೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯವನ್ನು ಉತ್ಥಾನದ ಅಭಿಮಾನಿಗಳಿಗಾಗಿ, ಇಂದಿನ ಯುವ ಪೀಳಿಗೆಗೆ ಮಾಹಿತಿ ಕೊಡುವ ದೃಷ್ಟಿಯಿಂದ ಪ್ರಕಟಿಸುತ್ತಿದ್ದೇವೆ. ತುರ್ತುಪರಿಸ್ಥಿತಿಯ ಹಿನ್ನೆಲೆ, ಆ ದಿನಗಳಲ್ಲಿ ಏನೆಲ್ಲ ಘಟನೆಗಳು ನಡೆದವು ಎಂಬುದನ್ನೆಲ್ಲ ತಿಳಿಯಲು ನೀವು `ಭುಗಿಲು’ ಪುಸ್ತಕವನ್ನು ಹುಡುಕಿ ಓದಬೇಕು! ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಯತ್ನಗಳನ್ನು ಹಿಮ್ಮೆಟ್ಟಿಸಿದ, ಪ್ರಜಾತಂತ್ರಕ್ಕಾಗಿ ತಮ್ಮ ತನು, ಮನ, ಧನವನ್ನೆಲ್ಲ ತ್ಯಾಗ ಮಾಡಿದ, ಹಿಂಸೆ ಅನುಭವಿಸಿಯೂ ಹೋರಾಟಕ್ಕೆ ಹಿಂಜರಿಯದ ಆ ಎಲ್ಲ ಜೀವಗಳಿಗೆ ನಮ್ಮ ನಮನಗಳು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ `ಉತ್ಥಾನ’ದ ಪ್ರಕಟಣೆಗೂ ಬೀಗಮುದ್ರೆ ಬಿದ್ದಿತ್ತು. ೧೯೭೭ರಲ್ಲಿ ಮತ್ತೆ ಆರಂಭವಾದ `ಉತ್ಥಾನವು ಮತ್ತಷ್ಟು ಬೆಳೆದು, ನಾಡಿನ ಅಭ್ಯುದಯಕ್ಕಾಗಿ ಸದಾ ಶ್ರಮಿಸುತ್ತ ಬಂದಿದೆ.
ಪ್ರಜಾತಂತ್ರದ ರಕ್ಷಣೆಗೆ `ಉತ್ಥಾನ’ವು ಸದಾ ಬದ್ಧ ಎಂದು ಈ ಮೂಲಕ ಮತ್ತೊಮ್ಮೆ ಘೋಷಿಸಲು ನಮಗೆ ಅತ್ಯಂತ ಆನಂದವಾಗುತ್ತಿದೆ.
೧೯೭೫-೭೭ರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ದಾಖಲಿಸಿದ `ಭುಗಿಲು’ ಗ್ರಂಥದ `ದೌರ್ಜನ್ಯ ತಾಂಡವ’ ಅಧ್ಯಾಯ
Month : June-2022 Episode : Author :
ಚಂದಾದಾರನಾಗಬೇಕು.
I want Bugilu book