ಸುಜನೋ ನ ಯಾತಿ ವೈರಂ ಪರಹಿತಬುದ್ಧಿರ್ವಿನಾಶಕಾಲೇಽಪಿ | ಛೇದೇಽಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ || – ಸುಭಾಷಿತಸುಧಾನಿಧಿ “ಉಳಿದ ಲೋಕಕ್ಕೆಲ್ಲ ಸದಾ ಒಳ್ಳೆಯದಾಗಲೆಂಬ ಭಾವನೆಯನ್ನು ಅಂತರಂಗದಲ್ಲಿ ತುಂಬಿಕೊಂಡವನು ತನಗೆ ವಿಪತ್ತು ಎರಗಿದಾಗಲೂ ದ್ವೇಷಕ್ಕೆ ಒಳಗಾಗುವುದಿಲ್ಲ. ಶ್ರೀಗಂಧದ ಮರವನ್ನು ತುಂಡರಿಸಿದಾಗಲೂ ಅದು ಆ ಕೊಡಲಿಯ ಬಾಯನ್ನು ಸುಗಂಧಮಯ ಮಾಡದಿರುವುದಿಲ್ಲ.” ದೇಶಾಟನ ಮಾಡಬಯಸಿದ್ದ ಶಿಷ್ಯನನ್ನು ಬುದ್ಧನು ಪರೀಕ್ಷಿಸಲೆಳಸಿದಾಗ ನಡೆದ ಪ್ರಶ್ನೋತ್ತರ ಇದು: “ಯಾರಾದರೂ ನಿನ್ನನ್ನು ನಿಂದಿಸಿದರೆ ನಿನಗೆ ಏನನ್ನಿಸುತ್ತದೆ?” “ಅವರು ಬರಿಯ ಬೈಗುಳ ಬೈದರು, ಹೊಡೆಯಲಿಲ್ಲ. ಆದ್ದರಿಂದ ಅವರು […]
ದೀಪ್ತಿ
Month : July-2024 Episode : Author :