ಗತಾರ್ಥಾನ್ನಾನುಶೋಚಂತಿ ನಾರ್ಥಯಂತೇ ಮನೋರಥಾನ್ | ವರ್ತಮಾನೇನ ವರ್ತಂತೇ ತೇನ ಮೇ ಪಾಂಡವಾಃ ಪ್ರಿಯಾಃ || “ಆಗಿಹೋದದ್ದಕ್ಕಾಗಿ ಅವರು ಮರುಗುತ್ತ ಕೂಡುವುದಿಲ್ಲ. ಯಾವಾವುದೋ ಹೊಸ ಆಸೆಗಳನ್ನು ಕಲ್ಪಿಸಿಕೊಂಡು ಚಪಲಪಡುವುದಿಲ್ಲ. ಯಾವುದು ತಮ್ಮ ಪಾಲಿಗೆ ಒದಗಿದೆಯೋ ಅದನ್ನು ಸ್ವೀಕರಿಸಿ ತೃಪ್ತರಾಗಿರುತ್ತಾರೆ. ಈ ಕಾರಣದಿಂದ ಪಾಂಡವರು ನನಗೆ (ಶ್ರೀಕೃಷ್ಣನಿಗೆ) ಪ್ರಿಯರು.” ಆಗಿಹೋದದ್ದನ್ನು ಚಿಂತಿಸುತ್ತ ಶೋಕಿಸಬಾರದು ಎಂಬುದರ ತಾತ್ಪರ್ಯ ಎಲ್ಲವನ್ನೂ ಮರೆತುಬಿಡಬೇಕೆಂದಲ್ಲ. ನಮ್ಮ ಪ್ರಯತ್ನವನ್ನು ಮೀರಿ ನಡೆದುಹೋಗುವ ಘಟನೆಗಳ ನೆನಪು ನಮ್ಮನ್ನು ದೀರ್ಘಕಾಲ ಕಾಡಿ ಅಸ್ವಸ್ಥರನ್ನಾಗಿಸಲು ಅವಕಾಶ ಕೊಡದೆ ಮನಸ್ಸಮಾಧಾನವನ್ನು ಅಭ್ಯಾಸ ಮಾಡಿಕೊಳ್ಳಬೇಕು […]
ದೀಪ್ತಿ
Month : May-2024 Episode : Author :