ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ನವೆಂಬರ್ 2018 > ಇಸ್ರೇಲ್‌ನ ’ಮೊಸಾದ’ – ನಿಗೂಢ ಕಾರ್ಯಾಚರಣೆಗಳ ಸರದಾರ

ಇಸ್ರೇಲ್‌ನ ’ಮೊಸಾದ’ – ನಿಗೂಢ ಕಾರ್ಯಾಚರಣೆಗಳ ಸರದಾರ

ಇಸ್ರೇಲಿನ ಗುಪ್ತಚರ ಸಂಸ್ಥೆ, ’ಮೊಸಾದ’ದ ಹೆಸರನ್ನು ಬಹಳಷ್ಟು ಜನರು ಕೇಳಿರಲಾರರು. ಅದಕ್ಕೆ ಕಾರಣ ಅದು ಪ್ರಚಾರದಿಂದ ದೂರವಿರಲು ಇಷ್ಟಪಡುತ್ತದೆ. ಅದು ತೆರೆಯ ಮರೆಯಲ್ಲಿ ಇದ್ದೇ ತನ್ನ ಕಾಯಕದಲ್ಲಿ ತೊಡಗಿರುತ್ತದೆ. ಎರಡನೇ ಮಹಾಯುಧ್ಧದ ಕಾಲದಲ್ಲಿ ಯಹೂದಿ ಜನರ ನರಮೇಧ ಮಾಡಿದ ಪಾಪಿಗಳನ್ನು ಶೋಧಮಾಡಿ ಅವರನ್ನು ನ್ಯಾಯಾಲಯದ ಕಟ್ಟೆಗೆ ತಂದು ನಿಲ್ಲಿಸುವುದು, ಇಲ್ಲವೇ ಅವರನ್ನು ಹತ್ಯೆಗೈಯುvuದು, ಇದು ಅದರ ಪ್ರಾರಂಭಿಕ ಗುರಿಯಾಗಿತ್ತು. ಇಸ್ರೇಲ್ ತನ್ನದೇ ಅಸ್ತಿತ್ವ ಕಂಡುಕೊಂಡ ಮೇಲೆ ಅದರ ಶತ್ರುಗಳ ಸಂಖ್ಯೆ ಬೆಳೆಯತೊಡಗಿತು. ಈಗ ಅದಕ್ಕೆ ಅನಿವಾರ್ಯವಾಗಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಭಾಗವಹಿಸಿ, ತನ್ನ ದೇಶದ ವಿರುಧ್ಧ ನಡೆಯುತ್ತಿರುವ ಭಯೋತ್ಪಾದನೆಯನ್ನು ಮೆಟ್ಟಿಹಾಕುವ ನಿಯೋಜನಬದ್ಧ ಯೋಜನೆ ಮಾಡಲೇ ಬೇಕಾಯಿತು.

೧೯೪೯ರಲ್ಲಿ ಮೊಸಾದ ಎಂಬ ಗುಪ್ತಚರ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ವ್ಯವಸ್ಥಿತ ರೂಪದಲ್ಲಿ ತಂದವನು ಇಸ್ರೇಲಿನ ಪ್ರಧಾನಮಂತ್ರಿ ಡೇವಿಡ್ ಬೆನ್ ಗುರಿಯನ್. ಸಂಸ್ಥೆಯ ಮುಖ್ಯಸ್ಥನಾಗಿ ರಾವೆನ್ ಶಲೋಹ್ ಎಂಬವನನ್ನು ನೇಮಿಸಲಾಯಿತು. ಇದು ಸ್ವಯಾಧಿಕಾರ ಹೊಂದಿದ ಸ್ವತಂತ್ರ ಸಂಸ್ಥೆ. ವಿಚಿತ್ರವೆಂದರೆ ಇದರ ಮೇಲೆ ಸರಕಾರದ ಹಿಡಿತವಿಲ್ಲ; ಹಾಗೂ ಯಾವುದೇ ರೀತಿಯ ನಿಯಂತ್ರಣವಿಲ್ಲ. ಈ ಸಂಸ್ಥೆಯಲ್ಲಿ ನಡೆಯುವ ಕಾರ್ಯಾಚರಣೆಗಳು ಅತ್ಯಂತ ರಹಸ್ಯವಾಗಿರುತ್ತವೆ. ಮಂತ್ರಿಮಂಡಲಕ್ಕೂ ಇದರ ಬಗ್ಗೆ ಯಾವುದೇ ಕಲ್ಪನೆಯಾಗಲಿ ಸುಳಿವಾಗಲಿ ಇರುವುದಿಲ್ಲ. ಇದು ತನ್ನದೇ ಆದ ನುರಿತ ಕಮಾಂಡೋಗಳನ್ನೂ ಹಾಗೂ ಸೈನಿಕರನ್ನೂ ಹೊಂದಿದೆ. ಈ ಸಂಸ್ಥೆಗಾಗಿ ಪ್ರತಿ ವ? ನೂರಾರು ಮಿಲಿಯನ್ ಡಾಲರ್ ಖರ್ಚುಮಾಡಲಾಗುತ್ತಿದೆ. ಈ ವೆಚ್ಚಗಳ ಮೇಲೆ ಸರಕಾರದಿಂದ ಲೆಕ್ಕ ತಪಾಸಣೆ ಇರುವುದಿಲ್ಲ. ಸರ್ವಸ್ವತಂತ್ರವಾದ ಈ ಸಂಸ್ಥೆಯ ಮುಖ್ಯಸ್ಥನು ನೇರವಾಗಿ ಪ್ರಧಾನಮಂತ್ರಿಗಳಿಗೆ ಮಾತ್ರ ತನ್ನ ವರದಿ ಒಪ್ಪಿಸುತ್ತಾನೆ. ಇವನ ಸಲಹೆ ಮತ್ತು ಸೂಚನೆಗಳಂತೆ ಪ್ರಧಾನಮಂತ್ರಿ ಮತ್ತು ಸೈನಿಕ ವರಿ?ರು ಜಂಟಿಯಾಗಿ ಸೈನಿಕ ಕಾರ್ಯಾಚರಣೆಯನ್ನು ನಿಯೋಜಿಸುತ್ತಾರೆ. ಉದ್ದೇಶ ಸಾಧನೆಗಾಗಿ ಮೊಸಾದ ತನ್ನ ದೇಶದ ವೈರಿಗಳನ್ನು ಕೊಲೆಮಾಡಲು, ಸಮಯ ಬಂದರೆ ವಿಧ್ವಂಸಕ ಕೃತ್ಯಕ್ಕೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ. ಜಾಗತಿಕ ಮಾನವಹಕ್ಕು ಆಯೋಗವು ಮೇಲಿಂದ ಮೇಲೆ ಅದಕ್ಕೆ ಎಚ್ಚರಿಕೆ ಕೊಟ್ಟರೂ, ಅದಕ್ಕೆ ಇನಿತೂ ಬೆಲೆ ಕೊಡುವುದಿಲ್ಲ. ಮಾತೃಭೂಮಿಯ ಸುರಕ್ಷತೆಗೆ ಆದ್ಯತೆ ಎಂಬುದು ಇಸ್ರೇಲ್‌ನ ಘೋ? ವಾಕ್ಯ. ತನ್ನ ದೇಶದವನ್ನು ಸುತ್ತುವರಿದಿರುವ ಮುಸ್ಲಿಂ ರಾ?ಗಳು ನಡೆಸುತ್ತಿರುವ ?ಡ್ಯಂತ್ರಗಳನ್ನು, ಕಾರಸ್ಥಾನಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಅದನ್ನು ಮೂಲೋತ್ಪಾಟನೆ ಮಾಡುವ ದಿಶೆಯಲ್ಲಿ ಯಾವಾಗಲು ಅದು ಕಾರ್ಯಪ್ರವೃತ್ತವಾಗಿರುತ್ತದೆ. ದೇಶಕ್ಕೆ ತಲೆನೋವಾಗಿರುವ ಪ್ಯಾಲೆಸ್ತೀನಿನ ಮೇಲೆ ಸತತವಾಗಿ ೪೩ ದಾಳಿ ಮಾಡುತ್ತ ಅವರ ಮನೋಬಲ ಹಾಗೂ ಸೈನಿಕಶಕ್ತಿಯನ್ನು ಕುಂಠಿತಗೊಳಿಸಿ ತಲೆಯೆತ್ತದಂತೆ ಮಾಡುವ ನಿಟ್ಟಿನಲ್ಲಿ ಅದು ತೊಡಗಿರುತ್ತದೆ.

ಮೊಸಾದ ಸಂಸ್ಥೆಯಲ್ಲಿ ಕುಶಾಗ್ರಬುಧ್ಧಿಯ ಹೆಂಗಳೆಯರೂ ಇದ್ದಾರೆ. ಎಲೆಮರೆಯಲ್ಲಿರುವ ಕಾಯಿಗಳಂತೆ ಇರುವ ಇವರು ಗಟ್ಟಿ ಮನೋಬಲದವರೂ, ಯಾವುದಕ್ಕೂ ಹೆದರದ ಗುಪ್ತಚಾರಿಣಿಯರೂ ಆಗಿದ್ದಾರೆ. ಇವರ ಕಾರ್ಯ ನಿಜವಾಗಿಯೂ ಸ್ತುತ್ಯರ್ಹವಾದದ್ದು. ಇವರು ಮೊಸಾದಗಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಎ?ಂದು ರಹಸ್ಯವಾಗಿರುತ್ತದೆ ಎಂದರೆ, ಅದು ಅವರ ಕುಟುಂಬದ ಸದಸ್ಯರಿಗೂ ಗೊತ್ತಿರುವುದಿಲ್ಲ. ಪುರು? ಸೈನಿಕರ? ಸಾಮರ್ಥ್ಯ ಹಾಗೂ ಯೋಗ್ಯತೆ ಹೊಂದಿದ ಇವರಿಗೆ ಕಠಿಣ ಕಮಾಂಡೋ ತರಬೇತಿ ನೀಡಲಾಗುತ್ತದೆ. ಮುಗುಳುನಗೆ ಸೂಸುತ್ತ, ವೈಯಾರ ಮಾಡುತ್ತ ಶತ್ರುವಿನ ಪಾಳೆಯವನ್ನು ಸುಲಭವಾಗಿ ಪ್ರವೇಶಿಸಿ ಅವರ ರಹಸ್ಯಗಳನ್ನು ಹೊರಗೆ ತೆಗೆಯಬಲ್ಲ ಚಾಕಚಕ್ಯತೆ ಅವರಲ್ಲಿ ಇರುತ್ತದೆ. ಔಚಿತ್ಯಪ್ರಜ್ಞೆ ಹೊಂದಿದ ಇವರು ಗಂಭೀರ ಪ್ರಸಂಗದಲ್ಲಿ, ಕಾರ್ಯಸಾಧನೆಗಾಗಿ, ತಮ್ಮ ಕನ್ಯಾತ್ವವನ್ನು ತ್ಯಾಗ ಮಾಡಲೂ ಹಿಂದೆ ಮುಂದೆ ನೋಡುವುದಿಲ್ಲ. ’ಹನಿ ಟ್ರಾಪ್’ ಮಾಡುವುದರಲ್ಲಿ ಇವರು ಪರಿಣತರು. ಆದರೆ ಇವರು ವೇಶ್ಯೆಯರಲ್ಲ ಎಂಬುದನ್ನು ಗಮನದಲ್ಲಿಡಬೇಕು.

ಮೊಸಾದ ತನ್ನ ಗುಪ್ತಚರ ಜಾಲವನ್ನು ವಿಶ್ವದ ತುಂಬ ಪಸರಿಸಿದೆ. ಇನ್ನು ಇದರ ಗುಪ್ತಚಾರರು ಸರ್ವಾಂತರ್ಯಾಮಿಗಳು. ವಿದೇಶಗಳಲ್ಲಿ ಪ್ರತಿದಿನ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ಮೇಲೆ ಈ ಗುಪ್ತಚಾರರು ನಿಗಾ ಇಟ್ಟಿರುತ್ತಾರೆ. ಅವುಗಳಿಂದ ತಮ್ಮ ದೇಶದ ಮೇಲೆ ಆಗುವ ಪರಿಣಾಮಗಳನ್ನು ಅಭ್ಯಸಿಸಿ ತಮ್ಮ ವರದಿಯನ್ನು ಕೇಂದ್ರಕಛೇರಿಗೆ ಕಳಿಸುತ್ತಾರೆ. ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ. ತಾವು ಪ್ರತ್ಯಕ್ಷ ಇಲ್ಲವೆ ಅಪ್ರತ್ಯಕ್ಷವಾಗಿ ಕಾರ್ಯಾಚರಣೆಯಲ್ಲಿಯೂ ಭಾಗವಹಿಸುತ್ತಾರೆ. ಪ್ರಚ್ಛನ್ನ ಅವತಾರಗಳಲ್ಲಿದ್ದ ಈ ಗುಪ್ತಚಾರರನ್ನು ಗುರುತಿಸುವುದು ತುಂಬ ಕಠಿಣ. ಉದ್ಯೋಗಿ, ನಟ, ತಂತ್ರಜ್ಞ, ವಿಜ್ಞಾನಿ, ಟ್ರಕ್ ಡ್ರೈವ್ಹರ್, ವೈದ್ಯ – ಹೀಗೆ ನಾನಾ ರೀತಿಯ ಛದ್ಮವೇ?ಗಳನ್ನು ಧಾರಣೆಮಾಡಿ ತಮ್ಮ ರಹಸ್ಯಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಮೊಸಾದ ಮತ್ತು ಭಾರತೀಯ ಗುಪ್ತಚರ ಸಂಸ್ಥೆ “ರಾ” (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ನಡುವೆ ನಂಟಿದೆ ಎಂದರೆ ನಂಬುತ್ತೀರಾ? ಇಪ್ಪತ್ತು ವ?ಗಳ ಹಿಂದೆಯೇ, ಮೊಸಾದ ಗುಪ್ತಚಾರರು ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರಂತೆ ವೇ?ಹಾಕಿ ಬೇಹುಗಾರಿಕೆ ಮಾಡಿದ್ದರು. ನಮ್ಮ ದೇಶದಲ್ಲಿಯ ಅತ್ಯಂತ ಸೂಕ್ಷ್ಮಪ್ರದೇಶಗಳ ಭೌಗೋಲಿಕ ಹಾಗೂ ರಾಜಕೀಯ ವಿವರಗಳು ಅವರ ಬಳಿ ಇವೆ. ತಮ್ಮ ದೇಶದ ಬಗ್ಗೆ ಸಹಾನುಭೂತಿ ಹೊಂದಿದವರು ಮತ್ತು ದ್ವೇಷಿಸುವವರ ಯಾದಿಯೂ ಅವರಲ್ಲಿದೆ. ಈ ಹಿಂದೆ ಸಿ.ಬಿ.ಐ. ಸಂಸ್ಥೆಯ ಓರ್ವ ಮುಖ್ಯ ಅಧಿಕಾರಿಗೆ, ಮೊಸಾದ ಫ್ಲಾಟಿನ ಆಮಿ? ಒಡ್ಡಿದ್ದು ಬಹಳ ದೊಡ್ಡ ಸುದ್ದಿಯಾಯಿತು. ೨೦೧೫ರಲ್ಲಿ ಮೋದಿಯವರು ಲಂಡನ್‌ನಲ್ಲಿ ನಡೆದ ಶೃಂಗಸಮ್ಮೇಳನಕ್ಕೆ ಮತ್ತು ತುರ್ಕಿಗೆ ಹೋಗಿದ್ದರು. ಆಗ ಅವರ ಬೆಂಗಾವಲು ಪಡೆಗೆ ಸಹಕರಿಸಲು ಮೋಸಾದದ ಕಮಾಂಡೋಗಳೂ ಗುಪ್ತಚಾರರೂ ಇದ್ದರು.

೧೯೪೫ರಲ್ಲಿ ಮಹಾಯುಧ್ಧ ಸಮಾಪ್ತಿಯಾಗಿ ಕೆಲವೊಂದು ರಾಜಕೀಯ ಘಟನೆಗಳು ನಡೆದು, ಬ್ರಿಟನ್ ಹಾಗೂ ಅಮೆರಿಕದ ಒತ್ತಡದಿಂದ ೧೯೪೮ರಲ್ಲಿ ಇಸ್ರೇಲ್‌ನ ಸ್ಥಾಪನೆ ಆಯಿತು. ಮುಂದೆ ಕೆಲವೇ ತಿಂಗಳಲ್ಲಿ ಮೊಸಾದದ ರಚನೆ ಆಯಿತು. ೨೦೧೬ರಲ್ಲಿ ನಿಧನರಾದ ಇಸ್ರೇಲ್‌ನ ಮಾಜಿ ಅಧ್ಯಕ್ಷ ಡೇವಿಡ ಬೆನ್ ಗುರಿಯನ್ ಮತ್ತು ಕೆಲವರು ಈ ಗುಪ್ತಚರ ಸಂಸ್ಥೆಯ ಯೋಜಕರಾಗಿದ್ದರು. ಎರಡನೇ ಮಹಾಯುಧ್ಧದಲ್ಲಿ ಲಕ್ಷಾಂತರ ಜ್ಯೂಯಿಶ್ ಜನರ ಮೇಲೆ ಅತ್ಯಾಚಾರ ಮಾಡಿದ, ದೌರ್ಜನ್ಯವೆಸಗಿದ ನರಹಂತಕರನ್ನು ಶಿಕ್ಷಿಸುವ ಇಲ್ಲವೇ ಅವರನ್ನು ಸಮೂಲಾಗ್ರ ನಾಶಮಾಡುವ ಯೋಜನೆಂiiನ್ನು ಇಸ್ರೇಲಿನ ಮಂತ್ರಿಮಂಡಲ ಹಾಗೂ ಮೊಸಾದ ಹಮ್ಮಿಕೊಂಡಿತು. ತಮ್ಮ ಜನಾಂಗದವರಿಗೆ ಆದ ಅನ್ಯಾಯದಿಂದ ರೊಚ್ಚಿಗೆದ್ದ ಇಸ್ರೇಲಿಗಳಲ್ಲಿ ಸೇಡು ತೀರಿಸಿಕೊಳ್ಳುವ ಛಲ ಹುಟ್ಟಿತ್ತು. ’ಆರ್ಯ ಪಾರಮ್ಯ’ ಎಂಬ ಹುಚ್ಚು ಭ್ರಮೆಗೆ ಬಿದ್ದು ಯಹೂದಿಗಳ ಹತ್ಯಾಕಾಂಡ ಮಾಡಿದ ಜರ್ಮನ್ ರಾಜಕಾರಣಿಗಳನ್ನು ಮತ್ತು ಸೈನ್ಯಾಧಿಕಾರಿಗಳನ್ನು, ವಿಶ್ವವನ್ನೆಲ್ಲ ಜಾಲಾಡಿ ಹುಡುಕುವ ಕಾರ್ಯದಲ್ಲಿ ಮೊಸಾದ ತೊಡಗಿತು. ಲಕ್ಷಾಂತರ ಜ್ಯೂಯಿಶ್ ಜನರ ನರಮೇಧದಲ್ಲಿ ಪ್ರಮುಖಪಾತ್ರ ವಹಿಸಿದ, ಆರ್ಜೆಂಟಿನಾದಲ್ಲಿ ಅಡಗಿ ಕುಳಿತಿದ್ದ ಅಡಾಲ್ಫ್ ಐಕ್‌ಮನ್ ಎಂಬ ನಾಝಿ ಹಿರಿಯ ಅಧಿಕಾರಿಯನ್ನು ಅಲ್ಲಿಂದ ಟೆಲ್-ಅವೀವ್‌ಗೆ ಅನಾಮತ್ತಾಗಿ ಎತ್ತಿಕೊಂಡು ಬಂದು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಿದ ಪ್ರಸಂಗ ರೋಮಾಂಚಕಾರಿಯಾಗಿದೆ. ಈ ಅಭೂತಪೂರ್ವ ಕಾರ್ಯವನ್ನು ಬೆಣ್ಣೆಯಿಂದ ಕೂದಲನ್ನು ತೆಗೆದ ಹಾಗೆ ಮೊಸಾದ ಸಂಸ್ಥೆ ಮಾಡಿದಾಗ ಜಗತ್ತೇ ಬೆರಗಾಗಿತ್ತು.

ಎರಡನೆ ಮಹಾಯುಧ್ಧದಲ್ಲಿ ಜರ್ಮನಿ ಪರಾಭವಗೊಂಡಾಗ, ಹಿರಿಯ ನಾಝಿ ಅಧಿಕಾರಿಗಳು ಜೀವರಕ್ಷಣೆಗಾಗಿ ಅನ್ಯ ದೇಶಗಳಿಗೆ ಪಲಾಯನ ಮಾಡಿದರು. ಅವರಲ್ಲಿ ಅತ್ಯಂತ ಕ್ರೂರಿಯಾದ ಅಡಾಲ್ಫ್ ಐಕಮನ್ ಜರ್ಮನಿಯಿಂದ ಕಣ್ಮರೆ ಆದ. ಆದರೆ ಅಮೆರಿಕದ ಸೈನ್ಯಕ್ಕೆ ಸಿಕ್ಕುಬಿದ್ದು ಏಳು ತಿಂಗಳು ಬಂಧನದಲ್ಲಿ ಇದ್ದ. ಆನಂತರ ಭದ್ರತಾ ಸಿಬ್ಬಂದಿಯವರ ಕಣ್ಣು ತಪ್ಪಿಸಿ ಪರಾರಿ ಆದ. ರಿಕಾರ‍್ಡೊ ಕ್ಲೆಮೇಂಟ್ ಎಂಬ ಸುಳ್ಳು ಹೆಸರು ಧಾರಣೆಮಾಡಿ ಬ್ಯುನಸ್ ಐರಸ್‌ನಲ್ಲಿ ವಾಸಿಸುತ್ತಿದ್ದ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ನಂತರ ಇದರ ವಾಸನೆ ಹದ್ದಿನ ಕಣ್ಣಿನ ಮೊಸಾದ ಸಂಸ್ಥೆಗೆ ಬಡೆಯಿತು. ಆಗ ಇಸ್ರೇಲ್ ಆರ್ಜೆಂಟೀನಾಕ್ಕೆ ಐಕ್‌ಮನ್‌ನನ್ನು ತಮ್ಮ ಸ್ವಾಧೀನ ಮಾಡಲು ಹಲವಾರು ಬಾರಿ ವಿನಂತಿಸಿತು. ರಾಜತಾಂತ್ರಿಕ ಒತ್ತಡಗಳನ್ನು ಹೇರಿದರೂ ಯಾವುದೇ ಪ್ರಯೋಜನವಾಗಲಿಲ್ಲ; ತನ್ನದೇ ಕೆಲ ಕಾರಣಗಳನ್ನು ಮುಂದೆ ಮಾಡಿ ಆರ್ಜೆಂಟೀನಾ ಇಸ್ರೇಲ್‌ನ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಆಗ ಮೊಸಾದಕ್ಕೆ ಹೊಳೆದದ್ದು ಐಕ್‌ಮನ್‌ನನ್ನು ಅಪಹರಿಸುವ ಯೋಜನೆ. ಅದಕ್ಕಾಗಿ ಮೊಸಾದದ ಚಾಣಕ್ಯರು ನೀಲಿನಕ್ಷೆ ತಯಾರು ಮಾಡಿದರು. ಆನಂತರ ಮೊಸಾದ ಕಾರ್ಯರಂಗಕ್ಕಿಳಿಯಿತು. ಮೊಸಾದದ ಗೂಢಚಾರನೊಬ್ಬ ಆರ್ಜೆಂಟೀನಾಕ್ಕೆ ತೆರಳಿದ. ಐಕ್‌ಮನ್‌ನ ಚಲನವಲನಗಳನ್ನು ದಿನನಿತ್ಯ ವೀಕ್ಷಿಸತೊಡಗಿದ. ಪ್ರತಿದಿನ ಸಂಜೆ ಏಳು ಗಂಟೆಗೆ ಐಕ್‌ಮನ್ ತನ್ನ ಆಫೀಸಿನಿಂದ ಮನೆಗೆ ಬಸ್ಸಿನಲ್ಲಿ ಮರಳುತ್ತಿದ್ದ. ಬಸ್‌ನಿಲ್ದಾಣದಿಂದ ಅವನ ಮನೆಗೆ ಕಾಲ್ನಡಿಗೆಯಲ್ಲಿ ಕೇವಲ ಐದು ನಿಮಿ?ದ ದಾರಿ. ಸಂಜೆ ಏಳು ಗಂಟೆಯಾದ ನಂತರ ಆ ದಾರಿ ಅಕ್ಷರಶಃ ನಿರ್ಜನವಾಗಿರುತ್ತಿತ್ತು. ಅದೊಂದು ದಿನ ಆತ ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಅವನ ಮೇಲೆ ಮೊಸಾದದ ಗುಪ್ತಚಾರರು ಮುಗಿಬಿದ್ದು, ಹೆಡೆಮುರಿಗೆ  ಕಟ್ಟಿ ಕಾರಿನಲ್ಲಿ ಹಾಕಿಕೊಂಡು ಗುಪ್ತವಾದ ಸ್ಥಾನಕ್ಕೆ ಕರೆದೊಯ್ದರು. ಒಂಬತ್ತು ದಿನ ಒಂದು ರಹಸ್ಯ ಸ್ಥಳದಲ್ಲಿ ಅವನನ್ನು ಅಡಗಿಸಿ ಇಟ್ಟರು. ಆರ್ಜೆಂಟೀನಾ ದೇಶದ ಬೇಹುಗಾರರಿಗೆ ಅರಿವಾಗದಂತೆ, ಐಕ್‌ಮನ್‌ನನ್ನು ಆ ದೇಶದಿಂದ ಹೊರಗೆ ರವಾನೆ ಮಾಡುವ ಪ್ರಶ್ನೆ ಮೊಸಾದಗೆ ಎದುರಾಯಿತು. ಇದು ಅತ್ಯಂತ ಕ್ಲಿ?ವಾದ ಕಾರ್ಯವಾಗಿತ್ತು. ಕುಶಾಗ್ರಮತಿಗಳಾದ ಮೊಸಾದದ ಸದಸ್ಯರು ನಿಯೋಜನಬದ್ಧ ಯೋಜನೆ ಹಾಕಿದರು. ಅದಕ್ಕಾಗಿ ಇಸ್ರೇಲಿನ ರಾಜತಾಂತ್ರಿಕ ಗುರುತು ಚೀಟಿ ಅಂಟಿಸಿದ ವಿಮಾನವನ್ನು ಬ್ಯೂನಸ್ ಐರಸ್ಸಿನ ವಿಮಾನನಿಲ್ದಾಣದಲ್ಲಿ ಇಳಿಸಲಾಯಿತು. ರಾಜತಾಂತ್ರಿಕ ವ್ಯಕ್ತಿಗಳಿಗೆ ಪರದೇಶದಲ್ಲಿ ಕೆಲವೊಂದು ವಿನಾಯತಿಗಳು ಇರುತ್ತವೆ. ಅ?ಂದು ಗುರುತರವಾದ ತಪಾಸಣೆಗಳು ಅವರಿಗೆ ಇರುವುದಿಲ್ಲ. ಈ ಲೋಪದೋ? ಮೊಸಾದಗೆ ವರವಾಯಿತು. ಐಕ್‌ಮನ್‌ನಿಗೆ ಇಸ್ರೇಲಿ ವಿಮಾನದಳದ ಸಿಬ್ಬಂದಿಯ ವೇ?ವನ್ನು ಹಾಕಲಾಯಿತು. ಆನಂತರ ಅವನ ಕಿವಿಯಲ್ಲಿ ಚುಚ್ಚುಮದ್ದನ್ನು ಕೊಟ್ಟು ಅವನನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳಲಾಯಿತು. ತೇಲುಗಣ್ಣು ಮೇಲುಗಣ್ಣು ಹಾಕುತ್ತ ಹೊಯ್ದಾಡಿ ಬರುತ್ತಿದ್ದ ಐಕ್‌ಮನ್‌ನನ್ನು ಕಂಡು ಭದ್ರತಾ ಸಿಬ್ಬಂದಿಯವರಿಗೆ ಸಂಶಯ ಬರಲಿಲ್ಲ. ಆರೋಗ್ಯದ ತೊಂದರೆ ಇರಬಹುದು ಎಂದು ಅವನ ಬಗೆಗೆ ತಾತ್ಸಾರ ಮಾಡಿದರು. ತಮ್ಮ ಕಾರ್ಯ ನಿರಾತಂಕವಾಗಿ ಆಗಿದ್ದಕ್ಕೆ ನಿಶ್ಚಿಂತರಾದ ಮೊಸಾದದ ಕಮಾಂಡೋಗಳು ಐಕ್‌ಮನ್‌ನನ್ನು ತಮ್ಮ ವಿಮಾನದಲ್ಲಿ ಹೊತ್ತೊಯ್ದರು. ಪ್ರಯಾಣದ ನಡುವೆ ಆತನಿಗೆ ಪ್ರಜ್ಞೆ ಮರಳಬಾರದೆಂದು ನಡುನಡುವೆ ಮತ್ತಿನ ಚುಚ್ಚುಮದ್ದನ್ನು ಕೊಡುತ್ತ ಹೋದರು.

ಆತ ಎಚ್ಚರಗೊಂಡಾಗ ತಾನು ಟೆಲ್-ಅವೀವ್‌ನ ಸೆರೆಮನೆಯಲ್ಲಿ ಬಂದಿಯಾಗಿದ್ದು ಕಂಡು ದಿಙ್ಮೂಢನಾದ. ಇಸ್ರೇಲ್‌ನ ನ್ಯಾಯಾಲಯದ ಎದುರಿಗೆ ಅವನನ್ನು ತಂದು ನಿಲ್ಲಿsಸಿಲಾಯಿತು. ಜನಾಂಗಹತ್ಯೆಯ ಆಪಾದನೆ ಅವನ ಮೇಲೆ ಹೊರಿಸಿ ಗಲ್ಲಿನ ಶಿಕ್ಷೆ ಕೊಡಲಾಯಿತು. ಆದರೆ ಇಸ್ರೇಲ್‌ನ ಈ ಕೃತಿಯಿಂದ ಆರ್ಜೆಂಟೀನಾ ಕೋಪಗೊಂಡಿತು. ತನ್ನ ಸರ್ವಭೌಮತ್ವಕ್ಕೆ ಧಕ್ಕೆ ತಗಲಿತು ಎಂದು ವಿಶ್ವಸಂಸ್ಥೆಗೆ ತಕರಾರು ಮಾಡಿತು. ವಿಶ್ವಸಂಸ್ಥೆ, ಇಸ್ರೇಲ್‌ಗೆ ಎಚ್ಚರಿಕೆಯೇನೋ ಕೊಟ್ಟಿತು. ಆದರೆ ಇಸ್ರೇಲ್‌ನ ಮೇಲೆ ಅದು ಯಾವುದೇ ಪರಿಣಾಮ ಬೀರಲಿಲ್ಲ.

ಮೊಸಾದ ಮಾಡಿದ ಇಂತಹ ಅನೇಕ ಸಾಹಸಮಯ ಕಾರ್ಯಾಚರಣೆಗಳು, ಹತ್ತಾರು ಹಾಲಿವುಡ್ ಚಿತ್ರಗಳಿಗೆ, ನೂರಾರು ಕಾದಂಬರಿ, ಕಥೆಗಳಿಗೆ ವಿ?ಯವಾಗಬಹುದು. ನಂಬಲೂ ಅಸಾಧ್ಯವಾದ ’ಥಂಡರ್ ಬೋಲ್ಟ್’ ಎಂಬ ಕಾರ್ಯಾಚರಣೆಯ ವಿವರಣೆ ಕೇಳಿದರೆ ಅದು ರೋಮಾಂಚನ ಉಂಟುಮಾಡುತ್ತದೆ. ಈ ಘಟನೆಯನ್ನು ಆಧಾರಿಸಿದ ಚಲನಚಿತ್ರವೊಂದು ಈಗಾಗಲೇ ಬಹು ಪ್ರಸಿಧ್ಧಿ ಕೂಡ ಪಡೆದಿದೆ.

ಅದು ಆಗಿದ್ದು ಹೀಗೆ:
’ಎಂಟೆಬ್ಬೆ’ – ಇದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಕೀನ್ಯಾ ದೇಶದಲ್ಲಿದೆ. ೧೯೭೬ ಜೂನ್ ೨೭ರಂದು ಟೆಲ್-ಅವೀವ್‌ನಿಂದ ಫ್ರಾನ್ಸ್‌ನ ವಿಮಾನವೊಂದು ಹೊರಟಿತು. ೨೪೬ ಪಯಣಿಗರಲ್ಲಿ ಹೆಚ್ಚಿನವರು ಜ್ಯೂಯಿಶ್ ಹಾಗೂ ಇಸ್ರೇಲ್‌ನ ನಾಗರಿಕರಾಗಿದ್ದರು. ಈ ನಡುವೆ ಪ್ಯಾರಿಸ್‌ನಲ್ಲಿ ೫೮ ಜನ ಪ್ರವಾಸಿಗಳನ್ನು ಹತ್ತಿಸಿಕೊಳ್ಳಲಾಯಿತು. ಇದರಲ್ಲಿ ನಾಲ್ಕು ಜನ ಅಪಹರಣಗಾರರು ಇದ್ದರು. ಇವರು ಪೋಪ್ಯುಲರ್ ಫ್ರಂಟ್ ಆಫ್ ಲಿಬರೇಶನ್ ಆಫ್ ಪ್ಯಾಲೆಸ್ತೀನ್‌ನ ಸದಸ್ಯರಾಗಿದ್ದರು. ಪ್ಯಾರಿಸ್‌ನಿಂದ ನಿರ್ಗಮಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನದ ಅಪಹರಣವಾಗಿದೆ ಎಂದು ಘೋಷಿಸಲಾಯಿತು.

ವಿಮಾನವನ್ನು ಲಿಬಿಯಾದ ಬೆಂಗಝಾಯಿಯಲ್ಲಿ ಇಂಧನಕ್ಕಾಗಿ ಇಳಿಸಲಾಯಿತು. ಅಲ್ಲಿ ಏಳು ಗಂಟೆಗಳ ಕಾಲ ವಿಮಾನವನ್ನು ನಿಲ್ಲಿಸಲಾಯಿತು. ಅನಂತರ ವಿಮಾನವನ್ನು ಎಂಟೆಬ್ಬೆಗೆ ತರಲಾಯಿತು. ಅಲ್ಲಿ ಈ ಎಲ್ಲ ಪ್ರವಾಸಿಗಳನ್ನು ನಿಲ್ದಾಣದ ವ್ಯಾಪ್ತಿಯಲ್ಲಿದ್ದ ಹತ್ತಿರದ ಒಂದು ಸಭಾಂಗಣದಲ್ಲಿ ಕೂಡಿಹಾಕಲಾಯಿತು. ಈ ಸೆರೆಯಾಳುಗಳಲ್ಲಿ ೪೮ ಜನರು ಯಹೂದಿಗಳಾಗಿರಲಿಲ್ಲ, ಅಲ್ಲದೆ ಇಸ್ರೇಲ್ ನಾಗರಿಕರೂ ಆಗಿರಲಿಲ್ಲ. ಇವರನ್ನು ಯಾವುದೇ ಕೆಡುಕು ಮಾಡದೆ ಬಿಡುಗಡೆ ಮಾಡಲಾಯಿತು. ಈಗ ಅಪಹರಣಕಾರರು ತಮ್ಮ ಬೇಡಿಕೆ ಮುಂದಿಟ್ಟರು. ಐದು ದಶಲಕ್ಷ ಡಾಲರ್‌ಗಳು ಹಾಗೂ ಇಸ್ರೇಲ್ ಜೇಲಿನಲ್ಲಿ ಬಂದಿಯಾಗಿದ್ದ ೯೩ ಪ್ಯಾಲೆಸ್ತೀನ್ ಉಗ್ರಗಾಮಿಗಳ ಬಿಡುಗಡೆ – ಈ ?ರತ್ತುಗಳಿಗೆ ಒಪ್ಪದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಧಮಕಿ ಹಾಕಿದರು.

ಈ ಆಪತ್ತಿನ ನಿವಾರಣೆಗಾಗಿ ರಾಜತಾಂತ್ರಿಕ ಚಟುವಟಿಕೆಗಳು ಪ್ರಾರಂಭವಾದವು. ಯೂರೋಪಿಯನ್ ದೇಶಗಳ ಮತ್ತು ಅಮೆರಿಕ – ಬ್ರಿಟನ್‌ಗಳ ನೈತಿಕ ಬೆಂಬಲ ಇಸ್ರೇಲ್‌ಗೆ ಇತ್ತು. ಉಗಾಂಡದ ಮೇಲೆ ಒತ್ತಡ ಹೇರಲಾಯಿತು. ಆದರೆ, ವಿಕ್ಷಿಪ್ತ ಸ್ವಭಾವದ ಉಗಾಂಡದ ಅದ್ಯಕ್ಷ ಸಹಕರಿಸದೆ ಅಪಹರಣಕಾರರಿಗೆ ಬೆಂಬಲವಾಗಿ ನಿಂತ. ಹಠಮಾರಿಯಾದ ಅಪಹರಣಕಾರರು ಯಾರ ಮಾತುಗಳನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಪ್ರತಿದಾಳಿ ಮಾಡಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾರ್ಗವೊಂದೇ ಮೊಸಾದದ ಎದುರಿಗೆ ಇತ್ತು. ಅದಕ್ಕೆ ನಕ್ಷೆಯೊಂದನ್ನು ತಯಾರಿಸಲಾಯಿತು. ಸೈನಿಕ ಕಾರ್ಯಾಚರಣೆಗೆ ಮುನ್ನ, ಸಾಕ? ಪೂರ್ವಸಿಧ್ಧತೆ ಮಾಡಲಾಯಿತು. ಮೊದಲಿನ ಯೋಜನೆಯ ಪ್ರಕಾರ, ಎಂಟೆಬ್ಬೆ ವಿಮಾನ ನಿಲ್ದಾಣದ ಹತ್ತಿರವಿದ್ದ ವಿಕ್ಟೋರಿಯಾ ಸರೋವರದಲ್ಲಿ ನೌಕಾದಳದ ಕಮಾಂಡೋಗಳನ್ನು ಇಳಿಸಿ, ರಬ್ಬರ್ ಡೋಣಿಗಳಿಂದ ಅವರನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಿ, ಆಮೇಲೆ ದಾಳಿ ಮಾಡುವ ಹಂಚಿಕೆ ಇತ್ತು. ಆದರೆ ಸರೋವರದಲ್ಲಿ ಮೊಸಳೆಗಳು ಬಹಳ ಇದ್ದುದರಿಂದ ಆ ಯೋಜನೆಯನ್ನು ಕೈಬಿಡಲಾಯಿತು. ಈಗ ವಿಮಾನಕ್ಕೆ ಬೇಕಾಗುವ ಇಂಧನದ ಪ್ರಶ್ನೆ ಎದುರಾಯಿತು. ಏಕೆಂದರೆ ಟೆಲ್-ಅವೀವ್‌ನಿಂದ ಎಂಟೆಬ್ಬೆಗೆ ಸುಮಾರು ೪೫೦೦ ಕಿಲೋಮೀಟರ್ ದೂರವಿತ್ತು. ಮಧ್ಯ ಮಾರ್ಗದಲ್ಲಿ ವಿಮಾನಗಳಿಗೆ ಬೇಕಾಗುವ ಇಂಧನವನ್ನು ಒಮ್ಮೆಯಾದರೂ ತುಂಬಿಸಲೇ ಬೇಕಾಗಿತ್ತು. ಆದರೆ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವುದು ಹೇಗೆ ಎಂಬುದು ಮೊಸಾದಗೆ ತಲೆನೋವಾಯಿತು. ಏಕೆಂದರೆ ಆಫ್ರಿಕಾದ ದೇಶಗಳು ಈ ವಿ?ಯದಲ್ಲಿ ಇಸ್ರೇಲ್‌ನೊಂದಿಗೆ ಸಹಕರಿಸಲು ಸ್ಪಷ್ಟವಾಗಿ ನಿರಾಕರಿಸಿದವು. ಅರಬ್ಬರನ್ನು ಹಾಗೂ ಪ್ಯಾಲೆಸ್ತೀನಿಯನರನ್ನು ಎದುರುಹಾಕಿಕೊಳ್ಳಲು ಈ ದೇಶಗಳು ಸಿದ್ಧವಿರಲಿಲ್ಲ. ಆಗ ಕೀನ್ಯಾದಲ್ಲಿದ್ದ ಕೋಟ್ಯಧೀಶ ಜ್ಯೂಯಿಶ್ ಹೊಟೆಲ್ ಉದ್ಯಮಿಯೊಬ್ಬ ಸಹಾಯಮಾಡಲು ಮುಂದೆಬಂದ. ಕಿನ್ಯಾ ದೇಶದ ತುಂಬ ಅವನ ಹೊಟೆಲ್‌ಗಳ ಸರಣಿಯಿದ್ದವು. ಸರಕಾರದ ಮೇಲೆ ಅವನ ಹಿಡಿತ ಸಾಕ? ಇತ್ತು. ಆತನ ಪ್ರಭಾವದಿಂದ ಕೀನ್ಯಾದ ಅದ್ಯಕ್ಷ ಜೋಮೋ ಕೆನ್ಯಾಟಾ ಅವರು ಇಸ್ರೇಲಿನ ವಿಮಾನಗಳಿಗೆ ಪ್ರಯಾಣದ ಮಧ್ಯೆ, ಸ್ವಲ್ಪ ಕಾಲ ತಮ್ಮ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಹಾಗೂ ಇಂಧನ ತುಂಬಿಸಿಕೊಳ್ಳಲು ಅನುಮತಿ ಕೊಟ್ಟರು.

ಈಗ ಸೈನಿಕ ಕಾರ್ಯಾಚರಣೆಯ ಪೂರ್ವಸಿಧ್ಧತೆ ಮಾಡಲಾಯಿತು. ನಾಲ್ಕು ಅಪಹರಣಕಾರರು, ಅವರ ಜೊತೆಗಿದ್ದ ಉಗಾಂಡದ ಸೈನಿಕರ ಸಂಖ್ಯೆ, ಒತ್ತೆಯಾಳುಗಳನ್ನು ಇಟ್ಟ ಸಭಾಂಗಣ – ಇವುಗಳ ಬಗ್ಗೆ ಕೂಲಂಕ?ವಾಗಿ ಅಭ್ಯಾಸ ಮಾಡಲಾಯಿತು. ದಾಳಿಯ ಪೂರ್ವತಾಲೀಮು ಮಾಡಲಾಯಿತು. ಜುಲೈ ಮೂರರ ಮಧ್ಯರಾತ್ರಿಯಂದು ನೂರು ಕಮಾಂಡೋಗಳನ್ನು ಹೊತ್ತುಕೊಂಡು ಇಸ್ರೇಲ್‌ನ ವಿಮಾನದಳದ ನಾಲ್ಕು ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್‌ಗಳು ಹಾಗೂ ಎರಡು ೭೦೭ ಬೋಯಿಂಗ್ ಕಾರ್ಗೋ ವಿಮಾನಗಳು ಎಂಟೆಬ್ಬೆಯಲ್ಲಿ ಇಳಿದವು. ಇವು ಯಾವುದೇ ಅರಬ್ ದೇಶಗಳ ರಾಡಾರುಗಳ ಕಕ್ಷೆಯೊಳಗೆ ಬರದ ಹಾಗೆ ಕೇವಲ ೧೦೦೦ ಅಡಿ ಎತ್ತರದಲ್ಲಿ ಹಾರುತ್ತ ಬಂದವು. ಒಂದು ಕಾರ್ಗೋ ವಿಮಾನದಿಂದ ಕಪ್ಪುಬಣ್ಣದ ಮರ್ಸಿಡೀಸ್ ಮತ್ತು ಲ್ಯಾಂಡ್‌ರೋವರ್ ಕಾರುಗಳು ಹೊರಗೆ ಬಂದವು. ಉಗಾಂಡದ ಅಧ್ಯಕ್ಷ ಇದೀ ಅಮೀನ ಕಪ್ಪಗಿನ ಮರ್ಸಿಡೀಸ್ ಕಾರು ಉಪಯೋಗಿಸುತ್ತಿದ್ದ; ಹಾಗೂ ಅವನ ಬೆಂಗಾವಲಿಗೆ ಲ್ಯಾಂಡ್‌ರೋವರ್ ಇರುತ್ತಿದ್ದವು. ಅಪಹರಣಕಾರರು ಹಾಗೂ ಉಗಾಂಡಾದ ಸೈನಿಕರು ಇದೀ ಅಮೀನನೇ ಬರುತ್ತಿದ್ದಾನೆ ಎಂದು ಮೋಸಹೋಗಲೆಂದೇ ಈ ಯುಕ್ತಿಮಾಡಲಾಗಿತ್ತು. ಈ ಎರಡು ಕಾರುಗಳು ಒತ್ತೆಯಾಳುಗಳಿದ್ದ ಸಭಾಂಗಣದ ಕಡೆಗೆ ಸಾಗಿದವು. ಇವುಗಳ ಚಲನವಲನ ಕಂಡು ಅಲ್ಲಿದ್ದ ಭದ್ರತಾಪಡೆಯ ಓರ್ವ ಸಿಬ್ಬಂದಿಗೆ ಸಂಶಯ ಬಂದಿತು. ಏಕೆಂದರೆ ಇತ್ತೀಚಿಗೆ ತಮ್ಮ ಅಧ್ಯಕ್ಷ ಬಿಳಿಯ ಬಣ್ಣದ ಮರ್ಸಿಡೀಸ್ ಕಾರನ್ನು ತೆಗೆದುಕೊಂಡದ್ದು ಆತನಿಗೆ ಗೊತ್ತಿತ್ತು. ಆತ ಅಡ್ಡಿ ಮಾಡಲು ಮುಂದೆ ಬಂದಂತೆಯೆ ಗುಂಡಿಟ್ಟು ಅವನನ್ನು ಕೊಲ್ಲಲಾಯಿತು.

ವಿಮಾನದ ರನ್-ವೇಯ ಮಗ್ಗಲಿಗೆ ಇದ್ದ ಸಭಾಂಗಣದಲ್ಲಿ ಒತ್ತೆಯಾಳುಗಳಿದ್ದರು. ಇಸ್ರೇಲಿ ಕಮಾಂಡೋಗಳು ಸಭಾಂಗಣ ಹೊಕ್ಕು ಲೌಡ್‌ಸ್ಪೀಕರ್‌ನಿಂದ “ನಾವು ಇಸ್ರೇಲೀ ಸೈನಿಕರು, ಭಯ ಪಡಬೇಡಿ” ಎಂದು ಘೋ?ಣೆ ಮಾಡಿ, ಅಲ್ಲಿ ಇದ್ದ ಓರ್ವ ಅಪಹರಣಕಾರನನ್ನು ಗುಂಡಿಕ್ಕಿ ಕೊಂದರು. ಪಕ್ಕದ ಕೋಣೆಯಲ್ಲಿ ಅಪಹರಣಕಾರರು ಅಡಗಿದ್ದಾರೆ ಎಂದು ತಿಳಿದ ಮೇಲೆ ಆ ಕೋಣೆಯ ಮೇಲೆ ಕೈಬಾಂಬ್ ಹಾಕಿ, ಬಾಗಿಲು ಮುರಿದು ಒಳಹೊಕ್ಕು ಎಲ್ಲ ಮೂವರು ಅಪಹರಣಕಾರರನ್ನು ಯಮಸದನಕ್ಕೆ ಕಳಿಸಿದರು. ಈ ವೇಳೆಯಲ್ಲಿ ಉಗಾಂಡದ ಸೈನಿಕರು ಗುಂಡು ಹಾರಿಸಿ ಪ್ರತಿಭಟಿಸಿದಾಗ ಇಸ್ರೇಲಿ ಕಮಾಂಡೋಗಳು ಎಕೆ- ೪೭ರಿಂದ ದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಿದರು. ಸುಮಾರು ೪೮ ಉಗಾಂಡಾ ಸೈನಿಕರು ಕೊಲ್ಲಲ್ಪಟ್ಟರು. ನಾಲ್ಕು ಜನ ಅಪಹರಣಕಾರರನ್ನು ಕೊಲ್ಲಲಾಯಿತು. ತದನಂತರ ಒತ್ತೆಯಾಳುಗಳನ್ನೆಲ್ಲ ವಿಮಾನದಲ್ಲಿ ಕೂಡಿಸಲಾಯಿತು. ೨೪೮ ಪ್ರವಾಸಿಗಳು ಹಾಗು ೧೨ ಜನ ವಿಮಾನ ಸಿಬ್ಬಂದಿಗಳಲ್ಲಿ ಕೇವಲ ಹತ್ತು ಜನ ಮಾತ್ರ ಗಂಭೀರವಾಗಿ ಗಾಯಗೊಂಡರು. ಆದರೆ, ಇಸ್ರೇಲ್‌ನ ಐದು ಜನ ಕಮಾಂಡೋಗಳು ಹುತಾತ್ಮರಾದರು. ಇವರಲ್ಲಿ ಈಗಿನ ಪ್ರಧಾನ ಮಂತ್ರಿಯ ಸಹೋದರ ಯೋನಾತನ್ ನೇತಾನ್ಯಾಹು ಒಬ್ಬನಾಗಿದ್ದ.

ಕಾರ್ಯಾಚರಣೆ ಯಶಸ್ವಿಯಾಗಿತ್ತು. ಸ್ವದೇಶಕ್ಕೆ ಮರಳುವ ಮುನ್ನ, ಉಗಾಂಡಾದ ಸೈನ್ಯ ಪ್ರತಿಹಲ್ಲೆ ಮಾಡುವ ಸಾಧ್ಯತೆ ಇದ್ದುದರಿಂದ ನಿಲ್ದಾಣದಲ್ಲಿದ್ದ ಉಗಾಂಡದ ಎಲ್ಲ ವಿಮಾನುಗಳನ್ನು ನಾಶ ಮಾಡಲಾಯಿತು. ಇಸ್ರೇಲಿನ ಈ ಕೃತ್ಯವನ್ನು ಜಗತ್ತೇ ನಿಬ್ಬೆರಗಾಗಿ ನೋಡಿತು. ಇರಾನ್‌ನ ಸೇನಾಧಿಪತಿ ಕೂಡ ಇಸ್ರೇಲ್‌ನ ಶೌರ‍್ಯದ ಬಗ್ಗೆ ಗುಣಗಾನ ಮಾಡಿದನು.

ಮೊಸಾದ ತನ್ನ ಕಾರ್ಯಸಾಧನೆಗಾಗಿ, ಗುರಿ ಮುಟ್ಟುವುದಕ್ಕೆ ಯಾವುದೇ ಮಟ್ಟಕ್ಕೆ ಹೋಗಲು ಹಿಂದೆಮುಂದೆ ನೋಡುವುದಿಲ್ಲ. ಶತ್ರುಗಳ ಮೇಲೆ ದಾಳಿ ಮಾಡಲು ಸದಾ ಸಿದ್ಧವಾಗಿರುತ್ತದೆ. ನಾನಾ ವ್ಯೂಹ ಹಾಗೂ ?ಡ್ಯಂತ್ರಗಳನ್ನು ಅದು ರಚಿಸುತ್ತಲೇ ಇರುತ್ತದೆ. ಅದಕ್ಕಾಗಿ ಪಂಚತಂತ್ರದ ಸಾಮ, ದಾನ, ದಂಡ ಹಾಗೂ ಭೇದ – ಈ ಎಲ್ಲ ಉಪಾಯಗಳಿಗೆ ಅದು ಮೊರೆಹೊಗುತ್ತದೆ. ಒಂದು ಕಾಲಕ್ಕೆ ಹಿಟ್ಲರನ ಬಲಗೈ ಎಂದು ಪ್ರಸಿಧ್ಧನಾದ, ನಾಝಿಯ ಪ್ರಮುಖ ಮಿಲಿಟರಿ ಅಧಿಕಾರಿಯೂ ಆದ ಒಟೊ ಸ್ಕಾರಝೆನಿ ಎಂಬ ಅಪ್ರತಿಮ ಬಂಟನನ್ನು ಭೇದೋಪಾಯದಿಂದ ತನ್ನ ಬಲೆಯಲ್ಲಿ ಹಾಕಿಕೊಂಡು, ಅವನಿಂದಲೇ ಜರ್ಮನಿ ದೇಶದ ಹಿರಿಯ ವಿಜ್ಞಾನಿಯೊಬ್ಬನ ಪ್ರಾಣ ತೆಗೆದ ಅಪರೂಪ ಘಟನೆಯ ವಿವರ ಹೀಗಿದೆ:

೧೯೪೩; ಎರಡನೇ iಹಾಯುದ್ಧ ಉತ್ತುಂಗದಶೆ ತಲಪಿತ್ತು. ಇಟಲಿಯಲ್ಲಿ ಫ್ಯಾಸಿಸ್ಟ್ ಪಕ್ಷದ ನೇತಾರ ಮುಸೋಲಿನಿಯ ವಿರುದ್ಧ ಅಸಂತೋ?ದ ಹೊಗೆ ಹಬ್ಬತೊಡಗಿತ್ತು. ಪಕ್ಷದ ಅಧ್ಯಕ್ಷ ಹಾಗೂ ಅಡಾಲ್ಫ್ ಹಿಟ್ಲರ್‌ನ ಆಪ್ತಮಿತ್ರ ಬೆನಿಟೊ ಮುಸೋಲಿನಿಯನ್ನು ಅವನದೇ ಪಕ್ಷದ ಜನರಲ್ ಬಗದಾಲಿಯೊ ಪದಚ್ಯುತ ಮಾಡಿ ಸೆರೆಮನೆಯಲ್ಲಿಟ್ಟ. ಅವನನ್ನು ಮಿತ್ರರಾ?ಗಳಿಗೆ ಒಪ್ಪಿಸುವ ಯೋಜನೆ ಅವನದಾಗಿತ್ತು.

ಮುಸೋಲಿನಿ ಬಂದಿಯಾದ ಸಮಾಚಾರ ಕೇಳಿದೊಡನೆ ಹಿಟ್ಲರ್ ತಳಮಳಗೊಂಡ. ಕ್ರೋಧದಿಂದ ತಪ್ತನಾದ. ತನ್ನ ಜೀವದ ಗೆಳೆಯನೂ ಸಹಚರನೂ ಆದ ಮುಸೋಲಿನಿ ಮಿತ್ರರಾ?ಗಳ ವಶನಾದರೆ ತನ್ನ ಮಾನ ಮೂರು ಕಾಸಿಗೆ ಹರಾಜು ಆಗುವುದೆಂದು ತಹತಹಿಸಿದ. ಹೇಗಾದರೂ ಮಾಡಿ ಮುಸೋಲಿನಿಯನ್ನು ಸೆರೆಯಿಂದ ಬಿಡಿಸಿಕೊಳ್ಳಬೇಕೆಂಬ ಛಲ ಹಿಟ್ಲರನ ಮನದಲ್ಲಿ ಹೊಕ್ಕಿತು. ತನ್ನ ಎಲ್ಲ ಸೈನ್ಯಾಧಿಕಾರಿಗಳನ್ನು ಕರೆದು ಮುಸೋಲಿನಿಯನ್ನು ಸೆರೆಯಿಂದ ಬಿಡುಗಡೆ ಮಾಡುವ ಹಂಚಿಕೆ ಮಾಡಲು ಆದೇಶಿಸಿದ. ಆ ಸೈನ್ಯಾಧಿಕಾರಿಗಳಲ್ಲಿ ಒಬ್ಬನಾದ ಜನರಲ್ ಶೆಲೆನ್‌ಬರ್ಗ್, “ಈ ಕಾರ‍್ಯ ಮಾಡುವ ಕ್ಷಮತೆ ಇರುವ ವ್ಯಕ್ತಿಯೆಂದರೆ ಅವನು ಒಟೊ ಸ್ಕಾರ್‌ಝೆನಿ ಒಬ್ಬನೇ” ಎಂದು ಹಿಟ್ಲರನಿಗೆ ಸೂಚಿಸಿದ. ಕೂಡಲೆ ಒಟೊ ಸ್ಕಾರ್‌ಝೆನಿಗೆ ಕರೆ ಕಳಿಸಲಾಯಿತು.

ತತ್‌ಕ್ಷಣ ’ರ‍್ಯಾಪಿಡ್ ಆಕ್ಷನ್ ಫೋರ್ಸ್’ ಒಂದು ನಿರ್ಮಾಣವಾಯಿತು. ಅದರ ಮುಂದಾಳತ್ವವನ್ನು ಕೆಚ್ಚೆದೆಯ ಬಂಟ, ಒಟೊ ಸ್ಕಾರ್‌ಝೆನಿ ವಹಿಸಿದ. ಮುಸೋಲಿನಿಯನ್ನು ಸೆರೆಯಿಂದ ಬಿಡಿಸುವ ಶಪಥ ಮಾಡಿದ. ಈ ದಿಶೆಯಲ್ಲಿ ಅಣಿಯಾಗತೊಡಗಿದ.
ಒಟೊ ಸ್ಕಾರಝೆನಿಯ ಜನ್ಮ ಆಸ್ಟ್ರಿಯಾದಲ್ಲಿ ೧೯೦೫ರಲ್ಲಿ ಆಯಿತು. ೧೯೩೦ರಲ್ಲಿ ಸೈನ್ಯ ಸೇರಿದ. ಆರು ಅಡಿ ಮೂರು ಇಂಚು ಎತ್ತರದ, ಹುರಿಕಟ್ಟಾದ ಅಂಗಸೌ?ವ ಹೋಂದಿದ, ತುಂಬಾ ಧೈರ್ಯಶಾಲಿಯಾದ ಅತ ಗೆರಿಲ್ಲಾ ಮತ್ತು ನೇರ ಯುದ್ಧತಂತ್ರಗಳಲ್ಲಿ ನಿ?ತನಾಗಿದ್ದ. ಚತುರನೂ ಬುಧ್ಧಿಶಾಲಿಯೂ ಆಗಿದ್ದ ಆತ ಸೈನ್ಯದಲ್ಲಿ ಬಹು ಬೇಗನೆ ಪ್ರಕಾಶಕ್ಕೆ ಬಂದ. ಆಸ್ಟ್ರಿಯಾ ಮತ್ತು ಜರ್ಮನಿ ವಿಲೀನವಾದನಂತರ ಕೆಲವೊಂದು ಯುದ್ಧಕಾರ‍್ಯಾಚರಣೆಗಳಲ್ಲಿ ಭಾಗವಹಿಸಿ ಮುನ್ನೆಲೆಗೆ ಬಂದ. ಪಾರಂಪರಿಕ ಯುದ್ಧತಂತ್ರಗಳನ್ನು ಅವಲಂಬಿಸದೆ ಅಪಾರಂಪರಿಕ ಯುದ್ಧತಂತ್ರಗಳು ಮತ್ತು ಗೊರಿಲಾ ಯುದ್ಧಕಲೆಯಲ್ಲಿ ಅವನಿಗೆ ಅಪಾರ ನಿಪುಣತೆ ಇತ್ತು. ಅದರ ಲಾಭ ಜರ‍್ಮನ್ ಸೈನ್ಯಕ್ಕೆ ಆಯಿತು. ಅಲ್ಲದೆ ಅವನ ಪರಾಕ್ರಮಕ್ಕೆ ಆಹ್ವಾನ ಕೊಡುವಂತೆ ಕಾರ‍್ಯಾಚರಣೆಯನ್ನು ಅವನಿಗೆ ಒಪ್ಪಿಸಲಾಯಿತ್ತು. ಬಗದಾಲಿಯೋನ ಬಂಧನದಿಂದ ಮುಸೋಲಿನಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಹೊಣೆಯನ್ನು ಆತ ಸಂತೋ?ದಿಂದ ಹೊತ್ತಿದ್ದ.

ಇಟಲಿಯ ಇಂಚಿಂಚು ಭೌಗೋಲಿಕ ಮಾಹಿತಿ ಅವನಿಗೆ ಗೊತ್ತಿತ್ತು. ಅಲ್ಲದೆ ಇಟಾಲಿಯನ್ ಭಾ?ಯ ಮೇಲೆ ಅವನ ಪ್ರಭುತ್ವವಿತ್ತು. ಕಾರ್ಲ್ ರೆಟಲ್ ಎಂಬ ಕಮಾಂಡೋ ಹಾಗೂ ಕ್ಲೋಡಿಯಾ ಎಂಬ ಗುಪ್ತಚಾರಿಣಿಯನ್ನು ತನ್ನ ಬಳಗಕ್ಕೆ ಸೇರಿಸಿಕೊಂಡ. ಕ್ಲೋಡಿಯಾ ಎ? ಚೆಲುವೆಯೋ, ಅ? ಚತುರೆಯೂ ಆಗಿದ್ದಳು. ಶತ್ರುವಿನ ಕೂಡ ಮಧುರವಾದ ಮಾತುಗಳಿಂದ ಪ್ರೇಮದ ನಾಟಕವಾಡಿ ಅವರಿಂದ ಗೌಪ್ಯ ವಿ?ಯಗಳನ್ನು ಸಂಗ್ರಹಿಸುವ ಚಾತುರ‍್ಯ ಅವಳಲ್ಲಿತ್ತು.

ಈ ಮೂರೂ ಜನ ಇಟಲಿಯ ಮೂಲೆಮೂಲೆಯನ್ನು ಶೋಧ ಮಾಡಿದರು. ಆದರೆ ಜನರಲ್ ಬಗದಾಲಿಯೂ ಅ? ಜಾಣನಾಗಿದ್ದ, ಆತ ಮುಸೋಲಿನಿಯನ್ನು ಅತ್ಯಂತ ನಿಗೂಢ ಸ್ಥಳದಲ್ಲಿ ಬಚ್ಚಿಟ್ಟಿದ್ದ: ಇಟಲಿಯ ಉತ್ತರದಲ್ಲಿದ್ದ ಆಂಡ್ರಿಯಾ ದ್ವೀಪದಲ್ಲಿ. ಈ ಸುದ್ದಿ ತಿಳಿದ ತಕ್ಷಣ ಒಟೊ ಸ್ಕಾರಝೆನಿ, ಕಾರ್ಲ ರ‍್ಯಾಟಲ್ ದ್ವೀಪದ ಸರ್ವೇಕ್ಷಣೆಗಾಗಿ ಒಂದು ಚಿಕ್ಕ ವಿಮಾನ ತೆಗೆದುಕೊಂಡು ಹೊರಟರು. ಆದರೆ ಅವರ ವಿಮಾನವನ್ನು ಗುಂಡು ಹೊಡೆದು ಉರುಳಿಸಲಾಯಿತು. ವಿಮಾನವು ಸಮುದ್ರದಲ್ಲಿ ಪಲ್ಟಿಹೊಡೆದು ಬಿದ್ದಿತು. ಒಟೊ ಸ್ಕಾರಝೆನಿ, ಕಾರ್ಲ ರ‍್ಯಾಟಲ್ ಒಂದು ಕಿಲೋಮೀಟರ್ ಈಜುತ್ತ ಒಂದು ಇಟಾಲಿಯನ್ ಹಡಗನ್ನು ತಲಪಿ ಜೀವ ಉಳಿಸಿಕೊಂಡರು. ಮುಂದೆ ಎರಡು ದಿನದಲ್ಲಿ ಆ ದ್ವೀಪದಿಂದ ಮುಸೋಲಿನಿಯನ್ನು ಬೇರೆ ಕಡೆಗೆ ವರ್ಗಾಯಿಸಲಾಯಿತು. ಕ್ಲೋಡಿಯಾ ಅತ್ಯಂತ ಬುಧ್ಧಿವಂತಿಕೆಯಿಂದ ಈ ಹೊಸ ಸ್ಥಳದ ಮಾಹಿತಿ ಪಡೆದುಕೊಂಡಳು. ಇಟಲಿಯ ಪರ್ವತಶ್ರೇಣಿಗಳ ಮಧ್ಯದಲ್ಲಿ, ಸಮುದ್ರ ಪಾತಳಿಯಿಂದ ಏಳು ಸಾವಿರ ಅಡಿ ಎತ್ತರದಲ್ಲಿ ’ಗ್ರಾಂಡ್ ಸಾಸೊ’ ಎಂಬ ಐ?ರಾಮಿ ಹೊಟೇಲಿನಲ್ಲಿ ಮುಸೋಲಿನಿಯನ್ನು ಬಂದಿಯಾಗಿ ಇರಿಸಲಾಗಿತ್ತು. ಹೊಟೆಲಿನ ಎರಡು ಕಡೆಗೆ ಎತ್ತರವಾದ ಪರ್ವತಗಳಿದ್ದರೆ, ಒಂದು ಕಡೆಗೆ ಆಳವಾದ ಕಂದರವಿತ್ತು. ಹೊಟೇಲ್ ತಲಪಲು ಕೇವಲ ಒಂದು ಮಾರ್ಗವಿತ್ತು. ಮಗ್ಗುಲಲ್ಲಿದ್ದ ಕಂದರದ ದಂಡೆಗುಂಟ ಹಾಗೂ ಸುತ್ತಮುತ್ತಲೂ ಇಟಾಲಿಯನ್ ಸೈನಿಕರ ಬಿಗಿಯಾದ ಕಾವಲು ಇತ್ತು. ಹೊಟೇಲಿನಲ್ಲಿ ಅಳಿದುಳಿದ ಪರ್ಯಟಕರನ್ನು ಹೊರಗೆ ಕಳಿಸಲಾಗಿತ್ತು. ಅಲ್ಲಿ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸೈನಿಕರ ಕಣ್ಣು ಇತ್ತು. ಇಂತಹ ಪರಿಸ್ಥಿತಿಯಲ್ಲಿ ಮುಸೋಲಿನಿಯನ್ನು ಬಿಡುಗಡೆ ಮಾಡುವುದು ಒಂದು ಪಂಥಾಹ್ವಾನವೇ ಆಗಿತ್ತು. ಅಲ್ಲದೆ ಬರಿಗೈಯಿಂದ ಮರಳಿದರೆ, ಸ್ಕಾರಝೆನಿಗೆ ಹಿಟ್ಲರನಿಂದ ಮೃತ್ಯುವೇ ಕಾದಿತ್ತು! ಆದರೆ ಕೈಚೆಲ್ಲಿ ಹತಾಶನಾಗುವ ಸೈನಿಕ ಅವನಾಗಿರಲಿಲ್ಲ. ಗುರಿಯನ್ನು ತಲಪಲೇ ಬೇಕು ಎಂಬ ಹಠ ಅವನಲ್ಲಿ ನಿರ್ಮಾಣವಾಗಿತ್ತು. ಅಮಿತ ಹುರುಪಿನಿಂದ ತನ್ನ ಕಾರ್ಯದಲ್ಲಿ ತೊಡಗಿದ. ಆತ ಮುಸೋಲಿನಿಯನ್ನು ಬಂಧಿಸಿಟ್ಟಿದ್ದ ಹೊಟೇಲನ್ನು ವಿಮಾನದ ಮೂಲಕ ಸರ್ವೇಕ್ಷಣೆ ಮಾಡಿದ. ಹೊಟೇಲಿನ ಹಿಂದಿನ ಭಾಗದಲ್ಲಿ ಒಂದು ಚಿಕ್ಕದಾದ ಪ್ರಸ್ಥಭೂಮಿ ಇತ್ತು. ಆ ಸ್ಥಳ ಅವನಿಗೆ ಉಪಯೋಗ ಅಗುವ ಹಾಗೆ ಇತ್ತು.

ಆತ ಚೆನ್ನಾಗಿ ಪೂರ್ವಸಿಧ್ಧತೆ ಮಾಡಿಕೊಂಡ. ’ಗ್ರಾಂಡ್ ಸಾಸೊ’ ಹೊಟೇಲಿನ ಹತ್ತಿರ ವಿಮಾನ ಇಳಿಸಲು ಅಸಾಧ್ಯವಾಗಿತ್ತು. ಏಕೆಂದರೆ ಅದು ಶತ್ರುಗಳ ಕಣ್ಣಿಗೆ ಬಿದ್ದರೆ ಅದನ್ನು ಹೊಡೆದು ಉರುಳಿಸುವ ಸಾಧ್ಯತೆ ಇತ್ತು.

ಅಡಾಲ್ಫ್ ಐಕ್‌ಮನ್ ಅದಕ್ಕಾಗಿ ಆತ ಹನ್ನೆರಡು ಪ್ಯಾರಾಚ್ಯೂಟರ್ಸ್‌ಗಳನ್ನು ತನ್ನೊಂದಿಗೆ ಸೇರಿಸಿಕೊಂಡ. ಆನಂತರ ಹೊಟೇಲಿನ ಮಗ್ಗುಲಲ್ಲಿದ್ದ ಪ್ರಸ್ಥಭೂಮಿಯ ಮೇಲೆ ಈ ಪ್ಯಾರಾಚ್ಯೂಟರ್ಸ್ ಮತ್ತು ೨೪ ಸೈನಿಕರೊಂದಿಗೆ ಇಳಿದ. ಈ ಸೈನಿಕರಲ್ಲಿ ದೇಶಭ್ರ?ನಾದ ಓರ್ವ ಇಟಾಲಿಯನ್ ಜನರಲ್ ಇದ್ದ. ಕೆಳಗೆ ಇಳಿಯುತ್ತಿದ್ದಂತೆಯೇ ಮುಸೋಲಿನಿಯ ಸಂರಕ್ಷಣೆಗೆ ನೇಮಿಸಲ್ಪಟ್ಟ ಸೈನಿಕರಿಗೆ ಗೋಲಿಬಾರ ಮಾಡಬಾರದೆಂದು, ಇಟಾಲಿಯನ್ ಜನರಲ್ ಇಟಾಲಿಯನ್ ಭಾ?ಯಲ್ಲಿ ಆದೇಶ ನೀಡಿದ. ತಮ್ಮವನೇ ಆದ ಜನರಲ್‌ನಿಂದ ಬಂದ ಆಜ್ಞೆಯನ್ನು ಪಾಲಿಸಿದ ಇಟಾಲಿಯನ್ ಸೈನಿಕರು ಸುಮ್ಮನೆ ನೋಡುತ್ತ ನಿಂತರು.

ಮುಸೋಲಿನಿಯ ಕೋಣೆಯೊಳಗೆ ಹೋಗಿ ಸ್ಕಾರಝೆನಿ, ಅವನನ್ನು ಬಿಡುಗಡೆ ಮಾಡಿದ. ಕೂಡಲೆ ರೇಡಿಯೋ ಸಂದೇಶ ಕಳಿಸಿ ಒಂದು ಚಿಕ್ಕ ವಿಮಾನವನ್ನು ತರಿಸಿದ. ಒಂದು ಹನಿ ರಕ್ತವನ್ನು ಭೂಮಿಗೆ ಬೀಳಿಸದೆ ಮುಸೋಲಿನಿ ಸುರಕ್ಷಿತವಾಗಿ ಬಿಡುಗಡೆಯಾಗಿದ್ದ.
ಅಸಾಧಾgಣ ಸಾಹಸ ಹಾಗೂ ದಂಗುಬಡಿಸುವಂಥ ಕಾರ‍್ಯಸಾಧನೆ ಮಾಡಿದ ಸ್ಕಾರಝೆನಿ, ಜರ್ಮನ್ ಸೈನ್ಯದಲ್ಲಿ ಮೇಲ್ದರ್ಜೆಯ ನಾಯಕನಾದ. ಮುಂದೆ ಆತ ’ಮೋಸ್ಟ್ ಡೇಂಜರಸ್ ಮ್ಯಾನ್ ಆಫ್ ಯೂರೋಪ್’ ಎಂದು ಗುರುತಿಸಲ್ಪಟ್ಟ.
ಸ್ಕಾರಝೆನಿಯ ಆಯು?ದ ಪೂರ್ವಾರ್ಧ ಇಂತಹ ಸಾಹಸಗಳಿಂದ ತುಂಬಿತ್ತು. ಮುಂದೆ ಆತ ಗೌರವದಿಂದ ಬಾಳಿದ. ಸ್ಕಾರಝೆನಿ ಮತ್ತು ಇತರ ನಾಝಿ ಅಧಿಕಾರಿಗಳು ಶೂರರೂ ಧೀರರೂ ಆಗಿದ್ದರು. ಆದರೆ ಅವರ ಉದ್ದೇಶ ಮಾತ್ರ ಪ್ರಾಮಾಣಿಕವಾಗಿರಲಿಲ್ಲ. ನಿರ್ದಯಿ ಹಿಟ್ಲರನ ಆದೇಶಗಳನ್ನು ಕಣ್ಣುಮುಚ್ಚಿ ಅನುಸರಿಸಿದರು. ೧೯೪೫ರಲ್ಲಿ ಹಿಟ್ಲರನು ಆತ್ಮಹತ್ಯೆ ಮಾಡಿಕೊಂಡಾಗ ಈ ಎಲ್ಲ ಜನ ಜೀವ ಉಳಿಸಿಕೊಳ್ಳುವುದಕ್ಕೋಸ್ಕರ ಜರ‍್ಮನಿಯನ್ನು ಬಿಟ್ಟು ಪಲಾಯನ ಮಾಡಿದರು. ಮಿತ್ರರಾ?ದ ಸೈನ್ಯಕ್ಕೆ ಸೆರೆಸಿಕ್ಕವರನ್ನೆಲ್ಲ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಲಾತು. ದೋಷಿಗಳಿಗೆ ಶಿಕ್ಷೆಯನ್ನು ವಿಧಿಸಲಾಯಿತು.
*****
ಕಾಲ ಸರಿಯುತ್ತಿತ್ತು. ಮಹಾಯುದ್ಧದಿಂದ ಪೀಡಿತವಾದ ದೇಶಗಳು ಈಗ ಸುಸ್ಥಿತಿಗೆ ಮೆಲ್ಲನೆ ಮರಳುತ್ತಿದ್ದವು. ಸೆಪ್ಟೆಂಬರ್ ೧೯೬೨ರಲ್ಲಿ ಹೆಂಝ್ ಕ್ರುಗ್ ಎಂಬ ಹೆಸರಿನ ಜರ‍್ಮನ್ ನಾಗರಿಕ ಕಛೇರಿಗೆ ಹೊರಟವನು ಕಛೇರಿಯನ್ನು ತಲಪಲೇ ಇಲ್ಲ. ನಡುಹಾದಿಯಲ್ಲಿ ಆತ ಕಣ್ಮರೆಯಾದ. ಆತ ಎಲ್ಲಿ ಹಾಗೂ ಹೇಗೆ ಮರೆಯಾದ ಎಂಬುದು ಬಹಳ? ದಿನ ಯಕ್ಷಪ್ರಶ್ನೆಯೇ ಆಗಿತ್ತು.
ಹೆಂಝ್ ಕ್ರುಗ್ ಜರ‍್ಮನಿಯ ಪ್ರಸಿಧ್ಧ ವಿಜ್ಞಾನಿಯಾಗಿದ್ದ. ಜರ‍್ಮನಿಗಾಗಿ ಕಾರ‍್ಯಮಾಡುತ್ತಿದ್ದ ಹಲವು ವಿಜ್ಞಾನಿಗಳಲ್ಲಿ ಈತನೂ ಒಬ್ಬನಾಗಿದ್ದ. ಮಹಾಯುದ್ಧದ ಪರಾಭವದ ನಂತರ ಈ ಬುದ್ಧಿಜೀವಿಗಳಲ್ಲಿ ಕೆಲವರು ಜರ‍್ಮನಿಯಲ್ಲಿದ್ದರೆ ಇನ್ನಿತರರು ಅಮೆರಿಕ ಹಾಗೂ ಯೂರೋಪ್ ದೇಶಗಳನ್ನು ಆಶ್ರಯಿಸಿದರು. ಹೆಂಝ್ ಕ್ರುಗ್‌ನ ಸ್ವಂತದ್ದೆ ಒಂದು ಕಂಪನಿ ಇತ್ತು. ರಾಕೆಟ್ಟಿಗೆ ಬೇಕಾಗುವ ಬಿಡಿ ಉಪಕರಣಗಳನ್ನು ಅಲ್ಲಿ ಉತ್ಪಾದಿಸಲಾಗುತಿತ್ತು.

ಮಧ್ಯಪೂರ‍್ವದಲ್ಲಿ ಇಸ್ರೇಲ್‌ನ ಸ್ಥಾಪನೆಯ ಕಾರಣದಿಂದ ಅರಬ್ ರಾ?ಗಳು ಹಾಗೂ ಇಸ್ರೇಲ್‌ನ ನಡುವೆ ದ್ವೇ? ಬೆಳೆಯುತ್ತಿತ್ತು. ಈಜಿಪ್ತ್ ದೇಶ ತನ್ನದೇ ಆದ ರಾಕೆಟ್ ನಿರ್ಮಾಣ ಮಾಡುವ ಯೋಜನೆ ಹಾಕುತ್ತಿತ್ತು. ಈಜಿಪ್ತ್‌ನ ಅಧ್ಯಕ್ಷ ನಾಸೇರ್ ಈ ವಿ?ಯದಲ್ಲಿ ಪ್ರಯತ್ನಶೀಲರಾಗಿದ್ದರು. ಜರ‍್ಮನಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಹಾಯದಿಂದ ಈಜಿಪ್ತ್ ದೇಶವನ್ನು ಬಲಿ? ಮಾಡುವ ಹಂಚಿಕೆಯಲ್ಲಿದ್ದರು. ಹೆಂಝ್ ಕ್ರುಗ್‌ನ ಕಂಪೆನಿ ಈ ನಿಟ್ಟಿನಲ್ಲಿ ಈಜಿಪ್ತ್‌ಗೆ ಸಹಾಯ ಮಾಡುತ್ತಿತ್ತು. ಇಲ್ಲಿ ಉತ್ಪನ್ನವಾದ ರಾಕೆಟ್ಟುಗಳಿಂದ, ಭವಿ?ದಲ್ಲಿ ತಮ್ಮ ದೇಶದ ಸುರಕ್ಷತೆ ಗಂಡಾಂತರಕ್ಕೆ ಒಳಗಾಗಬಹುದು ಎಂಬುದು ಇಸ್ರೇಲಿ ಗುಪ್ತಚರಸಂಸ್ಥೆ ಮೊಸಾದ ಮತ್ತು ಇಸ್ರೇಲ್ ಮಂತ್ರಿಮಂಡಲದ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಈಜಿಪ್ತ್‌ಗೆ ಸಹಾಯ ಮಾಡುವ ಶಾಸ್ತ್ರಜ್ಞರನ್ನು ಮತ್ತು ವಿಜ್ಞಾನಿಗಳನ್ನು ಕೊಲೆಮಾಡಲು ನಿರ್ಧರಿಸಿತು.

ಇದರ ವಾಸನೆ ಹೆಂಝ್ ಕ್ರುಗ್‌ನಿಗೆ ತಾಗಿತು. ತಲ್ಲಣಗೊಂಡ ಆತನಿಗೆ ಈ ಭೀಕರ ಪರಿಸ್ಥಿತಿಯಿಂದ ತನ್ನನ್ನು ಪಾರುಮಾಡುವ ವ್ಯಕ್ತಿಯೆಂದರೆ ಸ್ಕಾರಝೆನಿ ಒಬ್ಬನೇ ಎಂದು ಖಾತ್ರಿಯಾಯಿತು. ಅವನೊಬ್ಬನೇ ತನ್ನನ್ನು ರಕ್ಷಿಸಬಲ್ಲವನು ಎಂದು ಆತ ಸ್ಕಾರಝೆನಿಗೆ ಕರೆಮಾಡಿ ತನ್ನನ್ನು ಭೇಟಿಯಾಗಲು ಹೇಳಿದ. ತನ್ನ ಮೇಲೆ ಒದಗಿದ ಆತಂಕವನ್ನು ತೊಡೆದುಹಾಕಲು ಪ್ರಾರ್ಥಿಸಿದ. ಸ್ಕಾರಝೆನಿ ಅವನ ಮಾತುಗಳನ್ನು ಶಾಂತಚಿತ್ತದಿಂದ ಕೇಳಿದ. ಅವನಿಗೆ ಆಶ್ವಾಸನೆ ಕೊಟ್ಟ. ತನ್ನ ವಾಕ್ಚಾತುರ್ಯದಿಂದ ಅವನ ವಿಶ್ವಾಸ ಗಳಿಸಿದ. ಹೆಂಝ್ ಕ್ರುಗ್ ಈಗ ನಿಶ್ಚಿಂತನಾದ. ಆದರೆ ನಡೆದದ್ದು ಬೇರೆಯೇ.
೧೯೬೨, ಸೆಪ್ಟೆಂಬರ್ ಒಂದರ ಬೆಳಗ್ಗೆ ಕ್ರುಗ್, ಸ್ಕಾರಝೆನಿ ಮತ್ತು ಆತನ ಇಬ್ಬರು ಸಹಚರರು ಕ್ರುಗ್‌ನ ಕಾರಿನೊಳಗೆ ಕುಳಿತುಕೊಂಡರು. ಕಾರು ಹೆದ್ದಾರಿಯ ಕಡೆಗೆ ಓಡಿತು. ಕೆಲವು ನಿಮಿ?ಗಳ ನಂತರ ಅದು ಒಮ್ಮೆಲೆ ದಟ್ಟವಾದ ಅರಣ್ಯದ ಕಡೆಗೆ ತಿರುವು ತೆಗೆದುಕೊಂಡಿತು. ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಸ್ಕಾರಝೆನಿ ಕ್ರುಗ್‌ನಿಗೆ ಭರವಸೆಯೇನೋ ಕೊಟ್ಟಿದ್ದ. ಹೀಗಾಗಿ ಕ್ರುಗ್ ನಿಶ್ಚಿಂತನಾಗಿಯೇ ಕುಳಿತಿದ್ದ. ಅರಣ್ಯದ ಒಂದು ದಂಡೆಗೆ ಕಾರು ನಿಲ್ಲಿಸಲಾಯಿತು. ಕ್ರುಗ್‌ನನ್ನು ಕಾರಿನಿಂದ ಹೊರಗೆ ಬರಲು ಹೇಳಲಾಯಿತು. ಸ್ಕಾರಝೆನಿ ಜೇಬಿನಿಂದ ರಿವೋಲ್ವರ್ ಹೊರತೆಗೆದು ನೇರವಾಗಿ ಕ್ರುಗ್‌ನ ಮೇಲೆ ಗುಂಡುಗಳ ಸುರಿಮಳೆಗೈದ. ಅನಿರೀಕ್ಷಿತ ಘಟನೆಯಿಂದ ಸಾವರಿಸಿಕೊಳ್ಳುವ ಮೊದಲೇ ಕ್ರುಗ್‌ನ ಪ್ರಾಣಪಕ್ಷಿ ಹಾರಿಹೋಯಿತು. ಆ ಇಬ್ಬರು ಸಹಚರರು, ಅಲ್ಲಿಯೇ ಹೆಣದ ವಿಲೇವಾರಿ ಮಾಡಿದರು. ಇವರಿಬ್ಬರು ಮೋಸಾದದ ಏಜೆಂಟರಾಗಿದ್ದರು.

*****

ಒಂದು ಕಾಲಕ್ಕೆ ನಿ?ವಂತ ನಾಝಿಯಾಗಿದ್ದ, ಹಿಟ್ಲರನ ಬಲಗೈಯೆಂದೇ ಪ್ರಸಿಧ್ಧನಾದ, ಸ್ಕಾರಝೆನಿ ಈಗ ಮೊಸಾದದ ಹಸ್ತಕನಾಗಿದ್ದ. ಯುರೋಪಿನ ಜ್ಯೂಯಿಶ್ ಜನರ ಸಂಹಾರಕ್ಕಾಗಿ ವೀಳ್ಯವನ್ನು ಸ್ವೀಕರಿಸಿದ್ದ, ಪೂರ್ವಾಶ್ರಮದ ನಾಝಿಯಾಗಿದ್ದ ಈತನಿಗೆ ಈಗ ಜ್ಯೂಗಳ ಆಣತಿಯಂತೆ ನಡೆಯುವ ಪರಿಸ್ಥಿತಿ ಬಂದಿತ್ತು. ಅದಕ್ಕೆ ಕಾರಣವೂ ಇತ್ತು. ಮೊಸಾದ ಸಂಸ್ಥೆ ತನ್ನನ್ನು ಯಾವುದೇ ಕ್ಷಣದಲ್ಲಿ ಕೊಲೆ ಮಾಡಬಹುದು ಎಂದು ಒಟ್ಟೊ ಸ್ಕಾರಝೆನಿಗೆ ಖಾತ್ರಿ ಆಗಿತ್ತು. ಹೀಗಾಗಿ ಅವನು ಬಹಳ ಎಚ್ಚರದಿಂದ ಇದ್ದ. ಮೊದಮೊದಲು ಮೊಸಾದ, ಸ್ಕಾರಝೆನಿಯನ್ನು ಕೊಲ್ಲುವ ಯೋಜನೆಯೇನೋ ಹಾಕಿತ್ತು. ಅದನ್ನು ಕಾರ್ಯಗತಗೊಳಿಸುವುದು ಅದಕ್ಕೆ ಅ?ನು ಜಟಿಲ ಕಾರ್ಯವಾಗಿರಲಿಲ್ಲ. ಆದರೆ ಮೊಸಾದದ ಹಿರಿಯ ನಿರ್ದೇಶಕನ ತಲೆಯಲ್ಲಿ ಬೇರೆಯೇ ವಿಚಾರ ಗಿರಕಿಹೊಡೆಯುತಿತ್ತು. ಈಗ ಸ್ಕಾರಝೆನಿ ತನ್ನ ಮಾತೃದೇಶ ಜರ್ಮನಿಗೆ ಬೇಡವಾದ ವ್ಯಕ್ತಿಯಾಗಿದ್ದ. ಅಲ್ಲಿ ಅವನಿಗೆ ಗೌರವವೂ ಬೆಲೆಯೂ ಇರಲಿಲ್ಲ. ಹೀಗಾಗಿ ಆಂತರಿಕವಾಗಿ ಆತ ಚಡಪಡಿಸುತ್ತಿದ್ದ. ಮಾನಸಿಕವಾಗಿ ಕುಂದಿದ ಈತನನ್ನು ಕೊಲ್ಲುವುದು ಹಾಗೂ ಹೆಣಕ್ಕೆ ಕೋಲಿನಿಂದ ಹೊಡೆಯುವುದು ಎರಡೂ ಒಂದೇ ಎಂದು ಗುರಿಯನ್‌ಗೆ ಅರಿವಾಗಿತ್ತು. ಸ್ಕಾರಝೆನಿಗೆ ಪ್ರಾಣಭಿಕ್ಷೆಯ ಆಮಿ? ತೋರಿಸಿ ತನ್ನ ಕಾರ್ಯ ಸಾಧಿಸಿದರಾಯಿತು ಎಂದುಕೊಂಡ. ಕೊನೆಗೂ ಮೊಸಾದ, ಅವನನ್ನು ನಾನಾ ಉಪಾಯಗಳಿಂದ ತನ್ನ ಬಲೆಯೊಳಗೆ ಹಾಕಿಕೊಂಡಿತು. ನಾಝಿಯನ್ನು ನಿರ್ನಾಮಮಾಡಲು ನಾಝಿಯೇ ಯೋಗ್ಯನೆಂದು ತರ್ಕಿಸಿದ ಮೊಸಾದ ಸ್ಕಾರಝೆನಿಯನ್ನು ಕೊಲ್ಲದೆ ಅವನ ನೆರವಿನಿಂದ ತನ್ನ ಶತ್ರುವನ್ನು ಸಲೀಸಾಗಿ ಯಮಸದನಕ್ಕೆ ಕಳಿಸಿತು.

ಮೊಸಾದದ ಸಂಪರ್ಕ ಬಂದಾಗ ಸ್ಕಾರಝೆನಿಯ ವಯಸ್ಸು ಐವತ್ತಾಗಿತ್ತು. ಆದರೂ ಧೈರ್ಯ, ಸಾಹಸಗಳು ಇನ್ನೂ ಅವನಲ್ಲಿ ತುಂಬಿ ತುಳುಕುತ್ತಿದ್ದವು. ಬುದ್ಧಿಮತ್ತೆ ತೀಕ್ಷ್ಣವಾಗಿತ್ತು. ಮೊಸಾದದಿಂದ ತನಗೆ ಅಭಯ ದೊರಕಿದ ಮೇಲೆ ಆತ ಮೊಸಾದಗಾಗಿ ಕಾರ್ಯ ಮಾಡಿದ. ಅವನ ನೆಚ್ಚಿನ ಧುರೀಣ ಹಿಟ್ಲರನ ಮರಣದ ನಂತರ ಜರ್ಮನಿ ದೇಶದ ಜೊತೆಗಿನ ಆತನ ಋಣಾನುಬಂಧ ಹರಿದುಹೋಗಿತ್ತು.

ಜಗತ್ತಿನಲ್ಲಿಯ ಪ್ರತ್ಯೇಕ ಜ್ಯೂಯಿಶ್ ವ್ಯಕ್ತಿಯ ಜವಾಬ್ದಾರಿ ಮತ್ತೊಬ್ಬ ಜ್ಯೂಯಿಶ್ ವ್ಯಕ್ತಿಯ ಮೇಲೆ ಇರುತ್ತದೆ, ಇದು ಇಸ್ರೇಲ್‌ನ ಧ್ಯೇಯ ವಚನ. ಇದನ್ನು ಮೊದಲಿನಿಂದಲೇ ಜ್ಯೂಗಳು ಪಾಲಿಸುತ್ತ ಬಂದಿದ್ದಾರೆ. ಈ ವಿ?ಯದ ಬಗ್ಗೆ ’ಶಿಂಡ್ಲರ್ಸ್
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಲಿಸ್ಟ್’ ಎಂಬ ಚಲನಚಿತ್ರವನ್ನು ನೋಡಿದರೆ ಕಲ್ಪನೆ ಬಂದೀತು. ಈ ಚಿತ್ರಪಟ ಸತ್ಯಘಟನೆಯನ್ನು ಆಧರಿಸಿದೆ. ಯಹೂದಿಯಾದ, ಆಸ್ಕರ್ ಶಿಂಡ್ಲರ್ಸ್ ಎಂಬಾತ ಕಾರ್ಖಾನೆಯೊಂದರ ಮಾಲಿಕನಾಗಿದ್ದ. ಜ್ಯೂಗಳನ್ನು ದೇಶದಿಂದ ಹೊರಗೆ ಹಾಕುವ ಇಲ್ಲವೇ ಅವರನ್ನು ಕೊಲ್ಲುವ ಕಾರ್ಯವನ್ನು ಹಿಟ್ಲರನು ಪ್ರಾರಂಭಮಾಡಿದಾಗ ಆಸ್ಕರ್ ಶಿಂಡ್ಲರ್ಸ್ ಸುಮಾರು ೧೨೦೦ ಜ್ಯೂಗಳನ್ನು ತನ್ನ ಕಾರ್ಖಾನೆಯ ಕೆಲಸಗಾರರು ಎಂದು ಸುಳ್ಳು ಪ್ರಮಾಣಪತ್ರ ನೀಡಿ ಅವರ ಪ್ರಾಣ ಉಳಿಸಿದ್ದ. ಇದಕ್ಕಾಗಿ ಜರ್ಮನ್ ಅಧಿಕಾರಿಗಳ ಬಾಯಿಮುಚ್ಚಿಸಲು ಸಾಕ? ಲಂಚವನ್ನೂ ಕೊಟ್ಟಿದ್ದ. ದುರ್ದೈವ ಎಂದರೆ, ಲಂಚ ಕೊಟ್ಟು ಕೊಟ್ಟು ಕೊನೆಗೆ ಆತನೇ ಪಾಪರ್ ಆಗಬೇಕಾಯಿತು.

*****

ಕೇವಲ ೨೨,೦೦೦ ಚದರ ಕಿಲೋಮೀಟರ್ ಕ್ಷೇತ್ರಫಲ ಇರುವ ಇಸ್ರೇಲನ್ನು ಮುಸ್ಲಿಂ ರಾ?ಗಳು ಎಲ್ಲ ದಿಶೆಯಿಂದ ಸುತ್ತುವರಿದಿವೆ. ಆದರೂ ಅವುಗಳಿಗೆ ಇಸ್ರೇಲನ್ನು ಸೋಲಿಸಲು ಅಸಾಧ್ಯವಾಗಿದೆ. ಅರಬ್ ರಾ?ಗಳಲ್ಲಿ ನಿರ್ಮಾಣವಾಗುತ್ತಿರುವ ಅಣುಬಾಂಬುಗಳು ತನ್ನ ದೇಶದ ಅಸ್ತಿತ್ವವನ್ನು ತೊಡೆದುಹಾಕಲು ಎಂಬುದು ಮೊಸಾದಗೆ ಗೊತ್ತು. ಇರಾಕ್ ಮತ್ತು ಸಿರಿಯಾದ ಅಣುಪ್ರಕಲ್ಪಗಳು ನಿರ್ಮಾಣವಾಗದ ಹಾಗೆ ಮುಂಜಾಗ್ರತೆಯನ್ನು ಅದು ತೆಗೆದುಕೊಂಡಿದೆ. ದೇಶದ ಸಂರಕ್ಷಣೆ, ಅದಕ್ಕೆ ಬೇಕಾಗುವ ಸಿದ್ಧತೆಗಳು ಮತ್ತು ಸ್ವದೇಶದ ಹಿತ ಕಾಪಾಡುವುದು – ಈ ವಿ?ಯಗಳಲ್ಲಿ ಅದು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಪಂಚದ ವಿವಿಧ ದೇಶಗಳಲ್ಲಿ ವಾಸಿಸುವ ಜ್ಯೂಯಿಶ್ ಜನರು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿದ್ದಾರೆ. ಭೌತಶಾಸ್ತ್ರ, ವೈದ್ಯಶಾಸ್ತ್ರ, ಜೈವಿಕಶಾಸ್ತ್ರದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಯೂರೋಪ್, ಅಮೆರಿಕದ ಉದ್ಯಮಗಳಲ್ಲಿ ಜ್ಯೂಯಿಶ್ ಜನರ ಪಾಲು ಶೇ. ೪೦ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದರ ಲಾಭವನ್ನು ಪರೋಕ್ಷವಾಗಿ ಇಸ್ರೇಲ್ ಪಡೆದುಕೊಳ್ಳುತ್ತಿದೆ ಎಂಬುದು ಬೇರೆ ವಿ?ಯ.

ಭಾರತೀಯರು, ದೇಶದ ಹೊರಗೆ ’ಬೃಹದ್ ಭಾರತ’ವನ್ನು ನಿರ್ಮಾಣ ಮಾಡಬೇಕು ಎಂಬ ಆಶಯ ವೀರ ಸಾವರ್‌ಕರರಿಗೆ ಬಹಳ ಹಿಂದೆಯೇ ಇತ್ತು. ಜ್ಯೂಯಿಶ್ ಜನರು ಅಂತಹ ಸಂಕಲ್ಪವನ್ನು ತಮ್ಮ ದೇಶಕ್ಕಾಗಿ ಪ್ರತ್ಯಕ್ಷ ಮಾಡಿ ತೋರಿಸಿದರು. ಭಾರತದಲ್ಲಿ ತ್ಯಾಗ, ಬಲಿದಾನ ಈ ಶಬ್ದಗಳು ಅರ್ಥ ಕಳೆದುಕೊಂಡು ಸವಕಲು ನಾಣ್ಯಗಳಾಗಿವೆ. ಆದರೆ ದೇಶಪ್ರೇಮ ಎಂಬುದು ಇಸ್ರೇಲಿಗಳ ರಕ್ತದಲ್ಲಿಯೇ ಹರಿಯುತ್ತದೆ. ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ಅವರು ಸಿದ್ಧರು. ಇಸ್ರೇಲ್‌ನ ಪ್ರತಿ ಮನೆಯಲ್ಲಿ ಯುದ್ಧದಲ್ಲಿಯೋ ಅಥವಾ ರಹಸ್ಯ ಸೈನಿಕಕಾರ್ಯಾಚರಣೆಯಲ್ಲಿಯೊ ಶರೀರದ ಂiiವುದಾದರೊಂದು ಅವಯವ ಕಳೆದುಕೊಂಡಿರುವ ಒಬ್ಬನನ್ನಾದರೂ ನೀವು ಕಾಣಬಹುದು. ತಮ್ಮ ಈ ದುರ್ದೆಸೆಯ ಬಗ್ಗೆ ಅವರ ಮುಖದ ಮೇಲೆ ಬೇಸರವಿರುವುದಿಲ್ಲ; ಬದಲಿಗೆ ಧನ್ಯತಾಭಾವವಿರುತ್ತದೆ. ಬಹಳ ಹಿಂದೆಯೇ ಇಂತಹ ದೇಶದ ಕೂಡ ಮಿತ್ರತ್ವ ಬೆಳೆಸಿ, ಅವರಿಂದ ಹೊಸ ಹೊಸ ತಂತ್ರಜ್ಞಾನಗಳನ್ನು ನಾವು ಕಲಿಯಬಹುದಿತ್ತು. ಆದರೆ ನೆಹರೂ ಇಸ್ರೇಲ್‌ನ ಜೊತೆಗೆ ರಾಜತಾಂತ್ರಿಕ ಸಂಬಂಧ ಬೆಳೆಸದೆ ತಪ್ಪು ಧೋರಣೆ ಅವಲಂಬಿಸಿದ್ದರಿಂದ ಇದು ಸಾಧ್ಯವಾಗಲಿಲ್ಲ. ನೆಹರು ಅವರಿಗೆ ದೇಶ ಮುಖ್ಯವಾಗಿರಲಿಲ್ಲ, ಮುಸ್ಲಿಮರನ್ನು ಓಲೈಸಿ ಮತ ಗಳಿಸುವ ಅತಿರೇಕತನದಲ್ಲಿ ಅವರು ತಪ್ಪು ಹಾದಿಯಲ್ಲಿ ನಡೆದರು. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಜೊತೆಗೆ ಮಿತ್ರತ್ವವನ್ನು ಹೊಂದುವುದರಿಂದ ಆಗುವ ಲಾಭವನ್ನು ಅರಿತು ಅದರ ಮಿತ್ರತ್ವವನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಇದು ಉಭಯ ದೇಶಗಳ ದೃಷ್ಟಿಯಿಂದ ಮಹತ್ತ್ವದ್ದಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat