ತುಂಬಾ ಗಂಭೀರ ಹಂತ ತಲಪಿದ ಹೃದಯದ ಖಾಯಿಲೆಯನ್ನೂ ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಬಹುದೆಂಬುದು ಹಲವರಿಗೆ ತಿಳಿದಿಲ್ಲ. ಕೆಲವರು ಕೇಳಿರಬಹುದಾದರೂ ನಂಬುವುದಿಲ್ಲ. ಆಯುರ್ವೇದದ ಮೂಲಕ ಹೃದಯದ ಖಾಯಿಲೆ ಗುಣವಾದೀತೆಂಬುದರ ಬಗ್ಗೆ ಅನೇಕರಿಗೆ ನಂಬಿಕೆ ಇರದು. ಯಾರು ನಂಬಲಿ ಬಿಡಲಿ, ಆಯುರ್ವೇದಕ್ಕೆ ಇಂತಹ ಸಾಮರ್ಥ್ಯವಿರುವುದನ್ನು ಅಲ್ಲಗಳೆಯಲಾಗದು.
ಹೃದಯ ಶರೀರದ ಬಹುಮುಖ್ಯ ಅಂಗ. ಎಲ್ಲವನ್ನೂ ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ, ಬೇರೆ ಬೇರೆ ಕಾರ್ಯಗಳನ್ನು ನಿರ್ದೇಶಿಸುವ ಗುರುತರ ಹೊಣೆಗಾರಿಕೆಯನ್ನು ಮೆದುಳು ನಿರ್ವಹಿಸುವುದು ದಿಟವಾದರೂ ಹೃದಯ ನಿಂತುಹೋದರೆ ಮೆದುಳೂ ಕೆಲಸ ಮಾಡಲಾರದಾಗುತ್ತದೆ. ಹೃದಯ ತುಂಬ ಸೂಕ್ಷ್ಮ ಕೂಡ. ಅದಕ್ಕೆ ರಕ್ತ ಪೂರೈಸುವ ಯಾವುದೇ ರಕ್ತವಾಹಿನಿಯಲ್ಲಿ ಅಲ್ಪ ತೊಡಕುಂಟಾದರೂ ಹೃದಯದ ಕೆಲಸ ಕುಂಠಿತಗೊಳ್ಳುತ್ತದೆ.
ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲೂ ಎಡೆಬಿಡದೆ ಅಂದರೆ ಒಂದು ಕ್ಷಣದ ಬಿಡುವೂ ಇಲ್ಲದೆ ಹೃದಯ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಇಂತಹ ಅವಿರತ ದುಡಿಮೆಯ ಕಾರಣದಿಂದ ಅದೂ ಕೆಲವೊಮ್ಮೆ ಆಯಾಸ ಪಡುತ್ತದೆ. ಅದಕ್ಕೂ ವಯಸ್ಸಿನ ಹಂಗಿದೆ. ಇಂದಿನ ನಮ್ಮ ಶ್ರಮವಿಲ್ಲದ ಜೀವನಶೈಲಿ, ಪಥ್ಯಾಪಥ್ಯ ವಿವೇಕವಿಲ್ಲದ ಬಾಯಿಚಪಲದ ದಾಸತೆಗೆ ಪಕ್ಕಾದ ಆಹಾರಸೇವನೆ, ತಿಳಿದೋ ತಿಳಿಯದೆಯೋ ವಿರುದ್ಧಾಹಾರಗಳ ಸೇವನೆ, ದುರಭ್ಯಾಸಗಳ ಅಳವಡಿಕೆ ಮುಂತಾದ ಹಲವು ಕಾರಣಗಳಿಂದ ಹೃದಯ ಬಾಧೆಪಡುತ್ತದೆ. ಆಘಾತಕ್ಕೊಳಗಾದ ಹೃದಯ ಹೆಚ್ಚಿನ ಆಯಾಸವನ್ನೋ, ಎದೆನೋವನ್ನೋ ಉಂಟುಮಾಡುವ ಮೂಲಕ ತನ್ನ ತೊಂದರೆಯನ್ನು ನೆನಪಿಸುತ್ತದೆ. ಅದನ್ನು ಉಪೇಕ್ಷಿಸಿದರೆ ಹೃದಯಸ್ತಂಭನ ಗ್ಯಾರಂಟಿ.
ಇಂತಹ ತೊಂದರೆ ಉಂಟಾಗಿ ವೈದ್ಯರ ಬಳಿ ಓಡಿದಾಗ ಬೇರೆ ಬೇರೆ ಪರೀಕ್ಷೆಗಳ ಮೂಲಕ ವೈದ್ಯರು ಹೃದಯದ ಸ್ಥಿತಿಗತಿಯನ್ನು ಅರಿತು ಚಿಕಿತ್ಸೆಗೆ ತೊಡಗುತ್ತಾರೆ. ರಕ್ತವಾಹಿನಿಗಳಲ್ಲಿ ಹೆಚ್ಚಿನ ತಡೆಯಿದ್ದಲ್ಲಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸುತ್ತಾರೆ. ಇಂದು ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯಲ್ಲಿ ಹಲವಾರು ಪ್ರಗತಿಗಳಾಗಿರುವುದರಿಂದ ಒಂದಿಷ್ಟು ಖರ್ಚು ಹೆಚ್ಚಾದರೂ ಹೃದಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಹಲವಾರು ದಾರಿಗಳು ತೆರೆದುಕೊಂಡಿವೆ.
ಹೃದಯದಲ್ಲಿ ಗಂಭೀರ ಸಮಸ್ಯೆ ತಲೆದೋರಿದಾಗ ವೈದ್ಯರು (ಆಲೋಪತಿ ವೈದ್ಯರು) ಸಲಹೆ ಮಾಡುವುದು ಶಸ್ತ್ರಚಿಕಿತ್ಸೆಯನ್ನೇ. ಹೃದಯವೇ ನಿಂತರೆ ಬದುಕು ಕೊನೆಗೊಂಡಂತೆ ತಾನೇ. ಆದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆಯ ಸಲಹೆಯನ್ನು ಮುಂದಿಟ್ಟಾಗ (ಒತ್ತಾಯಿಸಿದಾಗ) ಬಹುತೇಕ ಯಾರೂ ಅದರ ಬಗ್ಗೆ ಹಿಂದೆ-ಮುಂದೆ ನೋಡುವುದಿಲ್ಲ. ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಬೇರೆ ದಾರಿಯಿರಬಹುದಾದರೂ ಹೆಚ್ಚಿನ ಯಾರೂ ಅದನ್ನು ಅನುಸರಿಸಲು ಉದ್ಯುಕ್ತರಾಗುವುದಿಲ್ಲ. ಬೇರೆ ಬಗೆಯ ಚಿಕಿತ್ಸೆಯ ಸಫಲತೆಯ ಬಗ್ಗೆ ಒಂದಿಷ್ಟು ಅಳುಕಿರುವುದೂ ಇದಕ್ಕೆ ಕಾರಣವಿರಬಹುದು. ಬೇರೆ ದಾರಿ ಖಂಡಿತವಾಗಿಯೂ ನೆರವಾಗುತ್ತದೆ ಎಂಬ ವಿಶ್ವಾಸವಿದ್ದರೆ ಮಾತ್ರ ಆ ದಾರಿಯತ್ತ ಜನ ಮುಖ ಮಾಡಿಯಾರು. ಆದರೆ ಹೆಚ್ಚಿನವರು ನಂಬಿಕೆಯಿಡುವುದು ಶಸ್ತ್ರಚಿಕಿತ್ಸೆಯಲ್ಲೇ.
ಹೃದಯಶಸ್ತ್ರಚಿಕಿತ್ಸೆಯಿಂದ ಯಾವ ಪರಿಣಾಮ ದೊರೆತೀತೋ ಅದೇ ಪರಿಣಾಮ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲೂ ಖಂಡಿತ ಇದೆ. ಆದರೆ ಜನರಿಗೆ ಈ ಕುರಿತು ಅರಿವಿಲ್ಲದಿರುವುದರಿಂದಲೂ, ಇದರ ಬಗ್ಗೆ ಸಾಕಷ್ಟು ಅಳುಕಿರುವುದರಿಂದಲೂ ಇದರ ಸಾಧ್ಯತೆಯ ಬಗ್ಗೆಯೇ ನಂಬಿಕೆ ಹೊರಟುಹೋಗಿದೆಯೆನ್ನಬಹುದು. ಆದರೆ ಇಂತಹ ಚಿಕಿತ್ಸೆಯನ್ನು ಸಮರ್ಥವಾಗಿ ನೀಡುವ ವೈದ್ಯರು ಅಲ್ಲಲ್ಲಿ ಇರುವುದರಿಂದಲೂ, ಈ ಚಿಕಿತ್ಸಾ ಪದ್ಧತಿಯ ಬಗ್ಗೆ ಅಚಲ ನಂಬಿಕೆಯಿರುವವರು ಕೆಲವರಾದರೂ ದೊರೆಯುವುದರಿಂದಲೂ ಇದು ಅಷ್ಟಿಷ್ಟು ಜೀವ ಹಿಡಿದುಕೊಂಡಿದೆ. ಇಂತಹ ಒಂದು ತಾಜಾ ಉದಾಹರಣೆಯನ್ನು ಸಾದರಪಡಿಸುವುದೇ ಈ ಲೇಖನದ ಉದ್ದೇಶ.
ಆತ್ರೇಯರು (ಹೆಸರು ಬದಲಿಸಿದೆ) ಸಹಜವಾಗಿ ಆರೋಗ್ಯವಾಗಿಯೇ ಇದ್ದವರು ಇದ್ದಕ್ಕಿದ್ದಂತೆ ಬೆನ್ನಿನ ಎಡಭಾಗದಲ್ಲಿ ಅಸಹನೀಯ ನೋವು ಮತ್ತು ನಾಡಿಮಿಡಿತದ ಹಠಾತ್ ಕುಸಿತದ (೪೪-೪೫) ಕಾರಣ ವೈದ್ಯರ ಬಳಿಗೋಡಿದರು. ಆಯುರ್ವೇದದಲ್ಲಿ ಅವರಿಗೆ ಅಪಾರ ನಂಬಿಕೆಯಿರುವುದರಿAದ ಅವರು ಬಳಿಸಾರಿದ್ದು ಪರಿಚಿತರಾದ ಆಯುರ್ವೇದ ವೈದ್ಯರ ಬಳಿ. ಲಕ್ಷಣಗಳನ್ನೆಲ್ಲ ನೋಡಿ, ಪ್ರಶ್ನೆಗಳ ಮೂಲಕ ತೊಂದರೆಗಳನ್ನೆಲ್ಲ ಅರ್ಥೈಸಿಕೊಂಡು ವೈದ್ಯರು ಕೂಡಲೇ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು. ಬೆಂಗಳೂರಿನ ಕಾರ್ಡಿಯೋ ಸ್ಕಾö್ಯನ್ ಸೆಂಟರ್ನಲ್ಲಿ ಪರೀಕ್ಷೆ ಮಾಡಿಸಲಾಯಿತು (ಜೂನ್ ೨೦೨೨ರಲ್ಲಿ). ಹೃದಯದ ನಾಲ್ಕೈದು ಕಡೆ ರಕ್ತವಾಹಿನಿಯಲ್ಲಿ ತೊಡಕಿರುವುದೂ, ಎರಡು ಮೂರು ಕಡೆ ಗಂಭೀರತೆ ಹೆಚ್ಚಿರುವುದೂ ಅದರಿಂದ ತಿಳಿದುಬಂತು. (ಚಿತ್ರ ಇದರ ಜೊತೆಗಿದೆ. ಹಳದಿ ಬಣ್ಣ ತೊಡಕಿರುವ ಸ್ಥಳಗಳನ್ನೂ, ನೀಲಿಗೆ ತಿರುಗಿದೆಡೆ ತೊಂದರೆಯ ಗಂಭೀರ ಸ್ವರೂಪವನ್ನೂ ನಾವು ಗಮನಿಸಬಹುದಾಗಿದೆ.) ಇದನ್ನೆಲ್ಲ ಪರಿಶೀಲಿಸಿದ ವೈದ್ಯರು ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸಬಹುದೆಂದು ಆಶ್ವಾಸನೆ ನೀಡಿದ್ದರಿಂದ ಅಂದೇ ಚಿಕಿತ್ಸೆ ಮೊದಲುಗೊಂಡಿತು.
ಚಿಕಿತ್ಸೆ ಫಲಕಾರಿಯಾಗಬೇಕಾದರೆ ನಾಲ್ಕು ಸಂಗತಿಗಳು ಉತ್ಕೃಷ್ಟವಾಗಿರಬೇಕು ಎನ್ನುತ್ತದೆ ಆಯುರ್ವೇದ. ಅವುಗಳೆಂದರೆ – ಗುಣವಾನ್ ವೈದ್ಯ, ಗುಣವಾನ್ ರೋಗಿ, ಗುಣವತ್ ದ್ರವ್ಯ ಹಾಗೂ ಗುಣವತ್ ಪರಿಚರಣ. ವೈದ್ಯ, ವೈದ್ಯನು ಬಳಸುವ ಔಷಧವೇ ಮುಂತಾದ ದ್ರವ್ಯಗಳು, ಔಷಧ ತೆಗೆದುಕೊಳ್ಳಬೇಕಾದ ಕ್ರಮ ಇವುಗಳು ಉತ್ಕೃಷ್ಟವಾಗಿರಬೇಕಾದಂತೆಯೇ ರೋಗಿಯೂ ಉತ್ಕೃಷ್ಟವಾಗಿರಬೇಕೆಂಬುದು ಇದರ ತಾತ್ಪರ್ಯ. ಚಿಕಿತ್ಸೆಯ ಬಗ್ಗೆ ಶ್ರದ್ಧೆ, ವೈದ್ಯರು ತಿಳಿಸಿದ ಕ್ರಮದಲ್ಲಿಯೇ ತಿಳಿಸಿದ ಕಾಲದಲ್ಲಿಯೇ ಔಷಧ ಸೇವನೆ, ಕಟ್ಟುನಿಟ್ಟಾದ ಪಥ್ಯ, ನಿದ್ರೆ, ವಿಶ್ರಾಂತಿ, ಮಿತ ಚಟುವಟಿಕೆ ಮೊದಲಾದವುಗಳೆಲ್ಲ ರೋಗಿಗೆ ಸಂಬAಧಿಸಿದವು. ಆತ್ರೇಯರು ತಮಗೆ ಸಂಬAಧಿಸಿದ ಚಿಕಿತ್ಸಾನಿಯಮಗಳನ್ನು ತಪ್ಪಿಲ್ಲದೆ ಪಾಲಿಸುತ್ತ ಆಗಾಗ ವೈದ್ಯರ ಮಾರ್ಗದರ್ಶನ ಪಡೆಯುತ್ತ ಮುಂದುವರಿಯುತ್ತಿದ್ದರು. ಎರಡೇ ತಿಂಗಳಲ್ಲಿ ಹೃದಯವಿಕಾರ ಇಲ್ಲವೇ ಇಲ್ಲ ಎನ್ನುವಷ್ಟು ಪರಿವರ್ತನೆ ಕಂಡುಬಂತು. ಇನ್ನು ಶಮನೋಪಚಾರ ಮಾತ್ರ ಮುಂದುವರಿಸೋಣ ಎಂದು ಸಂತೃಪ್ತಭಾವದಿಂದ ಸೂಚಿಸಿದರು ವೈದ್ಯರು. ಚಿಕಿತ್ಸೆ ಫಲಕಾರಿಯಾದ ಮಾರ್ಗದಲ್ಲಿ ಸಾಗುತ್ತಿರುವಾಗಲೇ ಊಹಿಸಿರದ ಆಘಾತವೊಂದು ಬಂದೊದಗಿತು. ಚಿಕಿತ್ಸೆಯ ನೇತೃತ್ವ ವಹಿಸಿದ್ದ ವೈದ್ಯರು ಅಕಾಲ ಮರಣ ಹೊಂದಿದರು. ಆದರೆ ಅವರ ಪತ್ನಿಯೂ ಪಳಗಿದ ವೈದ್ಯರಾದ್ದರಿಂದ ಅವರ ಮಾರ್ಗದರ್ಶನದಲ್ಲಿ ಹಿಂದಿನಂತೆಯೇ ಚಿಕಿತ್ಸೆ ಮುಂದುವರಿಯಿತು.
ಚಿಕಿತ್ಸೆ ನಡೆಯುತ್ತಿದ್ದಂತೆ ಮತ್ತೆ ಎರಡುಬಾರಿ ಪರೀಕ್ಷೆ ಮಾಡಲಾಯಿತು. ಸರಿದಾರಿಯಲ್ಲಿದ್ದ ಚಿಕಿತ್ಸೆ ದಿನಚರಿಯ ವ್ಯತ್ಯಯದ ಕಾರಣಕ್ಕೆ ಕಿಂಚಿತ್ ನಿಧಾನವಾಯಿತಲ್ಲದೆ ಆಮ್ಲಜನಕದ ಪೂರೈಕೆಯಲ್ಲಿ ಅಸಮತೋಲನ ಕಂಡುಬಂತು. ವೈದ್ಯರು ಅತಿಯಾಗಿ ಮಾತನಾಡಬಾರದೆಂಬ ನಿಯಮದೊಂದಿಗೆ ಔಷಧಕ್ರಮದಲ್ಲಿ ಸ್ವಲ್ಪ ಬದಲಾವಣೆ ಸೂಚಿಸಿದರು. ಮುಂದೆ ಚಿಕಿತ್ಸೆ ಫಲಕಾರಿಯಾದ ಹಂತ ತಲಪಿದಾಗ ಮತ್ತೊಮ್ಮೆ (ನವೆಂಬರ್ ೨೦೨೨ರಂದು) ಹೃದಯದ ಪರೀಕ್ಷೆ ನಡೆಸಲಾಯಿತು. (ವಿವರಕ್ಕಾಗಿ ಎರಡನೇ ಚಿತ್ರ ನೋಡಿ. ಇದರಲ್ಲಿ ಎಲ್ಲಿಯೂ ತೊಡಕು ಕಂಡುಬರದಿರುವುದನ್ನು ನಾವು ಗಮನಿಸಬಹುದಾಗಿದೆ. ಆರೋಗ್ಯವಂತರ ಹೃದಯ ಹೇಗಿರಬಹುದೋ ಹಾಗೆಯೆ ಇದೆ ಇದು. ಎಲ್ಲಿಯೂ ತಡೆಯಿದ್ದ ಕುರುಹೂ ಇಲ್ಲ.) ಇದರಿಂದಾಗಿ ಶಸ್ತçಚಿಕಿತ್ಸೆಯಿಲ್ಲದೆಯೂ ಹೃದಯದ ಖಾಯಿಲೆಯನ್ನು ಗುಣಪಡಿಸಬಹುದೆಂದು ಸಾಬೀತಾದಂತಾಯಿತು.
* * *
ತುಂಬಾ ಗಂಭೀರ ಹಂತ ತಲಪಿದ ಹೃದಯದ ಖಾಯಿಲೆಯನ್ನೂ ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಬಹುದೆಂಬುದು ಹಲವರಿಗೆ ತಿಳಿದಿಲ್ಲ. ಕೆಲವರು ಕೇಳಿರಬಹುದಾದರೂ ನಂಬುವುದಿಲ್ಲ. ಬೇರೆಯವರ ಮಾತೇಕೆ, ನನಗೇ ಈ ಬಗೆಯ ಚಿಕಿತ್ಸೆಯ ಬಗ್ಗೆ ಅರಿವಿರಲಿಲ್ಲ. ಆಯುರ್ವೇದದ ಮೂಲಕ ಹೃದಯದ ಖಾಯಿಲೆ ಗುಣವಾದೀತೆಂಬುದರ ಬಗ್ಗೆ ನಂಬಿಕೆಯೂ ಇರಲಿಲ್ಲ. ಯಾರು ನಂಬಲಿ ಬಿಡಲಿ, ಆಯುರ್ವೇದಕ್ಕೆ ಇಂತಹ ಸಾಮರ್ಥ್ಯವಿರುವ ಬಗ್ಗೆ ಎರಡು ಮಾತಿಲ್ಲ.
ಆಲೋಪತಿ ಚಿಕಿತ್ಸಾಕ್ರಮದಲ್ಲಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಖಾಯಿಲೆಗೆ ಇಂತಹ ಚಿಕಿತ್ಸೆ ಎಂಬುದು ಅಲ್ಲಿ ಹೆಚ್ಚು ಕಮ್ಮಿ ನಿಗದಿಯಾಗಿರುತ್ತದೆ. ಆದರೆ ಆಯುರ್ವೇದದ ಚಿಕಿತ್ಸಾಕ್ರಮ ಬೇರೆಯದೇ ಆಗಿರುತ್ತದೆ.
ಉದಾಹರಣೆಗೆ ಐದು ಜನರ ರಕ್ತವಾಹಿನಿಗಳಲ್ಲಿ ಒಂದೇ ತರದ ತಡೆ ಕಂಡುಬರುತ್ತಿದೆಯೆಂದುಕೊಳ್ಳೋಣ. ಆಗ
ಆ ಐವರ ಚಿಕಿತ್ಸೆಯೂ ಆಯುರ್ವೇದ ಪದ್ಧತಿಯಲ್ಲಿ ಒಂದೇ ಆದೀತೇ ಎಂದು ಕೇಳಿದರೆ ‘ಇಲ್ಲ’ವೆಂಬುದೇ ಉತ್ತರ. ಮೂರು ದೋಷಗಳು, ಏಳು ಧಾತುಗಳು, ಮೂರು ಮಲಗಳು, ಶರೀರ, ಮನಸ್ಸು, ಆತ್ಮ, ಇಂದ್ರಿಯಗಳು ಮುಂತಾದ ಹಲವು ಅಂಶಗಳನ್ನು ಗಮನಿಸಿ ಆಯುರ್ವೇದದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೃದಯದ ರಕ್ತವಾಹಿನಿಗಳಲ್ಲಿ ಪ್ರಾಣವಹ, ರಸವಹ, ಅನ್ನವಹ ಎಂದು ಮೂರು ಬಗೆ. ಆತ್ರೇಯರಿಗೆ ರಸವಹಸ್ರೋತಸ್ಸಿನಲ್ಲಿ ತೊಡಕಿತ್ತು. ಅದಕ್ಕನುಗುಣವಾಗಿ ಚಿಕಿತ್ಸೆ ನೀಡಲಾಯಿತು. ಇನ್ನೊಬ್ಬರ ಪ್ರಕೃತಿ (ವಾತ, ಪಿತ್ತ, ಕಫ ಎಂದು ಮೂರು ಬಗೆ) ಬೇರೆಯಿದ್ದು ತೊಡಕೂ ಬೇರೆ ಸ್ರೋತಸ್ಸಿನಲ್ಲಿದ್ದರೆ ಚಿಕಿತ್ಸೆಯೂ ಬೇರೆ ತರಹದ್ದಿರಬೇಕಾಗುತ್ತದೆ. ಹೀಗೆ ಹೊರಗಿನ ಲಕ್ಷಣ ಒಂದೇ ಇದ್ದ ಮಾತ್ರಕ್ಕೆ ಚಿಕಿತ್ಸೆಯೂ ಒಂದೇ ತೆರನಾಗಿರುವುದಿಲ್ಲ. ಆದ್ದರಿಂದ ಇಂತಹ ಚಿಕಿತ್ಸೆಯಲ್ಲಿ ವೈದ್ಯರ ಪರಿಣತಿ ತುಂಬಾ ಮುಖ್ಯವಾಗಿರುತ್ತದೆ. ಕೆಲವೊಂದು ವೈದ್ಯರು ಕೆಲವೇ ವಿಶೇಷ ಚಿಕಿತ್ಸೆಯಲ್ಲಿ ಪಳಗಿ ಖ್ಯಾತಿ ಹೊಂದಿರುವುದೂ ಇದೇ ಕಾರಣದಿಂದಲೇ. ಇಂತಹ ಚಿಕಿತ್ಸೆ ಎಲ್ಲೆಡೆ ದೊರೆಯದಿರುವುದೂ ಇದೇ ಕಾರಣಕ್ಕಾಗಿಯೇ.
‘ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯವರನ್ನು ಗುಣಪಡಿಸಿರುವ ಬೇರೆ ಉದಾಹರಣೆಗಳಿವೆಯೇ?’ ಎಂದು ಕೇಳಿದಾಗ ವೈದ್ಯೆ ಹೇಳಿದ್ದು – ‘ಹಲವಾರು’ ಎಂದು. ಬೇರೊಬ್ಬರಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುವುದು ವೈದ್ಯಧರ್ಮಕ್ಕೆ ವಿರುದ್ಧವಾಗುವುದರಿಂದ ಯಾವೊಂದು ವಿವರವನ್ನೂ ಅವರು ನೀಡಲೊಪ್ಪಲಿಲ್ಲ. ಆದರೆ ಬೇರೆ ಬೇರೆ ಮೂಲಗಳಿಂದ ಇಬ್ಬರು ಮೂವರ ವಿವರ ಸಂಗ್ರಹಿಸಿದಾಗ ತಿಳಿದುಬಂದದ್ದು – ‘ಶಸ್ತ್ರಚಿಕಿತ್ಸೆ ಮಾಡದಿದ್ದರೆ ಮೂರು ತಿಂಗಳೂ ಬದುಕಿರುವುದು ಅಸಾಧ್ಯವೆಂದು ಯಾರ ಬಗ್ಗೆ ಹೇಳಲಾಗಿತ್ತೊ ಅವರೇ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಯಾವುದೇ ತೊಡಕಿಲ್ಲದೆ ದಿನನಿತ್ಯದ ಕೃತ್ಯಗಳಲ್ಲಿ ತೊಡಗಿದ್ದಾರೆ’ ಎಂದು.
* * *
ಈ ಲೇಖನ ಸಿದ್ಧಪಡಿಸುವ ಇಚ್ಛೆ ವ್ಯಕ್ತಪಡಿಸಿದಾಗ ವೈದ್ಯೆ ತಮ್ಮ ಹೆಸರು ಹಾಕಬೇಕಾದುದಿಲ್ಲವೆಂದು ತಿಳಿಸುತ್ತ ವ್ಯಕ್ತಿಪ್ರಸಿದ್ಧಿಯನ್ನು ಖಂಡತುಂಡಾಗಿ ನಿರಾಕರಿಸಿಬಿಟ್ಟರು. ಅವರು ಆಯುರ್ವೇದ ಅಕಾಡೆಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ವಿಶೇಷ. ಅಧ್ಯಯನ ಹಾಗೂ ಪರಿಣತಿ ಅಲ್ಲಿಂದಲೇ ಪಡೆದಿದ್ದರಿಂದ ಲೇಖನದಲ್ಲಿ ಅಕಾಡೆಮಿಯ ಮಾಹಿತಿ ನೀಡಬಹುದೆಂದರು. (ಆಯುರ್ವೇದ ಅಕಾಡೆಮಿ, ೨೨೧/೧, ೨ನೇ ಕ್ರಾಸ್, ೪ನೇ ಮೇನ್, ಚಾಮರಾಜಪೇಟೆ, ಬೆಂಗಳೂರು – ೫೬೦೦೧೮, ಕರ್ನಾಟಕ, ದೂ: ೦೮೦ ೨೨೪೨೦೫೪೭) ಅಚ್ಚರಿ ಬರಿಸುವ ಪರಿಣಾಮ ನೀಡುವ ಹಲವು ಚಿಕಿತ್ಸೆಗಳು ಆಯುರ್ವೇದವೇ ಮುಂತಾದ ಭಾರತೀಯ ಚಿಕಿತ್ಸಾಕ್ರಮಗಳಲ್ಲಿ ಇಂದಿಗೂ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿವೆ. ಪ್ರಸಿದ್ಧಿ ಪರಾಙ್ಮುಖತೆಯ ಕಾರಣದಿಂದಲೋ, ಪರಿಣತಿಯಿರುವವರ ವಿವರ ಸುತ್ತಮುತ್ತಲಿನ ಕೆಲವೇ ಕೆಲವರಿಗೆ ಮಾತ್ರ ತಿಳಿದಿರುವುದರಿಂದಲೋ, ಈ ಚಿಕಿತ್ಸಾಕ್ರಮದಲ್ಲಿ ಕೆಲವಂತೂ ಹೆಚ್ಚಿನ ಶ್ರಮ ಬೇಡುವುದರಿಂದಲೋ, ಸರಿಯಾದ ದಾಖಲಾತಿಯಿಲ್ಲದಿರುವುದರಿಂದಲೋ, ಈ ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಶ್ರದ್ಧೆ ಕಡಮೆಯಿರುವುದರಿಂದಲೋ ಒಟ್ಟಾರೆ ಇಂತಹವು ಸಾಟಿಯಿಲ್ಲದ್ದಾಗಿದ್ದರೂ ಪ್ರಸಿದ್ಧಿ ಪಡೆದಿಲ್ಲ, ಜನಜನಿತವಾಗಿಲ್ಲ, ಅದೇನೇ ಇರಲಿ, ಜನರು ಬಳಸಿಕೊಳ್ಳುತ್ತಾರೊ ಬಿಡುತ್ತಾರೊ, ಅದರ ಬಗ್ಗೆ ಗಮನವೇ ಇಲ್ಲದೆ ಇಂತಹ ಪವಾಡವೆನಿಸುವ ಚಿಕಿತ್ಸಾಪದ್ಧತಿಗಳು ತಮ್ಮ ‘ಸ್ವತ್ತ್ವ’ದ ಕಾರಣದಿಂದ ಅಲ್ಲಲ್ಲಿ ಮುಂದುವರಿಯುತ್ತಲೇ ಇರುತ್ತವೆ.