ಎಷ್ಟು ಹೊತ್ತಿನ ಬಳಿಕ ತಟ್ಟನೆ ಎಚ್ಚರವಾಯಿತು. ಬೆಂಕಿಯತ್ತ ನೋಡಿದ. ಉರಿದ ಕೊಳ್ಳಿಗಳು ತೆಳುವಾಗಿ ಬೂದಿಯನ್ನು ತಮ್ಮ ಮೇಲೆ ಹೊದೆದುಕೊಂಡು ಮೃದು ಶಾಖ ಬೀರುತ್ತಿದ್ದವು. ಕೊಳ್ಳಿಗಳನ್ನು ನಿಧಾನವಾಗಿ ಕೊಡಹಿ ನುರಿದ. ಬೂದಿ ಮುಚ್ಚಿದ ಕೆಂಡ ಎಂದರೆ ಇದೇ ಎಂದುಕೊಳ್ಳುತ್ತ ಅರ್ಧ ಸುಟ್ಟ ಕಟ್ಟಿಗೆಗಳನ್ನು ಬೆಂಕಿಯತ್ತ ಸರಿಸಿ ಉರಿಸಿ ತಣ್ಣಗಾಗುತ್ತಿದ್ದ ಕೈಯನ್ನು ಕಾಯಿಸಿಕೊಂಡ. ಕಾಯಿಸಿಕೊಳ್ಳುತ್ತಲೆ ಸುತ್ತ ನೋಡಿದರೆ ಶ್ಯಾಮಭಟ್ಟನಿಲ್ಲ. `ಯಾರದು?’ ಪ್ರಶ್ನೆ ಎಲ್ಲಿಂದ ಬಂತೆಂದು ಭಾಸ್ಕರ ಸುತ್ತ ತಿರುಗಿ ನೋಡಿದ. ರೊಂಯ್ಯನೆ ಬೀಸುವ ಗಾಳಿಯಿಂದ ಅಲುಗುವ ಟೊಂಗೆ, ಎಲೆಗಳಿಂದಾಗಿ ಬರುವ […]
ಪರಾವರ್ತನ
Month : January-2018 Episode : Author :