ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಸಂವಹನಕ್ಕೆ ಆಲಿಸುವಿಕೆ ಬಹಳ ಮುಖ್ಯ

ಸಂವಹನಕ್ಕೆ ಆಲಿಸುವಿಕೆ ಬಹಳ ಮುಖ್ಯ

ಇಲ್ಲಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಪ್ರಶಸ್ತಿ ಪಡೆದಿರುವುದು ಸಂತೋಷದ ವಿಷಯ. ಹಿಂದೆ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ಗಳಲ್ಲಿ ಒಂದು ಭಾಷೆ, ಲಾಂಗ್ವೇಜ್ ವಿಷಯ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್‌ನಲ್ಲಿ ಲಾಂಗ್ವೇಜ್ ಬೇಕಾಗಿಲ್ಲ ಎಂದಾಗಿಬಿಟ್ಟಿದೆ. ಅಲ್ಲಿ ಬೇಕಾಗಿರುವುದು ಬೇರೆಯೇ. ಅಲ್ಲಿ ಒಬ್ಬ ಮನುಷ್ಯನನ್ನು ಅಥವಾ ಒಬ್ಬ ವ್ಯಕ್ತಿಯನ್ನು ಯಂತ್ರವನ್ನಾಗಿಯೇ ನೋಡುವಂತಹ ಒಂದು ಸನ್ನಿವೇಶವಿದೆ. ಇಲ್ಲಿ ಇದಕ್ಕೆ ಅಪವಾದ ಎಂದು ಕಾಣಿಸಿತು.

`ಉತ್ಥಾನ’ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ಧ “ಸ್ವಾತಂತ್ರ್ಯದ ನಾಳೆಗಳು : ಕಾಲೇಜಿನ ಒಳಗೆ-ಹೊರಗೆ” ಎಂಬ ವಿಷಯದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ’ಜ್ಞಾನ ಆಯೋಗ’ದ ಪ್ರಮುಖರಲ್ಲೊಬ್ಬರಾಗಿ ಕಾರ್ಯನಿರ್ವಹಿಸಿದ್ದ ಪ್ರೊ. ಎಂ.ಕೆ. ಶ್ರೀಧರ್ ಅವರ ಸಮಾರೋಪ ಭಾಷಣ

ನಾವು ಪ್ರಬಂಧವನ್ನು ಬರೆದು, ಮಂಡನೆ ಮಾಡಿ ಬಹುಮಾನವನ್ನೂ ತೆಗೆದುಕೊಂಡಿದ್ದೇವೆ. ಸಂವಹನ(Communication)ದ ಕೆಲಸದಲ್ಲಿ ತೊಡಗಿರುವ ನಾವೆಲ್ಲರೂ ಎರಡು ಭಾಗಗಳನ್ನು ಈಗಾಗಲೇ ಮುಟ್ಟಿದ್ದೇವೆ – ಬರವಣಿಗೆ ಮತ್ತು ಮಂಡನೆ (Presentation). ಈ ಸಂವಹನ ಪೂರ್ಣವಾಗಲು ಮಂಡನೆ, ಬರವಣಿಗೆಗಿಂತ ಮುಖ್ಯವಾದ ಇನ್ನೊಂದು ಭಾಗದ ಅಗತ್ಯವಿದೆ. ಅದು ಕೇಳುವುದು, ಆಲಿಸುವುದು. ಹಿಯರಿಂಗ್ ಮತ್ತು ಲಿಸನಿಂಗ್ ಎಂಬ ಎರಡು ಭಾಗವಿದೆ. ಕೇಳುವುದು ಕಿವಿಗಳಲ್ಲಾದರೆ ಆಲಿಸುವುದು ಹೃದಯದಲ್ಲಾಗುತ್ತದೆ. ಅದಕ್ಕಾಗಿಯೇ ದೇವರು ಎರಡು ಕಿವಿ ಮತ್ತು ಒಂದು ಬಾಯಿ ಕೊಟ್ಟಿದ್ದಾನೆ! ಯಾಕೆಂದರೆ ಆಲಿಸುವುದು ಹೆಚ್ಚಾಗಬೇಕು, ಮಾತಾಡುವುದು ಕಡಮೆಯಾಗಬೇಕು ಎಂದು. ನಾವು ಬರೆಯಲು, ಮಂಡನೆ ಅಥವಾ ಮಾತನಾಡಲು ಬಹಳ ಮುಖ್ಯವಾದ ಫೀಡ್‌ಬ್ಯಾಕ್ ಸಿಗುವುದು ಆಲಿಸುವುದರಿಂದ. ನಾನು ಏನು, ಯಾವ ವಿಷಯ, ಹೇಗೆ, ಯಾರಿಗೋಸ್ಕರ ಬರೆಯಬೇಕು, ಮಾತನಾಡಬೇಕು ಅಥವಾ ಮಂಡನೆ ಮಾಡಬೇಕು ಇವೆಲ್ಲವೂ ನಮಗೆ ಆಲಿಸುವುದರಿಂದ ಅಂದಾಜಾಗುತ್ತದೆ. ಆಲಿಸುವುದು ಎಂದರೆ ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳುವುದಷ್ಟೇ ಅಲ್ಲ. ನೋಡಿ ಅರ್ಥಮಾಡಿಕೊಳ್ಳುವುದೂ ಕೂಡಾ ಆಲಿಸುವಿಕೆಯೇ. ಉದಾಹರಣೆಗೆ ದಿನೇಶ್ ಹೆಗ್ಡೆ ಅವರು ಒಂದು ನಾಯಿಯ ಘಟನೆಯನ್ನು ಹೇಳಿದರು. ಒಂದು ಘಟನೆ ನಡೆಯುತ್ತದೆ, Incident is speaking. ಅದನ್ನು ಯಾರೋ ಬರೆಯಬಹುದು. ಆದರೆ ದಿನೇಶ್ ಅವರು ಮಾಡಿದ್ದು ಬರವಣಿಗೆಯೂ ಅಲ್ಲ  Speaking. ಅಥವಾ ಮಂಡನೆಯೂ ಅಲ್ಲ. ಅವರು ಮಾಡಿದ್ದು ಲಿಸನಿಂಗ್ (ಆಲಿಸಿದ್ದು). ಘಟನೆಯನ್ನು ನೋಡಿ, ಅದರಲ್ಲಿ ಏನಿದೆ ಎಂದು ಅರ್ಥ ಮಾಡಿಕೊಂಡರು. ಅದಕ್ಕೆ ಒಂದು ರೂಪ ಸಿಗುವುದು ಬರವಣಿಗೆ ಅಥವಾ ಮಾತನಾಡುವ ಮೂಲಕ. ಹೀಗಾಗಿ ಸಂವಹನ ಎಂಬ ಪ್ರಕ್ರಿಯೆಯಲ್ಲಿ ಬಹಳ ಮುಖ್ಯವಾದುದು ಆಲಿಸುವುದು. ಜಗತ್ತಿನಲ್ಲಿ ಎಲ್ಲ ಸಂವಹನದ ತರಬೇತಿಯಲ್ಲಿ ಮುಖ್ಯವಾಗಿ ನಡೆಯುವುದು ಈ ಆಲಿಸುವುದು.

ತೀರ್ಪುಗಾರರ ಅಭಿಮತ

ನಾವು ಯಾವ ವಿಷಯದ ಬಗೆಗೆ ಬರೆಯುತ್ತೇವೆ? ಯಾರಿಗೋಸ್ಕರ ಬರೆಯುತ್ತೇವೆ? ಹೇಗೆ ಬರೆಯುತ್ತೇವೆ? ಎಷ್ಟರಮಟ್ಟಿಗೆ ಬರೆಯುತ್ತೇವೆ? ಯಾವಾಗ ಬರೆಯುತ್ತೇವೆ? ಹಾಗೆಯೇ ಮಂಡನೆ ಮಾಡುತ್ತೇವೆ. ಪವರ್‌ಪಾಯಿಂಟ್‌ನಲ್ಲಿ ಬುಲೆಟ್ ಪಾಯಿಂಟ್ ರೂಪದಲ್ಲಿರಬೇಕೇ, ಪ್ಯಾರಾಗ್ರಾಫ್ ಅಥವಾ ವಾಕ್ಯಗಳ ರೂಪದಲ್ಲಿರಬೇಕೆ? ಸ್ಲೈಡ್‌ನಲ್ಲಿ ಎಷ್ಟು ವಾಕ್ಯಗಳಿರಬೇಕು, ಒಂದು ವಾಕ್ಯದಲ್ಲಿ ಎಷ್ಟು ಪದಗಳಿರಬೇಕು, ಎಷ್ಟು ಅನಿಮೇಷನ್ ಗಮನಿಸಬೇಕು. ಈ ರೀತಿಯ ಸಾಕಷ್ಟು ಅಂಶಗಳಿವೆ. ಆಲಿಸುವಂತದ್ದು ಚೆನ್ನಾಗಿ ಆದರೆ ಇವೆಲ್ಲವೂ ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಸಂವಹನ ಪರಿಣಾಮಕಾರಿಯಾಗಲು ಆಲಿಸುವುದು ಬಹಳ ಮುಖ್ಯ. ಆಲಿಸುವುದು ಹೆಚ್ಚಾದಂತೆ ನಮ್ಮ ಸಂವಹನ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಸಮಾಜ, ಜನರು, ಅವರ ಸಮಸ್ಯೆ, ಸವಾಲುಗಳು ಇವುಗಳ ಬಗ್ಗೆ ನಾವು ಎಷ್ಟು ಆಲಿಸುತ್ತೇವೆ ಎನ್ನುವುದು ನಮ್ಮ ಸಂವಹನದ ಮಟ್ಟವನ್ನು ನಿರ್ಧರಿಸುತ್ತದೆ.

ತೀರ್ಪುಗಾರರ ಅಭಿಮತ

ಇಂದಿನ ಯುವಜನಾಂಗ ಮೊಬೈಲ್‌ನಲ್ಲಿ ಸುತ್ತುತ್ತಾ ತನ್ನ ಆತ್ಮಶಕ್ತಿಯನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳ ನಾಳೆಗಳನ್ನು ರೂಪಿಸುವ ಕ್ಯಾಂಪಸ್‌ಗಳು ಹೇಗಿವೆ ಎಂಬ ಒಂದು ಸಣ್ಣ ಆತ್ಮಾವಲೋಕನ ಈ ಪ್ರಬಂಧಗಳಲ್ಲಿ ಇವೆ. ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಯುವಪೀಳಿಗೆಯನ್ನು ಇಂದಿನ ಕ್ಯಾಂಪಸ್‌ಗಳು ನಿಜವಾಗಿಯೂ ರೂಪಿಸುತ್ತಿವೆಯೇ? ಎಂಬ ಪ್ರಶ್ನೆ ಮೂಡುವುದು ಅತ್ಯಂತ ಸಹಜವಾಗಿದೆ. ವಿವೇಕಾನಂದರು ಹೇಳಿದ ಅಂಕಪಟ್ಟಿಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಕ್ಯಾಂಪಸ್‌ಗಳು ಇನ್ನೂ ಹಾಗೇ ಇವೆಯೇ ಎಂಬ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳ ಈ ಪ್ರಬಂಧಗಳ ಮೂಲಕ ನಡೆಸಿರುವುದು ಈ ಸ್ಪರ್ಧೆಯ ನಿಜವಾದ ಸಾರ್ಥಕತೆಯನ್ನು ಹೇಳುತ್ತದೆ. ಯುವಶಕ್ತಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ವಿಶ್ವಮಂಗಲದ ಭವಿಷ್ಯವನ್ನು ರೂಪಿಸುವ ಯುವಶಕ್ತಿ ಹೇಗೆ ತಯಾರಾಗುತ್ತಿದ್ದಾರೆ? ಕ್ಯಾಂಪಸ್‌ಗಳು ದೇಶಭಕ್ತಿ, ಪರಿಶ್ರಮ, ನಿರ್ಭಯತೆ, ಸ್ವಾಭಿಮಾನ, ಸಾಮಾಜಿಕ ಕಳಕಳಿಯ ಗುಣಗಳನ್ನು ಬೆಳೆಸುತ್ತಿವೆಯೇ ಎಂಬ ಅವಲೋಕನ ಈ ಸ್ಪರ್ಧೆಯಲ್ಲಿ ಬಂದಿದ್ದ ಪ್ರಬಂಧಗಳಲ್ಲಿ ಎದ್ದು ಕಾಣುತ್ತದೆ. ಕೆಲವು ಪ್ರಬಂಧಗಳಲ್ಲಿ ವಿಷಯದ ವಸ್ತುನಿಷ್ಠತೆ ಭಾಷಣಗಳಾಗಿ ಹರಿದಿದೆ. ವಿಷಯದ ಚೌಕಟ್ಟು, ವಸ್ತುನಿಷ್ಠತೆ, ಹೊರ ಆಲೋಚನೆ, ಬರವಣಿಗೆಯ ಶೈಲಿ ಇನ್ನೂ ಸುಧಾರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಪ್ರಬಂಧ ಬರವಣಿಗೆಯ ಪ್ರಸಿದ್ಧ ಲೇಖಕರಾದ ಸಿದ್ದನವಳ್ಳಿ ಕೃ?ಶರ್ಮ, ಬಿ. ಸೀತಾರಾಮಯ್ಯ, ಎ.ಎನ್. ಮೂರ್ತಿರಾವ್, ಅ.ರಾ. ಮಿತ್ರ ಮುಂತಾದವರ ಪ್ರಬಂಧಗಳನ್ನು ಅಧ್ಯಯನ ಮಾಡಿದರೆ ಅವುಗಳು ಈ ಪ್ರಕಾರದ ಬರವಣಿಗೆಗೆ ಹೊಸ ದೃಷ್ಟಿಯನ್ನು ನೀಡುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಅಭಿನಂದನೆಗಳು. ಈ ಸ್ಪರ್ಧೆ ಅವರ ಮುಂದಿನ ಸ್ಪರ್ಧಾ ಬರವಣಿಗೆಗಳಿಗೆ ಶಕ್ತಿ ಮತ್ತು ಪ್ರೇರಣೆಯನ್ನು ನೀಡಲಿ.
– ಡಾ. ಕೆ. ರಾಜೀವಲೋಚನ, ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥರು, ಚಿತ್ರದುರ್ಗ

ಎರಡನೆಯದು, ಈ ಸಂವಹನ ಯಾವುದಕ್ಕೋಸ್ಕರ? ನಮಗೆಲ್ಲ ಉತ್ಥಾನದಲ್ಲಿ ಬಹುಮಾನ ಬಂದಿದೆ. ನಾಳೆ ಬೇರೆ ಕಡೆಗಳಲ್ಲಿ, ಬೇರೆ ಹಂತಗಳಲ್ಲಿ ಬರಬಹುದು. ಎಷ್ಟು ಚೆನ್ನಾಗಿ ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವುದರ ಮೇಲೆ ಇದನ್ನು ಗಳಿಸಿದ್ದೀರಿ. ನಮ್ಮ ಸಂವಹನ ಚೆನ್ನಾಗಿ ಬರೆಯುವುದು ಮತ್ತು ಮಾತನಾಡುವುದಕ್ಕೆ ಮುಕ್ತಾಯವಾಯಿತೆ? ಯೂಟ್ಯೂಬ್‌ನಲ್ಲಿ ಮಾರ್ಟಿನ್ ಲೂಥರ್‌ಕಿಂಗ್‌ನಿಂದ ಇತ್ತೀಚಿನ ಸಚಿನ್‌ರವರೆಗೂ ಸಾವಿರಾರು ಮಂದಿಯ ಹಿಸ್ಟಾರಿಕ್ ಸ್ಪೀಚಸ್‌ಗಳನ್ನು ಕೇಳಬಹುದು, ನೋಡಬಹುದು. ಆದರೆ ಈ ಸಂವಹನದಲ್ಲಿ ಬಹಳ ಮುಖ್ಯವಾಗಿ ಬೇಕಾಗಿರುವುದು ಈ ಸಂವಹನ ಯಾವುದಕ್ಕೋಸ್ಕರ, ಅದರ ಉದ್ದೇಶ ಏನು? ಎಂಬುದು. ಈ ಅರಿವು ಮೂಡಿಸಿಕೊಳ್ಳಲು ಉತ್ಥಾನ ಪತ್ರಿಕೆ ನಮಗೆ ಒಂದು ವೇದಿಕೆಯನ್ನು ಒದಗಿಸಿದೆ. ಚೆನ್ನಾಗಿ ಬರೆಯುವವರಿಗೆ ಒಂದು ವೇದಿಕೆ ಕೊಡುವ ಜೊತೆಗೆ ಯಾವ ಉದ್ದೇಶಕ್ಕೋಸ್ಕರ ಇದನ್ನು ಮಾಡುತ್ತಿದ್ದೇವೆ ಎನ್ನುವ ಅರಿವು ಮೂಡಿಸುವ ಪ್ರಯತ್ನವೂ ನಡೆದಿದೆ. ಉತ್ಥಾನದಂತಹ ಒಂದು ಪತ್ರಿಕೆಯನ್ನು ನಡೆಸುವುದು ಸುಲಭದ ಮಾತಲ್ಲ. ಸಾಮಾನ್ಯ ಪತ್ರಿಕೆ ನಡೆಸಬೇಕಾದರೇ ಎದುರಾಗುವ ಎಡವಟ್ಟುಗಳು, ತೊಂದರೆಗಳು ನಮಗೆ ಗೊತ್ತಿದೆ, ಆದರೆ ಒಂದು ವಿಚಾರ, ವೈಚಾರಿಕತೆಯನ್ನು ಇಟ್ಟುಕೊಂಡು ಕಳೆದ ೫೦ ವರ್ಷಗಳಿಂದ ಪ್ರಕಟವಾಗುತ್ತಿರುವುದು ಶ್ಲಾಘನೀಯ. ಇಲ್ಲಿ ನಾವು ಕಲಿತ ಈ ಆಲಿಸುವಿಕೆಯ ಮಹತ್ತ್ವವನ್ನು ಗಮನದಲ್ಲಿಟ್ಟುಕೊಂಡು ಮುಂದುವರಿದು ನಮ್ಮ ಉದ್ದೇಶವನ್ನು ಸಫಲಮಾಡುವ ಪ್ರಯತ್ನ ಮಾಡೋಣ.
ಸಾಮಾನ್ಯವಾಗಿ ಕಾಲೇಜಿನಲ್ಲಿ ಬಹಳ ಭಾ?ಣಗಾರರಿಗೆ, ಬರೆಯುವವರಿಗೆ ವಿಶಿಷ್ಟ ಸ್ಥಾನವಿರುತ್ತದೆ. ಬಳಸುವ ಕನ್ನಡ, ಹೊಸಪದಗಳ ಬಳಕೆ, ವಾಕ್ಯರಚನೆ, ಚಿಕ್ಕ ವಿಷಯವನ್ನೂ ಅರ್ಥವತ್ತಾಗಿ ಹೇಳುವವರ ಬಗೆಗೆ ಅವರಿಗೆ ಬೇರೆಯದೇ ಕಲ್ಪನೆಗಳಿರುತ್ತವೆ. ನಮ್ಮ ಬರವಣಿಗೆ, ಮಾತುಕತೆಗಳು ಸಮಾಜದ ಮೇಲೆ ಪ್ರಭಾವ ಬೀರಬೇಕಾದರೆ, ಸಮಾಜದಲ್ಲಿ ಒಂದು ಸಣ್ಣಪುಟ್ಟ ಬದಲಾವಣೆ ಬರಬೇಕಾದರೆ ನಾವು ಸಾಮಾಜಿಕ ಸಂವೇದನೆ ಹಾಗೂ ಅಲ್ಲಿ ನಡೆಯುವ ಘಟನೆಗಳನ್ನು ಸೂಕ್ಷ್ಮತೆಯಿಂದ ಆಲಿಸುವ ಅಗತ್ಯವಿದೆ. ಹೀಗೆ ನಮ್ಮ ಪ್ರತಿಭೆಯನ್ನು ಸಮಾಜದ ನಾಲ್ಕು ಜನರಿಗೆ ಒಳ್ಳೆಯದಾಗಲು ಹೇಗೆ ಬಳಸಬಹುದು ಎನ್ನುವುದನ್ನು ಯೋಚಿಸೋಣ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ