ನಮ್ಮ ರೈತರ ಸಮಸ್ಯೆ ಎಷ್ಟೊಂದು ಗಂಭೀರವಾಗಿದ್ದರೂ ನಮ್ಮ ಸರ್ಕಾರಗಳು ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅವರ ಆದ್ಯತೆ ಏನಿದ್ದರೂ ಮುಂಬರುವ ಚುನಾವಣೆಗೆ; ತಪ್ಪಿದರೆ ನಗರಕೇಂದ್ರಿತವಾದ ಸಮಸ್ಯೆಗಳಿಗೆ. ಯಾವುದಕ್ಕೆ ಗಮನ ಕೊಡಬೇಕೆಂಬುದನ್ನು ಮಾಧ್ಯಮಗಳು ಹೇಳುತ್ತಿರುತ್ತವೆ; ಅದರಲ್ಲೂ ಮುಖ್ಯವಾಗಿ ಸುದ್ದಿಚಾನೆಲ್‌ಗಳಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಗರದ ಸಮಸ್ಯೆ-ಆವಶ್ಯಕತೆಗಳಾಚೆ ಏನೂ ಕಾಣಿಸುವುದಿಲ್ಲ.
“ಸಾಲಬಾಧೆ ತಾಳಲಾರದೆ ರಾಜ್ಯದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ರೈತ ಲಕ್ಷ್ಮಣ ಶಿವಪ್ಪ ದೊಡ್ಡಮನಿ (೪೧ ವ.) ಎಂಬವರು ಶುಕ್ರವಾರ ರಾತ್ರಿ ವಿ? ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ೨೦ ಎಕ್ರೆ ಜಮೀನಿದ್ದು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ೧೨ ಲಕ್ಷ ರೂ. ಸಾಲವಿತ್ತು.
ಸತತ ಬರಗಾಲದಿಂದ ಕಂಗೆಟ್ಟಿದ್ದ ಅವರು ಸಾಲ ತೀರಿಸಲಾಗದೆ ಮನನೊಂದಿದ್ದರು. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಮಲ್ಲಪ್ಪ ಶಿವಲಿಂಗಪ್ಪ ಕರಿಬಸವನವರ (೬೮) ಎಂಬವರು ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಮೃತರ ಹೆಸರಿನಲ್ಲಿ ೧೧ ಎಕ್ರೆ ಜಮೀನಿದ್ದು, ಕೈಗಡ ಹಾಗೂ ಸಹಕಾರಿ ಬ್ಯಾಂಕಿನಲ್ಲಿ ೪.೮೮ ಲಕ್ಷ ರೂ. ಸಾಲ ಮಾಡಿದ್ದರು. ಇನ್ನು ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿ ಸಾಲಬಾಧೆಯಿಂದ ಹತಾಶರಾಗಿ ಮಾದೇಗೌಡ (೬೮) ಎಂಬವರು ವಿ?ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ೧೧ ಎಕ್ರೆ ಜಮೀನಿದ್ದು ಅದರಲ್ಲಿ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದರು. ಸಹಕಾರಿ ಸಂಘ ಹಾಗೂ ಖಾಸಗಿಯವರಿಂದ ಸುಮಾರು ನಾಲ್ಕು ಲಕ್ಷ ರೂ. ಸಾಲ ಮಾಡಿದ್ದರು; ಕೊಳವೆಬಾವಿಯಲ್ಲಿ ನೀರು ದೊರಕದೆ ಹತಾಶರಾಗಿದ್ದರು. ಈ ಮಧ್ಯೆ ಕಳೆದ ಬುಧವಾರ ವಿ? ಸೇವಿಸಿದ್ದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕೊಡದೂರ ಗ್ರಾಮದ ನಿಂಗಪ್ಪ ಬಸವರಾವ ರಾಜಾಪುರ (೫೦) ಎಂಬವರು ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರಿಗೆ ೨.೩೦ ಎಕ್ರೆ ಜಮೀನಿದ್ದು, ಸುಮಾರು ೨ ಲಕ್ಷ ರೂ. ಸಾಲ ಮಾಡಿದ್ದರು. ಚಿಕ್ಕಮಗಳೂರು ತಾಲೂಕು ಗಂಜಲಗೋಡು ಗ್ರಾಮದ ರೈತ ತಿಮ್ಮೇಗೌಡ (೫೭) ಎಂಬವರು ಕಳೆನಾಶಕ ಸೇವಿಸಿ ಆತ್ಮಹತ್ಯೆ ಎಸಗಿದ್ದಾರೆ. ಅವರಿಗೆ ೭ ಎಕ್ರೆ ಜಮೀನಿದ್ದು, ಶುಂಠಿ, ಭತ್ತ, ಜೋಳ ಬೆಳೆಯಲು ಸುಮಾರು ೮ ಲಕ್ಷ ರೂ. ಸಾಲ ಮಾಡಿದ್ದರು. ಮಳೆಬಾರದೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿ ಮನನೊಂದಿದ್ದರು.”
ಇದು ಕನ್ನಡದ ಒಂದು ಪ್ರಮುಖ ದಿನಪತ್ರಿಕೆಯ ಆಗಸ್ಟ್ ೬, ೨೦೧೭ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ವರದಿ. ದೇಶದ, ಮುಖ್ಯವಾಗಿ ಕರ್ನಾಟಕದ ಸದ್ಯದ ಗ್ರಾಮೀಣ ದಾರುಣ ವಿದ್ಯಮಾನವನ್ನು ಈ ಸುದ್ದಿ ಸಮರ್ಥವಾಗಿ ಚಿತ್ರಿಸುತ್ತದೆ ಎನ್ನಬಹುದು. ಭಾರತದ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಶೋಷಿತರು ಯಾರಾದರೂ ಇದ್ದರೆ ಅದು ನಮ್ಮ ರೈತಾಪಿ ಜನವರ್ಗ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪರಿಸ್ಥಿತಿ ಕರ್ನಾಟಕಕ್ಕೆ ಸೀಮಿತವಾದದ್ದೇನೂ ಅಲ್ಲ. ಪಂಜಾಬಿನಲ್ಲಿ ಈ ವರ್ಷ ಮೊದಲ ಆರು ತಿಂಗಳಲ್ಲಿ ೭೦ ಮಂದಿ ರೈತರು ಆತ್ಮಹತ್ಯೆಗೈದರೆಂದು ವರದಿಯಾಗಿದೆ. ತಮಿಳುನಾಡಿನಲ್ಲಿ ಇದೇ ಅವಧಿಯಲ್ಲಿ ಸುಮಾರು ೧೫೦ ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ರೈತಸಂಘಟನೆಗಳು, ಮಾಧ್ಯಮಗಳು ಹೇಳಿದರೆ ಸರ್ಕಾರದ ಪ್ರಕಾರ ಆತ್ಮಹತ್ಯೆಗೈದ ರೈತರು ೧೭ ಜನ ಮಾತ್ರ. ಏನಿದ್ದರೂ ಈ ಅವಧಿಯಲ್ಲಿ ಕರ್ನಾಟಕ ಪ್ರಸ್ತುತ ವಿ?ಯದಲ್ಲಿ ಪಂಜಾಬ್ ಮತ್ತು ತಮಿಳುನಾಡನ್ನು ಹಿಂದೆ ಹಾಕಿರುವುದು ಸತ್ಯ. ಮಳೆ ಕೈಕೊಟ್ಟು ಬರ ಆವರಿಸಿರುವ ಕಳೆದ ಒಂದೆರಡು ತಿಂಗಳುಗಳಲ್ಲಂತೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಹತಾಶರಾಗಿ ಬದುಕಿಗೆ ವಿದಾಯ ಹೇಳುತ್ತಿದ್ದಾರೆ.
ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ನಮ್ಮ ಸರ್ಕಾರಗಳು ಇದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅವರ ಆದ್ಯತೆ ಏನಿದ್ದರೂ ಮುಂಬರುವ ಚುನಾವಣೆಗೆ; ತಪ್ಪಿದರೆ ನಗರಕೇಂದ್ರಿತವಾದ ಸಮಸ್ಯೆಗಳಿಗೆ. ಯಾವುದಕ್ಕೆ ಗಮನ ಕೊಡಬೇಕೆಂಬುದನ್ನು ಮಾಧ್ಯಮಗಳು ಹೇಳುತ್ತಿರುತ್ತವೆ; ಅದರಲ್ಲೂ ಮುಖ್ಯವಾಗಿ ಸುದ್ದಿ ಚಾನೆಲ್‌ಗಳಿಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ನಗರದ ಸಮಸ್ಯೆ- ಆವಶ್ಯಕತೆಗಳಾಚೆ ಏನೂ ಕಾಣಿಸುವುದಿಲ್ಲ. ಆರಂಭದಲ್ಲಿ ಉಲ್ಲೇಖಿಸಿದ ಐವರು ರೈತರ ಆತ್ಮಹತ್ಯೆಯ ಸುದ್ದಿಯಲ್ಲೂ ಆ ತಾರತಮ್ಯವನ್ನು ಗುರುತಿಸಬಹುದು. ಒಂದು ಕನ್ನಡ ದೈನಿಕ ಇದನ್ನು ಈ ರೀತಿಯಲ್ಲಿ ಪ್ರಕಟಿಸಿದರೆ ಇತರ ಐದು ಪ್ರಮುಖ ಕನ್ನಡ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಸುದ್ದಿಯೇ ಕಾಣಲಿಲ್ಲ. ಚಾನೆಲ್‌ನವರಿಗಂತೂ ರೈತರ ಆತ್ಮಹತ್ಯೆಯು ’ಸುದ್ದಿ’ ಆಗಬೇಕಾದರೆ ಮೃತರ ಸಂಖ್ಯೆ ಐನೂರೋ ಸಾವಿರವೋ ಆಗಬೇಕೋ ಏನೋ! ಆಗ ಈ ಸುದ್ದಿಗೆ ಇಡೀ ಒಂದು ದಿನ ಕೊಡುತ್ತಾರೇನೋ!
ಇರಲಿ; ಕಳೆದ ಕೆಲವು ತಿಂಗಳುಗಳಿಂದ ದೇಶದ ರೈತರು ಸುದ್ದಿಯಲ್ಲಿದ್ದಾರೆ. ತಮಿಳುನಾಡಿನ ರೈತರು ಏಪ್ರಿಲ್-ಮೇ ತಿಂಗಳಲ್ಲಿ ೪೧ ದಿನ ದೇಶದ ರಾಜಧಾನಿಯ ಜಂತರ್‌ಮಂತರ್‌ನಲ್ಲಿ ಧರಣಿ ಕುಳಿತು ಮತ್ತು ಬಗೆಬಗೆಯ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದರು. ಜೂನ್ ೬ರಂದು ಮಧ್ಯಪ್ರದೇಶದ ಮಾಂಡ್ಸೋರ್‌ನಲ್ಲಿ ರೈತರ ಹೋರಾಟ ತೀವ್ರಸ್ವರೂಪ ಪಡೆದು ರಕ್ತಪಾತಕ್ಕೆ ದಾರಿಯಾಯಿತು; ಸರ್ಕಾರದ ಕಡೆಯಿಂದ ಗೋಲಿಬಾರು ಕೂಡ ನಡೆದು ಆರು ಜೀವಗಳು ಬಲಿಯಾದವು. ಅಲ್ಲಿಂದ ಅದು ರಾಜಸ್ಥಾನದಲ್ಲಿ ಪಸರಿಸಿತು; ಮಹಾರಾ?ದಲ್ಲೂ ಕಾಣಿಸಿಕೊಂಡಿತು. ಉತ್ತರಪ್ರದೇಶದ ಹೊಸ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲಾಗಿ ರೈತರ ಸಾಲಮನ್ನಾ ಘೋಷಿಸಿದರು.
ಅದರಿಂದಾಗಿ ಸಾಲಮನ್ನಾದ ಬೇಡಿಕೆಯನ್ನು ಮುಂದಿಟ್ಟು ಇನ್ನ? ರಾಜ್ಯಗಳ ರೈತರು ಚಳವಳಿಯ ಹಾದಿ ಹಿಡಿದರು. ಕೆಲವು ರಾಜ್ಯಗಳಲ್ಲಿ ಆ ಬೇಡಿಕೆಯನ್ನು ಅಷ್ಟಿ? ಪೂರೈಸಲಾಯಿತು. ಚಳವಳಿ ಆ ಕ್ಷಣಕ್ಕೆ ಸ್ವಲ್ಪ ಶಮನಗೊಂಡರೂ ಸಾಲಮನ್ನಾ ಮಾಡಿದಾಕ್ಷಣ ರೈತರ ಸಮಸ್ಯೆ ಪರಿಹಾರವಾದಂತಾಗಲಿಲ್ಲ; ರೈತರ ಮುಖ್ಯ ಸಮಸ್ಯೆ ಬೇರೆಯೇ ಇದೆ ಎನ್ನುವ ಮಾತು ಕೂಡ ಬಂತು. ಹಾಗಾದರೆ ಆ ಮುಖ್ಯ ಸಮಸ್ಯೆ, ಅಂದರೆ ನಿಜವಾದ ಸಮಸ್ಯೆ ಏನು? ದೇಶದ ವಿವಿಧ ಭಾಗಗಳಲ್ಲಿರುವ ರೈತರ ಸಮಸ್ಯೆಗಳಲ್ಲಿ ಹೋಲಿಕೆ ಇದೆಯೆ? ಸಮಾನ ಅಂಶಗಳಿವೆಯೆ? ಅದರ ಪರಿಹಾರವೇನು – ಎಂಬುದನ್ನಿಲ್ಲಿ ಬಹುತೇಕ ರಾಜ್ಯವಾರಾಗಿ ಪರಿಶೀಲಿಸಬಹುದು.
ಮಧ್ಯಪ್ರದೇಶದಲ್ಲಿ
ಆಶ್ವರ್ಯವೆಂದರೆ ಮಧ್ಯಪ್ರದೇಶದ ಮಾಲ್ವಾ ಪ್ರದೇಶದ ರೈತರು ಪ್ರತಿಭಟನೆಗೆ ಇಳಿಯಲು ಕಾರಣ
… ಅಂದರೆ ನಿಜವಾದ ಸಮಸ್ಯೆ ಏನು? ದೇಶದ ವಿವಿಧ ಭಾಗಗಳಲ್ಲಿರುವ ರೈತರ ಸಮಸ್ಯೆಗಳಲ್ಲಿ ಹೋಲಿಕೆ ಇದೆಯೆ? ಸಮಾನ ಅಂಶಗಳಿವೆಯೆ? ಅದರ ಪರಿಹಾರವೇನು – ಎಂಬುದನ್ನಿಲ್ಲಿ ಬಹುತೇಕ ರಾಜ್ಯವಾರಾಗಿ ಪರಿಶೀಲಿಸಬಹುದು.
ಸಮೃದ್ಧ ಫಸಲು; ಸಮೃದ್ಧ ಫಸಲು ಎಂದರೆ ರೈತರಿಗೆ ಸಿಗುವ ಬೆಲೆ ಕುಸಿಯಿತೆಂದೇ ಅರ್ಥ. ಆ ರೀತಿಯಲ್ಲಿ ನಮ್ಮ ಕೃಷಿ ಆರ್ಥಿಕ ವ್ಯವಸ್ಥೆಯಿದೆ. ಜೂನ್ ೬ರಂದು ಮಾಂಡ್ಸೋರ್ ಸಮೀಪದ ಪಿಪ್ಲಿಯಾ ಎಂಬಲ್ಲಿ ಪ್ರತಿಭಟನೆಗೆ ಸಾವಿರಾರು ರೈತರು ಸೇರಿದ್ದರು; ಪ್ರತಿಭಟನೆ ರಾಜ್ಯದ ಇತರ ಕೇಂದ್ರಗಳಿಗೂ ಹಬ್ಬಿತು. ರೈತರು ಹಿಂದಿನ ವ?ದ ಅನುಭವದ ಆಧಾರದಲ್ಲಿ ಬೇಳೆ, ಸೋಯಾಬೀನ್, ಈರುಳ್ಳಿ, ಗೋಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದರು. ಅದು ಮಾರುಕಟ್ಟೆಗೆ ಬರುವ?ರಲ್ಲಿ ಬೆಲೆಗಳು ನೆಲಕಚ್ಚಿದ್ದವು. ಉತ್ಪಾದನಾ ವೆಚ್ಚದ ಒಂದು ಭಾಗ ಕೂಡ ಸಿಗುವಂತಿರಲಿಲ್ಲ. ದಾಸ್ತಾನು ಮಾಡುವ ಅನುಕೂಲ ಇರಲಿಲ್ಲ; ಮತ್ತು ತಾನು ಖರೀದಿಸುತ್ತೇನೆ ಎಂದು ಹೇಳುವ ಸರ್ಕಾರೀ ಅಥವಾ ಯಾವುದೇ ಸಂಸ್ಥೆ ಇರಲಿಲ್ಲ. ಒಂದ? ಈರುಳ್ಳಿಯನ್ನು ರೈತರು ಟ್ರಕ್‌ಗಳಲ್ಲಿ ತಂದು ರಸ್ತೆ ಮೇಲೆ ಸುರಿದರು. ಸರ್ಕಾರ ಕೂಡಲೆ ಕನಿ? ಬೆಂಬಲ ಬೆಲೆಯನ್ನು ಘೋಷಿಸಬೇಕು; ಈರುಳ್ಳಿ, ಸೋಯಾಬೀನ್, ಗೋಧಿಯನ್ನು ಲಾಭದಾಯಕ ಬೆಲೆಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಪ್ರತಿಕ್ರಿಯೆ ಬರಲಿಲ್ಲ. ತೀವ್ರಸ್ವರೂಪದ ಚಳವಳಿ ನಡೆಯಲಾರದೆನ್ನುವುದು ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರ ಎಣಿಕೆಯಾಗಿತ್ತು; ರೈತಸಂಘಟನೆಗಳ ನಡುವೆ ಕೂಡ ಗೊಂದಲ ಇತ್ತು. ಕೃಷಿ-ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದಿರುವುದು ಒಂದು ಸಮಸ್ಯೆಯಾದರೆ ಕೇಂದ್ರಸರ್ಕಾರ ೫೦೦ ಮತ್ತು ೧,೦೦೦ ರೂ. ನೋಟುಗಳನ್ನು ಅಮಾನ್ಯಮಾಡಿದ್ದು ಕೂಡ ಮಧ್ಯಪ್ರದೇಶದ ಕೃಷಿರಂಗಕ್ಕೆ ಏಟು ನೀಡಿತೆಂದು ಭಾವಿಸಲಾಗಿದೆ. ಏಕೆಂದರೆ ಗ್ರಾಮೀಣಪ್ರದೇಶದ ಬ್ಯಾಂಕ್‌ಗಳಲ್ಲಿ ಹಣ ಇರಲಿಲ್ಲ. ಸರ್ಕಾರೀ ವ್ಯವಸ್ಥೆಯ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರಿದರೂ ನಗದು ಹಣ ಸಿಗುತ್ತಿರಲಿಲ್ಲ; ಚೆಕ್ ನೀಡುತ್ತಿದ್ದರು. ಹಣ ಸಿಗುವಾಗ ದಿನ, ವಾರ ಅ? ಅಲ್ಲ; ತಿಂಗಳುಗಳೂ ದಾಟುವುದಿತ್ತು; ಹಾಗೆ ರೈತರ ಕ? ಬೆಳೆಯುತ್ತಾ ಹೋಯಿತು. ಬರುವ ವ? ವಿಧಾನಸಭಾ ಚುನಾವಣೆ ಇರುವ ಕಾರಣ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರತಿಪಕ್ಷ ಕಾಂಗ್ರೆಸ್ ಪ್ರಯತ್ನಿಸಿತು ಎನ್ನುವುದು ಬೆಳಕಿಗೆ ಬಂತಾದರೂ ಅದರಿಂದ ರಾಜ್ಯದ ರೈತರು ಎದುರಿಸಿದ ಸಂಕ?ವನ್ನು ಅಲ್ಲಗಳೆಯಲಾಗುವುದಿಲ್ಲ.
ಬೆಳ್ಳುಳ್ಳಿ ರೈತರ ಗೋಳು
ರಾಜಸ್ಥಾನದ ಕೋಟಾ ಜಿಲ್ಲೆಯ ಬೆಳೆಗಾರರದ್ದೂ ಬಹುತೇಕ ಅದೇ ಗೋಳು. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಯಾವುದೇ ವಸ್ತುವಿನ ಬೆಲೆ ಇಳಿಯುವ ಕ್ರಮ ಇಲ್ಲ; ದಿನಬಳಕೆಯ ಕಳಪೆ ಸಾಮಗ್ರಿಗಳು, ಸೋಪು-ಡಿಟರ್ಜಂಟ್‌ಗಳ ಬೆಲೆ ಕೂಡ ವ?ಕ್ಕೆ ಸುಮಾರು ಶೇ. ೧೦-೧೫ರ? ಏರುತ್ತಾ ಹೋಗುತ್ತದೆ. ಕೃಷಿ-ಉತ್ಪನ್ನಗಳಿಗೆ ಇದು ಎಂದೂ ಅನ್ವಯಿಸುವುದಿಲ್ಲ. ಹಿಂದಿನ ವ? ಒಬ್ಬ ರೈತನಿಗೆ ತನ್ನ ಫಸಲಿಗೆ ಕ್ವಿಂಟಾಲಿಗೆ ೧೦ ಸಾವಿರ ರೂ. ಸಿಕ್ಕಿದ್ದರೆ ಈ ವ? ಅದು ೨-೩ ಸಾವಿರಕ್ಕೆ ಇಳಿದರೂ ಆಶ್ಚರ್ಯವಿಲ್ಲ; ಉತ್ತಮ ಬೆಳೆ ಸೇರಿದಂತೆ ಅದಕ್ಕೆ ಕಾರಣ ಏನೂ ಇರಬಹುದು; ಅಂದರೆ ರೈತರಿಗೆ ಉತ್ತಮ ಫಸಲು ವರವಲ್ಲ; ಶಾಪ!
ಕೋಟಾ ಜಿಲ್ಲೆ ಕೃಷ್ಣಾಪುರ ತಾಕಿಯಾದ ರೈತರಲ್ಲಿ ಅರ್ಧಕ್ಕೂ ಮಿಕ್ಕಿ ಜನ ಬೆಳ್ಳುಳ್ಳಿ ಬೆಳೆದರು. ಕಳೆದ ವರ್ಷ ಕ್ವಿಂಟಾಲಿಗೆ ೮,೦೦೦ ರೂ. ಸಿಕ್ಕಿತ್ತು. ಈ ವ? ರೂ. ೩,೦೦೦ಕ್ಕಿಂತಲೂ ಕೆಳಗೆ ಬಂತು. ರೈತರು ಫಸಲನ್ನು ಮಂಡಿಗೆ ಹಾಕುವುದಿಲ್ಲವೆಂದು ನಿರ್ಧರಿಸಿ, ಮನೆಗಳಲ್ಲಿ ಕಣಜದಂತೆ ಮಾಡಿ ಇಟ್ಟರು. (ರಾಜ್ಯ) ಸರ್ಕಾರ ಕ್ವಿ.ಗೆ ೩,೨೦೦ ರೂ. ಕನಿ? ಬೆಂಬಲ ಬೆಲೆ ((minimum support price – MSP) ಪ್ರಕಟಿಸಿತು; ನಾಲ್ಕು ಸಾವಿರವಾದರೂ ಕೊಡಿ ಎಂಬ ರೈತರ ಬೇಡಿಕೆಯನ್ನು ಒಪ್ಪಲಿಲ್ಲ. ಮಾಧ್ಯಮದೊಂದಿಗೆ ಮಾತನಾಡಿದ ಓರ್ವ ರೈತ “ಉತ್ಪಾದನಾ ವೆಚ್ಚವು ತುಂಬಿಬರುವ ಬೆಲೆಯನ್ನು ಸರ್ಕಾರ ಪ್ರಕಟಿಸುವವರೆಗೂ ಫಸಲನ್ನು (ಬೆಳ್ಳುಳ್ಳಿ) ಇಟ್ಟುಕೊಳ್ಳಬೇಕೆನ್ನುವುದು ನಮ್ಮ ಪ್ರಯತ್ನ. ನವೆಂಬರ್ ವರೆಗೆ ತೊಂದರೆ ಇಲ್ಲ; ಆನಂತರ ಅದು ಹಾಳಾಗುತ್ತದೆ” ಎಂದರೆಂದು ಆಂಗ್ಲ ಪಾಕ್ಷಿಕವೊಂದು ವರದಿಮಾಡಿದೆ. ಫಸಲು ಮಾರುಕಟ್ಟೆಯಲ್ಲಿ ರಾಶಿ ಬಿತ್ತು; ಬೆಲೆಗಳು ನೆಲಕಚ್ಚಿದವು. ಮಧ್ಯಪ್ರವೇಶಿಸಲು ಸರ್ಕಾರ ನಿರಾಕರಿಸಿತು. ಅದು ಪ್ರಕಟಿಸಿದ ೩,೨೦೦ ರೂ. ಬೆಂಬಲಬೆಲೆ ಎಲ್ಲ ಬೆಳ್ಳುಳ್ಳಿಗಲ್ಲ; ಉತ್ತಮವಾಗಿದ್ದುದಕ್ಕೆ ಮಾತ್ರ ಎಂಬ ?ರತ್ತು ಕೂಡ ಇತ್ತು. ರೈತರ ಸಿಟ್ಟು ಏರಿತು. ಆಗ ರಾಜ್ಯದ ಕೃಷಿಮಂತ್ರಿ “ಅ?ಂದು ಪ್ರಮಾಣದ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆಯಲು ನಾವು ಹೇಳಿಲ್ಲ” ಎಂದ ಮಾತಿನಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು.
ರಾಜಸ್ಥಾನದ ಕೋಟಾ ಭಾಗದ ರೈತರು ತಮ್ಮ ಫಸಲನ್ನು ಮಾರಲು ಮಧ್ಯಪ್ರದೇಶದ ಮಾಂಡ್ಸೋರ್. ನೀಮೂಚ್ ಮತ್ತಿತರ ಕಡೆಗಳಿಗೆ ಹಿಡಿದುಕೊಂಡು ಬಂದರು. ನೀಮೂಚ್‌ನಲ್ಲಿ ಕಳೆದ ವರ್ಷ ರೈತರಿಗೆ ಕೆ.ಜಿ. ಬೆಳ್ಳುಳ್ಳಿಗೆ ೧೦೫ ರೂ. ಸಿಕ್ಕಿದ್ದರೆ ಈ ಬಾರಿ ಸಿಕ್ಕಿದ್ದು ೪೦ ರೂ. ಮಾತ್ರ. ಕೋಟಾ ಜಿಲ್ಲೆಯ ಪ್ರತಿಭಟನೆಯ ವೇಳೆ ಕಂಡುಬಂದ ಬ್ಯಾನರ್‌ಗಳಲ್ಲಿ “ಕೇವಲ ಸಾಲಮನ್ನಾ ಆದರೆ ಸಾಲದು; ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗಬೇಕು; ಕೃಷಿ ಜಮೀನನ್ನು ಸರ್ಕಾರ ಬಲಾತ್ಕಾರವಾಗಿ ಸ್ವಾಧೀನಪಡಿಸಿಕೊಳ್ಳಬಾರದು” ಎನ್ನುವ ಬೇಡಿಕೆಗಳು ಕೂಡ ಕಂಡುಬಂದವು.
ಮಾಂಡ್ಸೋರ್‌ನಲ್ಲಿ ನಡೆದ ಗೋಲಿಬಾರು, ರೈತರ ಸಾವಿನ ಪ್ರಕರಣಗಳು ರಾಜಸ್ಥಾನದಲ್ಲೂ ಪ್ರತಿಧ್ವನಿಸಿದವು; ಕಾರಣ ಇಲ್ಲೂ ಅದೇ ರೀತಿಯ ಸಮಸ್ಯೆಗಳಿದ್ದವು. ರೈತ ಸಂಘಟನೆಗಳು ಪಕ್ಷಭೇದವಿಲ್ಲದೆ ಮಧ್ಯಪ್ರದೇಶದ ರೈತರಿಗೆ ಬೆಂಬಲ ಸೂಚಿಸಿದವು. “ಯಾವುದೋ ಒಂದು ಕನಿ? ಬೆಂಬಲಬೆಲೆ ಅಲ್ಲ; ಉತ್ಪಾದನಾ ವೆಚ್ಚಕ್ಕೆ ಸರಿಯಾದ ಬೆಂಬಲಬೆಲೆ ಕೊಡಿ” ಎಂದು ಆಗ್ರಹಿಸಿದರು; ರೈತರಿಗೆ ’ಮಾಡು ಇಲ್ಲವೆ ಮಡಿ’ ಎಂಬಂಥ ಪರಿಸ್ಥಿತಿ ಉಂಟಾಗಿದೆ ಎಂದರು.
ರಾಜಸ್ಥಾನದಲ್ಲಿ ಕಳೆದ ನಾಲ್ಕು ವ?ಗಳಲ್ಲಿ ಸೋಯಾಬೀನ್ ರೈತರ ಕೈಹಿಡಿಯಲಿಲ್ಲ. ಕೀಟಬಾಧೆ, ಫಂಗಸ್ ಮತ್ತು ವಾತಾವರಣದ ಬದಲಾವಣೆಗಳು ರೈತರನ್ನು ಬಾಧಿಸಿದವು. ೨೦೧೪ರಲ್ಲಿ ಆಲಿಕಲ್ಲು ಮಳೆಯಿಂದಾಗಿ ಖಾರಿಫ್, ರಾಬಿ ಎರಡೂ ಬೆಳೆಗಳು ಹಾಳಾದವು. ಬೆಳೆ ವಿಫಲವಾದ್ದು ಮತ್ತು ಲಾಭದಾಯಕ ಬೆಲೆ ಸಿಗದ ಕಾರಣ ನಾಲ್ಕು ಜಿಲ್ಲೆಗಳಲ್ಲಿ ಕನಿ? ೬೦ ಮಂದಿ ರೈತರು ಸಾವಿಗೆ ಶರಣಾದರು; ಇದಕ್ಕೆಲ್ಲ ಸರ್ಕಾರ ಸ್ಪಂದಿಸಲಿಲ್ಲ ಎಂಬುದು ದೂರು.
ಕೋಟಾ ಪ್ರದೇಶದಲ್ಲಿ ಬೆಳ್ಳುಳ್ಳಿ, ಸೋಯಾಬೀನ್ ಅಲ್ಲದೆ ಧನಿಯಾ (ಕೊತ್ತಂಬರಿ) ಕೂಡ ಪ್ರಮುಖ ಬೆಳೆಯಾಗಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. ೬೫ರ?ನ್ನು ಈ ಭಾಗದಲ್ಲೇ ಬೆಳೆಯುತ್ತಾರೆ. ಈ ಭಾಗದ ಬೆಳ್ಳುಳ್ಳಿಯ ಗುಣಮಟ್ಟ ಸಾಮಾನ್ಯ. ಜೊತೆಗೆ ಚೀನಾದ ಉತ್ತಮ ಬೆಳ್ಳುಳ್ಳಿ ಬರುತ್ತದೆ. ನಮ್ಮ ಬೆಳ್ಳುಳ್ಳಿಯ ಗುಣಮಟ್ಟ ಸುಧಾರಣೆಗೆ ಸಂಶೋಧನೆ ನಡೆದಿಲ್ಲವೆಂದು ರೈತರು ದೂರುತ್ತಾರೆ. ದಾಸ್ತಾನು ಸವಲತ್ತು ಇಲ್ಲದಿರುವುದು ಈ ಭಾಗದ ಒಂದು ದೊಡ್ಡ ಕೊರತೆಯಾಗಿದೆ.
ಕೋಟಾ ಜಿಲ್ಲೆಯಲ್ಲಿ ಕೃಷಿ-ಉತ್ಪನ್ನ ಸಂಸ್ಕರಣಕ್ಕೆ ವಿಪುಲ ಅವಕಾಶಗಳಿವೆ. ಸರ್ಕಾರ ಬೆಳ್ಳುಳ್ಳಿ ಪೇಸ್ಟ್ ಮತ್ತು ಹುಡಿ ತಯಾರಿಕೆಯ ಕಾರ್ಖಾನೆಯನ್ನು ಆರಂಭಿಸಬಹುದು. ಅದಕ್ಕೆ ವಿದೇಶದಲ್ಲೂ ಮಾರುಕಟ್ಟೆಯಿದೆ. ಅಂತಹ ಕ್ರಮ ಅನುಸರಿಸದಿದ್ದ ಕಾರಣ ಶೇ. ೬೦ಕ್ಕೂ ಅಧಿಕ ಬೆಳ್ಳುಳ್ಳಿ ರೈತರ ಬಳಿಯೇ ಉಳಿದಿತ್ತು. ಸರ್ಕಾರ ರೂ. ೩,೨೦೦ರ? ಕಡಮೆ ಬೆಂಬಲ ಬೆಲೆ ಪ್ರಕಟಿಸಿದ್ದಲ್ಲದೆ ೧೦ ಸಾವಿರ ಟನ್‌ಗಳ ಸಂಗ್ರಹ ಗುರಿ(ಮಿತಿ)ಯನ್ನು ಕೂಡ ಘೋಷಿಸಿತ್ತು. ಈ ವ? ಬೆಳೆದ ಬೆಳೆ ಸುಮಾರು ೧೦ ಲಕ್ಷ ಟನ್.
ಕೆಳಮಟ್ಟದ ಎಂಎಸ್‌ಪಿ(ಬೆಂಬಲಬೆಲೆ)ಯ ಸಮಸ್ಯೆ ಬೆಳ್ಳುಳ್ಳಿಗೆ ಸೀಮಿತವಲ್ಲ. ಗೋಧಿಯ ಎಂಎಸ್‌ಪಿ ಕ್ವಿಂಟಾಲಿಗೆ ೧,೬೨೫ ರೂ. ಕಮಿಷನ್ ಏಜೆಂಟರು ರೈತರಿಗೆ ಕೊಡುವುದು ಸುಮಾರು ೧,೪೦೦ ರೂ. ಧನಿಯಾ ಕ್ವಿ.ಗೆ ಈ ವ? ಪ್ರಕಟಿಸಿದ ಎಂಎಸ್‌ಪಿ ೩,೦೦೦ ರೂ. ೨೦೧೬ರಲ್ಲಿ ಅದು ೭,೦೦೦ ರೂ. ಇತ್ತು. ಮೆಂತ್ಯಕ್ಕೆ ಕಳೆದ ವ? ೭,೦೦೦ ರೂ. ಇತ್ತು; ಈ ವ? ಕೇವಲ ೩,೩೦೦ ರೂ. ಕಳೆದ ವರ್ಷ ರೈತರಿಗೆ ಕಡಲೆಬೇಳೆಗೆ ಕ್ವಿ.ಗೆ ೧೦ ಸಾವಿರ ರೂ. ಸಿಗುತ್ತಿದ್ದರೆ ಈ ವ? ಅದು ೪,೦೦೦ ರೂ.ಗೆ ಕುಸಿದಿದೆ ಎಂದು ಪತ್ರಕರ್ತರು ವಿವರಿಸಿದ್ದಾರೆ. ಸಾಸಿವೆ ಮತ್ತು ನೆಲಗಡಲೆಗಳು ಕೂಡ ರಾಜ್ಯದಲ್ಲಿ (ರಾಜಸ್ಥಾನ) ರೈತರಿಗೆ ಎಂಎಸ್‌ಪಿಗಿಂತ ತುಂಬ ಕಡಮೆ ಬೆಲೆಯನ್ನು ತರುತ್ತಿವೆ ಎಂದು ರೈತನಾಯಕರು ಟೀಕಿಸಿದ್ದಾರೆ; ಇನ್ನೊಂದೆಡೆ ಹಣಕಾಸು ಮಂತ್ರಿ ನೆಲಗಡಲೆಯನ್ನು ಎಂಎಸ್‌ಪಿಯಲ್ಲೇ ಖರೀದಿಸಲಾಗುತ್ತಿದೆ ಎನ್ನುತ್ತಿದ್ದರಂತೆ. ರಾಜಸ್ಥಾನದ ೨೫ ಮಂದಿ ಲೋಕಸಭಾ ಸದಸ್ಯರಲ್ಲಿ ಯಾರು ಕೂಡ ರೈತರ ಪರವಾಗಿ ಮಾತನಾಡುವುದಿಲ್ಲ ಎಂಬುದು ಕೂಡ ರೈತನಾಯಕರ ದೂರು.
ಫಸಲು ಕೈಗೆ ಬರುವಾಗ ಸರಿಯಾದ ಬೆಲೆ ಸಿಗದಿದ್ದರೆ ಹೆಚ್ಚಿನ ರೈತರಿಗೆ ಹತಾಶ ಮಾರಾಟ (distress
sale)ವಲ್ಲದೆ ಬೇರೆ ದಾರಿ ಇರುವುದಿಲ್ಲ. “ನನ್ನ ಈರುಳ್ಳಿ ಬೆಳೆ ಮೇ ತಿಂಗಳಿನಲ್ಲಿ ಕೊಯ್ಲಿಗೆ ಬಂತು. ನಾನು ಹತಾಶ ಮಾರಾಟ ಮಾಡಬೇಕಾಯಿತು. ಬೆಲೆ ತೀರಾ ಕಡಮೆ ಇತ್ತು. ಮಾರಾಟವಾಗದ ಬಹಳಷ್ಟು ಫಸಲನ್ನು ಸುಮ್ಮನೆ ಚೆಲ್ಲಿದೆ. ೨೦೧೫ರಲ್ಲಿ ನನಗೆ ಈರುಳ್ಳಿಗೆ ಕೆಜಿಗೆ ೪೦ ರೂ. ಸಿಕ್ಕಿತ್ತು. ಈ ವರ್ಷ ಸಿಕ್ಕಿದ್ದು ಕೇವಲ ಮೂರು ರೂ. ವ್ಯಾಪಾರಿಗಳಿಗೆ ದಾಸ್ತಾನು ಸೌಕರ್ಯವಿದೆ. ಪೇಟೆಯ ಗ್ರಾಹಕರು ನಮಗೆ ಸಿಗುವ ೪-೫ ಪಾಲು ಹಣ ಕೊಡುತ್ತಾರೆ. ಸರ್ಕಾರ ಈರುಳ್ಳಿಗೆ ದಾಸ್ತಾನು ಸೌಕರ್ಯ ಒದಗಿಸುವುದಿಲ್ಲ” ಎಂಬುದು ಓರ್ವ ರೈತನ ಆರೋಪ. ತಮ್ಮ ಉತ್ಪನ್ನದ ಬೆಲೆಯನ್ನು ರೈತರು ನಿಗದಿಪಡಿಸಬೇಕೇ ಹೊರತು ರಾಜಕಾರಣಿಗಳಲ್ಲ ಎನ್ನುವ ಅಲ್ಲಿನ ರೈತರು ಸಹಕಾರಿ ಸಂಘಗಳಲ್ಲಿ ರಸಗೊಬ್ಬರ ಸಿಗದ ಕಾರಣ ಖಾಸಗಿಯವರಿಂದ ದುಬಾರಿ ಬೆಲೆಗೆ ಖರೀದಿಸಬೇಕಾಯಿತೆಂದು ಆಕ್ಷೇಪಿಸುತ್ತಾರೆ.
ಡಾ| ಸ್ವಾಮಿನಾಥನ್ ವರದಿ
ಬೆಲೆನಿಗದಿ ಮತ್ತು ಖರೀದಿಗೆ ಸಂಬಂಧಿಸಿ ಈ ಹಿಂದೆ ಕೇಂದ್ರ ಸರ್ಕಾರವು ಕೃಷಿತಜ್ಞ ಡಾ| ಎಂ.ಎಸ್. ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಆಯೋಗವೊಂದನ್ನು ರಚಿಸಿತ್ತು. ಆಯೋಗವು ಕೃಷಿ- ಉತ್ಪನ್ನಗಳ ಕನಿ? ಬೆಂಬಲಬೆಲೆಯು (ಎಂಎಸ್‌ಪಿ) ಉತ್ಪಾದನಾ ವೆಚ್ಚಕ್ಕಿಂತ ಶೇ. ೫೦ರ? ಅಧಿಕ ಆಗಿರಬೇಕೆಂದು ಸಲಹೆ ನೀಡಿತ್ತು. ಎಲ್ಲ ರೈತರೂ ಅದನ್ನೇ ಕೇಳುತ್ತಾರೆ. ಆದರೆ ಅದರ ಕಟ್ಟುನಿಟ್ಟಾದ ಅನು?ನ ಎಲ್ಲೂ ಕಾಣಿಸುವುದಿಲ್ಲ. “ಸರ್ಕಾರೀ ನೌಕರರ ಸಂಬಳವನ್ನು ವೇತನ ಆಯೋಗಗಳು ಆಗಾಗ ಏರಿಸುತ್ತವೆ. ರೈತರಿಗಾಗಿ ರಚಿಸಿದ ಏಕೈಕ ಆಯೋಗದ ಶಿಫಾರಸ್ಸನ್ನು ಅಲಕ್ಷಿಸುವುದೇಕೆ?” ಎಂದು ರೈತರು ಪ್ರಶ್ನಿಸುತ್ತಾರೆ. ಕೃಷಿಯನ್ನು ಕೂಡ ಒಂದು ಉದ್ಯಮ (ಇಂಡಸ್ಟ್ರಿ) ಎಂದು ಪರಿಗಣಿಸಿ ಪಿಂಚಣಿಯಂತಹ ಸಾಮಾಜಿಕ ಭದ್ರತೆಯನ್ನು ನೀಡಬೇಕು ಎಂದವರು ಒತ್ತಾಯಿಸುತ್ತಾರೆ. ತಮಗೆ ಬೇಕಾಗಿರುವುದು ಎಂಎಸ್‌ಪಿಯ ಕಟ್ಟುನಿಟ್ಟಾದ ಅನು?ನವೇ ಹೊರತು ಸಾಲಮನ್ನಾ ಅಲ್ಲ ಎಂದು ಒತ್ತಿಹೇಳುತ್ತಾರೆ.
ಇನ್ನು ರಾಜಸ್ಥಾನದಲ್ಲಿ ರೈತರಿಗೆ ಭಾರಿ ಸಾಲವಿದ್ದು, ಅದೆಲ್ಲವೂ ಸಹಕಾರಿ ಸಾಲ ಅಲ್ಲ. ಸಹಕಾರಿ ಬ್ಯಾಂಕ್‌ಗಳ ಸಾಲದ ಮಿತಿ ಬಹಳ? ಕೆಳಗಿದ್ದು ಎಲ್ಲ ಬ್ಯಾಂಕ್‌ಗಳು ಗರಿ? ಮಿತಿಯಾದ ಒಂದೂವರೆ ಲಕ್ಷ ರೂ. ವರೆಗೆ ಸಾಲ ನೀಡುವುದಿಲ್ಲ. ಅದಲ್ಲದೆ ಸುಗ್ಗಿ (ಕೊಯ್ಲು) ಮತ್ತು ಸಾಲ ಮರುಪಾವತಿ ಸಮಯಗಳಲ್ಲಿ ಹೊಂದಾಣಿಕೆ ಇಲ್ಲ. ಮರುಪಾವತಿ ಬಾಕಿ (ಸುಸ್ತಿ) ಆಗಲು ಅದು ಕೂಡ ಒಂದು ಕಾರಣ. ಎಲ್ಲ ಸಾಲಗಳನ್ನು ಮಾರ್ಚ್ ಹಾಗೂ ಸೆಪ್ಟೆಂಬರೊಳಗೆ ತೀರಿಸಬೇಕು. ಆದರೆ ಮಾರುಕಟ್ಟೆಯಲ್ಲಿ ಕೃಷಿ-ಉತ್ಪನ್ನಗಳನ್ನು ರೈತರು ಮಾರುವ ಸಮಯ ಜನವರಿ ಮತ್ತು ಜೂನ್ ಎಂಬುದು ರೈತರ ದೂರು.
ಅದಕ್ಕಿಂತ ಮುಖ್ಯವಾಗಿ ರೈತರು ಬೇರೆ ಬೇರೆ ಮೂಲಗಳಿಂದ ಸಾಲ ಪಡೆಯುತ್ತಾರೆ. ಕಮಿ?ನ್ ಏಜೆಂಟರಿಂದ, ರಸಗೊಬ್ಬರ ಮತ್ತು ಕೀಟನಾಶಕ ವ್ಯಾಪಾರಿಗಳಿಂದ, ಸಹಕಾರಿ ಸಂಸ್ಥೆಗಳಿಂದೆಲ್ಲ ಅವರು ಸಾಲ ಪಡೆಯುತ್ತಿದ್ದು, ಸಾಲದ ತುಂಬ ದೊಡ್ಡ ಪಾಲು ಕೀಟನಾಶಕಗಳಿಗೆ ಹೋಗುತ್ತದೆ. ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲ ಮಾತ್ರ ನಮಗೆ ಲೆಕ್ಕ ಸಿಗುತ್ತದೆ. ಹೀಗಿರುವಾಗ ಸಾಲಮನ್ನಾ ಬೇಡಿಕೆ ಸೀಮಿತ ವಲಯದಿಂದ ಮಾತ್ರ ಬರುತ್ತಿದೆ. ಹೆಚ್ಚಿನ ಅಥವಾ ಎಲ್ಲ ರೈತರಿಗೆ ಬೇಕಾದ್ದು ಎಂಎಸ್‌ಪಿಯೇ ಹೊರತು ಸಾಲಮನ್ನಾ ಅಲ್ಲ ಎಂದು ರೈತನಾಯಕರು ಹೇಳುತ್ತಾರೆ. ರಾಜಸ್ಥಾನದಲ್ಲೀಗ ರೈತರು ಉತ್ತಮ ಬೇಳೆಕಾಳು ಫಸಲಿನ ನಿರೀಕ್ಷೆಯಲ್ಲಿದ್ದು, ಜೊತೆಗೇ ಇನ್ನೊಂದು ಸುತ್ತು ಹತಾಶ ಮಾರಾಟದ ಭಯವೂ ಅವರನ್ನು ಕಾಡುತ್ತಿದೆಯಂತೆ.
ಸಣ್ಣ ರೈತರ ಸಮಸ್ಯೆ
ಮಹಾರಾಷ್ಟ್ರದಲ್ಲಿ ಪ್ರಬಲ ರೈತ ಸಂಘಟನೆಗಳಿದ್ದು ಜೂನ್‌ನಲ್ಲಿ ಅಲ್ಲಿ ಕೂಡ ಸಂಘಟಿತ ಹೋರಾಟ ನಡೆಯಿತು. ಈ ಸಲದ ಮುಖ್ಯ ಬೇಡಿಕೆ ಸಾಲಮನ್ನಾ ಆಗಿತ್ತು; ಫಡ್ನವೀಸ್ ಸರ್ಕಾರ ಅದಕ್ಕೊಪ್ಪಿತು. ರಾಜ್ಯದಲ್ಲಿ ರೈತರು ೧.೩೭ ಕೋಟಿಯಷ್ಟು ದೊಡ್ಡ ಸಂಖ್ಯೆಯಲ್ಲಿದ್ದು ಅವರಲ್ಲಿ ಹೆಚ್ಚು ನಷ್ಟಕ್ಕೊಳಗಾದವರು ಐದು ಎಕ್ರೆಗಿಂತ ಕಡಮೆ ಜಮೀನು ಇರುವವರು. ಒಟ್ಟು ರೈತರಲ್ಲಿ ಶೇ. ೭೮ರಷ್ಟು ಅವರೇ ಆಗಿದ್ದು, ಅವರ ಕೃಷಿಗೆ ಮಳೆನೀರೇ ಆಧಾರ. ರಾಜ್ಯದ ನೀರಾವರಿ ಜಮೀನು ದೊಡ್ಡ ರೈತರ ಹಾಗೂ ಸಹಕಾರಿ ರೈತರ ಬಳಿ ಇದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಸಹಕಾರಿ ಸೊಸೈಟಿಗಳಿಂದ ಸಾಲ ಪಡೆಯಲು ಆಗುತ್ತಿಲ್ಲ. ಏಕೆಂದರೆ ಅವು ದಿವಾಳಿಯಾಗಿವೆ. ದಿವಾಳಿಯಾಗಲು ಕಾರಣ ಅವುಗಳ ಮೇಲೆ ಹಿಡಿತ ಸಾಧಿಸಿರುವ ರಾಜಕಾರಣಿಗಳು ಅಲ್ಲಿನ ಹಣವನ್ನು ಬೇರೆ ಕಡೆಗೆ ಸಾಗಿಸಿದ್ದು ಅದರಿಂದಾಗಿ ಸಣ್ಣ ರೈತರು ಬೆಳೆಸಾಲಕ್ಕೆ ಅರ್ಹರಾದರೂ ಅವರಿಗದು ಸಿಗುತ್ತಿಲ್ಲ.
ಆ ಬಗ್ಗೆ ಓರ್ವ ರೈತ ಹೀಗೆ ಹೇಳುತ್ತಾರೆ: “ಬಾವಿ ತೋಡಲು ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಏಕೆಂದರೆ ಅವರಿಗೆ ಬಾವಿಯನ್ನು ಹೇಗೆ ವಶದಲ್ಲಿಟ್ಟುಕೊಳ್ಳುವುದೆಂಬ ಸಮಸ್ಯೆ. ಆದರೆ ಮೋಟಾರುಬೈಕಿಗೆ ಸಾಲ ನೀಡುತ್ತಾರೆ; ಕಾರಣ ಅದನ್ನು ವಶಪಡಿಸಿಕೊಳ್ಳಲು ಸಾಧ್ಯ.” “ಇಲ್ಲಿ ಸಾಲ ಸಿಗಬೇಕಿದ್ದರೆ ನೀವು ಮರುಪಾವತಿ ಮಾಡಿರಬೇಕು. ಆದ್ದರಿಂದ ಬ್ಯಾಂಕ್‌ಸಾಲಕ್ಕೆ ಅರ್ಹರಾಗಲು ರೈತರು ಖಾಸ ಲೇವಾದೇವಿಯವರಿಂದ ಸಾಲ ಪಡೆಯುತ್ತಾರೆ” ಎಂದು ಅರ್ಥಶಾಸ್ತ್ರಜ್ಞ ಎಚ್.ಎನ್. ದೇಶರ್ದಾ ತಿಳಿಸುತ್ತಾರೆ. ದುಬಾರಿ ಬಡ್ಡಿಯ ಖಾಸಗಿ ಸಾಲವೆಂದರೆ ಸಮಸ್ಯೆಯ ಮೂಲವ?.
ರಾಜ್ಯದಲ್ಲಿ ಕಳೆದ ಕೆಲವು ವ?ಗಳಲ್ಲಿ ರೈತರಿಗೆ ನೆರವಾಗುವ ಪ್ರಯತ್ನ ನಡೆದದ್ದಿದೆ. ಹಿಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು, ಕಿಂಡಿ ಆಣೆಕಟ್ಟು ನಿರ್ಮಿಸಲು, ಬಾವಿ ತೋಡಲು, ಅಂತರ್ಜಲ ಮಟ್ಟ ಏರಿಸಲು ಸಲಹೆ ನೀಡಿದ್ದರು. ಗ್ರಾಮೀಣ ಉದ್ಯೋಗಭದ್ರತೆ ಕಾಯ್ದೆ ಮೂಲಕ ಬಾವಿ ತೋಡಲು ಪ್ರೋತ್ಸಾಹಿಸಿದರು. ಯೋಜನೆ ಉತ್ತಮವಿತ್ತು. ಕುಂಟುತ್ತಾ ಸಾಗಿತ್ತು. ೨೦೧೪ರ ಚುನಾವಣೆಯಲ್ಲಿ ಅವರು ಸೋತರು. ಮತ್ತೆ ಅಧಿಕಾರಕ್ಕೆ ಬಂದ ಫಡ್ನವೀಸ್ ಜಲಯುಕ್ತ ಶಿವಾರ್ ಅಭಿಯಾನವನ್ನು ಕೈಗೊಂಡರು; ಅಂದರೆ ೨೦೧೯ರೊಳಗೆ ರಾಜ್ಯವನ್ನು ಬರಮುಕ್ತಗೊಳಿಸುವ ಗುರಿ. ಇದು ಚೌಹಾಣ್ ಅವರ ಯೋಜನೆಯ ಂ z ರಿ P ಂ i ಂ ತಿ v . ಫಡ್ನವೀಸ್ ರೈತ ಸಂಘಟನೆಯೊಂದರ ನಾಯಕ ಸದಾಭಾವು ಖೋತ್ ಅವರನ್ನು ಕೃಷಿಮಂತ್ರಿಯಾಗಿ ನೇಮಿಸಿದರು. ಆದರೆ ೨೦೧೬ರಲ್ಲಿ ಕಟುವಾಸ್ತವಗಳು ಬೇರೆಯೇ ರೀತಿಯಲ್ಲಿ ಗೋಚರಿಸಿದವು.
ಈರುಳ್ಳಿ ರಫ್ತಿನ ವಿ?ಯದಲ್ಲಿ ಸರ್ಕಾರದ ನೀತಿ ಅಸ್ಥಿರ ಎನಿಸಿತು. ಸೋಯಾಬೀನ್‌ಗೆ ಸರಿಯಾದ ಎಂಎಸ್‌ಪಿಯನ್ನೂ ಪ್ರಕಟಿಸಲಿಲ್ಲ. ಅನಂತರ ನೋಟುಅಮಾನ್ಯತೆ ಬಂತು; ಅದರಿಂದಾಗಿ ಉತ್ತಮ ಬೆಳೆ ಬಂದಾಗ ಯೋಗ್ಯ ಲಾಭ ಸಿಗಲಿಲ್ಲ. ತೊಗರಿ ಬೆಳೆಗೆ ಕೂಡ ಸೂಕ್ತ ಎಂಎಸ್‌ಪಿ (ಬೆಂಬಲಬೆಲೆ) ಪ್ರಕಟಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರಕಟವಾಗಲಿಲ್ಲ ಎಂಬ ಟೀಕೆ ಬಂತು. ಎರಡು ವ?ಗಳ ಬರದ ಬಳಿಕ ಕೈಸೇರಿದ ಬಂಪರ್ ಫಸಲಿಗೆ ಹಾಗಾದ ಕಾರಣ ರೈತರಿಗೆ ಸಿಟ್ಟು ಬಂತು. ಹಿಂದಿನ ವ? ತೊಗರಿಬೇಳೆ ಕೊರತೆ ಇದ್ದ ಕಾರಣ ಬೆಳೆಗಾರರಿಗೆ ಆ ಬೆಳೆಗೆ ಪ್ರೋತ್ಸಾಹ ನೀಡಲಾಗಿತ್ತು; ರೈತರು ಹೆಚ್ಚು ಜಾಗದಲ್ಲಿ ತೊಗರಿ ಬೆಳೆದಿದ್ದರು. ಉತ್ತಮ ಫಸಲು ಹಾಗೂ ಸರ್ಕಾರದ ಖರೀದಿಯ ಮಿತಿಯಿಂದಾಗಿ ಬೆಲೆ ಕುಸಿಯಿತು. ರೈತರು ಕ್ವಿ.ಗೆ ೨,೫೦೦ ರೂ.ಗೆ ತೊಗರಿಬೇಳೆ ಮಾರಬೇಕಾಯಿತು. ಅವರಿಗೆ ೫೦೫೦ ರೂ.ಗೆ ಖರೀದಿಸುವ ಭರವಸೆ ನೀಡಲಾಗಿತ್ತು. ಸರ್ಕಾರದ ಖರೀದಿಯಲ್ಲಿ ತುಂಬ ವಿಳಂಬವೂ ಆಯಿತು.
ಜೂನ್ ೧ರಂದು ರೈತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ಕೂಡ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿರಲಿಲ್ಲ. ರೈತರ ಸಾಲಮನ್ನಾದ ಬೇಡಿಕೆ ಬಂದಾಗ ಮುಖ್ಯಮಂತ್ರಿ ಮೊದಲಿಗೆ ಅಸಾಧ್ಯ ಎಂದರು. ಆದರೆ ಉತ್ತರಪ್ರದೇಶದ ಉದಾಹರಣೆ ಕಣ್ಣಮುಂದಿದ್ದ ಕಾರಣ ಒಪ್ಪಬೇಕಾಯಿತು. ಸಣ್ಣ ರೈತರ (ಐದು ಎಕ್ರೆಗಿಂತ ಕಡಮೆಯವರು) ಸಾಲಮನ್ನಾಕ್ಕೆ ಒಪ್ಪಿದರು; ಅದರ ಮೊತ್ತ ೩೧ ಸಾವಿರ ಕೋಟಿ ರೂ. ಸಾಲಮನ್ನಾ ಅಥವಾ ಹೊಸಸಾಲ ನೀಡಿಕೆ – ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು. ಮತ್ತು ಸರ್ಕಾರ ಮುಖ್ಯವಿ?ಯವಾದ ಸ್ವಾಮಿನಾಥನ್ ವರದಿ ಅನು?ನದಿಂದ ಹಿಂದೆ ಸರಿಯಿತು; ಆ ಬಗ್ಗೆ ಕೇಂದ್ರಸರ್ಕಾರದ ಬಳಿಗೆ ನಿಯೋಗ ಹೋಗೋಣವೆಂದು ಮುಖ್ಯಮಂತ್ರಿ ಭರವಸೆ ನೀಡಿ ಸುಮ್ಮನಾದರು.
ಸ್ವಾಮಿನಾಥನ್ ಆಯೋಗದ ವರದಿಯ ಜಾರಿಯಲ್ಲದೆ ಕೃಷಿ ಮೂಲಸವಲತ್ತಿಗೆ ಸಂಬಂಧಿಸಿ ಜಮೀನು ಅಡಮಾನ ಬ್ಯಾಂಕಿನಲ್ಲಿ ಬದಲಾವಣೆ ಮತ್ತು ನೀರಾವರಿ ತಂತ್ರಜ್ಞಾನದ ಆಧುನೀಕರಣಗಳು ರಾಜ್ಯದ ರೈತರಿಗೆ ಆವಶ್ಯಕ ಅಂಶಗಳೆಂದು ಅಭಿಪ್ರಾಯಪಡಲಾಗಿದೆ. “ರೈತರಿಗೆ ಬೇಕಾದದ್ದು ಸಾಲಮನ್ನಾ ಅಲ್ಲ; ಸಾಲದಿಂದ ಬಿಡುಗಡೆ” ಎಂದು ದೇಶರ್ದಾ ಹೇಳುತ್ತಾರೆ. ಅದಕ್ಕಾಗಿ ಕೃಷಿ-ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗಬೇಕು; ಅಗತ್ಯವಾದಲ್ಲಿ ಸರ್ಕಾರ ಸಕಾಲದಲ್ಲಿ ಖರೀದಿಸಬೇಕು.
ಪಂಜಾಬ್-ಹರ‍್ಯಾಣ
ಪಂಜಾಬ್ ಒಂದು ಕಾಲದಲ್ಲಿ ದೇಶದ ಕಣಜ ಎನಿಸಿದ್ದಂತಹ ನಾಡು; ಉತ್ತಮ ನೀರಾವರಿ ಸೌಕರ್ಯದಿಂದ ಅಲ್ಲಿನ ರೈತರು ಧಾರಾಳ ಬೆಳೆ ಬೆಳೆಯುತ್ತಿದ್ದರು. ಈಚೆಗೆ ಹಸಿರುಕ್ರಾಂತಿಯ ದುಷ್ಪರಿಣಾಮಗಳು ಅಲ್ಲಿನ ಒಂದು ಪ್ರಮುಖ ಸಮಸ್ಯೆ ಆಗಿರುವುದರ ಜೊತೆಗೆ ಕೃಷಿಯ ಬಗೆಗಿನ ತಾರತಮ್ಯ ನೀತಿಗಳು ಪಂಜಾಬನ್ನು ಕೂಡ ಬಾಧಿಸುತ್ತಿವೆ; ಕೃಷಿಗೆ ಸಂಬಂಧಿಸಿದ ಹಲವು ಅಂಶಗಳು ಹರ‍್ಯಾಣಕ್ಕೆ ಕೂಡ ಸಮಾನವಾಗಿವೆ. ಸಾಲಮನ್ನಾ, ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಎಂಎಸ್‌ಪಿಗನುಗುಣವಾಗಿ ಸಕಾಲದಲ್ಲಿ ಖರೀದಿಸಬೇಕು, ಬೆಲೆ ನಿಗದಿಯಲ್ಲಿ ಸ್ವಾಮಿನಾಥನ್ ವರದಿಯನ್ನು ಅನುಸರಿಸಬೇಕು ಮುಂತಾದವು ಈ ಎರಡೂ ರಾಜ್ಯಗಳ ರೈತರ ಸಮಾನ ಬೇಡಿಕೆಗಳಾಗಿವೆ.
೨೦೧೬-೧೭ರಲ್ಲಿ ಹರ‍್ಯಾಣದ ಜಾಟ್ ಸಮುದಾಯದ ಒಂದು ಭಾಗ ಮೀಸಲಾತಿಗಾಗಿ ಹೋರಾಟ ನಡೆಸಿತ್ತು. ಅದು ಕೃಷಿ ಸಮಸ್ಯೆ ಮತ್ತು ನಿರುದ್ಯೋಗಗಳ ಬಿಕ್ಕಟ್ಟಿನ ಫಲವಾಗಿತ್ತು. ರಾಜ್ಯದಲ್ಲಿ ಹಲವು ಕೃಷಿ- ಉತ್ಪನ್ನಗಳಿಗೆ ಸರ್ಕಾರ ಬೆಂಬಲಬೆಲೆ(ಎಂಎಸ್‌ಪಿ) ಯನ್ನು ನಿಗದಿಪಡಿಸಿದರೂ ಕೂಡ ರೈತರು ಅದಕ್ಕಿಂತ ಕಡಮೆ ಬೆಲೆಗೆ ಮಾರುವ ಪರಿಸ್ಥಿತಿಯಿತ್ತು. ಉದಾಹರಣೆಗೆ, ಸಾಸಿವೆಯ ಎಂಎಸ್‌ಪಿ ಕ್ವಿಂಟಾಲಿಗೆ ೩,೭೦೦ ರೂ. ಇದ್ದರೂ ರೈತರು ೩,೩೦೦ ರೂ. ಗೆ ಮಾರಬೇಕಾಗಿತ್ತು. ಬಾಜ್ರಾ(ಸಜ್ಜೆ)ಗೆ ೧,೨೬೦ ರೂ. ನಿಗದಿಪಡಿಸಿದ್ದರೂ ರೈತರು ೧,೧೦೦ ರೂ.(ಕ್ವಿಂಟಾಲಿ)ಗೆ ಮಾರುವ ಪರಿಸ್ಥಿತಿಯಿತ್ತು. ಖರೀದಿಯ ವಿಳಂಬ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಹತ್ತಾರು ?ರತ್ತುಗಳನ್ನು ಹಾಕುತ್ತಿದ್ದದ್ದು ಆ ಪರಿಸ್ಥಿತಿಗೆ ಕಾರಣ. ರೈತರ ಮಟ್ಟಿಗೆ ಅದು ಹತಾಶ ಮಾರಾಟವೇ ಆಗಿತ್ತು; ಉತ್ಪಾದನಾ ವೆಚ್ಚವೇ ಬರುತ್ತಿರಲಿಲ್ಲ. ದಾಸ್ತಾನು ಸೌಕರ್ಯದ ಕೊರತೆ ಇದ್ದ ಕಾರಣ ಅಂತಹ ಮಾರಾಟ ಅನಿವಾರ್ಯವಾಗಿತ್ತು.
ರಸಗೊಬ್ಬರ, ಡೀಸೆಲ್ ಮತ್ತು ಕೀಟನಾಶಕಗಳು ದುಬಾರಿಯಾದ ಕಾರಣ ಹರ‍್ಯಾಣ, ಪಂಜಾಬ್ ಎರಡೂ ರಾಜ್ಯಗಳಲ್ಲಿ ರೈತರ ಸಾಲ ಏರಿದೆ. ಕೃಷಿಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿದ ಕಾರಣ ತುಂಬ ಕೃಷಿಕುಟುಂಬಗಳು ಭೂರಹಿತವಾಗಿವೆ. ಉತ್ಪಾದಕತೆ ಇಳಿದಿದೆ. “ಸರ್ಕಾರ ಪರ್ಯಾಯವಾಗಿ ಭೂಮಿಯ ಅನಿವಾರ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿದೆ. ಅದರಿಂದಾಗಿ ರೈತರು ಕೃಷಿಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದು ಅಲ್ಲಿನ ರೈತನಾಯಕರು ಟೀಕಿಸುತ್ತಾರೆ. ಈ ಸಮಸ್ಯೆ ದೇಶದ ಇತರ ಬಹಳ? ಭಾಗಗಳಿಗೂ ಅನ್ವಯಿಸುವಂಥದ್ದು.
ಲಾಭದಾಯಕವಲ್ಲದ ಬೆಲೆಯಿಂದಾಗಿ ಕೂಡ ಹರ‍್ಯಾಣದ ಜನ ಕೃಷಿಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ಉದಾಹರಣೆ ಕೊಡುವುದಾದರೆ, ಹತ್ತಿ ಕ್ವಿ.ಗೆ ೧೫ ವರ್ಷಗಳ ಹಿಂದೆ ೭,೦೦೦ ರೂ. ಇತ್ತಂತೆ. ರೈತರಿಗೆ ಈಗಲೂ ಅಷ್ಟು ಸಿಗುತ್ತಿದೆ ಎಂದರೆ ಸಮಸ್ಯೆಯ ಗಾಂಭೀರ್ಯವನ್ನು ಅರ್ಥೈಸಿಕೊಳ್ಳಬಹುದು. ರಾಜ್ಯದಲ್ಲಿ ಕೆಲವು ತಳಿಯ ಭತ್ತಗಳಿಗೆ ಸರ್ಕಾರ ಬೆಂಬಲಬೆಲೆಯನ್ನು ಪ್ರಕಟಿಸಲೇ ಇಲ್ಲ. ಅದನ್ನು ಧಾನ್ಯವರ್ತಕರೇ ನಿರ್ಧರಿಸುತ್ತಾರೆ. ಒಂದು ಜಾತಿಯ ಬಾಸ್ಮತಿ ಅಕ್ಕಿಗೆ ಪೇಟೆಯ ಗ್ರಾಹಕ ಕೆ.ಜಿ.ಗೆ ೧೦೦ ರೂ. ನೀಡಿದರೆ ಹರ‍್ಯಾಣದ ಬೆಳೆಗಾರನಿಗೆ ಸಿಗುವುದು ೧೫ರಿಂದ ೨೦ ರೂ. ಮಾತ್ರವಂತೆ.
ಎನ್‌ಡಿಎ ಸರ್ಕಾರದ ’ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಹರ‍್ಯಾಣದ ರೈತರ ಪಾಲಿಗೆ ಅಪ್ರಯೋಜಕವೆನಿಸಿದೆ ಎಂಬ ಟೀಕೆ ಬಂದಿದೆ. ಏಕೆಂದರೆ ಪ್ರೀಮಿಯಂನಿಂದ ಸಂಗ್ರಹಿಸಿದ ಹಣಕ್ಕೂ ವಿತರಿಸಿದ ಕ್ಲೈಮ್(ಪರಿಹಾರ)ಗೂ ಭಾರೀ ಅಂತರವಿದೆ. ಸಂಗ್ರಹಿಸಿದ ಪ್ರೀಮಿಯಂ ೨೧,೫೦೦ ಕೋಟಿ ರೂ. ಗಳಾದರೆ ವಿತರಿಸಿದ್ದು ೭೧೪.೧೪ ಕೋಟಿ ರೂ. (ಶೇ. ೩.೩೧) ಮಾತ್ರ. ಹರ‍್ಯಾಣದಲ್ಲಿ ಅದರ ಮೂರು ಕಂಪೆನಿಗಳಿದ್ದರೆ ಪಂಜಾಬಿನಲ್ಲಿ ಆ ಯೋಜನೆ ಅನು?ನಕ್ಕೆ ಬಂದಿಲ್ಲ.
ಸಾಲ-ಆತ್ಮಹತ್ಯೆ
ಪಂಜಾಬಿನಲ್ಲಿ ೨೦೧೦ರಲ್ಲಿ ರೈತರ ಆತ್ಮಹತ್ಯೆಗಳು ದೊಡ್ಡಪ್ರಮಾಣದಲ್ಲಿ ಆರಂಭಗೊಂಡಿದ್ದು ಈಗಲೂ ನಡೆಯುತ್ತಲೇ ಇವೆ; ’ಆತ್ಮಹತ್ಯೆಗಳ ರಾಜ್ಯ’ ಎಂಬ ಕುಖ್ಯಾತಿ ಅದಕ್ಕೆ ಬಂದಿದೆ. ಈ ವ? ಪೂರ್ವಾರ್ಧದಲ್ಲಿ ರೈತರ ೭೦ ಆತ್ಮಹತ್ಯೆಗಳು ದಾಖಲಾಗಿವೆ. ಈ ಆತ್ಮಹತ್ಯೆಗಳಿಗೆ ಸಾಲವೇ ಪ್ರಮುಖ ಕಾರಣ.
ಕಳೆದ ಫೆಬ್ರುವರಿ- ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಸಾಲಮನ್ನಾದ ಭರವಸೆಯನ್ನು ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಅವರ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿತು. ರಾಜ್ಯದ ರೈತರ ಒಟ್ಟು ಸಾಲ ಎ?ಂದು ನೋಡಿ ಸಾಲಮನ್ನಾ ವಿಧಾನದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು ಸಮಿತಿಯ ಕೆಲಸ. ಏಪ್ರಿಲ್ ೧೬ರಂದು ರಚನೆಯಾದ ಸಮಿತಿ ಎರಡು ತಿಂಗಳಲ್ಲಿ ವರದಿ ನೀಡಿತು. ರೈತರು ಸಾಲಮನ್ನಾ ಬಗ್ಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಒತ್ತಾಯಿಸುತ್ತಿದ್ದರೆ ಸಂಪನ್ಮೂಲದ ಕೊರತೆ ಅವರ ಮುಂದಿರುವ ಸಮಸ್ಯೆ; ಸಮಿತಿ ತನ್ನ ವರದಿಯಲ್ಲಿ ಸಾಲಮನ್ನಾಗಿಂತ ರೈತರ ಬೆಳೆಗೆ ಉತ್ತಮ ಬೆಲೆ ನೀಡುವುದೇ ಮುಖ್ಯ ಎನ್ನುವ ಅಂಶವನ್ನು ಹೇಳಲು ಮರೆತಿಲ್ಲ.
ಪರಿಸ್ಥಿತಿ ಗಂಭೀರವಿದ್ದರೂ ರಾಜ್ಯದಲ್ಲಿ ಈಗಲೂ ಕೃಷಿ-ಉತ್ಪನ್ನಗಳು ಎಂಎಸ್‌ಪಿಗಿಂತ ಕಡಮೆ ಬೆಲೆಯಲ್ಲೇ ಮಾರಾಟವಾಗುತ್ತಿವೆ. ಉದಾಹರಣೆಗೆ ಎಣ್ಣೆ ತಯಾರಿಸುವ ಸೂರ್ಯಕಾಂತಿ ಬೀಜದ ಎಂಎಸ್‌ಪಿ ಕ್ವಿ.ಗೆ ೩,೯೫೦ ರೂ. ಆದರೆ ವ್ಯಾಪಾರಿಗಳು ರೈತರಿಗೆ ಕೊಡುವುದು ೨,೭೦೦ ರೂ. ಅದೇ ರೀತಿ ಮೆಕ್ಕೆಜೋಳ ಎಂಎಸ್‌ಪಿ ಕ್ವಿ.ಗೆ ೧,೨೪೦ ರೂ. ವ್ಯಾಪಾರಿಗಳು ರೈತರಿಂದ ಅದನ್ನು ಖರೀದಿಸುವುದು ೮೦೦-೯೦೦ ರೂ.ಗೆ. ಹಾಗಾದರೆ ಈ ಬೆಂಬಲಬೆಲೆ ಯಾರಿಗಾಗಿ ಎನ್ನುವ ಪ್ರಶ್ನೆ ಬರುವುದಿಲ್ಲವೆ?
ಈ ನಡುವೆ ಬೆಳೆಸಾಲದ ಮಿತಿ ಏರಿಸಬೇಕೆಂದು ಪಂಜಾಬಿನ ರೈತರು ಒತ್ತಾಯಿಸುತ್ತಿದ್ದಾರೆ. ಸಾಲ ವಾಪಸು ಮಾಡದಿರುವ ರೈತರ ಜಮೀನನ್ನು ಹರಾಜುಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ; ಸುಸ್ತಿದಾರರಿಗೆ ಸಾಲ ಕೊಡುವುದನ್ನು ನಿಲ್ಲಿಸಬಾರದೆಂದು ರಾಜ್ಯದ ರೈತರು ಒತ್ತಾಯಿಸುತ್ತಿದ್ದಾರೆ.
ಪಂಜಾಬಿನ ರೈತರ ಇನ್ನೊಂದು ಸಮಸ್ಯೆಯೆಂದರೆ, ಕೈಗಾರಿಕೆಗಳಿಂದ ಅಂತರ್ಜಲ ಕುಸಿದಿರುವುದು ಮತ್ತು ಕಲುಷಿತಗೊಂಡಿರುವುದು. ಏಕೆಂದರೆ ಡೈಯಿಂಗ್‌ನಂತಹ ಅಪಾಯಕಾರಿ ಕಾರ್ಖಾನೆಗಳು ಕೂಡ ತಾವು ಬಳಸಿದ ನೀರನ್ನು ಸಂಸ್ಕರಿಸದೆ ಹೊರಗೆ ಬಿಡುತ್ತಿವೆ; ಅದರಿಂದ ಅಂತರ್ಜಲ ಕೆಟ್ಟಿದೆ. ಈ ನಡುವೆ ಪಂಜಾಬಿನಲ್ಲಿ ರೈತರಿಗೆ ಒಂದೇರೀತಿಯ ಬೆಳೆ ಬೆಳೆಸಬೇಡಿ; ಬದಲಿಸಿ ಎನ್ನುವ ಸಲಹೆ ಸರ್ಕಾರದ ಕಡೆಯಿಂದ ಬರುತ್ತಿದೆ; ಆದರೆ ವಿವಿಧ ಬೆಳೆಗಳಿಗೆ ಬೆಂಬಲಬೆಲೆಯನ್ನು ಯಾರು ಪ್ರಕಟಿಸುತ್ತಾರೋ ಗೊತ್ತಿಲ್ಲ; ರಾಜ್ಯದ ರೈತ ಸಂಘಟನೆಗಳು ಹೋರಾಟದ ಮೂಡಿನಲ್ಲೇ ಇವೆ ಎಂಬುದು ವರದಿ.
ದೆಹಲಿಗೆ ಒಯ್ದವರು ಈಚಿನ ಕಾಲಮಾನದಲ್ಲಿ ರೈತರ ಸಮಸ್ಯೆಯನ್ನು ರಾಜ್ಯದಿಂದ ದೇಶದ ರಾಜಧಾನಿ ದೆಹಲಿಗೆ ಒಯ್ದವರು ತಮಿಳುನಾಡಿನ ರೈತರು. ಆ ರಾಜ್ಯದ ಶೇ. ೭೦ರ? ಜನ ರೈತರು. ಆದರೆ ಬರದ ಕಾರಣದಿಂದಾಗಿ ರಾಜ್ಯದಲ್ಲಿ ಕೃಷಿ ಚಟುವಟಿಕೆ ಬಹುತೇಕ ನಿಂತುಹೋಗಿದೆ ಎಂಬುದು ಸದ್ಯದ ವಿದ್ಯಮಾನ. ಕೇಂದ್ರ, ರಾಜ್ಯ ಸರ್ಕಾರಗಳು ಸರಿಯಾದ ಬರಪರಿಹಾರ ನೀಡಬೇಕು ಮತ್ತು ಸೂಕ್ತ ಎಂಎಸ್‌ಪಿ ನಿರ್ಧರಿಸಿ ಜಾರಿಗೊಳಿಸಬೇಕೆಂದು ರಾಜ್ಯದ ರೈತರು ಒತ್ತಾಯಿಸುತ್ತಿದ್ದಾರೆ. ತಮ್ಮ ಸದ್ಯದ ದುರವಸ್ಥೆಗೆ ಕೇಂದ್ರ-ರಾಜ್ಯ ಸರ್ಕಾರಗಳ ಕೃಷಿನೀತಿಯೇ ಕಾರಣ. ಮೂಲಸವಲತ್ತು ಮತ್ತು ಕಲ್ಯಾಣಕಾರ್ಯಕ್ರಮಗಳ ತಪ್ಪು ಅನು?ನ, ನದಿನೀರಿನ ಹಂಚಿಕೆ ವಿವಾದ, ನಿರಂತರ ಎರಡು ವ? ಮಳೆ ಬಾರದಿದ್ದದ್ದು ಮತ್ತು ನೋಟು ಅಮಾನ್ಯಗಳು ಸಮಸ್ಯೆ ಉಲ್ಬಣಿಸಲು ಕಾರಣ ಎನ್ನುತ್ತಾರೆ.
ದೇಶದ ಒಂದು ಮೂಲೆಯಲ್ಲಿರುವ ಅಸ್ಸಾಮಿಗೆ ಹೋದರೂ ರೈತರ ಸಮಸ್ಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅದೇ ಶೋ?ಣೆ, ಅದೇ ವಂಚನೆ. ಕೃಷಿವೆಚ್ಚದ ಏರಿಕೆ ಮತ್ತು ಬೆಲೆಕುಸಿತವೇ ರಾಜ್ಯದ ರೈತರ ಮುಖ್ಯ ಸಮಸ್ಯೆಗಳು.
ರಾಜ್ಯದಲ್ಲಿ ಸಾಮಾನ್ಯವಾಗಿ ಬರುವ ಮಳೆ (ವಾರ್ಷಿಕ) ೯೨೧ ಮಿ.ಮೀ. ರಾಷ್ಟ್ರೀಯ ಸರಾಸರಿ ೧೨೦೦ ಮೀ.ಮೀ. ೩೩.೯೪ ಲಕ್ಷ ಹೆಕ್ಟೇರ್ (ಹೆಕ್ಟೇರ್ = ಎರಡೂವರೆ ಎಕ್ರೆ) ಪ್ರದೇಶಕ್ಕೆ ನೀರಾವರಿ ಇದೆ. ಅದರ ಶೇ. ೭೯ ಭಾಗದಲ್ಲಿ ಆಹಾರಧಾನ್ಯಗಳನ್ನು ಬೆಳೆಸುತ್ತಾರೆ. ನೋಟು ಅಮಾನ್ಯದಿಂದ ಚಲಾವಣೆಯಲ್ಲಿ ನಗದು ಕೊರತೆಯಾಗಿ ಗ್ರಾಮೀಣ ಆರ್ಥಿಕತೆಗೆ ಏಟು ಬಿತ್ತು. ಗೋಹತ್ಯೆ ನಿ?ಧದಿಂದಲೂ ತೊಂದರೆಯಾಗಿದೆ. ಮಳೆಯಿಲ್ಲದೆ ಮೇವಿನ ಕೊರತೆ ಹಾಗೂ ಬೆಲೆಯೇರಿಕೆಯ ಕಾರಣ ರೈತರು ಜಾನುವಾರಿನ ಹತಾಶ ಮಾರಾಟ ಮಾಡಿದರು. ಹಣದ ಕೊರತೆಯಿಂದಾಗಿ ಬೀಜ, ರಸಗೊಬ್ಬರಗಳ ಖರೀದಿ ಕ?ವಾಯಿತು. ಕೃಷಿಕಾರ್ಮಿಕರಿಗೆ ಸಂಬಳ ಕೊಡುವುದಕ್ಕೂ ಹಣ ಇರಲಿಲ್ಲ. ಆಗ ರೈತರು ಖಾಸಗಿ ಲೇವಾದೇವಿಯವರಿಂದ ಸಾಲ ಪಡೆದರು. ಪ್ರತಿವ? ಬಿತ್ತನೆ ಜಾಗ ಶೇ. ೨೫ರ? ಇಳಿಯಿತು. ಭತ್ತ, ಬೇಳೆ, ಧಾನ್ಯ, ಎಣ್ಣೆಕಾಳು ಎಲ್ಲದರ ಬಿತ್ತನೆ ಜಾಗವೂ ಕುಸಿಯಿತು. ಮಳೆ ಕೈಕೊಟ್ಟ ಕಾರಣ ಬೆಳೆಗಳು ನಾಶವಾದವು; ರೈತರ ಸಾಲ ಏರಿತು. ವ?ದ ಪೂರ್ವಾರ್ಧದಲ್ಲಿ ಸುಮಾರು ೧೫೦ ಜನ ರೈತರು ಆತ್ಮಹತ್ಯೆಗೈದರು (ಸರ್ಕಾರಿ ಲೆಕ್ಕದಲ್ಲಿ ೧೭) – ಹೀಗೆ ತಮಿಳುನಾಡಿನ ಕೃಷಿಸಮಸ್ಯೆಯ ದುರ್ಭರತೆ ಸಾಗುತ್ತದೆ.
ರೈತರ ಆತ್ಮಹತ್ಯೆಗಳಿಗೆ ಮುಖ್ಯಕಾರಣ ಬರವಾಗಿದ್ದರೂ ಅದರಲ್ಲಿ ನೋಟು ಅಮಾನ್ಯದ ಪಾತ್ರವೂ ಇದೆ ಎಂದು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ರೈತನಾಯಕರು ಆರೋಪಿಸುತ್ತಾರೆ. ಅದರಿಂದಾಗಿ ರೈತರಿಗೆ ಸಾಲ ಸಿಗಲಿಲ್ಲ. ಸಹಕಾರಿ ಸಂಘ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಹಣ ಇರಲಿಲ್ಲ. ಜೊತೆಗೆ ಬರ ಉಂಟಾಗಿ ತಮಿಳುನಾಡಿನ ಕೃಷಿ ತೀರಾ ಕ?ಕ್ಕೆ ಸಿಲುಕಿತು ಎಂದವರು ಹೇಳುತ್ತಾರೆ.
ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಮೆಯಾದ ಕಾರಣ ಕುರುವೈ ಭತ್ತದ ಬೆಳೆಗೆ ನೀರು ಸಿಗಲಿಲ್ಲ. ಇಡೀ ರಾಜ್ಯದ ಪರಿಸ್ಥಿತಿ ಹಾಗೆಯೇ ಇದೆ. ಕಾವೇರಿ ಡೆಫಿಸಿಟ್ (ಕೊರತೆ) ನದಿಯಾಗಿದೆ. ಅದಕ್ಕಾಗಿ ಕಾವೇರಿ ಮ್ಯಾನೇಜ್‌ಮೆಂಟ್ ಬೋರ್ಡ್ ಅನು?ನಗೊಂಡರೆ ರಾಜ್ಯದ ಕೃಷಿಯ ಹಲವು ಸಮಸ್ಯೆಗಳು ದೂರ ಆಗಬಹುದೆಂದು ಅಲ್ಲಿನ ರೈತನಾಯಕರು ಅಭಿಪ್ರಾಯಪಡುತ್ತಾರೆ. ಕಾವೇರಿಯಲ್ಲಿ ನೀರೇ ಇಲ್ಲದಿದ್ದರೆ ಮ್ಯಾನೇಜ್‌ಮೆಂಟ್ ಬೋರ್ಡ್ ಯಾವ ಪವಾಡ ಮಾಡುತ್ತದೋ ಗೊತ್ತಿಲ್ಲ; ಇರಲಿ. ಉತ್ಪಾದನಾ ವೆಚ್ಚಕ್ಕೆ ಶೇ. ೫೦ರ? ಸೇರಿಸಿದ ಬೆಂಬಲಬೆಲೆ ನೀಡಬೇಕೆನ್ನುವ ಸ್ವಾಮಿನಾಥನ್ ವರದಿ ಶಿಫಾರಸು ಜಾರಿಗೆ ತಮಿಳುನಾಡು ರೈತರ ಆಗ್ರಹ ಕೂಡ ಇದೆ.
ಕಳೆದ ಜನವರಿಯಲ್ಲಿ ರಾಜ್ಯಸರ್ಕಾರ ತಮಿಳುನಾಡು ಬರಪೀಡಿತವೆಂದು ಘೋಷಿಸಿತು. ಕೇಂದ್ರಸರ್ಕಾರ ೨,೦೦೦ ಕೋಟಿ ರೂ. ಬಿಡುಗಡೆ ಮಾಡಿತಾದರೂ ಅದು ಯಾತಕ್ಕೂ ಸಾಲದೆಂದು ರಾಜ್ಯದ ರೈತರು ಅಸಮಾಧಾನ ಸೂಚಿಸಿದರು. ಎಲ್ಲ ಸಹಕಾರಿ ಸಾಲಗಳನ್ನು ಮನ್ನಾ ಮಾಡಿ ಎಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತು.
ರಾಜ್ಯದ ರೈತನಾಯಕರು ಸಮಸ್ಯೆಯನ್ನು ದೆಹಲಿಗೆ ಕೊಂಡುಹೋದರು. ಜಂತರ್‌ಮಂತರ್‌ನಲ್ಲಿ ೪೧ ದಿನ ಧರಣಿ ಕುಳಿತರು. ರಾಜ್ಯಕ್ಕೆ ೪೦ ಸಾವಿರ ಕೋಟಿ ರೂ. ಬರಪರಿಹಾರ ನೀಡಬೇಕು, ಸಾಲಮನ್ನಾ ಮಾಡಬೇಕು; ಸೂಕ್ತ ಎಂಎಸ್‌ಪಿ ಜಾರಿಯಾಗಬೇಕು; ಕಾವೇರಿ ಮ್ಯಾನೇಜ್‌ಮೆಂಟ್ ಬೋರ್ಡ್ ಸ್ಥಾಪಿಸಬೇಕು; ಪ್ರಧಾನಿ ಬಂದು ತಮ್ಮ ದೂರು ಕೇಳಬೇಕು – ಮುಂತಾದವು ಅವರ ಬೇಡಿಕೆಗಳಾಗಿದ್ದವು. ತಲೆಬುರುಡೆ ಪ್ರದರ್ಶನ, ನಗ್ನರಾಗಿ ಉರುಳುಸೇವೆ, ಸ್ವಮೂತ್ರಪಾನ, ಮೂಷಿಕ (ಇಲಿ) ಭಕ್ಷಣೆಯಂತಹ ವಿಲಕ್ಷಣ ಮತ್ತು ತೀವ್ರಸ್ವರೂಪದ ಪ್ರತಿಭಟನೆಗಳನ್ನು ಅವರು ನಡೆಸಿದರಾದರೂ ಕೇಂದ್ರಸರ್ಕಾರ ಮಧ್ಯಪ್ರವೇಶಿಸುವ ಉತ್ಸಾಹ ತೋರಲಿಲ್ಲ; ಆದರೆ ಆ ರೈತರು ದೇಶದ ಗಮನ ಸೆಳೆದದ್ದು ಸತ್ಯ.
“ಸರ್ಕಾರಗಳಿಗೆ ರೈತರು ಭಿಕ್ಷುಕರು, ಗುಲಾಮರಂತೆ ಕಾಣುತ್ತಾರೆ. ಹೋರಾಟ ನಡೆಸಿದಾಗ ಉಗ್ರರ ಪಟ್ಟ ಕಟ್ಟುತ್ತಾರೆ. ನಮ್ಮ ಗದ್ದೆಗಳಲ್ಲಿ ನಾವು ಸತ್ತರೆ ಯಾರೂ ಕೇಳುವವರಿಲ್ಲ. ನಮ್ಮ ಹಕ್ಕುಗಳನ್ನು ಅಲಕ್ಷಿಸಲಾಗಿದೆ. ತಮಿಳುನಾಡಿನಲ್ಲಿ ನಮ್ಮ ಚಳವಳಿ ಅಲಕ್ಷ್ಯಕ್ಕೆ ಗುರಿಯಾದ ಕಾರಣ ದೆಹಲಿಗೆ ಹೋಗಿ ನಮ್ಮ ನೋವನ್ನು ಪ್ರದರ್ಶಿಸಿದೆವು” ಎನ್ನುವ ವಿವರಣೆಯನ್ನು ಅವರು ನೀಡಿದ್ದಾರೆ. “ಮಧ್ಯಪ್ರದೇಶ, ಮಹಾರಾ?, ಉತ್ತರಪ್ರದೇಶ, ಪಂಜಾಬ್‌ಗಳ ರೈತರು ನಮ್ಮ ಧರಣಿಯನ್ನು ಬೆಂಬಲಿಸಿದರು. ಆ ರೀತಿಯಲ್ಲಿ ದೇಶಾದ್ಯಂತ ರೈತರ ಹೋರಾಟದ ಕಿಡಿ ಹೊತ್ತಿಸಿದ್ದು ನಾವು. ಅಖಿಲಭಾರತ ಕಿಸಾನ್ ಸಮನ್ವಯ ಸಮಿತಿಯೊಂದನ್ನು ರಚಿಸಿದ್ದೇವೆ. ಅದು ಸದ್ಯವೇ ಕಾರ್ಯಯೋಜನೆಯನ್ನು ರೂಪಿಸಲಿದೆ” ಎಂದು ಕೂಡ ಈ ರೈತನಾಯಕರು ತಿಳಿಸಿದ್ದಾರೆ. ದೇಶಾದ್ಯಂತ ರೈತಚಳವಳಿ ನಡೆದಾಗ ತಮಿಳುನಾಡಿನಲ್ಲೂ ಅದು ಪ್ರತಿಧ್ವನಿಸಿತು; ರೈತರ ಆತ್ಮಹತ್ಯೆ ತಡೆಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಪ್ರಕಟಿಸಿದ್ದಾರೆ.
ಅಸ್ಸಾಮಿನಲ್ಲೂ ಅದೇ ದೇಶದ ಒಂದು ಮೂಲೆಯಲ್ಲಿರುವ ಅಸ್ಸಾಮಿಗೆ ಹೋದರೂ ರೈತರ ಸಮಸ್ಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅದೇ ಶೋ?ಣೆ, ಅದೇ ವಂಚನೆ. ಕೃಷಿ ವೆಚ್ಚದ ಏರಿಕೆ ಮತ್ತು ಬೆಲೆಕುಸಿತವೇ ರಾಜ್ಯದ ರೈತರ ಮುಖ್ಯ ಸಮಸ್ಯೆಗಳು. ಅದರೊಂದಿಗೆ ಮಧ್ಯೆ ಬಂದ ನೋಟು ಅಮಾನ್ಯವು ತನ್ನ ಕೊಡುಗೆ ನೀಡಿದರೆ ಮಾರುಕಟ್ಟೆಯಲ್ಲಿ ಸರ್ಕಾರದ ಬೆಂಬಲ ಸಿಗದೆ ರಾಜ್ಯದ ಪ್ರಮುಖ ಬೆಳೆಯಾದ ಆಲೂಗಡ್ಡೆ ಬೆಳೆಗಾರರು ಈ ವ? ತುಂಬ ಸಂಕ?ಕ್ಕೊಳಗಾದರು. ರಾಜ್ಯದ ರಾಜಧಾನಿ ಗುವಾಹಟಿಯಲ್ಲಿ ಗ್ರಾಹಕ ಆಲೂಗಡ್ಡೆ ಕೆ.ಜಿ.ಗೆ ೨೦ ರೂ. ನೀಡುತ್ತಿದ್ದಾಗ ರೈತ ಒಂದು-ಎರಡು ರೂ. ಗೆ ಮಾರುತ್ತಿದ್ದ. ಮುಖ್ಯವಾಗಿ ನೋಟು ಅಮಾನ್ಯವಾದಾಗ ಆ ಲ U q ಂ i P ರಿ ಲ v . ಒಂದು ರೂ.ಗೆ ಮಾರುವ ಪರಿಸ್ಥಿತಿ ಬಂದಾಗ ಉತ್ತರ ಅಸ್ಸಾಮಿನ ಶೋಣಿತಪುರ ಜಿಲ್ಲೆಯ ರೈತರು ತಾವು ಬೆಳೆದ ಆಲೂಗಡ್ಡೆಯನ್ನು ರಸ್ತೆಮೇಲೆ ಸುರಿದು ಪ್ರತಿಭಟಿಸಿದರು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಗೋದಾಮುಗಳಲ್ಲಿ ಆಲೂಗಡ್ಡೆ ದಾಸ್ತಾನು ಹಾಗೆಯೇ ಉಳಿಯಿತು.
ಕೆಳ ಅಸ್ಸಾಮಿನ ಬಾರಾಪೇಟೆ ಜಿಲ್ಲೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಅಲ್ಲ. ಅಲ್ಲಿಯ ಆಲೂಗಡ್ಡೆ ವ್ಯಾಪಾರಕೇಂದ್ರವಾದ ಮಂಡಿಯಾದಲ್ಲಿ ರೈತರು ಕೆ.ಜಿ.ಗೆ ೨-೩ ರೂ.ಗೆ ಮಾರಬೇಕಾಯಿತು. ಹಳ್ಳಿಗಳ ರಸ್ತೆ ಬದಿಯಲ್ಲಿ ರಾಶಿರಾಶಿ ಆಲೂಗಡ್ಡೆ ಕೊಳೆಯುತ್ತಿದ್ದ ದೃಶ್ಯ ಮಾಮೂಲಾಗಿತ್ತು. ಆಲೂಗಡ್ಡೆಯ ಎರಡು ಹೊಸ ತಳಿಗಳನ್ನು ತೊಡಗಿಸಿದ ಕಾರಣ ಭಾರೀ ಫಸಲು ಬಂದು ಪರಿಸ್ಥಿತಿ ಹೀಗಾಯಿತೆಂಬ ಒಂದು ವಿವರಣೆ ಕೃಷಿ ಇಲಾಖೆಯಿಂದ ಬಂತು. ಒಟ್ಟಿನಲ್ಲಿ ರೈತರು ಹೆಚ್ಚು ಬೆಳೆದದ್ದೇ ಅಪರಾಧ! ಅಂಕಿ-ಅಂಶಗಳ ಪ್ರಕಾರ ಅಸ್ಸಾಮಿಗೆ ಪ್ರತಿವ? ಸುಮಾರು ೪೦ ಲಕ್ಷ ಟನ್ ಆಲೂಗಡ್ಡೆ ಬೇಕಾಗಿದ್ದು, ಅದರಲ್ಲಿ ೨೦-೨೫ ಲಕ್ಷ ಟನ್ ಹೊರಗಿನಿಂದ ಬರುತ್ತದೆ.
ರಾಜ್ಯಸರ್ಕಾರದ ಖರೀದಿನೀತಿಯನ್ನು ರೈತರು ಟೀಕಿಸಿದ್ದಾರೆ. ಇಲ್ಲಿನ ರೈತರು ಪಂಜಾಬ್, ಉತ್ತರಪ್ರದೇಶ, ಪಶ್ಚಿಮ ಬಂಗಾಳಗಳ ಬಿತ್ತನೆಬೀಜವನ್ನು ಅವಲಂಬಿಸಿದ್ದು, ಅದಕ್ಕೆ ಭಾರೀ ಸಾಗಾಟವೆಚ್ಚ ತಗಲುತ್ತದೆ; ಮಧ್ಯದಲ್ಲಿ ದಲ್ಲಾಳಿಗಳು ದರ ಏರಿಸುತ್ತಾರೆ. ಆಲೂಗಡ್ಡೆ ಬೆಳೆಸುವವರಲ್ಲಿ ಬಹಳ? ಜನ ಭೂರಹಿತ ರೈತರು; ಜಮೀನನ್ನು ಭೂಮಾಲೀಕರಿಂದ ಗುತ್ತಿಗೆ ಪಡೆದು ಕೃಷಿ ಮಾಡುತ್ತಾರೆ; ಒಂದ? ಹಣ ಅದಕ್ಕೆ ಹೋಗುತ್ತದೆ. ಸಬ್ಸಿಡಿ ಇಲ್ಲದ ಕಾರಣ ರಸಗೊಬ್ಬರ ದುಬಾರಿಯಾಗಿದೆ; ಖಾಸಗಿಯವರು ಕಳಪೆ ರಸಗೊಬ್ಬರವನ್ನು ನೀಡುತ್ತಾರೆ. ಬೆಲೆಗೆ ಬಳಸುವ ಔ?ಧಿಯ ದರ ಪ್ರತಿವ? ಶೇ. ೨೦-೨೫ರ? ಏರುತ್ತದೆ. ಉತ್ಪನ್ನದ ಬೆಲೆ ಕುಸಿಯುತ್ತದೆ. ದಾಸ್ತಾನು ಮಾಡಲು ಶೈತ್ಯಾಗಾರಗಳಿಲ್ಲ. ಆಲೂಗಡ್ಡೆ ಉತ್ಪಾದನಾ ವೆಚ್ಚ ಕೆ.ಜಿ.ಗೆ ೯ ರೂ. ಇದ್ದರೆ ರೈತರು ೨-೩ ರೂ.ಗೆ ಮಾರುವ ಒತ್ತಡದಲ್ಲಿರುತ್ತಾರೆ.
ಸರ್ಕಾರವೇ ಖರೀದಿಸಿ ರೈತರ ಹತಾಶ ಮಾರಾಟವನ್ನು ತಡೆಯಬೇಕೆನ್ನುವ ಆಗ್ರಹ ಇದೆ. ಸರ್ಕಾರ ಒಂದುಕೋಟಿ ರೂ.ನಲ್ಲಿ ಕೆ.ಜಿ.ಗೆ ೫ ರೂ.ಗಳಂತೆ ಖರೀದಿಸುವುದಾಗಿ ಒಮ್ಮೆ ಹೇಳಿತು. ಸರ್ಕಾರ ಖರೀದಿಸಿದರೆ ಕೆ.ಜಿ.ಗೆ ೨-೩ ರೂ. ಲಾಭ ಆಗಬಹುದೆಂದು ರೈತರು ಕಾದರು. ಸರ್ಕಾರದ ಖರೀದಿ ಸೀಮಿತವಾಗಿದ್ದು, ಭಾರೀ ಪ್ರಮಾಣದ ಆಲೂಗಡ್ಡೆ ಉಳಿದುಹೋಯಿತು ಅಥವಾ ನ?ವಾಯಿತು. “ಒಂದು ಬಿಘಾ(ಏಳೂವರೆ ಏಕ್ರೆ)ದಲ್ಲಿ ಆಲೂಗಡ್ಡೆ ಬೆಳೆಸಲು ಖರ್ಚು ಸುಮಾರು ೨೮ ಸಾವಿರ ರೂ. ತಗಲುತ್ತದೆ; ಆದರೆ ರೈತರಿಗೆ ಬಂದ ಆದಾಯ ೬ರಿಂದ ೯ ಸಾವಿರ ರೂ. ಮಾತ್ರ. ಸರ್ಕಾರ ಕೆ.ಜಿ.ಗೆ ೫ ರೂ. ಕೊಟ್ಟರೂ ಅದರಲ್ಲಿ ಒಂದು ರೂ. ಬ್ಯಾಗು, ಪ್ಯಾಕಿಂಗ್, ಲೋಡಿಂಗ್ ಮತ್ತು ಸಾಗಾಟಗಳಿಗೆ ಖರ್ಚಾಗುತ್ತದೆ” ಎಂದೋರ್ವ ರೈತ ಹೇಳುತ್ತಾರೆ. ರಾಜ್ಯದಲ್ಲಿ ಭತ್ತದ ಬೆಳೆ ಕೂಡ ಉತ್ತಮಸ್ಥಿತಿಯಲ್ಲಿಲ್ಲ; ಇಳುವರಿಯಲ್ಲಿ ೩-೪ ಪಾಲಿನ? ಕುಸಿತವಾಗಿದೆ ಎಂದು ರೈತರು ಅಹವಾಲು ತೋಡಿಕೊಳ್ಳುತ್ತಾರೆ.
ಸಾಲಮನ್ನಾದಿಂದ ಕಷ್ಟ
ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಆಗ ನೀಡುವ ಭರವಸೆಗಳಲ್ಲಿ ರೈತರ ಸಾಲಮನ್ನಾ ಒಂದು ಇದ್ದೇ ಇರುತ್ತದೆ; ದೇಶದ ನಮ್ಮ ಆದ್ಯತೆ ಯಾವುದಕ್ಕೆ ಇರಬೇಕೆಂದು ಸಮರ್ಥವಾಗಿ ನಿರ್ಧರಿಸಿ ಅದರಂತೆ ಕಾರ್ಯಪ್ರವೃತ್ತರಾಗಲು ಸಾಧ್ಯವಾಗದೆ ಇರುವುದು ಭಾರತದ ಇಂದಿನ ಆರ್ಥಿಕ ವ್ಯವಸ್ಥೆಯ ಬಹುದೊಡ್ಡ ದೋ? ಎನ್ನಬಹುದು.
ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲೂ ಹಾಗೆಯೆ ಆಗಿತ್ತು. ಪ್ರಚಾರಕ್ಕೆ ಬಂದ ಪ್ರಧಾನಿ ಸೇರಿದಂತೆ ಎಲ್ಲರೂ ಆ ಭರವಸೆ ನೀಡಿದ್ದರು. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮೊದಲ ಸಂಪುಟ ಸಭೆಯಲ್ಲೇ ಸಾಲಮನ್ನಾದ ಘೋ?ಣೆ ಮಾಡಿತು (ಏಪ್ರಿಲ್ ೪). ಅದರಿಂದ ಇತರ ರಾಜ್ಯಗಳಲ್ಲೂ ಆ ಬೇಡಿಕೆಗೆ ಚಾಲನೆ ದೊರೆತು ರೈತರ ಚಳವಳಿಗಳು ಆರಂಭವಾದವು.
ಆದರೆ ಉತ್ತರಪ್ರದೇಶದ ಸಾಲಮನ್ನಾ ರೈತರ ಟೀಕೆಗೆ ಗುರಿಯಾಯಿತು. ಕಾರಣ ಸಾಲಮನ್ನಾ ಒಂದು ಲಕ್ಷ ರೂ.ವರೆಗೆ ಮಾತ್ರ ಇತ್ತು. ಮಾರ್ಚ್ ೩೧, ೨೦೧೬ರ ವರೆಗಿನದ್ದು ಮುಂತಾದ ?ರತ್ತುಗಳಿದ್ದವು. ಚುನಾವಣಾ ಪ್ರಚಾರದ ವೇಳೆ ಅದನ್ನೆಲ್ಲ ಯಾರು ಹೇಳುತ್ತಾರೆ? ಸಾಲಮನ್ನಾ ಎಂದರೆ ಪೂರ್ತಿಸಾಲದ ಮನ್ನಾ ಎಂದು ರೈತರು ಭಾವಿಸಿದ್ದರು. “ಭಾರೀ ಸಾಲದ ಹೊರೆ ಇರುವವರನ್ನೇ ಹೊರಗಿಟ್ಟಿದ್ದಾರೆ” ಎಂದು ರೈತರು ಟೀಕಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಈ ಸಮಸ್ಯೆಗೆ ಬೇರೆ ಮುಖವೂ ಇದೆ. ಅಲ್ಲಿಯ ಬೆಳೆಸಾಲದಲ್ಲಿ ಎರಡು ವಿಧ. ಒಂದು ಶೇ. ೩ ದರದ ಬಡ್ಡಿಯಲ್ಲಿ ಬ್ಯಾಂಕುಗಳು ನೀಡುವ ೯ ತಿಂಗಳು ಅವಧಿಯ ಸಾಲ, ೯ ತಿಂಗಳೊಳಗೆ ತೀರಿಸದಿದ್ದರೆ ಬಡ್ಡಿದರ ಶೇ. ೯ ಆಗುತ್ತದೆ. ಅಲ್ಲಿಯ ರೈತರು ಜಾಸ್ತಿ ಅವಧಿ ಮತ್ತು ಅಧಿಕ ಬಡ್ಡಿಯ ಸಾಲವನ್ನು ಕೇಳುವುದಿಲ್ಲ. ಸಣ್ಣ, ಅತಿಸಣ್ಣ ರೈತರಂತೂ ಕೇಳುವುದು ಅದನ್ನೇ. ಹೇಗಾದರೂ ಮಾಡಿ ಒಂಬತ್ತು ತಿಂಗಳಲ್ಲಿ ತೀರಿಸುತ್ತಾರೆ; ಕೂಡಲೆ ಮುಂದಿನ ೯ ತಿಂಗಳಿಗೆ ಸಾಲ ಪಡೆಯುವುದೂ ಇದೆ. ಮೇ, ಜೂನ್‌ನಲ್ಲಿ ಸಾಲ ಪಡೆದು ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. ಫೆಬ್ರುವರಿಯಲ್ಲಿ ರಾಬಿ ಬೆಳೆಯ ಫಸಲು ಕೈಸೇರಿದಾಗ ಸಾಲ ತೀರಿಸುತ್ತಾರೆ. ಮಾರ್ಚ್ ವೇಳೆ ಸಾಲ ತೀರಿಸದೆ ಇರುವವರು ಪಕ್ಕಾ ಸುಸ್ತಿದಾರರು ಮಾತ್ರ. ಅಂದರೆ ಸುಸ್ತಿದಾರರಾಗಿ ಲಾಭ ಪಡೆಯುವ ಮನೋಭಾವ ಆ ರೈತರಲ್ಲಿಲ್ಲ. “ಸಾಲಮನ್ನಾ ಎಂದರೆ ಪ್ರಾಮಾಣಿಕ ರೈತರೊಡನೆ ನಡೆಸುವ ಆಟ; ಸುಸ್ತಿದಾರರು ಮತ್ತು ಅಂತಹ ಸ್ವಭಾವಕ್ಕೆ ಪ್ರೋತ್ಸಾಹ” ಎಂದು ಟೀಕಿಸುವ ರೈತರೂ ಇದ್ದಾರೆ. ಪ್ರಥಮ ಸಂಪುಟ ಸಭೆಯಲ್ಲಿ ಪ್ರಕಟಿಸಿದರೂ ಅನು?ನ ವಿಳಂಬಗತಿಯಲ್ಲಿದೆ ಎಂದು ಕೆಲವು ರೈತರಿಂದ ಟೀಕೆ ಬಂದಿದೆ.
ರಾಜ್ಯ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಕೆಳಗಿನ ಅರ್ಥಗರ್ಭಿತ ಮಾತನ್ನು ಆಂಗ್ಲಪಾಕ್ಷಿಕ ಪತ್ರಿಕೆ ಉಲ್ಲೇಖಿಸಿದೆ: “ಪ್ರಧಾನಿ ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದ ಕಾರಣ ಕೇಂದ್ರಸರ್ಕಾರ ಏನಾದರೂ ಸಹಾಯ ಮಾಡಬಹುದೆನ್ನುವ ಆಶೆಯಿತ್ತು. ಆದರೆ ಮಧ್ಯಪ್ರದೇಶ, ಮಹಾರಾ? ಮುಂತಾದ ರಾಜ್ಯಗಳೂ ಅದನ್ನು ಪ್ರಕಟಿಸಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನೆರವು ನೀಡಲು ಅಸಾಧ್ಯವೆಂದು ಹೇಳಿದ ಮೇಲೆ ಆಶೆ ಉಳಿದಿಲ್ಲ. ರಾಜ್ಯಕ್ಕೆ ಇದಕ್ಕೆ (ರೈತರ ಸಾಲಮನ್ನಾ) ೩೦,೭೨೯ ಕೋಟಿ ರೂ. ಬೇಕಾಗಬಹುದು.” ಅ?ದರೂ ಪ್ರಯೋಜನವಾಗುವುದು ಎಲ್ಲರಿಗಲ್ಲ. ರಾಜ್ಯದ ರೈತರ ಸಂಖ್ಯೆ ೨.೩೦ ಕೋಟಿ ಇದ್ದರೆ ಪ್ರಸ್ತುತ ಸಾಲಮನ್ನಾದಿಂದ ಪ್ರಯೋಜನ ಆಗುವುದು ೮೬ ಲಕ್ಷ ಜನರಿಗೆ ಮಾತ್ರ. ಕೇವಲ ಸಣ್ಣ ಮತ್ತು ಅತಿಸಣ್ಣ ರೈತರನ್ನು ತೆಗೆದುಕೊಂಡರೂ ಕೂಡ ಅವರಲ್ಲಿ ಶೇ. ೪೩ ಜನರಿಗೆ ಮಾತ್ರ ಪ್ರಯೋಜನವಾಗುತ್ತದೆ.
ನಮ್ಮ ಆದ್ಯತೆ ಯಾವುದಕ್ಕೆ ಇರಬೇಕೆಂದು ಸಮರ್ಥವಾಗಿ ನಿರ್ಧರಿಸಿ ಅದರಂತೆ ಕಾರ್ಯಪ್ರವೃತ್ತರಾಗಲು ಸಾಧ್ಯವಾಗದೆ ಇರುವುದು ಭಾರತದ ಇಂದಿನ ಆರ್ಥಿಕ ವ್ಯವಸ್ಥೆಯ ಬಹುದೊಡ್ಡ ದೋ? ಎನ್ನಬಹುದು. ಚುನಾವಣೆ ನಡೆದ ಮೊದಲ ವ?ದಿಂದಲೇ ನಮ್ಮ ಸರ್ಕಾರ ನಡೆಸುವವರ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಬಗೆಬಗೆಯ ದಾನ(ಭಾಗ್ಯ?)ಗಳನ್ನು ಕೊಟ್ಟು ದೇಶದ ಪ್ರಜೆಗಳ ಸ್ವಾಭಿಮಾನವನ್ನು ಕೊಲ್ಲಲಾಗುತ್ತಿದೆ; ಸ್ವಾಭಿಮಾನ ಇಲ್ಲದವ ಭಿಕ್ಷುಕನಿಗೆ ತುಂಬ ಹತ್ತಿರ ಇರುತ್ತಾನೆ. ಈ ಅವ್ಯವಸ್ಥೆಯಲ್ಲಿ ದೇಶದ ಜನತೆಗೆ ಅನ್ನಕೊಟ್ಟು ಪೋಷಿಸುವ ರೈತರು ಅತ್ಯಂತ ಶೋಷಿತರಾಗಿದ್ದಾರೆ; ಎಲ್ಲರೂ ಅವರನ್ನು ಶೋಷಿಸುವವರೇ. ನೋಟು ಅಮಾನ್ಯದಿಂದ ಮಧ್ಯವರ್ತಿಗಳ ಕೈಯಲ್ಲಿರುವ ಹಣ ಕಡಮೆಯಾಗಿ ರೈತರ ಶೋ?ಣೆ ತಗ್ಗಬಹುದೆನ್ನುವ ಒಂದು ನಿರೀಕ್ಷೆಯಿತ್ತು. ಆದರೆ ಅದೀಗ ಹುಸಿಯಾಗಿದೆಯೆಂದೇ ಹೇಳಬೇಕು. ರೈತನ ಉತ್ಪನ್ನಕ್ಕೆ ಬೆಲೆ ಇಲ್ಲದಿರುವ ಪರಿಸ್ಥಿತಿ ಯಥಾಸ್ಥಿತಿ ಮುಂದುವರಿದಿದೆ. ಇದನ್ನು ಸರಿಮಾಡಲು ಯಾರಾದರೂ ಪ್ರಯತ್ನಿಸಬಹುದೆ?