹೊಣೆಗಾರಿಕೆಯನ್ನು ಬಿಂಬಿಸಿದೆ. ಜನತೆಯಲ್ಲಿ ಇದೇ ಹೊಣೆಗಾರಿಕೆಯ ಮನೋಧರ್ಮ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಇದೀಗ ತೋರಿರುವ ಆರ್ಥಿಕ ಹಿನ್ನಡೆಯನ್ನೂ ಜನತೆ ಸವಾಲಾಗಿ ಸ್ವೀಕರಿಸಲು ಸಾರ್ವಜನಿಕರು ಮಾನಸಿಕವಾಗಿ ಸಿದ್ಧರಿರುವರೆಂಬುದರಲ್ಲಿ ಶಂಕೆಗೆ ಕಾರಣವಿಲ್ಲ. ತಾತ್ಕಾಲಿಕ ಹಿನ್ನಡೆಯಿಂದಾಗಿ ಕಳೆದ ಆರು ವರ್ಷಗಳ […]
ಕೊರೋನೋತ್ತರ ಆರ್ಥಿಕ ಉಜ್ಜೀವನ
Month : September-2020 Episode : Author :