ಎಲ್ಲರಿಗೂ ಸಮನಾದ ಶಿಕ್ಷಣಕ್ರಮವನ್ನು ತಂದು ವಿಭಿನ್ನತೆಯಲ್ಲಿ ಏಕತೆ ಸಾಧಿಸುವ ದಿಕ್ಕಿನಲ್ಲಿ ಸರ್ವರಿಗೂ ಶಿಕ್ಷಣ ಕೊಡಬೇಕಾಗುತ್ತದೆ. ವೋಟಿಗಾಗಿ ಬಹುಸಂಖ್ಯಾತರನ್ನು ಒಡೆದು ಅಲ್ಪಸಂಖ್ಯಾತರನ್ನು ಓಲೈಸುವ ಕಾಯಿದೆಗಳನ್ನು ನಿಲ್ಲಿಸಿ, ಬಲಿಷ್ಠ ಭಾರತವನ್ನು ನಿರ್ಮಿಸುವ ಶೈಕ್ಷಣಿಕ ವ್ಯವಸ್ಥೆಯೊಂದು ರೂಪಗೊಳ್ಳಬೇಕಿದೆ.
ನಮ್ಮ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ’ಸದುವೋನು’ ಎಂದರೆ ಚದುವೋನೆ. ಕನ್ನಡದಲ್ಲಿ ಹೇಳಿದರೆ ಓದುವವನು. ಹೆಸರಿನ ಅರ್ಥದಂತೆ ಅವನು ಯಾವಾಗಲೂ ಓದುತ್ತಿದ್ದ ಎಂದಲ್ಲ. ನಮ್ಮ ಹಳ್ಳಿಗೆ ಬಂದ ಅಂಚೆಯ ಕಾಗದಗಳನ್ನು ಓದಿ ಹೇಳುವವನು ಅವನೇ. ಓದುಬರಹ ಬರುತ್ತಿದ್ದದ್ದು ಅವನೊಬ್ಬನಿಗೆ.
ಊರಿನ ಅವನ ವಯಸ್ಸಿನ ಹುಡುಗರು (ಯುವಕರು) ಓದು ಕಲಿತವರಲ್ಲ. ಅವರು ಶಾಲೆಯನ್ನೇ ಕಂಡವರಲ್ಲ, ಆದರೆ ಇವನು ಹತ್ತಿರದ ಪಟ್ಟಣದಲ್ಲಿ ೭ನೇ ತರಗತಿಯವರೆಗೆ ಓದಿ ಚದುವೋನೆ ಆದ. ಅವನನ್ನು ಪಟ್ಟಣದಲ್ಲಿ ಹತ್ತಿರದ ಸಂಬಂಧದವರು ಶಾಲೆಗೆ ಕಳುಹಿಸಿ ಸಾಕಿ ನಮ್ಮ ಹಳ್ಳಿಗೆ ಕಳುಹಿಸುವುದರಲ್ಲಿ ಒಂದು ವಿಶಿ? ಕಾರಣವಿತ್ತು; ಅದು, ಅವರ ಮನೆಯ ಹುಡುಗಿಯನ್ನು ಈ ಚದುವೋನೆಗೆ ಕೊಡುವ ಪರಸ್ಪರ ಒಪ್ಪಂದ ಆಗಿತ್ತು.
ಈ ಘಟನೆ ಸುಮಾರು ೧೯೫೭-೬೦ರಲ್ಲಿ ನಡೆದದ್ದು, ಸರಿಯಾದ ಇಸವಿ ತಿಂಗಳುಗಳು ನನಗೆ ನೆನಪಿಲ್ಲ. ಆಗಿನ ದಿನಗಳಲ್ಲಿ ಶಾಲೆಗೆ ಹೋಗಬೇಕಾದರೆ ಹತ್ತಿರದ ಊರಿಗೆ ಹೋಗಿ ಅಲ್ಲೇ ಇದ್ದು, ಉಳಿದು, ಕಲಿಯುವ ಅನಿವಾರ್ಯತೆ ಇತ್ತು. ಕೇವಲ ಕೆಲವರು ಮಾತ್ರ ಶಾಲೆಗೆ, ಹತ್ತಿರದ ಊರಿಗೆ ಹೋಗಿ ಬರುತ್ತಿದ್ದರು. ದೂರದ ಗುರುಕುಲಕ್ಕೆ ಹೋಗಿ ಕಲಿಯುತ್ತಿದ್ದ ರಾಮ, ಕೃ?ರ ಕಥೆಗಳು ಇಂಥವರಿಗೆಲ್ಲ ಸ್ಫೂರ್ತಿ ತಂದಿರಬಹುದು. ವಿದ್ಯಾಭ್ಯಾಸದ ಮೇಲೆ ಅವರಿಗೆ ಅತ್ಯಂತ ಹೆಚ್ಚು ನಂಬಿಕೆ ಇರುತ್ತಿತ್ತು. ನಮ್ಮ ಹಿರಿಯರೊಬ್ಬರು ಪರದೇಶಗಳಿಗೆ ಹೋಗಿ UNESCದಲ್ಲಿ ಕೆಲಸ ಮಾಡಿ ಹಿಂದಿರುಗಿ ಬೆಂಗಳೂರಿನಲ್ಲಿ ವಾಸ್ತವ್ಯಹೂಡಿ ತಮ್ಮ ಹಳ್ಳಿಯನ್ನು ಮರೆಯದೆ ತಾವೇ ಶಾಲೆಯನ್ನು ಪ್ರಾರಂಭಿಸುವ ಸಾಹಸಕ್ಕೆ ಕೈಹಾಕಿರುವ ಉದಾಹರಣೆಯಿದೆ. ಅವರು ಪ್ರೌಢಶಾಲೆಗೆ ತಮ್ಮ ಮನೆಯಿಂದ ೩೦ ಕಿ.ಮೀ. ದೂರದ ಮೈಸೂರಿಗೆ ಸೋಮವಾರ ಬೆಳಗಿನ ಜಾವ ಎದ್ದು ನಡೆದು ೧೦ ಗಂಟೆಗೆ ಶಾಲೆ ಸೇರಿ, ವಾರಪೂರ್ತಿ ಮೈಸೂರಿನಲ್ಲಿದ್ದು (ಬಾಡಿಗೆ ಕೊಠಡಿಯಲ್ಲಿ) ಪುನಃ ತಮ್ಮ ಊರಿಗೆ ಶನಿವಾರ ನಡೆದುಕೊಂಡು ಸೇರುತ್ತಿದ್ದರು.
ಸಿಂಹಾವಲೋಕನ
ಇಂತಹ ಅನೇಕ ಘಟನೆಗಳು ನಾವು ಕಂಡರೂ ಇವೆಲ್ಲಾ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ವ್ಯಕ್ತಿಗಳ ಕಥೆ. ಅವರು ಜೀವನದಲ್ಲಿ ಗೆದ್ದು ಸುಖಪಟ್ಟವರು, ದೇಶಕ್ಕಾಗಿ ಹೋರಾಡಿದವರು. ಸ್ವಾತಂತ್ರ್ಯ ಬರುವುದಕ್ಕೆ ಮೊದಲಿನ ದಿನಗಳು ಹೀಗಿದ್ದವು. ಆದರೆ ಸಾವಿರ ಸಾವಿರಗಟ್ಟಲೆ ಮಕ್ಕಳು, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಶಾಲೆಗೆ ಹೋಗಲು ಅವಕಾಶವಿಲ್ಲದೆ ಅನಕ್ಷರಸ್ಥರಾಗಿ ಉಳಿದಿರುವವರ ಬಗ್ಗೆ ಯೋಚಿಸಿದಾಗ ಯಾರಿಗಾದರೂ ಮನ ನೋಯದಿರದು. ಸ್ವಾತಂತ್ರ್ಯ ಬಂದು ೭೦ ವರ್ಷಗಳ ನಂತರವೂ ಶಾಲೆ ವ್ಯವಸ್ಥೆಯನ್ನು ಸೂಕ್ತವಾಗಿ ಸಂರಚಿಸದೆ ಕೊರಗುವ ದೇಶವನ್ನು ನಾವೇನೆನ್ನಬೇಕು? ನಮ್ಮನ್ನಾಳಿದ ಮುಂದಾಳುಗಳನ್ನು ಏನೆಂದು ಕರೆಯಬೇಕು? ಇಂತಹ ಪರಿಸ್ಥಿತಿಯಿಂದ ನಾವು ಇನ್ನೂ ಪೂರ್ಣವಾಗಿ ಮುಕ್ತವಾಗಿಲ್ಲ.
ಸ್ವಾತಂತ್ರ್ಯ ಬಂದ ಸಮಕಾಲದಲ್ಲಿ ಭಾರತದಲ್ಲಿ ಶಿಕ್ಷಣಕ್ಕಾಗಿ ಖರ್ಚುಮಾಡಿರುವ ಹಣ ಆ ಕಾಲಕ್ಕೆ ’ಆನೆ ಹೊಟ್ಟೆಗೆ ಅರಕಾಯ ಶುಂಠಿ’ ಎಂಬಂತಾಗಿತ್ತು. ಆಗ ನಮ್ಮಲ್ಲಿ ಏಕಕಾಲದಲ್ಲಿ ಎಲ್ಲವನ್ನೂ ವ್ಯವಸ್ಥೆ ಮಾಡುವ ಸಂಪತ್ತಿರಲಿಲ್ಲ ಎನ್ನುವುದು ನಿಜ; ಆದರೆ ಅದಕ್ಕೆ ಪ್ರಮುಖವಾಗಿ ಬೇಕಾದ ರಾಜಕೀಯ ಸಂಕಲ್ಪವೂ (political will) ಇರಲಿಲ್ಲ. ಸ್ವಾತಂತ್ರ್ಯದ ನಂತರದಿಂದ ಈವರೆಗೆ ಆಳಿರುವ ನಮ್ಮ ರಾಜಕೀಯ ಸರ್ಕಾರಗಳು ಎಷ್ಟರ ಮಟ್ಟಿಗೆ ಆವಶ್ಯಕತೆಗನುಗುಣವಾಗಿ ಕಾರ್ಯನಿರ್ವಹಿಸಿದವು ಎನ್ನುವುದು ಶಿಕ್ಷಣಕಾರ್ಯದ ಅಧ್ಯಯನಗಳನ್ನು ಕೈಗೆತ್ತಿಕೊಳ್ಳಲು ಇಚ್ಛಿಸುವ ಸಂಸ್ಥೆಗಳಿಗೆ ಒಂದು ’ಅಧ್ಯಯನ ಅಂಶ’. ಇದನ್ನು ಶಿಕ್ಷಣದ ವಿದ್ಯಾರ್ಥಿಗಳೂ ಗಮನಿಸಬೇಕು.
ಉತ್ತಮ ಉದ್ದೇಶದಿಂದ ರಚಿಸಲ್ಪಟ್ಟಿರುವ ಶಿಕ್ಷಣ ಕುರಿತ ಅಧ್ಯಯನ ಸಂಸ್ಥೆಗಳನ್ನು, ಶಿಕ್ಷಣಕ್ಕಾಗಿ ರೂಪಿಸಿರುವ ಯೋಜನೆಗಳನ್ನೂ ರಾಷ್ಟ್ರೀಯ ಕಮಿ?ನ್‌ಗಳನ್ನೂ ಗಮನಿಸಿದರೆ, ಹೊರನೋಟಕ್ಕೆ ಸಾಕಷ್ಟು ಚಿಂತನೆ ನಡೆದಿದೆ ಎಂದೆನಿಸುತ್ತದೆ. ಆದರೆ ನಮ್ಮ ದೇಶಕ್ಕೆ ಬೇಕಾದ ಶಿಕ್ಷಣದ ತತ್ತ್ವಗಳನ್ನಾಧರಿಸಿ ವ್ಯವಸ್ಥೆ ರೂಪಿಸಲ್ಪಟ್ಟಿದೆ ಎಂದಾಗಲಿ, ಸರಿಯಾದ ಬೇಕಾದ ಪಾಠ್ಯಕ್ರಮಗಳು ರಚಿಸಲ್ಪಟ್ಟಿವೆ ಎಂದಾಗಲಿ ಅಥವಾ ಭಾರತದಲ್ಲಿ ಹಿಂದಿನಿಂದಲೂ ಇದ್ದ ಸುಂದರವಾದ ಶಿಕ್ಷಣದ ಬುನಾದಿಯಿಂದ ವ್ಯವಸ್ಥೆ ರಚಿಸಲ್ಪಟ್ಟಿದೆ ಎಂದಾಗಲಿ ಕಂಡುಬರುವುದಿಲ್ಲ. ಸ್ವಾತಂತ್ರ್ಯ ದೊರೆತು ಎಪ್ಪತ್ತು ವ?ಗಳ ನಂತರ ಹಿಂದಿರುಗಿ ನೋಡಿದರೆ ಸಮೃದ್ಧಿಯಾಗಿದ್ದ ನಮ್ಮ ಸಂಸ್ಕಾರ, ಶಿಕ್ಷಣದ ಸುಂದರವಾದ ತತ್ತ್ವಗಳು, ವಿಧಾನಗಳು, ಅಕ್ಷರ-ಆರೋಗ್ಯ-ಅಧ್ಯಾತ್ಮಗಳ ಸಂಬಂಧಗಳನ್ನು ಪೂರ್ಣವಾಗಿ ಅಳಿಸಿ ದೇಶದಲ್ಲಿ ಆಸೆಬುರುಕ ಜೊಲ್ಲುಸುರಿಸುವ ಪ್ರಜೆಗಳನ್ನು ತಯಾರಿಸಿದ ಪದ್ಧತಿಯನ್ನು ತಿದ್ದಿ ರೂಪಿಸುವುದು ಕ? ಎಂದೆನಿಸುವುದಿಲ್ಲವೆ? ಆದರೆ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಂಪನ್ಮೂಲ ನಮ್ಮಲ್ಲಿ ಇಲ್ಲ, ಇರಲಿಲ್ಲ ಎಂಬ ಅಂಶವನ್ನು ಯಾರೂ ನಂಬುವುದಿಲ್ಲ.
ಸ್ವಾತಂತ್ರ್ಯದ ನಂತರ ಹುಟ್ಟಿದ ನಾನು, ೧೯೬೦ರ ನಂತರ ಬಂದ ಶಿಕ್ಷಣದ ಕಮಿ?ನ್‌ಗಳ (ಕೊಠಾರಿ ಕಮಿ?ನ್ ಮುಂತಾದವುಗಳು) ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವುಗಳು ಈಗ ಶಿಕ್ಷಣದ ಆರ್.ಟಿ.ಇ. ಕಾಯಿದೆ ಅನುಭವಿಸುತ್ತಿರುವ ಸಂಕಟವನ್ನೇ ಅಪಾರವಾಗಿ ಅನುಭವಿಸಿ ಮುರುಟಿಹೋದವು. ಆರ್.ಟಿ.ಇ. ಎಂದರೆ ’ಕೆಲವು ದುಡ್ಡು ಕೊಡಬಲ್ಲ ಬಡವರ ಮಕ್ಕಳನ್ನು ಪ್ರೈವೇಟ್ ಶಾಲೆಗೆ ಸೇರಿಸುವ ಯೋಜನೆ’ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಬಂದಿದೆ. ನಮ್ಮ ಮನೆಯ ಬಳಿಯ ಕೆಲವರು “ಮನೆ ಓನರ್ ಮಕ್ಕಳಿಗೆ ಆರ್.ಟಿ.ಇ. ಸೀಟ್ ಸಿಕ್ಕಿದೆ, ಬಾಡಿಗೆಯವರಿಗಿಲ್ಲ!” – ಎಂದು ವ್ಯವಸ್ಥೆಯನ್ನು ಖಂಡಿಸುತ್ತಿರುವುದು ವಿ?ದನೀಯ. ಶಿಕ್ಷಣದ ಕಾಯಿದೆಯಿಂದಲೇ ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಪಡೆಯುವ ಹಕ್ಕು ಬಂದಿದೆ ಎಂಬ ಅಂಶ ಯಾರಿಗೂ ತಿಳಿಯದ ಅಂಶವಾಗಿದೆ. ಶಿಕ್ಷಣದ ವ್ಯವಸ್ಥೆಯಲ್ಲಿರುವವರು ಎಲ್ಲಾ ಕಮಿ?ನ್‌ಗಳಂತೆ ಶಿಕ್ಷಣದ ರಾಷ್ಟ್ರೀಯ ನೀತಿಗಳಂತೆ, ಸಾಮಾಜಿಕ ಕಟ್ಟಳೆಯ ಕಾಯಿದೆಗಳಂತೆ, ಇವೂ ’ಆಯಾ ರಾಮ್ ಗಯಾ ರಾಮ್’ ಆಗುತ್ತೆ ಎನ್ನುವ ಧೋರಣೆಯನ್ನು ಹೊತ್ತಿದ್ದಾರೆ. ಖಾಸಗಿ ಶಿಕ್ಷಣಸಂಸ್ಥೆಗಳು ಆರ್.ಟಿ.ಇ.ಗೂ ತಮಗೂ ಏನೇನೂ ಸಂಬಂಧವಿಲ್ಲದಂತೆ ಬೀಗುತ್ತಿದ್ದಾರೆ.
ಕಾಯದೆಯ ವ್ಯಾಪ್ತಿ
೨೦೦೯ರ ಆಗಸ್ಟ್ ೨೯ರಂದು ಕಡ್ಡಾಯ ಶಿಕ್ಷಣದ ಕಾಯದೆ (ಆರ್‌ಟಿಇ) ನಮ್ಮ ಪಾರ್ಲಿಮೆಂಟಿನಿಂದ ಘನತೆವೆತ್ತ ಭಾರತದ ರಾ?ಪತಿಗಳ ಹಸ್ತಾಕ್ಷರವನ್ನು ಪಡೆದು ಹೊರಬಂತು. ಅಂದಿನಿಂದ ಪ್ರತಿ ಭಾರತೀಯ ಮಗುವಿಗೆ ಶಿಕ್ಷಣದ ಹಕ್ಕು ಬಂದಿದೆ. ಇದರಿಂದಾಗಿ ಯಾವುದೇ ಮಗುವನ್ನು ಶಿಕ್ಷಣ ಪಡೆಯುವಿಕೆಯಿಂದ ವಂಚಿಸಲು ಸಾಧ್ಯವಿಲ್ಲ. ಯಾವುದೇ ಮಗುವಿನ ಶಿಕ್ಷಣಕ್ಕೆ ಅಡ್ಡಬಂದ, ಅಡ್ಡಬರುವ ಯಾವುದೇ ವ್ಯಕ್ತಿ ಶಿಕ್ಷೆಗೆ ಗುರಿಯಾಗುವನು.
೬ರಿಂದ ೧೪ರ ವಯಸ್ಸಿನ ಮಗುವಿಗೆ ಮುಕ್ತವಾಗಿ, ಶಾಲೆಯಲ್ಲಿ ತನಗೆ ಸಮಂಜಸವಾದ ವಿದ್ಯೆಯನ್ನು ಪಡೆಯುವ ಹಕ್ಕಿದೆ. ವಂತಿಕೆಯನ್ನು ಯಾವ ರೂಪದಲ್ಲೂ ಪಡೆಯದೆ ಜಾತಿ, ಮತ ಹಾಗೂ ಲಿಂಗಭೇದವಿಲ್ಲದೆ ೬ರಿಂದ ೧೪ ವರ್ಷದ ಮಗುವಿಗೆ ಶಿಕ್ಷಣವನ್ನು ಕೊಡುವ ಜವಾಬ್ದಾರಿ ಶಾಲಾ ಕಾಲೇಜುಗಳಿಗೆ, ಅದರ ಜವಾಬ್ದಾರಿ ಹೊತ್ತಿರುವ ಸರ್ಕಾರಕ್ಕಿದೆ. ಶಿಕ್ಷಣವು ರಾಜ್ಯಗಳ ಜವಾಬ್ದಾರಿಯಾದ್ದರಿಂದ ರಾಜ್ಯಸರ್ಕಾರವು ಶಿಕ್ಷಣದ ಕಾಯಿದೆ ಆಧಾರದ ಮೇಲೆ ಮಗುವಿನ ಶಿಕ್ಷಣವನ್ನು ಸಮಂಜಸವಾಗಿ, ಭಾರತದ ಸಂವಿಧಾನ ಹೇಳುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಸಂಬಂಧಪಟ್ಟ ಸರ್ಕಾರಗಳು ಅದು ಸ್ಥಳೀಯ ಸರ್ಕಾರವೇ ಆಗಿರಲಿ, ರಾಜ್ಯಸರ್ಕಾರವೇ ಆಗಿರಲಿ, ಭಾರತದ ಮಗು ಭಾರತದಲ್ಲಿ ಎಲ್ಲೇ ಹುಟ್ಟಿರಲಿ, ಆ ಮಗುವಿಗೆ ಶಾಲೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.
ಈ ಕಾಯಿದೆಯನ್ನು ಜಾರಿಗೆ ತರುವಲ್ಲಿ ಎಡವಿದ ಸರ್ಕಾರಗಳು ಇದೀಗ ತಮ್ಮನ್ನು ತಾವೇ ಶಿಕ್ಷೆಗೆ ಒಳಪಡಿಸಿಕೊಳ್ಳಬೇಕಾಗಿರುವ ಸಂದರ್ಭಕ್ಕೆ ಬಂದು ನಿಂತಿವೆ. ಕೇವಲ ಕಡ್ಡಾಯ ಶಿಕ್ಷಣಕ್ಕೆ ನಿಯಮಗಳನ್ನು ಹೂಡಿ ಸುಮ್ಮನಿರಲು ಬರುವುದಿಲ್ಲ. ಅನು?ನದ ಜವಾಬ್ದಾರಿ ಸರ್ಕಾರಗಳ ತಲೆಯ ಮೇಲೆ ಇದ್ದೇ ಇದೆ, ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕೈಯಲ್ಲಿ ಇವುಗಳನ್ನು ಮಾಡಿಸುವುದು ನಾಗರಿಕರ ಜವಾಬ್ದಾರಿ. ಆದರೂ ಅನುಷ್ಠಾನವು ರಾಜ್ಯ ಸರ್ಕಾರದ್ದು.
ಕಾಯಿದೆಯು ಏನನ್ನು ಅಪೇಕ್ಷಿಸುತ್ತದೆ?
೧) ಮಗುವಿಗಾಗಿ ಶಾಲೆಯನ್ನು ಒದಗಿಸುವುದು.
ಸರ್ಕಾರವು ಶಾಲೆಯನ್ನು ತಾನೇ ಕಟ್ಟುವುದು ಅತಿ ಉತ್ತಮ. ಈ ಜವಾಬ್ದಾರಿಯನ್ನು ನಮ್ಮ ಮೈಸೂರು ಮಹಾರಾಜರ ಸರ್ಕಾರ ನಿರ್ವಹಿಸಿರುವುದು ಕಣ್ಣಿಗೆ ಕಟ್ಟಿದಂತಿದೆ. ಆದರೆ ಆ ಕಾಲದಲ್ಲಿ ಈಗಿನ ಕಡ್ಡಾಯ ಶಿಕ್ಷಣದ ನಿಯಮ ಪಾಲನೆ ಭಾರತದಲ್ಲಿರಲಿಲ್ಲ.
೨) ಮಗುವಿರುವ ಸ್ಥಾನದಿಂದ ಮೂರು ಕಿಲೋಮೀಟರ್‌ನಲ್ಲಿ ಶಾಲೆ ಒದಗಿಸುವುದು.
ಈ ಒಂದು ದಶಕದಲ್ಲಿ ನಮ್ಮ ಸರ್ಕಾರಗಳು ಮಗುವಿರುವ ಸ್ಥಾನದ ಮೂರು ಕಿಲೋಮೀಟರಿನಲ್ಲಿ ಒಂದು ಪ್ರಾಥಮಿಕ ಶಾಲೆಯ ಜವಾಬ್ದಾರಿಯನ್ನು ಸಮಂಜಸವಾಗಿ ನೆರವೇರಿಸುತ್ತಿವೆ. ಆದರೆ ಅವು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಅಧಿಕಾರಿಗಳು ಅವುಗಳನ್ನು ತೀವ್ರಗೊಳಿಸುವ ಕಾರ್ಯದಲ್ಲಿ ನಿರತವಾಗಿರುವುದು ಒಂದು ಸಂತಸದ ಸುದ್ದಿ. ಆದರೂ ಈ ಕೆಲಸ ಇನ್ನೂ ಯಶಸ್ಸು ಸಾಧಿಸಿಲ್ಲ.
೩) ಅಂತಹ ಶಾಲೆಗಳಿಗೆ ತರಬೇತಿ ಹೊಂದಿದ ಉತ್ತಮ ಶಿಕ್ಷಕಿಯರನ್ನು/ಶಿಕ್ಷಕರನ್ನು ನೇಮಿಸುವುದು.
೪) ಹಾಲಿ ಇರುವ ಶಿಕ್ಷಕರಿಗೆ ಸೂಕ್ತವಾದ ತರಬೇತಿ ಕೊಡಿಸಿ ಅವರ ಕೌಶಲಗಳನ್ನು ಹೆಚ್ಚಿಸುವುದು.
೫) ಮಕ್ಕಳ ಭೌತಿಕ, ಬೌದ್ಧಿಕ, ಭಾವನಾತ್ಮಕ, ಸರ್ಜನಶೀಲ ಹಾಗೂ ಸಾಮಾಜಿಕ ಬೆಳವಣಿಗೆಗೆ ಅನುಗುಣವಾಗಿ ಪಾಠ್ಯಕ್ರಮಗಳನ್ನು ಸಿದ್ಧಪಡಿಸುವುದು.
೬) ಮಕ್ಕಳ ಬೆಳವಣಿಗೆಗೆ ಬೇಕಾದ ಆವಶ್ಯಕತೆಗಳನ್ನು ಪೂರೈಸುವುದು – ಉತ್ತಮ ಗಾಳಿ, ಕುಡಿಯುವ ನೀರು, ಪೌಷ್ಟಿಕ ಆಹಾರ ಮತ್ತು ಸೂಕ್ತವಾದ ಆಟಿಕೆಗಳನ್ನು ಒದಗಿಸುವುದು.
ಅಂದುಕೊಂಡಿದ್ದೇನು, ಆದದ್ದೇನು?
ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುವ ಆಕ?ಕ ಕಾರ್ಯಗಳನ್ನು ಸರ್ಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ಮಧ್ಯಾಹ್ನದ ಊಟ, ಹತ್ತಿರದ ಶಾಲೆಗಳು, ಕಲಿ-ನಲಿ, ನಲಿ-ಕಲಿ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ೨೦೦೦ದಲ್ಲಿ ಪ್ರಾರಂಭವಾದ ’ಸರ್ವಶಿಕ್ಷಣ ಅಭಿಯಾನ’ಕ್ಕೆ ಹೆಚ್ಚು ಒತ್ತುಕೊಡಲಾಯಿತು. ಆದರೆ ೨೦೦೭ರಲ್ಲಿ ಸುಮಾರು ಶೇಕಡ ೧೦೦ಕ್ಕೆ ಬಂದಿದ್ದ ಮಕ್ಕಳ ಶಾಲಾ ಭರ್ತಿ ಕಾರ್ಯಕ್ರಮ ೨೦೧೪-೧೫ರ ಹೊತ್ತಿಗೆ ಪ್ರತಿಶತ ೯೬.೯ಕ್ಕೆ ಇಳಿದದ್ದು ಆಶ್ಚರ್ಯಕರ ಹಾಗೂ ದುಃಖದ ಸಂಗತಿ. ಈ ಯೋಜನೆಗಳು ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ತೀಕ್ಷ್ಣವಾಗಿ ಪ್ರಶ್ನಿಸುವಂತಿವೆ.
ಶಾಲಾದಾಖಲಾತಿ ಮತ್ತು ಹಾಜರಾತಿಗಳಿಗೆ ಸಂಬಂಧವಿದೆ. ಶಾಲೆಗೆ ಸೇರಿದ ಮಕ್ಕಳು ಶಾಲೆಯಲ್ಲಿ ಉಳಿದು ಶಿಕ್ಷಣ ಪಡೆಯುವುದು ಅತಿಮುಖ್ಯ. ದಾಖಲಾದ ಮಕ್ಕಳೆಲ್ಲ ಶಾಲೆಯಲ್ಲೇ ಉಳಿದು ೭ ವ?ಗಳ ಶಿಕ್ಷಣ ಪಡೆದರೆ ಆ ಶಾಲೆಯ ಸಾಮರ್ಥ್ಯ ಉತ್ತಮ ಎಂದರ್ಥ. ಆದರೆ ದೇಶದ ಎಲ್ಲೆಡೆ ನಡೆಯುತ್ತಿರುವ ಕಥೆಯೇ ಬೇರೆ. ೨೦೦೯ರಲ್ಲಿ ಪ್ರಾಥಮಿಕಶಾಲೆಯಲ್ಲಿ ಶೇಕಡ ೭೪.೩ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇಕಡ ೭೭ ಇದ್ದ ಹಾಜರಾತಿ ೨೦೧೬ರ ಹೊತ್ತಿಗೆ ಕ್ರಮವಾಗಿ ಶೇಕಡ ೭೧.೪ ಮತ್ತು ಶೇಕಡ ೭೩.೨ಕ್ಕೆ ಇಳಿಯಿತು. ಇದರಿಂದ ಕಂಡುಬಂದ ಅಂಶವೆಂದರೆ ಕಡ್ಡಾಯ ಶಿಕ್ಷಣದ ಅನು?ನದ ನಂತರ ಸುಮಾರು ೨೦೧೬ರ ಹೊತ್ತಿಗೆ ಮಕ್ಕಳ ಕಲಿಕೆಯಲ್ಲೇ ವ್ಯತ್ಯಯ ಬಂದಿದೆ. ಕಲಿಕೆಯು ಎಲ್ಲಾ ಆಯಾಮಗಳಲ್ಲಿ ಪರಿಣಾಮದಲ್ಲಿ ಅವನತಿ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ಆರ್ಥಿಕ ವ್ಯವಹಾರವಿರುವ ವಲಯಗಳಾದ ಕಟ್ಟಡಗಳ ರಚನೆ, ಶಿಕ್ಷಕರ ದಾಖಲಾತಿ, ಶಿಕ್ಷಕರ ಸಂಭಾವನೆ, ಮಕ್ಕಳಿಗೆ ಕೊಡುವ ಸಮವಸ್ತ್ರ ಮತ್ತು ಅವರಿಗೆ ಕೊಡುವ ಪ್ರಶಿಕ್ಷಣ ಇವುಗಳ ಕಡೆಗೆ ಹೆಚ್ಚು ಒತ್ತುಕೊಟ್ಟು, ನಿಜವಾದ ಕಲಿಕೆಯ ಆಯಾಮಗಳನ್ನು ಎತ್ತಿಹಿಡಿದು ಗಮನ ಹರಿಸದಿರುವುದೇ ಎಂದು ಹೊರನೋಟಕ್ಕೆ ತಿಳಿದುಬರುತ್ತದೆ.
ಒಂದು ಯೋಜನೆಗೆ ಎಷ್ಟು ಹಣ ಹಂಚಲಾಗಿದೆ ಎಂಬ ಆಧಾರದ ಮೇಲೆ ಯೋಜನೆಗಳ ಟೆಂಡರುಗಳು, ಟೆಂಡರು ಪಡೆಯುವಿಕೆ, ಬಿಲ್ಲುಗಳಿಗೆ ಹಣಪಾವತಿ ಇಂತಕೆಲಸಗಳಿಗೆ ಹೆಚ್ಚು ಜನ ಐ.ಎ.ಎಸ್. ಪದಾಧಿಕಾರಿಗಳನ್ನು ತುಂಬಿ ಶಿಕ್ಷಣದ ಕ್ರಿಯೆಗಳಿಗಿಂತ ಆರ್ಥಿಕ ವ್ಯವಹಾರಗಳಿಗೆ ಹೆಚ್ಚು ಪ್ರಾಧಾನ್ಯ ನೀಡಿರುವುದು ಕಂಡುಬರುತ್ತದೆ; ನಿಜವಾದ ಶೈಕ್ಷಣಿಕ ಚಟುವಟಿಕೆಗಳಿಗಲ್ಲ.
ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರವೂ ಇನ್ನೂ ಆರ್.ಟಿ.ಇ.ನ ಪರಿಣಾಮ ಧನಾತ್ಮಕವಾಗಿ ಇರದಿರುವುದು ಚಿಂತನೀಯ ವಿ?ಯವಾಗಿದೆ. ಶಿಕ್ಷಣ ರಾಜ್ಯಸರ್ಕಾರದ ಜವಾಬ್ದಾರಿಯಾದ್ದರಿಂದ ಕೇಂದ್ರಸರ್ಕಾರ ಇದರ ಅನ್ವಯದ ಬಗ್ಗೆ ಸುದೀರ್ಘವಾಗಿ ಯೋಚಿಸಬೇಕಾಗಿದೆ.
ಪೂರ್ವೇತಿಹಾಸ
ಹಿಂದುಗಳು ಹಿಂದುದೇಶವನ್ನು ತಮ್ಮ ದೇಶ, ಹಿಂದೂಧರ್ಮ ತಮ್ಮ ಧರ್ಮ ಎಂದು ನಂಬಿರುವುದು ಸ್ವಾಭಾವಿಕ. ನಮ್ಮ ಧರ್ಮದಲ್ಲಿ ವಿಮುಖವಾಗಿ ಚಿಂತಿಸುವ ಮತ್ತು ಆರಾಧನಕ್ರಮಗಳ ವಿವಿಧತೆಗೆ ಅವಕಾಶವಿದೆ. ನಮ್ಮಲ್ಲಿ ದೇವರನ್ನು ನಂಬದ ನಾಸ್ತಿಕರೂ ಇದ್ದಾರೆ. ಎಲ್ಲರಿಗೂ ಈ ದೇಶದ ಮೇಲೆ ಅಪಾರ ನಂಬಿಕೆ ಇದ್ದು ಈ ದೇಶದಲ್ಲಿ ಧರ್ಮಾಚರಣೆಯ ತತ್ತ್ವಗಳು ನಿರೂಪಗೊಂಡು ಪ್ರತಿಯೊಬ್ಬರು ತಮ್ಮ ತಮ್ಮ ನಂಬಿಕೆಯಂತೆ ಜೀವಿಸುವ ಅವಕಾಶವಿದೆ. ನಮ್ಮಲ್ಲಿ ಸಂನ್ಯಾಸಿಗಳಿದ್ದಾರೆ, ಸಂಸಾರಿಗಳಿದ್ದಾರೆ, ಸಾಧುಗಳಿದ್ದಾರೆ; ನಮ್ಮವರೇ ಆದ ಇನ್ನು ಕೆಲವರು ಬೇರೆ ಧರ್ಮಗಳನ್ನು ಆಚರಿಸಿ ಅಲ್ಪಸಂಖ್ಯಾತರಂತೆ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಅನೇಕರು ಭಾರತಕ್ಕೆ ಸೀಮಿತವಾಗಿರುವ ಧರ್ಮಗಳ ಆಚರಣೆ ಮಾಡುತ್ತಾರೆ. ಮತ್ತೆ ಕೆಲವರು ಪ್ರಪಂಚದಲ್ಲಿ ಹರಡಿರುವ ಧರ್ಮಗಳ ಪಾಲನೆ ಮಾಡಿದರೂ ನಮ್ಮ ದೇಶದ ಮೇಲೆ ಪ್ರೇಮವಿದ್ದು ನಮ್ಮಂತೆಯೇ ಸಾಮಾಜಿಕ ಜೀವನ ನಡೆಸುತ್ತಾರೆ. ಇದು ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿ.
ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಬ್ರಿಟಿಷರ ದೇಶವನ್ನು ಒಡೆಯುವ ತಂತ್ರಕ್ಕೆ ಬಲಿಯಾಗಿ ಮುಸ್ಲಿಮರು ದೇಶವನ್ನು ಎರಡು-ಮೂರು ಭಾಗಗಳಾಗಿಸಿದ ಸನ್ನಿವೇಶ ನಮ್ಮ ಮನಸ್ಸಿನಲ್ಲಿ ನೆಟ್ಟಿರುವ ಆಘಾತಕರವಾದ ಭಾವನೆ. ಸ್ವಾತಂತ್ರ್ಯ ಬಂದ ನಂತರ ನಮ್ಮ ಪೂರ್ವಚರಿತ್ರೆ, ನಮ್ಮಲ್ಲಿದ್ದ ವಿಶೇ?ವಾದ ಶಿಕ್ಷಣಪದ್ಧತಿ, ೧೮ನೇ ಶತಮಾನಕ್ಕೆ ಮುಂಚೆ ಇದ್ದ ಸಂಪದ್ಭರಿತ ವ್ಯಕ್ತಿತ್ವ ರಚಿಸುವ ನಮ್ಮ ಶಿಕ್ಷಣದ ವ್ಯವಸ್ಥೆ, ಆಗಿದ್ದ ಸಾಕ್ಷರತಾ ಪ್ರಮಾಣ ಇವನ್ನೆಲ್ಲ ಮರೆಯುವಂತಿಲ್ಲ. ಇವುಗಳನ್ನು ಮರೆತ ವಿದ್ಯಾಭ್ಯಾಸಪದ್ಧತಿಯನ್ನು ನಂಬಲು ಸಾಧ್ಯವೆ? ೧೮ನೇ ಶತಮಾನಕ್ಕೆ ಮೊದಲಿದ್ದ ನಮ್ಮ ಶಿಕ್ಷಣಪದ್ಧತಿಯನ್ನು ಅಳಿಸಿಹಾಕಿದ ರೀತಿಯನ್ನೂ ನಾವು ಮರೆಯಲು ಹೇಗೆ ಸಾಧ್ಯ?
ನಮಗೆ ಶಿಕ್ಷಣದ ಕಾಯಿದೆ ಬೇಕಿತ್ತೆ? ಅದಿಲ್ಲದ ಶಿಕ್ಷಣದ ವ್ಯವಸ್ಥೆ ಹೇಗಿರಬೇಕಿತ್ತು? ಶಿಕ್ಷಣದ ಕಾಯಿದೆ ಬಂದ ನಂತರ ಅದರ ಗುಣಾಗಳಾವುವು ಎಂದು ಯೋಚಿಸುವ ಭಾರ ಇದೀಗ ನಮ್ಮದಾಗಿದೆ. ನಮ್ಮ ಶಿಕ್ಷಣದ ವ್ಯವಸ್ಥೆ ಹೇಗಿತ್ತು, ಅದು ಹೇಗೆ ಕಾಲಕ್ರಮೇಣ ಬದಲಾವಣೆ ಹೊಂದಿತು; ಅದರ ಯಾವ ಅಂಶಗಳು ಭಾರತದಲ್ಲಿ ಅಜರಾಮರವಾಗಿ ಉಳಿಯಬಲ್ಲವು; ಆ ಬುನಾದಿಯ ಮೇಲೆ ಶೈಕ್ಷಣಿಕ ವ್ಯವಸ್ಥೆ ಹೇಗಿರಬೇಕು; – ಎಂಬ ಅಂಶಗಳು ಈಗ ನಮ್ಮ ಮನಕ್ಕೆ ಬರುವ ಚಿಂತನೆಗಳು.
ನಮ್ಮದು ಋಷಿಗಳ ನಾಡು. ಋಷಿಗಳಿಂದಲೇ ಮಹಾರಾಜರುಗಳು ಧರ್ಮ-ನೀತಿಯುಕ್ತ ಆಡಳಿತಕ್ರಮಗಳನ್ನು ರೂಪಿಸಿ ರೂಢಿಸಿಕೊಂಡಿದ್ದುದು. ನಮ್ಮ ಶಿಕ್ಷಣಪದ್ಧತಿಯು ಪರಂಪರೆಗಳಿಂದ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಯಾಗುತ್ತಿದೆ. ಗುರುಕುಲಗಳು ತಮ್ಮದೇ ಆದ ಶೈಕ್ಷಣಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದು ಈ ಪದ್ಧತಿಗಳು ಪರಂಪರೆಯ ಉಳಿದು ಮುಂದಿನ ಜನಾಂಗಕ್ಕೆ ವರ್ಗಾವಣೆಯಾಗುತ್ತಿತ್ತು.
ಬದಲಾವಣೆಯ ಘಟ್ಟಗಳು
ವೇದಕಾಲದಲ್ಲಿ ಇದ್ದ ಪದ್ಧತಿಗಳನ್ನು ಪರಂಪರೆಗಳು ಅಳವಡಿಸಿಕೊಂಡು ತಮ್ಮ ಶಿ?ರಿಗೆ ಅಥವಾ ಮಕ್ಕಳಿಗೆ ವರ್ಗಾವಣೆ ಮಾಡುತ್ತಿದ್ದವು. ಮುಂದೆ ಬೌದ್ಧಧರ್ಮದ ವಿದ್ಯಾಭ್ಯಾಸ ಪದ್ಧತಿ ಪ್ರಮುಖವಾಗಿ ಮೊದಲ ಬಾರಿಗೆ ಶಿಕ್ಷಕರ ಶಿಕ್ಷಣವನ್ನು ಪ್ರಾರಂಭಿಸಿ ಶಿಕ್ಷಕರ ಶಿಕ್ಷಣಕ್ಕೆ ಒತ್ತು ಕೊಟ್ಟಿತು. ಬಹುಶಃ ಇದರಿಂದಲೇ ಬೌದ್ಧಧರ್ಮದ ಶಿಕ್ಷಣಪದ್ಧತಿ ಭಾರತದ ಗಡಿಗಳಿಂದಾದಚೆ ಪ್ರಸಾರವಾಯಿತು.
ಬೌದ್ಧಧರ್ಮದ ಶಿಕ್ಷಣಪದ್ಧತಿಯ ನಂತರ ಪ್ರಮುಖ ಬದಲಾವಣೆ ತಂದವರು ಮುಸಲ್ಮಾನರು. ಅವರದೇ ಪದ್ಧತಿಯಲ್ಲಿ ಶಿಕ್ಷಣದ ವ್ಯವಸ್ಥೆ ಪ್ರಾರಂಭವಾಯಿತು. ಮುಸ್ಲಿಮರು ಭಾರತದೆಲ್ಲೆಡೆ ಹರಡಿದರು, ಆಗಲೂ ಸಹ ಮುಸ್ಲಿಮರು ತಮ್ಮ ಶಿಕ್ಷಣಪದ್ಧತಿಯನ್ನು ಹಿಂದುಗಳ ಮೇಲೆ ಹೇರಲಿಲ್ಲ. ಆದರೆ ಮತಾಂತರ ಮಾಡಿ ಅವರ ಪದ್ಧತಿಯಲ್ಲಿ ಕಲಿಸುತ್ತಿದ್ದರು. ಅವರ ಪ್ರಯತ್ನಾನಂತರ ಅದರದೇ ಆದ ಶಿಕ್ಷಣದ ವ್ಯವಸ್ಥೆಯೊಂದು ಹೊರಹೊಮ್ಮಿತು. ಆದರೂ ಸಹ ನಮ್ಮ ಪರಂಪರೆಗಳಲ್ಲಿ ಕೆಲವು ಮುಂದುವರಿದು ಹೊಸ ಪರಂಪರೆಗಳೂ ಹುಟ್ಟಿಕೊಂಡವು.
ಮುಂದೆ ೧೮ನೇ ಶತಮಾನದ ನಂತರ ಮೆಕಾಲೆ ಯೋಜಿಸಿದ ಒಂದು ವಿಭಿನ್ನವಾದ ಶಿಕ್ಷಣಪದ್ಧತಿಯನ್ನು ಬ್ರಿಟಿಷರು ಭಾರತಕ್ಕೆಂದೇ ರೂಪಿಸಿದರು. ಆ ಪದ್ಧತಿಯನ್ನು ಜನರ ಮೇಲೆ ಹೇರಿದರು. ಸಾವಿರಾರು ವ?ಗಳಿಂದ ಹರಿದು ಬಂದ ನಮ್ಮ ಪರಂಪರೆಗಳಿಗೆ ಸಂಬಂಧಪಟ್ಟ ’ಗುರುಕುಲ’ ಶಿಕ್ಷಣವ್ಯವಸ್ಥೆಯನ್ನು ನಾಶ ಮಾಡಲಾಯಿತು. ಆದರೂ ನಮ್ಮ ಶಿಕ್ಷಣದ ಕೆಲವು ಪರಂಪರೆಗಳು ಉಳಿದು ಈಗಲೂ ಪರಿಣಾಮಕಾರಿಯಾಗಿ ಜ್ಞಾನ ಮತ್ತು ಕೌಶಲ ಶಿಕ್ಷಣವನ್ನು ನೀಡುತ್ತಾ ಬಂದಿವೆ. ಅವುಗಳಲ್ಲಿ ಮುಖ್ಯವಾದವು ವೇದಗಳ ಕಲಿಕೆ, ಶಾಸ್ತ್ರೀಯ ಸಂಗೀತ, ನಾಟ್ಯಕಲೆ, ಯಕ್ಷಗಾನ, ಶಿಲ್ಪಶಾಸ್ತ್ರ, ಚಿತ್ರಕಲೆಗಳು.
ಮೆಕಾಲೆ ಪದ್ಧತಿ ಬ್ರಿಟಿಷರ ವ್ಯಾಪಾರಕ್ಕೆ ಅನುವುಮಾಡಿಕೊಡುವ ಮಾನವಸಂಪನ್ಮೂಲವನ್ನು ತಯಾರಿಸುವ ಶಿಕ್ಷಣಪದ್ಧತಿ. ಇದರಲ್ಲಿ ಕಲಿಸುವ ಅಂಶಗಳು – ಲೆಕ್ಕಾಚಾರ (ಗಣಿತ), ಓದುಗಾರಿಕೆ, ಬರವಣಿಗೆ ಮತ್ತು ಭಾಷೆ. ಈ ಪದ್ಧತಿಯು ಮೊದಲು ಕೈಗಾರಿಕೆ ಕ್ರಾಂತಿಯ ಬದಲಾವಣೆಗಳನ್ನು ಅಳವಡಿಸಿದ ಶಿಕ್ಷಣಕ್ರಮವನ್ನು ದೇಶದಲ್ಲಿ ಪರಿಚಯಿಸಿರಲಿಲ್ಲ. ಇಂಗ್ಲೆಂಡಿನಲ್ಲಿದ್ದ ವಿಜ್ಞಾನದ ಶಿಕ್ಷಣ ನಮ್ಮಲ್ಲಿ ಬರಲಿಲ್ಲ.
ಸ್ವಾತಂತ್ರ್ಯದ ನಂತರ ನಮ್ಮದೇ ಆದ ಸಾಂಸ್ಕೃತಿಕ ಹಿನ್ನೆಲೆ, ನಮ್ಮ ಪದ್ಧತಿಯ ಹಿರಿಮೆಗಳನ್ನು ಗುರುತಿಸಿ ಅಂದೇ ಹೊಸ ಶೈಕ್ಷಣಿಕ ಪದ್ಧತಿಯನ್ನು ತರಬೇಕಿತ್ತು. ಬದಲಾವಣೆಯ ಆವಶ್ಯಕತೆ ಇತ್ತು. ವಿಭಜನೆ ಬೇರೆ ಆಗಿತ್ತು. ಆದರೆ ನಮ್ಮ ಸಾಂಸ್ಕೃತಿಕ ಪದ್ಧತಿಗಳು, ಮೌಲ್ಯಗಳು, ಶೈಕ್ಷಣಿಕ ವಿಧಾನಗಳನ್ನು ಹಿಂದೂಗಳಿಗೆ ಸೇರಿದ ಪದ್ಧತಿಗಳು ಎಂದು ಗಣನೆಗೆ ತೆಗೆದುಕೊಳ್ಳದೆ, ಅವುಗಳನ್ನು ಅಳವಡಿಸಿಕೊಳ್ಳದೆ ರೂಪಿಸಿಲ್ಲ. ಅವುಗಳನ್ನು ವಿನಾಕಾರಣ ಕೈಬಿಡಲಾಯಿತು. ಇದು ಏಕೆ ಹೀಗಾಯಿತು? ಹಿಂದೂಗಳ ಪದ್ಧತಿಯನ್ನು ಬಿಟ್ಟುಬಿಡಲು ಕಾರಣವೇನು? ಆ ಕುರಿತಾದ ವಿಶ್ಲೇಷಣೆಯ ಅಗತ್ಯವಿದೆ.
ವಿಪರ್ಯಾಸ
’ಎಜ್ಯುಕೇ?ನ್ ಆಕ್ಟ್’ ಎನ್ನುವುದು ಕೇವಲ ಹಿಂದೂಸ್ಥಾನದ ಸಂಸ್ಕೃತಿಗಳನ್ನು ಮತ್ತು ಮುಖ್ಯಧಾರೆಯಲ್ಲಿರುವ ಜನಾಂಗವನ್ನು ನಿಯಂತ್ರಿಸುವ ಒಂದು ಕಾನೂನು ಆಗಿ ಮೂಡಿಬಂದಿದೆ ಎಂದರೆ ತಪ್ಪಾಗದು. ಇದು ಶೈಕ್ಷಣಿಕ ವಾತಾವರಣವನ್ನು ಸ್ನೇಹಮಯ ಮಾಡುವುದಕ್ಕೆ ಬದಲಾಗಿ ಕೆಲವು ಹೈಂದವೇತರ ಜನಾಂಗಗಳನ್ನು ಪ್ರಜಾಪ್ರಭುತ್ವದ ಸಾಮಾನ್ಯ ಕಾನೂನುಗಳಿಂದ ಸಂರಕ್ಷಿಸುವ ಕಾನೂನಿನಂತಿದೆ. ಇದರಿಂದಾಗಿ ಆರ್.ಟಿ.ಇ. ಒಂದು ಕರಾಳವಾದ ಕಾಯಿದೆಯಾಗಿದೆ ಎಂದೇ ಹೇಳಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಮಕ್ಕಳನ್ನು ಸೇರಿಸಿ ತಮ್ಮ ಅವಲೋಕನದಿಂದ ಮಕ್ಕಳು ಪಡೆಯುವ ಜ್ಞಾನ, ಕೌಶಲಗಳು ಹಾಗೂ ಮನೋಧೋರಣೆಗಳ ಗುಣಾವಗುಣಗಳನ್ನು ವಿಶ್ಲೇಷಿಸಿ, ಉತ್ತಮವಾದವುಗಳನ್ನು ಉಳಿಸಿ, ಅಹಿತಕರವಾದವುಗಳನ್ನು ಕಿತ್ತೊಗೆಯುವ ಜವಾಬ್ದಾರಿ ನಾಗರಿಕರ ಮೇಲಿದೆ. ಅದರಲ್ಲಿ ಕೆಲವು ಒಳ್ಳೆಯ ಸರ್ಕಾರಗಳು ಈ ಕೆಲಸದಲ್ಲಿನ ಜನಹಿತವನ್ನು ಗಮನಿಸಿ ಒಳ್ಳೆ ಯೋಜನೆಗಳನ್ನು ರೂಪಿಸಲು ಮುಂದಾಗಬೇಕಾಗಿದೆ. ಇವುಗಳಲ್ಲಿ ಕೆಲವು ಯೋಜನೆಗಳು ಶಾಲೆಗೆ ಹೆಚ್ಚು ಮಕ್ಕಳನ್ನು ಕರೆತರುವ ಯೋಜನೆಗಳು. ಅವು ಜನಹಿತವಾದುವು. ಇವೆಲ್ಲವೂ ಅ?ನು ಹೊಸತನವನ್ನು ತರಲಿಲ್ಲವಾದರೂ ತರಬೇತಿ ಹೊಂದಿದ ಶಿಕ್ಷಕರು, ರಾಜ್ಯವೇ ರಚಿಸಿದ ಪಾಠ್ಯಕ್ರಮದ ಪುಸ್ತಕಗಳು, ವ್ಯವಸ್ಥಿತವಾದ ಪಾಠ್ಯಕ್ರಮಗಳು ಶಿಕ್ಷಣವನ್ನು ಸಮೃದ್ಧಗೊಳಿಸುವ ಕಡೆಗೆ ಎಳೆದು ತಂದಿವೆ. ಬಡ ಮಕ್ಕಳ ಶಿಕ್ಷಣದ ಬಗ್ಗೆ ಯೋಜನೆಗಳು ನಿ? ತೋರಿವೆ.
೧೯೭೦ನೇ ಇಸವಿಯ ನಂತರ ದೇಶವು ಶಿಕ್ಷಣದಲ್ಲೂ ಬದಲಾವಣೆ ಕಂಡಿದೆ. ಮುಂದೆ ಬಂದ ’ಸರ್ವಶಿಕ್ಷಣ ಅಭಿಯಾನ’ದಿಂದ ಅತಿ ಶೀಘ್ರದ ಬದಲಾವಣೆ ತೋರಿತು. ಓಅಖಿಇಗಳ ರಚನೆ ಆದ ಬಳಿಕ ಬಹಳ? ಬದಲಾವಣೆಗಳು ಕಂಡುಬಂದಿವೆ. ಇದರಿಂದಾಗಿ ಶಿಕ್ಷಕರ ತರಬೇತಿಗೆ ಹೆಚ್ಚು ಪ್ರಾಮುಖ್ಯ ನೀಡಲಾಯಿತು.
ಶಾಲಾ ಶಿಕ್ಷಣ ಬವಣೆ
ಶಾಲೆಯ ಶಿಕ್ಷಣದಲ್ಲಿ, ಹೈಸ್ಕೂಲ್ ಶಿಕ್ಷಣಕ್ಕಾಗಿ ಹತ್ತಿರದ ಊರಿಗೆ ಹೋಗಬೇಕಾದರೆ ಎರಡು ದಾರಿಗಳು: ಒಂದು ನಡೆದು, ಹೊಳೆದಾಟಿ, ಬಿಸಿಲಲ್ಲಿ ಅಲೆದು, ಮಳೆಯಲ್ಲಿ ನೆನೆದು, ಹಸಿದು, ಕಾಲಿಗೆ ಚಪ್ಪಲಿ ಇಲ್ಲದೆ ಶಾಲೆಗೆ ಹೋಗಿ ಬಂದು ಮನೆಗೆ ಸೇರುವುದು. ಇದು ಪ್ರತಿದಿನದ ಅಭ್ಯಾಸ.
ಇನ್ನೊಂದು ದಾರಿ – ಹೈಸ್ಕೂಲಿಗೆ ಹೋಗಿ ಸೇರಿ, ಅದೇ ಊರಲ್ಲಿ ಗಣ್ಯರ ಮನೆಯಲ್ಲಿ ಇದ್ದು ಅಥವಾ ಪಟ್ಟಣಗಳಲ್ಲಿ ಬಾಡಿಗೆ ರೂಂನಲ್ಲಿ ಇದ್ದು ವಾರಾನ್ನಕ್ಕೆ ಹೋಗಿ ವ್ಯಾಸಂಗ ಮಾಡುವುದು, ಇದಲ್ಲದೆ ಪಟ್ಟಣಗಳಲ್ಲಿ ಜಾತಿವಾರು ಹಾಸ್ಟೆಲ್‌ಗಳಲ್ಲಿ ಅಥವಾ ಸಾರ್ವಜನಿಕ ಹಾಸ್ಟೆಲ್‌ಗಳಲ್ಲಿ ಇದ್ದು ಶಾಲೆ, ಕಾಲೇಜು ವ್ಯಾಸಂಗ ಮುಗಿಸುವುದು.
ಹಿಂದೆ ಪ್ರೈಮರಿ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದ್ದದ್ದು ನಮಗೆ ತಿಳಿಯದ ಅಂಶವೇನಲ್ಲ. ಇದು ಒಂದು ಆಯಾಮವಾದರೆ; ಇನ್ನೊಂದು – ಶಾಲೆ ಮತ್ತು ಶಿಕ್ಷಕರುಗಳ ಆಯಾಮ. ಮೂರು ಅಥವಾ ಎರಡು ತರಗತಿಗಳಿಗೆ ಒಬ್ಬ ಶಿಕ್ಷಕ; ಅದೇ ಶಿಕ್ಷಕ ೪, ೫ನೇ ತರಗತಿಗೂ ಪಾಠ ಮಾಡಬೇಕಾದ ಸಂಗತಿಗಳು – ಶಿಕ್ಷಕರ ರಜಾ, ಶಿಕ್ಷಕರು ಪ್ರತಿದಿನ ಬಾರದಿರುವಿಕೆ, ಹೆಡ್‌ಮಾಸ್ಟರ್ ಇಲ್ಲದಿರುವುದು ಇವೆಲ್ಲಾ ಬವಣೆಗಳಲ್ಲಿ ಬೆಂದು ಬೂದಿ ಆದದ್ದು ಪ್ರಾಥಮಿಕ ಶಿಕ್ಷಣ. ತರಬೇತಿ ಹೊಂದಿರುವ ಶಿಕ್ಷಕರ ಅಭಾವವೂ ಇದರಲ್ಲಿ ಸೇರುತ್ತದೆ.
ಸರ್ಕಾರಿ ಶಾಲೆಗಳಿಗೆ ಮಾರಕ
ಇಂತಹ ಸಮಸ್ಯೆಗಳು ಶಿಕ್ಷಣದ ಕಾಯಿದೆ ಬಂದ ಮೇಲೆ ಸುಧಾರಿಸಲ್ಪಟ್ಟಿವೆ ಎನ್ನುವುದು ಸುಳ್ಳು. ಇದು ಈಗಲೂ ಕಂಡುಬರುವ ಸಮಸ್ಯೆಗಳು. ಶಾಲೆಗಳಿಗೆ ಬೇಕಾದ ತರಬೇತಿ ಹೊಂದಿದ ಶಿಕ್ಷಕರ ಸಂಖ್ಯೆ ಗಮನಿಸಿದರೆ ಅದರ ಗಂಭೀರತೆ ತಿಳಿದುಬರುತ್ತದೆ. ಸರ್ಕಾರಮಟ್ಟದ ಹಾಗೂ ಅನೇಕ ಸಂಸ್ಥೆಗಳಲ್ಲಿ ಶಿಕ್ಷಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಒಂದು ದಂಧೆಯಾಗಿದೆ. ಈ ದಂಧೆಯನ್ನು ತಪ್ಪಿಸಲು ಸಾಧ್ಯವಿರುವ ಮಂತ್ರಿಗಳು ಮತ್ತು ಆಡಳಿತಗಾರರು ತಮ್ಮ ಜೊತೆಯವರಿಂದಲೇ ಆಕ್ಷೇಪಣೆಗೆ ಒಳಗಾಗುತ್ತಾರೆ. ನಿಷ್ಠೆಯಿಂದ ಶಿಕ್ಷಕರನ್ನು ಆರಿಸುವ ಅವರ ಆಸೆ ಮುದುಡಿಹೋಗುತ್ತದೆ. ಹಣವೇ ಶಿಕ್ಷಕರನ್ನು ಆರಿಸುತ್ತದೆ. ದೇಶದಲ್ಲಿ ಕಾಂಟ್ರಾಕ್ಟ್ ಟೀಚರುಗಳ ಸಂಖ್ಯೆ ಶೇಕಡ ೬೦ ಇದೆ ಎಂಬ ಮಾಹಿತಿ ಕಂಡು ಬೆರಗಾಗಿದ್ದೇವೆ. ಅದು ಸುಳ್ಳಾದರೆ ಸಂತಸ. ಇದನ್ನು ತಪ್ಪಿಸಿ ಸರಿಯಾದ ಶಿಕ್ಷಕರನ್ನು ತೆಗೆದುಕೊಳ್ಳುವ ಅವಕಾಶ ಸರ್ಕಾರಿ ಶಾಲೆಗಳಿಗೆ ಇದೆ. ಖಾಸಗಿ ಸಂಸ್ಥೆಗಳಿಗೆ ಆಗಿರುವ ಅನ್ಯಾಯವೆಂದರೆ ಶೇಕಡ ೨೫ರ? ಮಕ್ಕಳನ್ನು ಉಚಿತವಾಗಿ ನೋಂದಾಯಿಸಿ ಅವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕಾಗಿರುವುದು. ಇದರ ಆಯ್ಕೆ ಬಿ.ಇ.ಓ. ಮಾಡಲಿದ್ದಾರೆ. ಇದರಿಂದ ಸರ್ಕಾರಿ ಶಾಲೆಗೆ ಹೋಗಬೇಕೆಂದಿರುವ ಮಕ್ಕಳು ಖಾಸಗಿ ಶಾಲೆಗೆ ಹೋಗಿ ಖಾಸಗಿ ಶಾಲೆಯಲ್ಲಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುವ ಕಡೆಗೆ ಹೆಜ್ಜೆಹಾಕುತ್ತಿವೆ. ಸರ್ಕಾರಿ ಶಾಲೆಗಳು ಕೊಡುವ ಸವಲತ್ತುಗಳು ಉಪಯೋಗವಿಲ್ಲದಾಗುತ್ತದೆ. ಆರ್.ಓ.ಇ. ಕಾನೂನಿನ ಪ್ರಕಾರ ಖಾಸಗಿ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಬಡ ಜನ ಮುಗಿಬೀಳುತ್ತಿರುವರು. ದಳ್ಳಾಳಿಗಳ ಕೈಗೆ ಬಿದ್ದು ’ಸುಳ್ಳು ಆದಾಯ’ ಪತ್ರಗಳನ್ನು ತಂದು ಕೊಡುವ ದಂಧೆಯೂ ಪ್ರಾರಂಭವಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಬಿಡಿಸಲು ಸಾಧ್ಯವಿಲ್ಲ, ಏಕೆಂದರೆ ಈ ದಂಧೆ ನಡೆಯಬಹುದಾದ್ದು ಸರ್ಕಾರದ ಕಛೇರಿಗಳಲ್ಲೇ.
ವಿಕೇಂದ್ರೀಕರಣವೋ, ಕೇಂದ್ರೀಕರಣವೋ?
ಶಿಕ್ಷಣವು ಪ್ರಜಾಪ್ರಭುತ್ವದಲ್ಲಿ ಅದರಲ್ಲೂ ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕಾಗಿರುವ ದೇಶದಲ್ಲಿ ವಿಕೇಂದ್ರೀಕರಣಕ್ಕೆ ಒತ್ತುಕೊಡದೆ ಕೇಂದ್ರೀಕರಣಕ್ಕೆ ಕಾನೂನಿನ ಕ್ರಮ ತೆಗೆದುಕೊಳ್ಳುವುದು ಸಂತೋ?ದಾಯಕವಾದ ಕ್ರಮವಾಗುವುದಿಲ್ಲ. ಜಿಲ್ಲೆ, ತಾಲ್ಲೂಕು ಹಂತಗಳಲ್ಲಿ ಶಿಕ್ಷಣದ ಕ್ರಮವನ್ನು ಸರಿಯಾಗಿ ನಿರ್ದೇಶಿಸುವ ಸಂಸ್ಥೆಗಳಿದ್ದಲ್ಲಿ ಉತ್ತಮ ವಿಕೇಂದ್ರೀಕರಣ ಸಾಧ್ಯ.
ಒಂದು ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಜನಾಂಗ ಆ ದೇಶದ ಬಹುಸಂಖ್ಯಾತರು. ಕಡಮೆ ಸಂಖ್ಯೆಯಲ್ಲಿರುವ ಜನಾಂಗದ ಗುಂಪುಗಳು ಅಲ್ಪಸಂಖ್ಯಾತರದ್ದು. ಇದು ಧರ್ಮದ ಅಥವಾ ಭಾ?ಯ ಆಧಾರದ ಮೇಲೆ ಆಗಬಹುದು ಅಥವಾ ಬೇರೆ ಯಾವುದಾದರೂ ನಿಶ್ಚಿತವಾದ ಆಧಾರದ ಮೇಲೆ ಆಗಿರಬಹುದು. ಅದನ್ನು ಆ ದೇಶ ನಿರ್ಧರಿಸುತ್ತದೆ. ನಮ್ಮ ಶಾಲೆಗಳಲ್ಲಿ ಸ್ವಾಭಾವಿಕವಾಗಿ ಬಹುಸಂಖ್ಯಾತ ಹಿಂದುಗಳು ಹೆಚ್ಚಾಗಿರುವುದು ಸಹಜ. ಬಹುಸಂಖ್ಯಾತ ಹಿಂದುಗಳು ಓದುವ ಶಾಲೆಗಳಲ್ಲಿ ನಡವಳಿಕೆಗಳು, ಆಚರಣೆಗಳು ಅವರಿಗನುಗುಣವಾಗಿರುತ್ತವೆ. ಶಾಲೆಯ ಪಾಠದ ದೃ?ಂತಗಳು ಮಗುವಿನ ಜೀವನಕ್ಕೆ ಅನ್ವಯವಾಗುವ ಘಟನೆಗಳು, ಹೆಸರುಗಳು, ಹಬ್ಬಗಳು, ವ್ರತಗಳ ಹೆಸರುಗಳು, ಪ್ರಜೆಗಳು, ದೇವರುಗಳು, ಆಹಾರಪದ್ಧತಿಗಳು, ತಂದೆ ತಾಯಿಯ ಹೆಸರುಗಳು, ಜೀವನದ ಸಮಸ್ಯೆಯ ಸಂದರ್ಭಗಳು, ಆಡುವ ಭಾಷೆಯ ಧಾಟಿ, ಗಾದೆಗಳು, ಕಾಲದ ಲೆಕ್ಕಾಚಾರಗಳು, ಜೀವನದ ನಿಯಮಗಳು, ಚರಿತ್ರೆ ಮತ್ತು ವೇದ ಉಪನಿಷತ್ತುಗಳಿಂದ ಬಂದ ನಮ್ಮ ನಾಗರಿಕತೆಯ ಮೂಲಗಳು, ಮುಂತಾದ ನಂಬಿರುವ ಜೀವನಶೈಲಿಗಳನ್ನು ಶಾಲೆಯ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ.
ಭಾರತದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ಜೀವನಶೈಲಿ ಒಂದೇ ನಾಣ್ಯದ ಎರಡು ಮುಖಗಳು. ಇಂಗ್ಲೆಂಡಿನಲ್ಲಿ ಕ್ರಿಶ್ಚಿಯಾನಿಟಿ ಮತ್ತು ಜೀವನಶೈಲಿ ಒಂದರೊಡನೊಂದು ಸೇರಿಕೊಂಡಿದೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರ ಸಾರ್ವಜನಿಕ ಸಾಮಾನ್ಯ ಶಾಲೆಗಳಲ್ಲಿ ತೊಡರು ಆಗಬಾರದೆಂದು ನಮ್ಮ ಹಿರಿಯರು ಬಹುಶಃ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಸಂಸ್ಥೆಯನ್ನು ತಾವೇ ನಡೆಸಿಕೊಂಡು ಹೋಗುವ ಅಧಿಕಾರ ಕೊಟ್ಟಿರುತ್ತಾರೆ. ಇದು ಒಂದು ಒಳ್ಳೆಯ ಸಂಸ್ಕಾರ. ಇದು ಅಲ್ಪಸಂಖ್ಯಾತರಿಗೆ ಗೌರವ ತೋರಿ ಅವರ ಪುರೋಭಿವೃದ್ಧಿಗೆ ಸಹಾಯವಾಗಬಹುದಾದ ಅಂಶವಾಗಿದೆ. ಇದು ನಾಗರಿಕ ದೇಶದ ಲಕ್ಷಣ. ಹೀಗೆ ಅಲ್ಪಸಂಖ್ಯಾತರಿಗೆ ವಿಶೇಷ ಅವಕಾಶ ಕೊಟ್ಟರೂ ಸಹ ಕಲಿಕೆಯ ಸಂದರ್ಭಗಳು, ಪಾಠ್ಯಕ್ರಮ ಮತ್ತು ವಿ?ಯಗಳು ಒಂದೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೂ ಸಹ ಮನು?ನ ರಾಜಕೀಯ ಸ್ವಭಾವ ಹಾಗೂ ರಾಜ್ಯಾಧಿಕಾರದ ವ್ಯಾಮೋಹ, ವಿಚಿತ್ರ. ರಾಜಕಾರಣಿಗಳು ತಮ್ಮ ಗೆಲವನ್ನು ಸಾಧಿಸಲು ಅನೇಕ ತಂತ್ರಗಳನ್ನು ಬುದ್ಧಿವಂತಿಕೆಯಿಂದ ರೂಪಿಸಿಕೊಳ್ಳುತ್ತಾರೆ. ಬಹುಸಂಖ್ಯಾತರನ್ನು ಅಲ್ಪಸಂಖ್ಯಾತಗೊಳಿಸುವ ಹುನ್ನಾರ ಮಾಡುತ್ತ ಬಂದಿದ್ದಾರೆ.
ಬಹುಮತಸ್ಥರು ಒಂದಾದರೆ ತಮಗೆ ರಾಜಕೀಯ ಶ್ರೇ?ತೆ ಕಡಮೆಯಾಗುವ ಭಯದಿಂದ ಮತ್ತು ಅವರನ್ನು ಓಲೈಸುವ ಯೋಜನೆಗಳಿಗೆ ಶ್ರಮವಾಗುವುದರಿಂದ ಅವರನ್ನು ಒಡೆದು ಬಂದ ಒಂದು ಭಾಗದಿಂದ ಕಡಮೆ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರೊಂದಿಗೆ ರಾಜಕೀಯ ಬಹುಮತ ಸ್ಥಾಪನೆ ಮಾಡುವ ಆಸೆ ಒಂದು ತಂತ್ರ. ಇದು ತಮಿಳುನಾಡಿನಲ್ಲಿ ಪ್ರಾರಂಭವಾಗಿ ದೇಶದ ರಾಜಕೀಯದಲ್ಲಿ ಹಾಸುಹೊಕ್ಕಾಗಿ, ನುಗ್ಗಿ, ಬಹುಸಂಖ್ಯಾತರನ್ನು ಒತ್ತಡಕ್ಕೆ ಒಳಪಡಿಸಿದೆ.
ನಮ್ಮ ದೇಶದ ಮೂಲಬಲ ಅಧ್ಯಾತ್ಮಬಲ. ಇದು ಪ್ರಪಂಚದ ಮೂಲೆ ಮೂಲೆಗೂ ತಿಳಿದ ವಿಷಯ. ಅದುವೇ ನಮ್ಮ ರಾ?ದ ಬಲ. ಇದು ದೇಶಕ್ಕೆ ತಲೆತಲಾಂತರಗಳಿಂದ ಹರಿದು ಬಂದಿರುವುದು ಗೊತ್ತಿರುವ ಸಂಗತಿ. ನಮ್ಮ ನಡೆ, ನುಡಿ, ಜೀವನಶೈಲಿ, ಹಬ್ಬಗಳ ಆಚರಣೆಗಳು ಪರಿಸರದ ಮೇಲೆ ಗೌರವ ತೋರುತ್ತವೆ. ಪರಿಸರವನ್ನು ಪೂಜಿಸಿ ಕಾಪಾಡಿದ ಧರ್ಮ ನಮ್ಮದು. ಇದು ಬಹುಸಂಖ್ಯಾತರ ಜೀವನಶೈಲಿ. ಆದ್ದರಿಂದ ಅಕ್ಷರ, ಆರೋಗ್ಯ, ಅಧ್ಯಾತ್ಮಗಳು ಪರಿಸರ – ಅವಲಂಬಿತ ಮತ್ತು ಒಂದರಿಂದ ಆದ ಇನ್ನೊಂದು ಬೆಳವಣಿಗೆ. ಈ ನಿಟ್ಟಿನಲ್ಲಿ ಯೋಚಿಸಿದರೆ ನಮ್ಮ ಧರ್ಮವನ್ನು ಶಿಕ್ಷಣಪದ್ಧತಿಯಿಂದ ಸಂಪೂರ್ಣವಾಗಿ ಬದಲಾವಣೆ ಮಾಡಿ, ಅಧ್ಯಾತ್ಮದಿಂದ ದೂರ ತಂದು, ಧರ್ಮಹೀನ ಶಿಕ್ಷಣಪದ್ಧತಿಯೊಂದನ್ನು ನಮ್ಮಲ್ಲಿ ಮೂಡಿಸಲು ಸಾಧ್ಯವಿಲ್ಲ. ಇದು ಮೆಕಾಲೆ ಪದ್ಧತಿಯಿಂದಲೂ ಸಾಧ್ಯವಾಗಿಲ್ಲ. ಕನ್ನಡನಾಡಿನ ಒಬ್ಬ ಮೇಧಾವಿ ವಿಜ್ಞಾನಿಯನ್ನು ಒಮ್ಮೆ ’ನಿಮ್ಮ ತಾಯಿಯವರು ಇಂಗ್ಲಿ? ಬಾರದ ಅನಕ್ಷರಸ್ಥರು’ ಎಂದು ಒಬ್ಬ ವಿದೇಶೀ ಪತ್ರಕರ್ತ ಕೇಳಿದಾಗ ಅವರು – “ನನ್ನ ತಾಯಿ ಅನಕ್ಷರಸ್ಥರಲ್ಲ, ಅವರು ಸಾಂಸ್ಕೃತಿಕವಾಗಿ ವಿದ್ವಾಂಸರು, ಅವರಿಗೆ ಇಂಗ್ಲಿ? ಬರುತ್ತಿಲ್ಲ ಅ?” ಎಂದು ಹೇಳಿ ನಮ್ಮ ದೇಶದಲ್ಲಿ ಪ್ರಮುಖವಾದ ನಡೆನುಡಿಗಳ ವಿದ್ಯಾಭ್ಯಾಸ ಮನೆಯಲ್ಲೇ ನಮ್ಮ ಧರ್ಮದ ತಳಹದಿಯಲ್ಲಿ ನಡೆಯುತ್ತದೆ ಎಂದು ಹೇಳಿದರು. ಈ ರೀತಿ ಮೊಗಲರ ಕಾಲ, ಬ್ರಿಟಿಷರ ಕಾಲ, ಹಾಗೂ ಮೆಕಾಲೆ ವಿಧಾನಗಳಿಂದ ಬಂದ ಧರ್ಮ ಬಿಡಿಸುವ ಪ್ರಯತ್ನಗಳು ಒಂದಾದಮೇಲೊಂದು ಸೋತಿವೆ. ಈಗಲೂ ಸಹ ಎಲ್ಲ ಒಳ್ಳೆಯದನ್ನು ತೋರಿಸಿ ಅದರಿಂದ ಶಿಕ್ಷಣದಲ್ಲಿ ಒಳ್ಳೆಯ ಶೈಕ್ಷಣಿಕ ವಿಧಾನವನ್ನು ಉಪಯೋಗಿಸಿ ವೈಜ್ಞಾನಿಕ ವಿಚಾರವನ್ನು ಬೆಳೆಸಿ ಆಂತರಿಕವಾಗಿ ಧರ್ಮದ ಆಧಾರಗಳನ್ನು ಸಡಿಲಗೊಳಿಸುವಿಕೆ ಸಾಧ್ಯವಿಲ್ಲ. ಹಂಸ- ಕ್ಷೀರ ನ್ಯಾಯದ ರೀತಿಯಲ್ಲಿ ತಮಗೆ ಬೇಕಾದದ್ದನ್ನು ಆರಿಸಿಕೊಂಡು ಉಳಿದದ್ದನ್ನು ಬಿಡುವ ಕೌಶಲವು ನಮ್ಮ ಮಕ್ಕಳಲ್ಲಿ ಆಂತರಿಕವಾಗಿ ಸಮಾಜದಿಂದ ಬಂದ ಒಂದು ಲಕ್ಷಣವಾಗಿದೆ. ಇದರಿಂದ ಯಾವುದೇ ಕಾಯಿದೆಗಳು ನಮ್ಮ ಬಹುಸಂಖ್ಯಾತ ಸಮಾಜವನ್ನು ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇದು ಸನಾತನವಾಗಿ ಬಂದ ನಮ್ಮ ನಾಗರಿಕತೆಯ ವಿಶೇಷ ಗುಣ.
ಒಟ್ಟಿನಲ್ಲಿ ಹೇಳುವುದಾದರೆ ಹುನ್ನಾರಗಳಿಂದ ನಮ್ಮ ಮಕ್ಕಳ ಆಧ್ಯಾತ್ಮಿಕ ನಡವಳಿಕೆಗಳು ಮತ್ತು ಧರ್ಮದ ಮೇಲಿನ ನಂಬಿಕೆಗಳನ್ನು ಕಿತ್ತೊಗೆಯಲು ಸಾಧ್ಯವೇ ಇಲ್ಲ.
ಎಲ್ಲರಿಗೂ ಸಮನಾದ ಶಿಕ್ಷಣಕ್ರಮವನ್ನು ತಂದು ವಿಭಿನ್ನತೆಯಲ್ಲಿ ಏಕತೆ ಸಾಧಿಸುವ ದಿಕ್ಕಿನಲ್ಲಿ ಸರ್ವರಿಗೂ ಶಿಕ್ಷಣ ಕೊಡಬೇಕಾಗುತ್ತದೆ. ವೋಟಿಗಾಗಿ ಬಹುಸಂಖ್ಯಾತರನ್ನು ಒಡೆದು ಅಲ್ಪಸಂಖ್ಯಾತರನ್ನು ಓಲೈಸುವ ಕಾಯಿದೆಗಳನ್ನು ನಿಲ್ಲಿಸಿ, ಬಲಿಷ್ಠ ಭಾರತವನ್ನು ನಿರ್ಮಿಸುವ ಶೈಕ್ಷಣಿಕ ವ್ಯವಸ್ಥೆ ಇನ್ನು ಮುಂದೆ ಬರಬಹುದೆಂಬ ನಂಬಿಕೆ ನಮ್ಮಲ್ಲಿ ಮೂಡಿದೆ.