ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ…
ಪುರಂದರದಾಸರ ಈ ತತ್ತ್ವಪದ ತ್ಯಾಗಜೀವನದ ಪ್ರತೀಕವಾಗಿದೆ. ತನಗಾಗಿ ಬದುಕದೆ ಇತರರಿಗಾಗಿ ಬದುಕುವ ಪಾಠವನ್ನು ಹೇಳುತ್ತದೆ. ಹಸು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ. ಮರ ತನ್ನ ಹಣ್ಣು ತಾನೇ ತಿನ್ನುವುದಿಲ್ಲ. ಕೆರೆ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಇವೆಲ್ಲ ನಮಗೆ ನಿತ್ಯ ಬೋಧೆಗಳು. ಇವುಗಳಿಂದ ಕಲಿಯುವ ಪಾಠವೇ ಭೂತಾಯಿ ಕೊಟ್ಟ ಕಾಣಿಕೆಗಳನ್ನು ಭೂಮಿತಾಯಿಗೇ ವಾಪಸ್ ಕೊಡುವುದು. ಅಂದರೆ ನಾಳಿನ ಪೀಳಿಗೆ ಸುಖವಾಗಿ ಬದುಕಲು ದಾರಿ ಮಾಡಿಕೊಡುವುದು.
ಪಂಚಭೂತಗಳಲ್ಲಿ ಮುಖ್ಯವಾದುದು ನೀರು. ಈ ನೀರಿನ ಮೂಲಗಳಲ್ಲಿ ಅತಿ ಮುಖ್ಯವಾದುದು ಕೆರೆ. ನಮ್ಮ ಪೂರ್ವಜರು ಮುಂದಿನ ಜನಾಂಗಕ್ಕೋಸ್ಕರ ಕೆರೆಗಳ ನಿರ್ಮಾಣ ಮಾಡಿದರು. ಆದರೆ ಅವು ಇಂದು ನಾನಾ ಕಾರಣಗಳಿಂದಾಗಿ ಅಳಿವಿನ ಅಂಚಿನಲ್ಲಿವೆ. ಕೆಲವು ಕಡೆ ಕೆರೆಗಳಿದ್ದ ಗುರುತು ಸಹ ಇಲ್ಲ. ಕೆರೆಗಳನ್ನು ಉಳಿಸಿ ಕಾಪಾಡುವುದೀಗ ನಮ್ಮ ಆದ್ಯ ಕರ್ತವ್ಯವಾಗಿದೆ.
ಜಲಮೂಲಗಳು ಬತ್ತಿವೆ, ಮಳೆ ಕಡಮೆಯಾಗುತ್ತಿದೆ, ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ನೀರಿಗಾಗಿ ಹೊಡೆದಾಟ – ಇವೆಲ್ಲ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಕೇಳಿಬರುವ ಮಾತು. ಕೆಲವು ದಶಕಗಳ ಹಿಂದೆ ಹೋಗಿ ಯೋಚಿಸಿದರೆ ಸ್ಥಿತಿ ಇ?ಂದು ಹದಗೆಟ್ಟಿರಲಿಲ್ಲ ಅನಿಸುತ್ತದೆ. ಕಾಲಚಕ್ರದಲ್ಲಿ ಹಿಂದಕ್ಕೆ ಓಡುವುದು ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ; ಬೇಕಿರುವುದು ಮನೋಬಲ, ಪ್ರಕೃತಿಯ ಬಗೆಗೆ ಅರಿವು, ಜೊತೆಗೆ ನಮ್ಮ ನಡುವೆ ಒಗ್ಗಟ್ಟು. ಜಲಮೂಲದ ರಕ್ಷಣೆಯ ಆವಶ್ಯಕತೆಯನ್ನು ಮಾನವ ತಡವಾಗಿಯಾದರೂ ಅರಿತುಕೊಳ್ಳುತ್ತಿದ್ದಾನೆ. ಅರಿವು ಸಣ್ಣಮಟ್ಟದಲ್ಲಿ ಆದರೂ ಅದರ ಫಲ ಕೆಲವು ಕಡೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ಇದರ ಕುರಿತಾಗಿ ಮತ್ತಷ್ಟು ಮಾಹಿತಿಯನ್ನು ಪಸರಿಸುವುದು, ಜನಜಾಗೃತಿ ಮೂಡಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ.
ಮಾನವ ಆಧುನಿಕತೆಯ ಓಟದಲ್ಲಿ ಕೆರೆಗಳನ್ನು ತನ್ನ ರೇಸ್ಟ್ರ್ಯಾಕ್ ಮಾಡಿಕೊಂಡು ಹಿಂದಿರುಗಿ ನೋಡದೆ ಓಡಿದ. ಒಂದು ಕಾಲದಲ್ಲಿ ನೀರಿನ ಸೆಲೆಯಾಗಿದ್ದ ಕೆರೆಗಳನ್ನು ಕಸದ ತೊಟ್ಟಿಗಳಾಗಿ, ಆಟದ ಮೈದಾನವಾಗಿ, ’ಲೇಕ್ ವ್ಯೂ ಅಪಾರ್ಟ್ಮೆಂಟ್’ಗಳ ಹೆಸರಿನಲ್ಲಿ ಕಬಳಿಸಿಕೊಂಡ. ಅದೆಷ್ಟು ವೇಗದಲ್ಲಿ ಓಡಿದರೂ ಗೆಲವನ್ನು ಕಾಣದೆ ಋಣಾತ್ಮಕ ಬೆಳವಣಿಗೆಯೇ ಓಟದ ಫಲಿತಾಂಶವಾಯಿತು. ಮೂಲಭೂತ ಆವಶ್ಯಕತೆಗೂ ನೀರು ಇಲ್ಲದೆ ಹೋದಾಗ ತನ್ನ ಓಟದ ಹಾದಿ ಸರಿಯಿಲ್ಲ ಎನ್ನುವುದರ ಅರಿವು ಆಗತೊಡಗಿತು. ಇದರ ಪರಿಣಾಮವೇ ’ಕೆರೆಗಳ ಪುನಶ್ಚೇತನ’.
ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಕಡೆಗಳಲ್ಲಿ ಕೆರೆಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ’ಐ.ಟಿ. ಸಿಟಿ’ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಜನ ಎಚ್ಚೆತ್ತುಕೊಂಡು ಕೆರೆ ಒತ್ತುವರಿ ವಿಲೇವಾರಿ, ಹೂಳೆತ್ತುವುದು, ನಿರ್ವಹಣೆ ಕೆಲಸದತ್ತ ಮನಮಾಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿದೆ. ಕೆರೆ ನಮ್ಮದು, ಉಳಿಸಿಕೊಂಡರೆ ಬದುಕಬಲ್ಲೆವು ಎನ್ನುವ ತಿಳಿವು ಗಟ್ಟಿಯಾಗುತ್ತಿದೆ. ಜನರ ನಡುವೆ ಹೋದಾಗಲ? ಅಲ್ಲಿ ನಡೆದಿರುವ ಕೆಲಸ, ಜನಜಾಗೃತಿಯ ಅರಿವಾಗುತ್ತದೆ. ಇದೇ ಕಾರಣಕ್ಕಾಗಿ ಕೆಲವು ಆಯ್ದ ಕೆರೆಗಳ ಭೇಟಿಮಾಡಿದೆವು. ಅಲ್ಲಿಯ ಕಾರ್ಯಕರ್ತರ ಜೊತೆಯಲ್ಲಿ ಅವರಿಗೆ ಎದುರಾದ ಕಷ್ಟ-ನಷ್ಟ, ಕಂಡುಬರುತ್ತಿರುವ ಪರಿಣಾಮಗಳ ಕುರಿತಾಗಿ ಸಾಕಷ್ಟು ಮಾಹಿತಿ ಪಡೆದುಕೊಂಡೆವು. ಕೆಲವು ಕೆರೆಗಳು ಗಮನಾರ್ಹವಾಗಿ ಬದಲಾವಣೆಗೊಂಡಿವೆ. ಇನ್ನೊಂದಿಷ್ಟು ಕಡೆ ಯುವಜನರ ನಡುವೆ ಜಾಗೃತಿ ಇನ್ನೂ ಹೆಚ್ಚಾಗಬೇಕಿದೆ.
ಒಟ್ಟಾರೆಯಾಗಿ ನಮ್ಮ ನಡುವೆ ಜಲಮೂಲ ಸಂರಕ್ಷಣೆಯ ಕುರಿತಾಗಿ ಉತ್ತಮ ಅರಿವು ಮೂಡುತ್ತಿದೆ ಎಂಬುದು ಆಶಾದಾಯಕ. ಅಡೆತಡೆಗಳ ನಡುವೆಯೂ, ನಾವು ಕೆರೆಗಳ ಪುನಶ್ಚೇತನದ ಕಾರ್ಯ ಸಾಧಿಸಬಲ್ಲೆವು ಎನ್ನುವ ದೃಢನಿರ್ಧಾರದೊಂದಿಗೆ ಹೋರಾಟದ ಹಾದಿಹಿಡಿಯುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದೇ ಸಂತಸದ ವಿಷಯ.
ತುಮಕೂರು ಜಿಲ್ಲೆಯ ಪಾವಗಡದಲ್ಲಿ ಅಂಥ ಅಳಿವಿನಂಚಿನಲ್ಲಿದ್ದ ಕೆರೆಯನ್ನು ಉಳಿಸಿ ಪುನಶ್ಚೇತನಗೊಳಿಸಲು ನಡೆಸಿದ ಪ್ರಯತ್ನದಿಂದಾಗಿ ನೀರಿಗಾಗಿ ಬವಣೆಪಡುತ್ತಿದ್ದ ಆ ನಗರದ ಜನರಿಂದು ಒಂದಿಷ್ಟು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಭೂತಾಯಿ ಕೊಟ್ಟ ಉಡುಗೊರೆ
ಕೊರಟಗೆರೆಯಿಂದ ಪಾವಗಡಕ್ಕೆ ಹೊರಟ ನಮ್ಮನ್ನು, ಇನ್ನೂ ಪಾವಗಡ ನಗರವನ್ನು ಪ್ರವೇಶ ಮಾಡುತ್ತಿರಬೇಕಾದರೆ, ಅಲ್ಲೊಂದು ನರಸಿಂಹಸ್ವಾಮಿ ಮಂದಿರ ಎದುರುಗೊಳ್ಳುತ್ತದೆ. ಅದರ ಪಕ್ಕದಲ್ಲೇ, ಎದುರು ಭಾಗದಲ್ಲಿರುವ ಗುಡ್ಡದ ಬುಡದಲ್ಲಿ ಒಂದು ಕಿರಿದಾದ ಹಳ್ಳ ಕಾಣುತ್ತದೆ. ಅದರಲ್ಲಿನ್ನೂ ನೀರು ಹರಿಯುತ್ತಿದೆ. ಕಳೆದ ತಿಂಗಳುಗಳಲ್ಲಿ ಆದ ಯಥೇಷ್ಟ ಮಳೆಯಿಂದಾಗಿ ಈಗಲೂ ನೀರು ಹರಿಯುತ್ತಿದೆ. ಈ ರೀತಿ ಹಳ್ಳದಲ್ಲಿ ನೀರು ಹರಿಯುವುದನ್ನು ನೋಡಿ ಸುಮಾರು ೨೦ ವರ್ಷಗಳೇ ಆದವು ಎಂದು ಅಲ್ಲಿನ ಜನರು ಹೇಳುತ್ತಾರೆ.
ಸಾಕಲುಕುಂಟ
ಈ ಕಿರುಹಳ್ಳ ಮುಂದುವರಿದು ಪಾವಗಡದ ’ಸಾಕಲುಕುಂಟ’ ಕೆರೆಯನ್ನು ತಲಪುತ್ತದೆ. ಸಾಕಲುಕುಂಟ ಎಂದರೆ ಅಗಸರ ಕೆರೆ ಎಂದರ್ಥ. ಇಲ್ಲಿನ ಬಹುಸಂಖ್ಯೆಯ ಜನರ ಆಡುಭಾಷೆ ತೆಲುಗು; ಆದ್ದರಿಂದ ಈ ಕೆರೆಯ ಹೆಸರು ’ಸಾಕಲುಕುಂಟ’ ಎಂದು. ಇಲ್ಲಿನ ಪಾಳೇಗಾರರ ಕಾಲದಿಂದಲೂ ಈ ಕೆರೆಯನ್ನು ಹಾಗೇ ಕರೆಯುತ್ತ ಬಂದಿದ್ದಾರೆ. ಹಿಂದೆ ಕೂಡ ಮಳೆಯಾದರೆ ಇದೇ ರೀತಿ ನೀರು ಹಳ್ಳಗಳ ಮೂಲಕ ಹರಿದು ಕೆರೆಯನ್ನು ಸೇರುತ್ತಿತ್ತು. ಮಳೆಗಾಲದಲ್ಲಿ ಕೆರೆಗೆ ನೀರು ಸುತ್ತಮುತ್ತಲ ಬೆಟ್ಟಗಳಿಂದ ಹರಿದು ಬರುತ್ತದೆ. ’ಬೋಡಿಗುಟ್ಟೆ’, ’ದ್ವಾಸಬೆಟ’, ’ಕದರಿತಿಪೆ’, ’ನಲ್ಲಗುಟ್ಟ’ದ ಕರಿ ಕಣಿವೆ (ನಲ್ಲ ಕಟವ) – ಈ ಎಲ್ಲ ಬೆಟ್ಟಗಳಿಂದ ಮಳೆಗಾಲದಲ್ಲಿ ನೀರು ಹರಿದು ಬಂದು ಕೆರೆ ತುಂಬಿ ತುಳುಕುತ್ತದೆ. ಆದರೆ ಹಲವು ವರ್ಷಗಳಿಂದ ನಾಲ್ಕೈದು ದಿನಗಳಲ್ಲೇ ಹರಿದುಬಂದ ನೀರೆಲ್ಲ ಖಾಲಿಯಾಗುತ್ತಿತ್ತು! ಕಾರಣವೇನೆಂದರೆ ಏರಿಯಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ಬಿರುಕುಗಳು.
ಪಾವಗಡವನ್ನಾಳಿದ ಗೊಲ್ಲನಾಯಕ ಬಲ್ಲಪ್ಪ ನಾಯಕನು (ವಿಜಯನಗರ ಅರಸರಲ್ಲಿ ಈತನು ಭಂಡಾರ ರಕ್ಷಣೆ ಮಾಡುತ್ತಿದ್ದ ಎಂದು ಇತಿಹಾಸದಲ್ಲಿ ಹೇಳಲಾಗಿದೆ) ಕ್ರಿ.ಶ. ೧೪೦೫ರಲ್ಲಿ ಕಟ್ಟಿಸಿದ್ದು ಈ ಅಗಸರ ಕೆರೆ. ಕೆರೆಯ ಪಶ್ಚಿಮಕ್ಕೆ ನಾಗಪ್ಪ-ಬುಸ್ಸಪ್ಪ ಮಂಟಪ ಕಾಣುತ್ತದೆ. ಈ ಮಂಟಪದ ಎತ್ತರದ ಸಮಕ್ಕೆ ಕೆರೆಯ ಏರಿ ಇದೆ. ಹಿಂದೆಯೆಲ್ಲ ಈ ಮಂಟಪ ಮೇಲ್ಭಾಗ ಮಾತ್ರವೇ ಕಾಣುವಷ್ಟರಮಟ್ಟಿಗೆ ಕೆರೆ ತುಂಬಿ ಕೋಡಿಬೀಳುತ್ತಿದ್ದುದಿತ್ತು ಎಂದು ಅಲ್ಲೆ ಬಟ್ಟೆ ಒಗೆಯುತ್ತಿದ್ದ ಅಗಸರಲ್ಲಿ ಹಿರಿಯರೊಬ್ಬರು ನಮ್ಮ ಬಳಿ ಹೇಳಿಕೊಂಡರು.
ಪಾವಗಡದ ಅಗಸರ ಆರಾಧ್ಯದೈವ ಈ ನಾಗಪ್ಪ ಹಾಗೂ ಬುಸ್ಸಪ್ಪ. ವರ್ಷಕ್ಕೊಮ್ಮೆ ಈ ದೇವರಿಗೆ ವಿಶೇಷ ಪೂಜೆಯಿರುತ್ತದೆ. ಅಂದು ಬೆಳಗ್ಗೆಯಿಂದ ಉಪವಾಸವಿದ್ದು ಪೂಜೆ ಮಾಡಿದ ಮೇಲೆ ಅಗಸರೆಲ್ಲ ಪ್ರಸಾದ ಸೇವಿಸುತ್ತಾರೆ. ತಂಬಿಟ್ಟಿನಾರತಿ ಮಾಡುತ್ತಾರೆ. ಬುಸ್ಸಪ್ಪನ ವಿಗ್ರಹ ಕೂಡ ತುಂಬಾ ವಿಶೇಷವಾಗಿದೆ. ಕುದುರೆಯೊಂದರ ಮೇಲೆ ಇಬ್ಬರು ವೀರರು ಕುಳಿತಿದ್ದಾರೆ. ಆ ವಿಗ್ರಹವನ್ನೇ ಇಲ್ಲಿನ ಅಗಸ ಸಮುದಾಯದವರು ಬುಸ್ಸಪ್ಪ ದೇವರೆಂದು ಪೂಜಿಸುತ್ತಾ ಬಂದಿದ್ದಾರೆ. ಕೋಟೆಯ ಪಾಳೇಗಾರರ ಕಾಲದಿಂದಲೂ ಈ ಪ್ರತೀತಿ ನಡೆದುಬಂದಿದೆ. ಪಶ್ಚಿಮಕ್ಕೊಂದು ಹುಣಸೆತೋಪು ಹಾಗೂ ಮಲೆರಂಗಪ್ಪನ ಮಂಟಪವಿದೆ. ಪಾವಗಡದ ರೈತರ ಜೀವನಾಡಿಯಾಗಿದ್ದ ಈ ಕೆರೆ ಅಂದು ಕೃಷಿಗೆ ಬೆನ್ನೆಲುಬಾಗಿತ್ತು. ಕೆರೆಯ ಪೂರ್ವಕ್ಕೆ ವಿಶಾಲವಾದ ಬಂಡೆಯಿದೆ. ಅದರ ಮೇಲೆ ರೈತರು ಕಣ ಮಾಡಿಕೊಂಡು ತೆನೆ ಬಡಿಯುತ್ತಿರುವುದು ಕಂಡುಬರುತ್ತದೆ.
ಕೆರೆಯದೇ ಭಾಗವಾಗಿರುವ, ಈ ವಿಶಾಲವಾದ ಬಂಡೆಯ ಬಹುಭಾಗವನ್ನು ಇಂದು ಸಾಯಿಬಾಬಾ ಮಂದಿರ ಹಾಗೂ ಅದರ ಪಾಗಾರ ಆವರಿಸಿಕೊಂಡಿದೆ. ಮಂದಿರದ ಮೇಲ್ಭಾಗ ಹಾಗೂ ಹಿಂಭಾಗಗಳಲ್ಲಿ ಎಲ್ಲಿಂದಲೊ ತಂದು ಸುರಿದ ಹಳೆಯ ಕಟ್ಟಡಗಳ ಇಟ್ಟಿಗೆ ಮಣ್ಣು ಇತ್ಯಾದಿಗಳು ಗುಡ್ಡೆಯಾಗಿರುವುದೂ ಕಂಡುಬಂತು.
ಬರದ ಬರೆ
೧೪ನೇ ಶತಮಾನದಲ್ಲಿ ಈ ನಗರದಲ್ಲಿ ಉತ್ತರ ಪಿನಾಕಿನಿ ನದಿಯೂ ಹರಿಯುತ್ತಿತ್ತು ಎನ್ನಲಾಗುತ್ತದೆ. ಆನಂತರ ಅದು ಬತ್ತಿಹೋಯಿತು. ಆಗ ಕಾಲಕಾಲಕ್ಕೆ ಮಳೆಯಾಗುತ್ತಿದ್ದುದರಿಂದ ಇಲ್ಲಿನ ಜನರಿಗೆ ನೀರಿನ ಬವಣೆ ತಟ್ಟಿರಲಿಲ್ಲ. ಆದರೆ ಕಳೆದ ೧೫-೨೦ ವ?ಗಳಿಂದ ಮಳೆಯ ಪ್ರಮಾಣ ಕಡಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಯಿತು. ೨೦೧೩-೧೪ರವರೆಗೂ ಈ ಕೆರೆ ಸಂಪೂರ್ಣ ಬತ್ತಿಹೋಗಿತ್ತು. ಕಾರಣವೇನೆಂದರೆ ಮಳೆಗಾಲದಲ್ಲಿ ಸುತ್ತಮುತ್ತಲ ಬೆಟ್ಟಗಳಿಂದ ಬಂದು ಸೇರುವ ನೀರು ಎರಡು ಮೂರು ದಿನಗಳಲ್ಲಿ ಏರಿಯ ಬಿರುಕುಗಳ ಮೂಲಕ ಜಿನುಗಿ ಜಿನುಗಿ ಖಾಲಿಯಾಗಿಬಿಡುತ್ತಿತ್ತು. ಹಾಗಾಗಿ ಕೆರೆಯು ಗರಿಗಳಿದ್ದರೂ ಕುಣಿಯಲಾಗದ ನವಿಲಿನಂತಿತ್ತು. ಇದರಿಂದಾಗಿ ನಗರದಲ್ಲಿ ಕೊರೆಯಲಾಗಿದ್ದ ಕೊಳವೆಬಾವಿಗಳೆಲ್ಲ ಊದುಗೊಳವೆಗಳಂತೆ ಬರೀ ಬಿಸೀ ಗಾಳಿಯನ್ನು ಒಡಲಲ್ಲಿ ತುಂಬಿಕೊಂಡು ಠೊಳ್ಳು ಕರಿ ಕಣಿವೆ (ನಲ್ಲ ಕಟವ) – ಈ ಎಲ್ಲ ಬೆಟ್ಟಗಳಿಂದ ಮಳೆಗಾಲದಲ್ಲಿ ನೀರು ಹರಿದು ಬಂದು ಕೆರೆ ತುಂಬಿ ತುಳುಕುತ್ತದೆ. ಆದರೆ ಹಲವು ವ?ಗಳಿಂದ ನಾಲ್ಕೈದು ದಿನಗಳಲ್ಲೇ ಹರಿದುಬಂದ ನೀರೆಲ್ಲ ಖಾಲಿಯಾಗುತ್ತಿತ್ತು! ಕಾರಣವೇನೆಂದರೆ ಏರಿಯಲ್ಲಿ ಕಾಣಿಸಿಕೊಂಡಿದ್ದ ದೊಡ್ಡ ಬಿರುಕುಗಳು.
ಪಾವಗಡವನ್ನಾಳಿದ ಗೊಲ್ಲನಾಯಕ ಬಲ್ಲಪ್ಪ ನಾಯಕನು (ವಿಜಯನಗರ ಅರಸರಲ್ಲಿ ಈತನು ಭಂಡಾರ ರಕ್ಷಣೆ ಮಾಡುತ್ತಿದ್ದ ಎಂದು ಇತಿಹಾಸದಲ್ಲಿ ಹೇಳಲಾಗಿದೆ) ಕ್ರಿ.ಶ. ೧೪೦೫ರಲ್ಲಿ ಕಟ್ಟಿಸಿದ್ದು ಈ ಅಗಸರ ಕೆರೆ. ಕೆರೆಯ ಪಶ್ಚಿಮಕ್ಕೆ ನಾಗಪ್ಪ-ಬುಸ್ಸಪ್ಪ ಮಂಟಪ ಕಾಣುತ್ತದೆ. ಈ ಮಂಟಪದ ಎತ್ತರದ ಸಮಕ್ಕೆ ಕೆರೆಯ ಏರಿ ಇದೆ. ಹಿಂದೆಯೆಲ್ಲ ಈ ಮಂಟಪ ಮೇಲ್ಭಾಗ ಮಾತ್ರವೇ ಕಾಣುವ?ರಮಟ್ಟಿಗೆ ಕೆರೆ ತುಂಬಿ ಕೋಡಿಬೀಳುತ್ತಿದ್ದುದಿತ್ತು ಎಂದು ಅಲ್ಲೆ ಬಟ್ಟೆ ಒಗೆಯುತ್ತಿದ್ದ ಅಗಸರಲ್ಲಿ ಹಿರಿಯರೊಬ್ಬರು ನಮ್ಮ ಬಳಿ ಹೇಳಿಕೊಂಡರು.
ಪಾವಗಡದ ಅಗಸರ ಆರಾಧ್ಯದೈವ ಈ ನಾಗಪ್ಪ ಹಾಗೂ ಬುಸ್ಸಪ್ಪ. ವರ್ಷಕ್ಕೊಮ್ಮೆ ಈ ದೇವರಿಗೆ ವಿಶೇಷ ಪೂಜೆಯಿರುತ್ತದೆ. ಅಂದು ಬೆಳಗ್ಗೆಯಿಂದ ಉಪವಾಸವಿದ್ದು ಪೂಜೆ ಮಾಡಿದ ಮೇಲೆ ಅಗಸರೆಲ್ಲ ಪ್ರಸಾದ ಸೇವಿಸುತ್ತಾರೆ. ತಂಬಿಟ್ಟಿನಾರತಿ ಮಾಡುತ್ತಾರೆ. ಬುಸ್ಸಪ್ಪನ ವಿಗ್ರಹ ಕೂಡ ತುಂಬಾ ವಿಶೇಷವಾಗಿದೆ. ಕುದುರೆಯೊಂದರ ಮೇಲೆ ಇಬ್ಬರು ವೀರರು ಕುಳಿತಿದ್ದಾರೆ. ಆ ವಿಗ್ರಹವನ್ನೇ ಇಲ್ಲಿನ ಅಗಸ ಸಮುದಾಯದವರು ಬುಸ್ಸಪ್ಪ ದೇವರೆಂದು ಪೂಜಿಸುತ್ತಾ ಬಂದಿದ್ದಾರೆ. ಕೋಟೆಯ ಪಾಳೇಗಾರರ ಕಾಲದಿಂದಲೂ ಈ ಪ್ರತೀತಿ ನಡೆದುಬಂದಿದೆ. ಪಶ್ಚಿಮಕ್ಕೊಂದು ಹುಣಸೆತೋಪು ಹಾಗೂ ಮಲೆರಂಗಪ್ಪನ ಮಂಟಪವಿದೆ. ಪಾವಗಡದ ರೈತರ ಜೀವನಾಡಿಯಾಗಿದ್ದ ಈ ಕೆರೆ ಅಂದು ಕೃಷಿಗೆ ಬೆನ್ನೆಲುಬಾಗಿತ್ತು. ಕೆರೆಯ ಪೂರ್ವಕ್ಕೆ ವಿಶಾಲವಾದ ಬಂಡೆಯಿದೆ. ಅದರ ಮೇಲೆ ರೈತರು ಕಣ ಮಾಡಿಕೊಂಡು ತೆನೆ ಬಡಿಯುತ್ತಿರುವುದು ಕಂಡುಬರುತ್ತದೆ.
ಕೆರೆಯದೇ ಭಾಗವಾಗಿರುವ, ಈ ವಿಶಾಲವಾದ ಬಂಡೆಯ ಬಹುಭಾಗವನ್ನು ಇಂದು ಸಾಯಿಬಾಬಾ ಮಂದಿರ ಹಾಗೂ ಅದರ ಪಾಗಾರ ಆವರಿಸಿಕೊಂಡಿದೆ. ಮಂದಿರದ ಮೇಲ್ಭಾಗ ಹಾಗೂ ಹಿಂಭಾಗಗಳಲ್ಲಿ ಎಲ್ಲಿಂದಲೊ ತಂದು ಸುರಿದ ಹಳೆಯ ಕಟ್ಟಡಗಳ ಇಟ್ಟಿಗೆ ಮಣ್ಣು ಇತ್ಯಾದಿಗಳು ಗುಡ್ಡೆಯಾಗಿರುವುದೂ ಕಂಡುಬಂತು.
ಬರದ ಬರೆ
೧೪ನೇ ಶತಮಾನದಲ್ಲಿ ಈ ನಗರದಲ್ಲಿ ಉತ್ತರ ಪಿನಾಕಿನಿ ನದಿಯೂ ಹರಿಯುತ್ತಿತ್ತು ಎನ್ನಲಾಗುತ್ತದೆ. ಆನಂತರ ಅದು ಬತ್ತಿಹೋಯಿತು. ಆಗ ಕಾಲಕಾಲಕ್ಕೆ ಮಳೆಯಾಗುತ್ತಿದ್ದುದರಿಂದ ಇಲ್ಲಿನ ಜನರಿಗೆ ನೀರಿನ ಬವಣೆ ತಟ್ಟಿರಲಿಲ್ಲ. ಆದರೆ ಕಳೆದ ೧೫-೨೦ ವ?ಗಳಿಂದ ಮಳೆಯ ಪ್ರಮಾಣ ಕಡಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಯಿತು. ೨೦೧೩-೧೪ರವರೆಗೂ ಈ ಕೆರೆ ಸಂಪೂರ್ಣ ಬತ್ತಿಹೋಗಿತ್ತು. ಕಾರಣವೇನೆಂದರೆ ಮಳೆಗಾಲದಲ್ಲಿ ಸುತ್ತಮುತ್ತಲ ಬೆಟ್ಟಗಳಿಂದ ಬಂದು ಸೇರುವ ನೀರು ಎರಡು ಮೂರು ದಿನಗಳಲ್ಲಿ ಏರಿಯ ಬಿರುಕುಗಳ ಮೂಲಕ ಜಿನುಗಿ ಜಿನುಗಿ ಖಾಲಿಯಾಗಿಬಿಡುತ್ತಿತ್ತು. ಹಾಗಾಗಿ ಕೆರೆಯು ಗರಿಗಳಿದ್ದರೂ ಕುಣಿಯಲಾಗದ ನವಿಲಿನಂತಿತ್ತು. ಇದರಿಂದಾಗಿ ನಗರದಲ್ಲಿ ಕೊರೆಯಲಾಗಿದ್ದ ಕೊಳವೆಬಾವಿಗಳೆಲ್ಲ ಊದುಗೊಳವೆಗಳಂತೆ ಬರೀ ಬಿಸೀ ಗಾಳಿಯನ್ನು ಒಡಲಲ್ಲಿ ತುಂಬಿಕೊಂಡು ಠೊಳ್ಳು ಕೊಳವೆಗಳಾಗಿದ್ದವು. ಆ ಊದುಗೊಳವೆಗಳು ಜನರ ಬಾಯಾರಿಕೆಯ ಕಾವನ್ನು ಮತ್ತ? ಉದ್ದೀಪಿಸುತ್ತಿದ್ದವು.
ಇಂಥ ಸಮಯದಲ್ಲಿ ಆ ಕೆರೆಯನ್ನು ಪುನಶ್ಚೇತನಗೊಳಿಸುವ ಸಂಕಲ್ಪವನ್ನು ಮಾಡಿ, ಅಲ್ಲಿನ ಕೆಲವು ಮಂದಿ ಜಾಗೃತ ಯುವಕರು ಕಾರ್ಯೋನ್ಮುಖರಾದರು. ’ಸೋರಿಹೋಗುವ ಕೆರೆಯ ನೀರನ್ನೆಲ್ಲ ಕೆರೆಯಲ್ಲೇ ಉಳಿಸುವ ಹಾಗೂ ಬದುಕುವ ಕಾರ್ಯ ಹೇಗೆ?’ – ಈ ಪ್ರಶ್ನೆಗೆ ಉತ್ತರವನ್ನವರು ಕಂಡುಕೊಳ್ಳಲು ಹೊರಟರು.
ನೀರಿನ ಅಭಾವ
ಎಚ್ಚೆತ್ತ ಯುವಕರಲ್ಲಿ ವಕೀಲ ಪುರು?ತ್ತಮ ರೆಡ್ಡಿ ಹಾಗೂ ಇಂಜಿನಿಯರ್ ಜಿ.ಟಿ. ಗಿರೀಶ್ ಕೆರೆಯ ಪುನಶ್ಚೇತನದ ಕುರಿತು ವಿಶೇ? ಆಸಕ್ತಿಯಿಂದ ಚಿಂತಿಸಿದರು. ಅವರ ಚಿಂತೆಗೆ ಮುಖ್ಯ ಕಾರಣವೆಂದರೆ ಪಾವಗಡದ ಕುಡಿಯುವ ನೀರಿನ ಸಮಸ್ಯೆ. ಪಾವಗಡಕ್ಕೆ ಶಾಪದಂತೆ ಕಾಡುತ್ತಿದ್ದ ಭೀಕರ ಬರಗಾಲ ಕೂಡ ಸಮಸ್ಯೆಗೆ ಕುಮ್ಮಕ್ಕುಕೊಡುತ್ತಿತ್ತು. ನಗರಕ್ಕೆ ಈ ಹಿಂದೆ ನಾಗಲಮಡಿಕೆಯಲ್ಲಿ ಉತ್ತರ ಪಿನಾಕಿನಿ ನದಿಗೆ ಬ್ಯಾರೇಜ್ ಕಟ್ಟಿ ಅಲ್ಲಿಂದ ಕುಡಿಯುವ ನೀರು ಮಾತ್ರ ಪೂರೈಕೆ ಮಾಡುವ ಪ್ರಯತ್ನ ನಡೆದಿತ್ತು. ಪೈಪ್ಲೈನ್ ಜೋಡಿಸುವ ಕೆಲಸ ಕೂಡ ಆಗಿತ್ತು. ಆದರೆ ನೀರು ಮಾತ್ರ ಪೂರೈಕೆಯಾಗಲಿಲ್ಲ. ಅದು ಕನಸಾಗಿಯೇ ಉಳಿಯಿತು.
ಪುರುಷೋತ್ತಮ ರೆಡ್ಡಿ, ಜಿ.ಟಿ. ಗಿರೀಶ್ ಇಬ್ಬರೂ ಕೆರೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲಿದ್ದರು. ಮಳೆಗಾಲದಲ್ಲಿ ಹರಿದು ಬರುವ ದೊಡ್ಡಪ್ರಮಾಣದ ನೀರು ಏಕೆ ಕೆರೆಯಲ್ಲಿ ನಿಲ್ಲುತ್ತಿಲ್ಲ ಎಂಬ ಪ್ರಶ್ನೆಗೆ ಅದಾಗಲೆ ಉತ್ತರ ಸಿಕ್ಕಿತ್ತು: ಕೆರೆಯ ಉತ್ತರಕ್ಕೆ ಇರುವ ಏರಿಯಲ್ಲಿ ದೊಡ್ಡ ಬಿರುಕುಗಳು ಅವರಿಗೆ ಕಾಣಿಸಿದ್ದವು. ಇವನ್ನು ಮುಚ್ಚದ ಹೊರತು ನೀರು ನಿಲ್ಲುವುದಿಲ್ಲ ಎಂಬ ಸತ್ಯದ ಅರಿವಾಯಿತು. ಇಬ್ಬರೂ ಪ್ರತಿದಿನವೂ ಕೆರೆಯ ಬಳಿ ಸುಳಿದಾಡುತ್ತ ಕೆರೆಯನ್ನು ಇನ್ನ? ಸೂಕ್ಷ್ಮವಾಗಿ ಗಮನಿಸುತ್ತಾ ಬಂದರು. ಈ ಬಿರುಕುಗಳಲ್ಲದೆ ಕೆರೆಯಲ್ಲಿ ಇನ್ನೂ ಸಾಕ? ಒಳ ಬಿರುಕುಗಳು ಇರಬಹುದು ಎಂಬ ಅಂಶವೂ ಬಯಲಾಯಿತು. ಸ್ವತಃ ಸಿವಿಲ್ ಇಂಜಿನಿಯರ್ ಆದ ಗಿರೀಶ್ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಆಲೋಚಿಸಿದರು. ಅಕ್ಕಪಕ್ಕದ ರೈತರನ್ನೆಲ್ಲ ಕರೆದು ವಿವರಿಸಿದಾಗ ಅವರಿಗೆಲ್ಲ ಇವರ ಬಗ್ಗೆಯೆ ಅನುಮಾನ ಬಂತು. ಅವರೆಲ್ಲ ತಮ್ಮ ಪಾಡಿಗೆ ತಾವು ಉಳಿದುಕೊಂಡರು. ರೆಡ್ಡಿ ಹಾಗೂ ಗಿರೀಶ್ ಪಟ್ಟಣ ಪಂಚಾಯ್ತಿಯವರನ್ನೂ ಕೇಳಿಕೊಂಡರು. ಅವರೂ ಕೂಡ ಕಿವಿ ಮೇಲೆ ಏನೂ ಹಾಕಿಕೊಳ್ಳಲಿಲ್ಲ.
ಕೋಡಿಬಿದ್ದಾಗ, ಕೆರೆಯ ನೀರು ಪಾವಗಡದ ಇತಿಹಾಸಪ್ರಸಿದ್ಧ ಕೋಟೆಯ (ಈ ಕೋಟೆಯನ್ನು ಪಾವಗಡದ ಕೆಳಗಿರುವ ಈಶ್ವರ ದೇವಾಲಯದ ಶಾಸನದಲ್ಲಿ ’ಪಾಗೊಂಡೆ’ ಎಂದು ಕರೆಯಲಾಗಿದೆ) ಕೆಳಗಿನ ಭೀಮನ ದೋಣಿ ಹಾಗೂ ಬಾಲಮ್ಮನ ಹಳ್ಳಗಳಿಗೆ ಹರಿದು ದೋಳಾರ ವಂಕ ಸೇರಿಕೊಳ್ಳುತ್ತಿತ್ತು (ವಂಕ ಎಂದರೆ ತೆಲುಗಿನಲ್ಲಿ ಹಳ್ಳ). ಈ ನೀರನ್ನೆಲ್ಲ ನಾವು ಕೆರೆಯಲ್ಲೇ ಉಳಿಸಬೇಕು. ಆಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಊರ ಜನರಿಗೆ ತಿಳಿಸಿ ಹೇಳಿದರು. ಜನರು ಮಾತ್ರ ಯಾವುದನ್ನೂ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.
ಅದೇ ಸಮಯದಲ್ಲಿ ಪುರುಷೋತ್ತಮ ರೆಡ್ಡಿ ಮತ್ತು ಜಿ.ಟಿ. ಗಿರೀಶ್ ಅವರಿಗೆ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಗಣಪತಿ ಹೆಗಡೆ ಹಾಗೂ ರಮೇಶ್ ಶಿವರಾಮ್ ಎಂಬವರ ಪರಿಚಯವಾಗಿ, ಅವರಿಂದ ಸ್ಫೂರ್ತಿ ಹಾಗೂ ಪ್ರೇರಣೆ ದೊರಕಿತು. ನಾಲ್ವರೂ ಸೇರಿ ಊರಿನ ಕೆಲವು ಆಸಕ್ತ ಜನರನ್ನು ಸೇರಿಸಿ ಸುಮಾರು ೬ ಸಭೆಗಳನ್ನು ನಡೆಸಿದರು. ಆದರೆ ಪ್ರಯೋಜನವಾಗಲಿಲ್ಲ. ಕೊನೆಗೆ ಪುರುಷೋತ್ತಮ ರೆಡ್ಡಿ ಮತ್ತು ಜಿ.ಟಿ. ಗಿರೀಶ್ ಇಬ್ಬರೇ ದೃಢವಾಗಿ ನಿಂತು ಕೆರೆಗೆ ಬರುವ ನೀರನ್ನು ಉಳಿಸುವ ನಿರ್ಧಾರ ಮಾಡಿದರು. ಇದಕ್ಕೆ ಬೇಕಾದ ಕಾಮಗಾರಿಯನ್ನು ನಡೆಸಲು ಆರ್ಥಿಕ ಸಹಾಯಕ್ಕಾಗಿ ಸ್ಥಳೀಯ ಶಾಸಕ ವೆಂಕಟರಮಣಪ್ಪ ಹಾಗೂ ಸಂಸದ ಜನಾರ್ದನಸ್ವಾಮಿಯವರನ್ನು ಕೇಳಿದಾಗ ಅವರ ವ್ಯಾಪ್ತಿಯ ಅನುದಾನ ದೊರಕಿತು. ಇದರಿಂದಾಗಿ ೨೦೧೪ರ ಪ್ರಾರಂಭದಲ್ಲಿ ಕೆರೆಯ ರಿಪೇರಿ ಕಾಮಗಾರಿ ಆರಂಭವಾಯಿತು. ಪುರುಷೋತ್ತಮ ರೆಡ್ಡಿ ಮತ್ತು ಗಿರೀಶ್ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರನ್ನು ಸಂಪರ್ಕಿಸಿ, ಕೆರೆಯಲ್ಲಿ ನೀರನ್ನು ಉಳಿಸಿಕೊಳ್ಳಲು ಅತ್ಯಗತ್ಯವಾಗಿ ಆಗಬೇಕಿದ್ದ ಕಾಮಗಾರಿಯಾದ – ಕೆರೆಯ ಏರಿಯುದ್ದಕ್ಕೂ ಸುಮಾರು ೧೫ ಅಡಿ ಆಳದ ಪಾಯ ತೆಗೆದು ಏರಿಯ ಒಳಭಾಗದಲ್ಲಿ ಕಲ್ಲುಗಳನ್ನು ಅದ್ದಿ ಪಿಚಿಂಗ್ ಮಾಡಿಸಿಕೊಳ್ಳಲು ಸಫಲರರಾದರು, ಇದರಿಂದಾಗಿ ಏರಿಯಲ್ಲಿದ್ದ ಬಿರುಕುಗಳು ಮುಚ್ಚಿಕೊಂಡವು. ಮಳೆನೀರು ಹರಿದುಬಂದದ್ದು ಕೆರೆಯಲ್ಲೆ ಶೇಖರಣೆಯಾಗಿ ಸೋರಿಕೆಯಾಗುವುದು ತಪ್ಪಿತು.
ನಗರೀಕರಣದಿಂದಾದ ಬದಲಾವಣೆ
ನಗರೀಕರಣದ ಪ್ರಭಾವದಿಂದ ಕೆರೆಗೆ ಆದ ಹಾನಿಯೆಂದರೆ, ಕೊಳವೆಬಾವಿಗಳು ಪಾವಗಡದ ತುಂಬ ತಲೆಯೆತ್ತಿದ್ದು. ಕೆರೆಯ ನೀರು ಬತ್ತಿಹೋಗಲು ಇದೂ ಒಂದು ಕಾರಣವಾಯಿತು. ಕೆರೆಯ ಸುತ್ತಮುತ್ತ ಇದ್ದ ಹೊಲಗದ್ದೆಗಳು ಹೊಸಹೊಸ ಬಡಾವಣೆಗಳಾಗಿ ಮಾರ್ಪಾಟಾದವು. ನಗರದ ಘನತ್ಯಾಜ್ಯವೆಲ್ಲ ಕೆರೆಗೆ ಬಂದು ಬೀಳತೊಡಗಿತು. ಕೆರೆಯ ಒಳಗೆ ಸ್ವಲ್ಪ ಒತ್ತುವರಿಯಾಯಿತು. ಕೋಡಿ ಹಾಗೂ ತೂಬುಗಳು ಮಾಯವಾದವು. ಕೋಡಿಯಿರುವ ಜಾಗದ ಒತ್ತಟ್ಟಿನಲ್ಲಿ ಈಗ ಅಗಸರಿಗಾಗಿ ಧೋಬಿಘಾಟ್ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಸರಿಯಾದ ಮೂಲಭೂತ ವ್ಯವಸ್ಥೆಯಿಲ್ಲ. ಹೀಗಾಗಿ ಊರಿನ ಅಗಸರು ಬಟ್ಟೆಗಳನ್ನು ಒಗೆಯಲು ಮತ್ತೆ ಕೆರೆಯನ್ನೇ ಆಶ್ರಯಿಸಿದ್ದಾರೆ. ಇದರಿಂದಾಗಿ ಕೆರೆಯ ನೀರು ಮಲಿನಗೊಳ್ಳುತ್ತಿದೆ. ಈ ಬಗ್ಗೆ ಅಲ್ಲಿಯೆ ಬಟ್ಟೆ ಒಗೆಯುತ್ತಿದ್ದ ಅಗಸರನ್ನು ಕೇಳಿದರೆ – ’ದೋಭಿಘಾಟಿನಲ್ಲಿ ಸರಿಯಾದ ಎಲ್ಲ ಅನುಕೂಲಗಳಿದ್ದಿದ್ದರೆ ನಾವೇಕೆ ಇಲ್ಲಿ ಬಟ್ಟೆ ಒಗೆಯಬೇಕು?’ ಎಂದು ನಮ್ಮನ್ನೆ ಪ್ರಶ್ನಿಸುತ್ತಾರೆ.
ಕೆರೆಯ ಉತ್ತರ ಭಾಗದಲ್ಲಿ ಅಂದರೆ ಕೆರೆಯ ಕೆಳಭಾಗಕ್ಕೆ ಹೊಸಹೊಸ ವಸತಿ ನಿವೇಶನಗಳು ತಲೆಯೆತ್ತುತ್ತಿರುವುದು ನಮಗೆ ಕಂಡುಬಂತು. ’ನಗರದ ಕೆಲವೆಡೆ ಹಳೆಯ ಮನೆಗಳನ್ನು ಬೀಳಿಸಿ ಹೊಸ ಮನೆ ಕಟ್ಟಲಾಗುತ್ತಿದೆ. ಕೆಡವಿದ ಮನೆಗಳ ಅವಶೇಷಗಳು ಹಾಗೂ ಊರಿನ ಕಸ ಕೆರೆಯ ಮಗ್ಗುಲಿಗೆ ಬಂದು ಬೀಳುತ್ತಿವೆ’ ಎಂದು ಪುರು?ತ್ತಮ ರೆಡ್ಡಿ ಹಾಗೂ ಗಿರೀಶ್ ದೂರಿಕೊಂಡರು. ಈ ಬಗ್ಗೆ ಇಬ್ಬರೂ ಪಟ್ಟಣ ಪಂಚಾಯ್ತಿ ಹಾಗೂ ಜನರಲ್ಲಿ ಅರಿವು ಮೂಡಿಸಿದರೂ ಕಂಡೂ ಕಾಣದಂತೆ ಕಸಸುರಿಯುವ ಕೆಲಸ ಮುಂದುವರಿಯುತ್ತಿದೆ. ಇತ್ತೀಚೆಗೆ ಪಟ್ಟಣ ಪಂಚಾಯ್ತಿಯಲ್ಲಿ ಇದರ ಬಗ್ಗೆ ಹೆಚ್ಚು ಒತ್ತಡ ಹಾಕಿದ್ದರಿಂದ ಈಗ ಕೆರೆಯ ಒಳಗೆ ಕಸ ತಂದುಹಾಕುವುದು ನಿಂತಿದೆ.
ಕೆರೆಯು ಪುನಶ್ಚೇತನಗೊಡ ನಂತರ ಈಗ ಕೆರೆಯಲ್ಲಿ ನೀರು ಯಥೇಚ್ಛವಾಗಿ ಶೇಖರಣೆಯಾಗಿದೆ. “ಸುತ್ತಮುತ್ತಲಿನ ರೈತರು ಕೆರೆಯಲ್ಲಿ ತುಂಬಿದ್ದ ಹೂಳನ್ನೂ ಗೋಡನ್ನೂ ಹೊತ್ತು ಸಾಗಿಸಿದ್ದರಿಂದಾಗಿ ಕೆರೆಯ ಆಳ ಇದೀಗ ಹೆಚ್ಚಾಗಿದೆ. ಇಲ್ಲವಾದರೆ ಈ ವರ್ಷ ಸುರಿದ ಮಳೆಗೆ ಕೆರೆಯಲ್ಲಿ ನೀರು ತುಂಬಿ ಕೋಡಿ ಹರಿಯುತ್ತಿತ್ತು” ಎಂದು ಪುರುಷೋತ್ತಮ ರೆಡ್ಡಿ ನಮ್ಮೊಂದಿಗೆ ಹೆಮ್ಮೆಯಿಂದ ಹೇಳಿಕೊಂಡರು. ನಗರದ ಬರಿದಾಗಿದ್ದ ಬೋರುಗಳಲ್ಲಿ ಇದೀಗ ಭರಪೂರ ನೀರು ಬಂದಿದೆ. ಅದನ್ನೆ ಶುದ್ಧೀಕರಿಸಿ ನಗರದೆಲ್ಲೆಡೆಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಒಂದು ಸಾರಿ ಮಳೆನೀರಿನಿಂದ ಕೆರೆ ತುಂಬಿದ್ದೇ ಆದರೆ ಸುಮಾರು ನಾಲ್ಕು ವರ್ಷಗಳ ಕಾಲ ನಗರದ ಕುಡಿಯುವ ನೀರಿನ ಸಮಸ್ಯೆ ದೂರವಾದಂತೆ. ಈ ಕಾರ್ಯ ಮಾಡಲು ರೆಡ್ಡಿ ಹಾಗೂ ಗಿರೀಶ್ ಅವರು ತಿಂಗಳುಗಳ ಕಾಲ ಶ್ರಮವಹಿಸಿದ್ದಾರೆ.
ನಾಳಿನ ಬದುಕಿಗಾಗಿ ಕಟ್ಟಿದ ಕೆರೆ
ಈಗ ಊರಿನವರಿಗೆಲ್ಲ ’ಈ ಕೆರೆ ನಮ್ಮದು, ನಮ್ಮ ಪೂರ್ವಜರು ನಾಳಿನ ಬದುಕಿಗಾಗಿ ಕಟ್ಟಿದ ಕೆರೆಯಿದು’ ಎಂಬ ಮಮಕಾರ ಬಂದಿದೆ. ಅದನ್ನು ಉಳಿಸಿಕೊಳ್ಳಲು ಈಗ ಎಲ್ಲರೂ ನಿರ್ಧಾರ ಮಾಡಿದ್ದಾರೆ. ನಾಗಪ್ಪ-ಬುಸ್ಸಪ್ಪ ಮಂಟಪಕ್ಕೆ ಹೊಸ ಕಳೆ ಬಂದಿದೆ. ಸಪ್ಪಗಾಗಿದ್ದ ಮಂಟಪ ಇನ್ನು ಮುಂದೆ ತನ್ನ ಎತ್ತರದ? ನೀರು ನಿಲ್ಲುತ್ತದೆ ಎಂದು ಆನಂದ ಪಡುತ್ತಿದೆ. ಅಗಸರ ಆರಾಧ್ಯದೈವವಾದ ನಾಗಪ್ಪ ಹಾಗೂ ಬುಸ್ಸಪ್ಪರಿಗೆ ತೇರಿನ ಮೇಲೆ ಕೂತ ಅನುಭವವಾಗುತ್ತಿದೆ. ಈಗ ನಿಂತಿರುವ ನೀರಿನ ಮೇಲೆ ಬಿದ್ದು ಹೊಳೆಯುವ ಸೂರ್ಯಕಿರಣಗಳು ಆ ದೇವರಿಗೆತ್ತಿದ ಆರತಿಯಂತೆ ಕಾಣುತ್ತಿವೆ. ಬುಸ್ಸಪ್ಪನ ವಿಗ್ರಹವಾದ ಕುದುರೆಯೊಂದರ ಮೇಲೆ ಇಬ್ಬರು ವೀರರು ಯುದ್ಧವನು ಗೆದ್ದ ಸಂತೋ?ದಲ್ಲಿ ಕೂತಿದ್ದಾರೆ ಎಂದೆನಿಸುತ್ತಿದೆ. ಗಣಪತಿ ಹೆಗಡೆ ಹಾಗೂ ರಮೇಶ್ ಶಿವರಾಮ್ ಅವರ ಪ್ರೇರಣೆ ಮತ್ತು ಸೂಕ್ತ ಮಾರ್ಗದರ್ಶನ ಇಲ್ಲದೆಹೋಗಿದ್ದರೆ ಇ?ಲ್ಲ ಸಾಧ್ಯವಾಗುತ್ತಿರಲಿಲ್ಲ’ ಎಂದು ರೆಡ್ಡಿ ಹಾಗೂ ಗಿರೀಶ್ ನೆನಪಿಸಿಕೊಳ್ಳುತ್ತಾರೆ.
ಆದರೆ, ಪಾವಗಡದ ಸಾಕಲುಕುಂಟ ಕೆರೆಯ ಪುನಶ್ಚೇತನ ಕಾರ್ಯದಲ್ಲಿ ಆಗಬೇಕಾದ್ದು ಬಹಳಷ್ಟಿದೆ. ಜನಜಾಗೃತಿಯ ಕೊರತೆ ಇನ್ನೂ ಇದೆ. ರೆಡ್ಡಿ ಹಾಗೂ ಗಿರೀಶ್ ಅವರಿಗೆ ಬೆಂಬಲವಾಗಿ ಹೆಚ್ಚು ಹೆಚ್ಚು ಯುವಕರು ಮುಂದೆ ಬರಬೇಕಾದ ಆವಶ್ಯಕತೆಯಿದೆ.
ಸಿ.ವಿ. ಶೇಷಾದ್ರಿ , ಹೊಳವನಹಳ್ಳಿ