ಪ್ರಿಯ ಯಾತ್ರಿಕನೆ,
ನೋಡಿದೆಯಾ ಆ ದಿವ್ಯ ಭವ್ಯ ಮೂರ್ತಿಯನ್ನು? ತೃಪ್ತಿಯಾಯ್ತೆ? ಆಗಲಿಲ್ಲವೆ? ಹೇಗೆ ತೃಪ್ತಿ ಆದೀತು! ನೀನು ಇನ್ನೂ ಆ ಮೂರ್ತಿಯನ್ನು ಸರಿಯಾಗಿ ನೋಡಿಯೇ ಇಲ್ಲವಲ್ಲ!
ಆ ದಿವ್ಯಮೂರ್ತಿಯ ರೂಪ ಕ್ಷಣಕ್ಷಣವೂ ಬದಲಾಗುವುದನ್ನು ನಾನು ಕಂಡಿದ್ದೇನೆ; ಪ್ರತಿಕ್ಷಣವೂ ಆ ಭವ್ಯಮೂರುತಿಯಲ್ಲಿ ಹೊಸ ಚೈತನ್ಯ ಉಕ್ಕಿಹರಿಯುವುದನ್ನು ಕಂಡು ಪುಳಕಿತನಾಗಿದ್ದೇನೆ. ಇಂತಹ ಭವ್ಯ ತೇಜಸ್ಸಿನ ಮೂರ್ತಿಯನ್ನು ಕಂಡು ತೃಪ್ತಿಯಾಗಿದೆ ಎಂದು ಹೇಳಲಾದೀತೆ? ಅಷ್ಟಕ್ಕೂ ನೀನೊಬ್ಬ ಯಾತ್ರಾರ್ಥಿ. ಹೀಗೆ ಬಂದು ಹಾಗೆ ಹೋಗುವ ನೀನು ಇಲ್ಲಿ ಬಂದು ಎಷ್ಟು ಸಮಯವಾಯ್ತು ಹೇಳು?
ನನ್ನನ್ನು ನೋಡು, ಆ ಭವ್ಯ ದಿವ್ಯ ಭುವನಮೋಹನ ವಿಗ್ರಹವನ್ನು ಸಹಸ್ರ ವರ್ಷಗಳಿಂದ ಗೌರವಿಸುತ್ತಿದ್ದೇನೆ, ಅಂತರಂಗದಲ್ಲೇ ಪೂಜೆ ಸಲ್ಲಿಸುತ್ತಿದ್ದೇನೆ. ಆದರೇನು, ಆ ಮೂರ್ತಿಯ ದರ್ಶನದ ಬಯಕೆ ಅನುಕ್ಷಣವೂ ಹೆಚ್ಚುತ್ತಲೇ ಇದೆ; ಆ ಭೂಮಾತೀತ ಮೂರುತಿಯ ಆಕರ್ಷಣೆ ನಿರಂತರ, ಅನೂಹ್ಯ, ಅನಂತ. ಸಹಸ್ರ ವರ್ಷದ ನನ್ನ ಅನುಭವವೇ ಹೀಗಿರುವಾಗ, ಸಮಯದ ಪರಿಮಿತಿಯೊಳಗಿನ ಆ ಭವ್ಯ ವಿಗ್ರಹದ ನಿನ್ನ ದರ್ಶನಾಭಿಲಾಷೆ ತೃಪ್ತಿಗೊಳ್ಳಬಹುದೆ? ಆ ಮೂರ್ತಿಯ ಮೇಲೆ ನಮ್ಮ ದೃಷ್ಟಿ ಬೀಳುತ್ತಲೇ ಹೃದಯದಲ್ಲಿ ಅನುರಣಿತವಾಗುವ ಭಕ್ತಿ ಚಿತ್ರಕಾರ ಬಿಡಿಸುವ ಚಿತ್ರದಂತೆ ಮನಸ್ಸಿನ ಭಿತ್ತಿಯೊಳಗೆ ಅಚ್ಚೊತ್ತಿ ಮೂಡಿ ಬಗೆಬಗೆಯ ವರ್ಣಗಳಿಂದ ಅಲಂಕೃತವಾಗಿಬಿಡುತ್ತದೆ.
ನೋಡು, ನನ್ನೆದುರಿಗಿರುವ ವಿಂದ್ಯಗಿರಿಯ ಮೇಲೆ ದಿಟ್ಟವಾಗಿ ನಿಂತ ಆ ಬಾಹುಬಲಿಯ ಮೂರ್ತಿಯು ಭೂಮ್ಯಾಕಾಶವನ್ನೆಲ್ಲ ಆವರಿಸಿ ನಿಂತ ಹಾಗೆ ತೋರುತ್ತಿದೆ. ಈ ಸಂಸಾರದ ದ್ವೇಷ, ಆಸೆ, ಅಸೂಯೆ, ಪ್ರೀತಿ, ಎಲ್ಲ ಬಂಧನಗಳನ್ನೂ ಗೆದ್ದ ಆ ಭವ್ಯ ತೇಜಃಪುಂಜ ಮೂರ್ತಿ ಮಾತ್ರ ಮೃದುಲತೆಯಿಂದ ಬಂಧಿಸಿದೆ. ನೋಡಿದೆಯಾ, ಉತ್ತರದಲ್ಲಿ ಹುಟ್ಟಿ ದಕ್ಷಿಣದಲ್ಲಿ ನೆಲೆಯಾದ ಈ ಮೂರ್ತಿಯ ದೃಷ್ಟಿ ಮಾತ್ರ ಸದಾಕಾಲ ಉತ್ತರದೆಡೆಗೇ ಇದೆ.
ಕೇಳು, ಈ ಮೂರ್ತಿಯ ಪಾದಸ್ಪರ್ಶ ಮಾಡುವಾತ ಕೇವಲ ಮನು?ನಾಗುತ್ತಾನೆ. ಅವನ ಜೊತೆಗೆ ಅಂಟಿಕೊಂಡ ಮಾನವಜನ್ಯ ಭೇದಭಾವಗಳೆಲ್ಲ ತೊರೆದುಹೋಗಿ ಕೇವಲ ಮನುಷ್ಯನಾಗಿ ಮಾತ್ರ ಉಳಿದುಬಿಡುತ್ತಾನೆ. ಗೊಮ್ಮಟನ ದರ್ಶನಕ್ಕೆ ಜಾತಿ-ಪಂಥ, ಮೇಲು-ಕೀಳು, ಬಡವ-ಬಲ್ಲಿದನೆಂಬ ಭೇದಭಾವವೆಂಬುದಿಲ್ಲ. ಯಾಕೆನ್ನುವಿಯಾ? ಆತ ಒಂದು ಕುಲದ ಒಂದು ನೆಲದ ದೇವರಲ್ಲ; ಆತ ಮಾನವಕುಲದ ಭಗವಂತ, ಎಲ್ಲರ ಸ್ವಾಮಿ. ಎಲ್ಲರೂ ಆತನ ಭಕ್ತರೇ. ಕಂಡೆಯಾ, ಇಲ್ಲಿ ಆ ಗೊಮ್ಮಟ ಜನಮಾನಸದ ಭಗವಂತನಾಗಿ ಮಾತ್ರ ಆರಾಧಿಸಲ್ಪಡುತ್ತಾನೆ.
ನೀನು ಗಮನಿಸಿದ್ದೀಯಾ, ಕಾಮದೇವನೆನಿಸಿಯೂ, ನಿ?ಮ ವಿರಕ್ತ ವೈರಾಗ್ಯದಿಂದ ಅಲಂಕರಿಸಿಕೊಂಡು ಪೂರ್ಣಕಾಮನಾಗಿದ್ದಾನೆ. ಪುರಾಣಪುರುಷನಾಗಿಯೂ ಈ ಭವ್ಯ ವಿಗ್ರಹದಲ್ಲಿ ಚಿರನೂತನನಾಗಿದ್ದಾನೆ. ವಜ್ರಪುರು?ನಂತೆ ಕಠೋರನಾಗಿಯೂ ಹೂವಿನಂತೆ ಮೃದುವಾಗಿದ್ದಾನೆ. ಅಜೇಯನಾಗಿ ಶಕ್ತಿವಂತನಾಗಿದ್ದರೂ ಕರುಣೆ, ದಯೆ ತುಂಬಿತುಳುಕುವ ಸ್ವಾಮಿಯಾಗಿದ್ದಾನೆ. ನಿತ್ಯನೂತನ ಆಕರ್ಷಣೆಯಿಂದೊಡಗೂಡಿದ ಆ ಸೌಂದರ್ಯ ನೋಡುಗನನ್ನು ತನ್ನೊಳಗೆ ಬಂಧಿಸಿಬಿಡುತ್ತದೆ.
ಯಾತ್ರಾರ್ಥಿಯೆ, ಕೇಳು. ಜಡ ಚೇತನಗಳೂ, ಪ್ರಕೃತಿ ಪುರುಷವೂ ಈ ಮಹಾಮಹಿಮನ ಕೃಪಾದೃಷ್ಟಿಯಿಂದಲೇ ಪೋಷಿತವಾಗಿವೆ. ಇಂದ್ರಧನುಷ ಆತನ ದಿವ್ಯಪ್ರಭಾವಳಿಯಾಗುತ್ತದೆ. ಮೇಘಮಾಲೆಯು ಆತನಿಗೆ ಸದಾ ಮಸ್ತಕಾಭಿಷೇಕ ಮಾಡುತ್ತದೆ; ಗಾಳಿಯು ಸಂಚರಿಸುತ್ತ ವಿಗ್ರಹದ ಪಾದಕ್ಕೆ ನಮಸ್ಕರಿಸುತ್ತದೆ; ಮಿಂಚು ಆರತಿ ಎತ್ತುತ್ತದೆ; ನಕ್ಷತ್ರ ನಿರಂತರ ಸುತ್ತುತ್ತ ಮೂರ್ತಿಯನ್ನು ಪ್ರಕಾಶಿತಗೊಳಿಸುತ್ತದೆ; ದೇವಗಣಗಳೆಲ್ಲವೂ ಸ್ವರ್ಗದಲ್ಲೇ ಕುಳಿತು ಈ ದಿವ್ಯಮೂರ್ತಿಯ ದರ್ಶನ ಪಡೆಯುತ್ತಾರೆ.
ಧೂಳಾಗಲಿ, ಧೂಮವಾಗಲಿ ಈ ನಿತ್ಯನಿರಂಜನ ಕಾಯವನ್ನು ಮಲಿನಗೊಳಿಸಲಾರದು. ಪಶ್ಚಿಮದ ಸಮುದ್ರದ ಗಾಳಿ ಕೂಡ ಈ ನಿರ್ಲೇಪವನ್ನು ತನ್ನ ರೂಪ ರಸ ಗಂಧಗಳಿಂದ ಪ್ರಭಾವಿಸಲಾರದು. ಪಕ್ಷಿಗಳು ಈ ವಿಗ್ರಹಕ್ಕೆ ಅಗೌರವ ತೋರಲಾರವು.
ಮಹಾಯೋಗಿಯಂತೆ ಅಖಂಡ ಏಕಾಗ್ರತೆಯಿಂದ ಮಂಡಿತನಾದ ಗೊಮ್ಮಟನ ಮುಖದಲ್ಲಿ ಬಾಲಸಹಜ ನಗು ಸದಾ ಶೋಭಿಸುತ್ತದೆ. ಅನಂತ ಮೌನದಲ್ಲಿ ಲೀನನಾದ ಆತ ಇಲ್ಲಿ ಮಾತ್ರ ಜೀವಂತ ಪ್ರತಿಮೆಯಾಗಿ ಪ್ರತಿಕ್ಷಣವೂ ಭಕ್ತರಿಗೆ ಅಭಯಪ್ರದಾನ ಮಾಡುತ್ತ ಮೌನವನ್ನು ಮೀರಿ ಮಾತನಾಡುವನೋ ಎಂಬಂತೆ ತೋರುತ್ತಿದೆ.
ಯಾತ್ರಿಯೇ, ಈಗ ನಾನು ಹೇಳುತ್ತಿರುವುದಕ್ಕೆ ಸಹಸ್ರ ವ?ಗಳಿಂದ ವಿಗ್ರಹವನ್ನೇ ನೋಡುತ್ತ ಇಂಚಿಂಚಾಗಿ ಬೆಳೆದ ನಾನೇ ಸಾಕ್ಷಿ. ತ್ರೈಲೋಕ್ಯನಾಥನ ಜಗತ್ಪ್ರಸಿದ್ಧ ಮಹಿಮೆಯೂ, ಪ್ರತಿಷ್ಠೆಯೂ ಸಹಸ್ರ ವರ್ಷಗಳಿಂದ ಬೆಳಗುತ್ತಿದೆ, ಇನ್ನೂ ಸಹಸ್ರಾರು ವ?ಗಳವರೆಗೂ ಹೀಗೆಯೇ ಬೆಳಗುತ್ತಿರುತ್ತದೆ. ಈಗ ನೀನೇ ಹೇಳು ಓ ಯಾತ್ರಿ, ಇಂತಹ ಮನಮೋಹಕ ವಿಗ್ರಹವನ್ನು ಎಷ್ಟು ದೃಷ್ಟಿಸಿದರೂ ಬಯಕೆ ತಣಿಯದು, ಅಲ್ಲವೆ? ನೂರು ಜನ್ಮ ಎತ್ತಿ ಈ ಮೂರ್ತಿಯನ್ನು ಕಣ್ಣು ತುಂಬಿಕೊಂಡರೂ, ಇನ್ನೂ ನೋಡಬೇಕೆಂಬ ಆಸೆ ಬೆಳೆಯುತ್ತದೆಯೇ ವಿನಾ ಕುಂದಲಾರದು.
ಯಾತ್ರಿಯೇ, ಯಾವಾಗಲೂ ಭಗವಂತನ ಜನನಕಾಲದ ರೂಪದ ಆಕರ್ಷಣೆಯು ದೇವೇಂದ್ರನನ್ನೂ ಸಹ ವಿಹ್ವಲಗೊಳಿಸುತ್ತದೆ ಎಂದು ನಾನು ನನ್ನ ಚಿಕ್ಕಂದಿನಿಂದಲೂ ಕೇಳುತ್ತ ಬಂದಿದ್ದೇನೆ. ದೇವೇಂದ್ರನು ಸಹಸ್ರ ಕಣ್ಣುಗಳನ್ನು ಧರಿಸಿ ಆ ರೂಪವನ್ನು ಆಸ್ವಾದಿಸುವನಂತೆ; ಆದರೂ ಅತೃಪ್ತತೆ ಅವನನ್ನು ಕಾಡುವುದಂತೆ. ತೀರ್ಥಂಕರರ ಇಂತಹ ರೂಪಗಳನ್ನು ನೋಡಿ ತಣಿಯುವ ಭಾಗ್ಯ ನನ್ನದಾಗಲಿಲ್ಲವಲ್ಲ ಎಂಬ ಕೊರಗಿದೆ ನನಗೆ. ಆದರೂ ಗೊಮ್ಮಟನ ನಯನಮನೋಹರ ಚಿತ್ರವು ಸದಾ ನನ್ನ ಮುಂದೆ ಇರುವುದೆಂಬುದೇ ನನ್ನ ಸೌಭಾಗ್ಯ. ನಿತ್ಯ ದರ್ಶನದಿಂದ ಧನ್ಯನಾಗಿದ್ದೇನೆ.
ನನ್ನ ಆಸೆ ನಿನಗೆ ವಿಚಿತ್ರವಾಗಿ ತೋರಬಹುದು. ಒಂದೊಮ್ಮೆ ನಾನು ಇಂದ್ರನಾಗಿದ್ದಿದ್ದರೆ, ಸಹಸ್ರ ಕಣ್ಣುಗಳನ್ನು ಧರಿಸಿ ಈ ದಿವ್ಯರೂಪವನ್ನು ಆಸ್ವಾದಿಸಿ ತೃಪ್ತನಾಗಲು ಒಂದು ಪ್ರಯಾಸವನ್ನಂತೂ ಮಾಡುತ್ತಿದ್ದೆ. ಇಂದ್ರ ತನ್ನ ಸಹಜ ಚರ್ಮಚಕ್ಷುವಿನಿಂದ ಏನನ್ನು ಪಡೆಯಲು ಯತ್ನಿಸಿದನೋ, ಅದನ್ನು ನಾನು ನನ್ನ ಅಂತಶ್ಚಕ್ಷುವಿನಿಂದ ಸಹಸ್ರ ವ?ಗಳಿಂದ ಹೊಂದುತ್ತ, ನನ್ನ ದರ್ಶನದ ಅದಮ್ಯ ಆಸೆಯನ್ನು ತಣಿಸಿಕೊಳ್ಳುತ್ತಿದ್ದೇನೆ; ಸಹಸ್ರಾರು ವ?ಗಳವರೆಗೂ ಹೊಂದುತ್ತಲೇ ಇರುತ್ತೇನೆ; ನನಗೆ ಈಗ ಸಿಕ್ಕಿರುವ ಈ ಸೌಭಾಗ್ಯಕ್ಕಾಗಿ ಹೆಮ್ಮೆಯಿದೆ, ಕೃತಜ್ಞತೆಯಿದೆ.
ಹಿಂದೀ ಮೂಲ: ’ಗೊಮ್ಮಟೇಶ ಗಾಥಾ