ಇದು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಕೇರಳದ ಮಲಪ್ಪುರಂ ಸ್ಥಿತಿ. ಅಲ್ಲಿ ಮುಸ್ಲಿಮರು ಶೇಕಡ ೭೦ರಷ್ಟಿದ್ದು, ರಂಜಾನ್ ವೇಳೆ ಹಿಂದೂಗಳು ಅಥವಾ ಕ್ರೈಸ್ತರಿಗೆ ಹಗಲುಹೊತ್ತು ಅಂಗಡಿ ಹೊಟೇಲ್ ತೆರೆದು ವ್ಯಾಪಾರ ಮಾಡಲು ಅಸಾಧ್ಯ. ಬಿಬಿಸಿಯ ಮಾಜಿ ಪತ್ರಕರ್ತ ಹಾಗೂ ವಾಷಿಂಗ್ಟನ್ ಮೂಲದ ಮಧ್ಯಪೂರ್ವ ಮಾಧ್ಯಮ ಸಂಶೋಧನ ಸಂಸ್ಥೆಯ ದಕ್ಷಿಣ ಏ? ಅಧ್ಯಯನ ಯೋಜನೆಯ ನಿರ್ದೇಶಕರಾದ ತುಫೈಲ್ ಅಹಮದ್ ’ನ್ಯೂ ಏಜ್ ಇಸ್ಲಾಂ’ನಲ್ಲಿ ಆ ಕುರಿತು ಹೀಗೆ ಬರೆದರು: ಅಲ್ಲಿನ ಸ್ಥಳೀಯ ಹಿಂದೂಗಳಿಗೆ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮನ್ನು ದ್ವಿತೀಯ ದರ್ಜೆ ನಾಗರಿಕರು ಅಥವಾ ’ದಿಮ್ಮಿ’ಗಳೆಂದು ಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ.
ಅಂದರೆ ಒಟ್ಟಿನಲ್ಲಿ ಕೇರಳದ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ರಂಜಾನ್ ತಿಂಗಳನ್ನು ಈಗ ಸೌದಿ ಅರೇಬಿಯಾದಂತೆಯೇ ರಮದಾನ್ ಎಂದು ಕರೆಯುತ್ತಾರೆ. ಗಲ್ಫ್ನಿಂದ ಬರುವ ಹಣ ಮತ್ತದರ ಪ್ರಭಾವವೇ ಅದಕ್ಕೆ ಕಾರಣ. ಉಡುವುದಕ್ಕೆ ಸಾಂಪ್ರದಾಯಿಕ ವೇಸ್ಟಿ ಮತ್ತು ಲುಂಗಿ(ಮುಂಡುಪಂಚೆ) ಗಳಿಗೆ ಬದಲಾಗಿ ಅರೇಬಿಯನ್ ಗೌನ್ಗಳು ಬರುತ್ತಿವೆ. ಕೇರಳದಲ್ಲಿ ಹಿಂದೆ ಬುರ್ಖಾ ಅ?ಗಿ ಇರಲಿಲ್ಲ. ಈಗ ಅಲ್ಲಿನ ಮಹಿಳೆಯರು ಕಪ್ಪು ಬುರ್ಖಾದಿಂದ ಪೂರ್ತಿ ಮೈ ಮುಚ್ಚಿಕೊಳ್ಳುತ್ತಾರೆ. ಸಾಲದೆಂಬಂತೆ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಗಟ್ಟಿಯಾಗಿ ತಳವೂರುತ್ತಿದೆ; ಮುಸ್ಲಿಂ ಯುವಕರು ಅದರ ಸದಸ್ಯರಾಗಿ ಎಲ್ಲವನ್ನೂ ನಿಯಂತ್ರಿಸುತ್ತಾರೆ; ಹಿಂಸಾತ್ಮಕ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ.
ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎನಿಸುತ್ತದೆ. ಏಕೆಂದರೆ ಕೇರಳದಲ್ಲಿ ಜನಸಂಖ್ಯಾ ಸ್ವರೂಪವೇ ಬದಲಾಗುತ್ತಿದೆ. ಅಂಕಿಅಂಶಗಳು ಮುಂದೆ ಎದುರಾಗಬಹುದಾದ ಅಪಾಯವನ್ನು ಸೂಚಿಸುತ್ತವೆ. ೧೯೦೧ರಲ್ಲಿ ಕೇರಳದಲ್ಲಿದ್ದ ಹಿಂದುಗಳ ಸಂಖ್ಯೆ ೪೩.೭೮ ಲಕ್ಷ. ಅದು ರಾಜ್ಯದ ಜನಸಂಖ್ಯೆಯ ಶೇ. ೬೮.೫ ಭಾಗ. ಆಗ ಮುಸ್ಲಿಮರು ಶೇ. ೧೭.೫ರ? ಮತ್ತು ಕ್ರೈಸ್ತರು ಶೇ. ೧೪ರಷ್ಟು ಇದ್ದರು. ೧೯೬೦ರ ದಶಕದ ಹೊತ್ತಿಗೆ ಹಿಂದುಗಳ ಸಂಖ್ಯೆ ಶೇ. ೬೦.೯ಕ್ಕೆ ಇಳಿದಿತ್ತು. ಮುಸ್ಲಿಮರ ಸಂಖ್ಯೆ ಸ್ವಲ್ಪ ಹೆಚ್ಚಿ ಶೇ. ೧೭.೯ ಆದರೆ ಕ್ರೈಸ್ತರ ಸಂಖ್ಯೆ ಬಹಳಷ್ಟು ಏರಿ ಶೇ. ೨೧.೨ ಆಗಿತ್ತು.
ನಾಟಕೀಯ ಬದಲಾವಣೆ
ಅದಾದ ಬಳಿಕ ಕೇರಳದ ಜನಸಂಖ್ಯೆಯ ಸ್ವರೂಪದಲ್ಲಿ ನಾಟಕೀಯ ಬದಲಾವಣೆ ಕಂಡುಬಂದಿದೆ. ಮುಂದಿನ ದಶಕದಲ್ಲಿ ಹಿಂದುಗಳು ಮತ್ತು ಕ್ರೈಸ್ತರ ಸಂಖ್ಯೆಯಲ್ಲಿ ಸುಮಾರು ಶೇ. ೨೫ರ? ಏರಿಕೆಯಾದರೆ ಮುಸ್ಲಿಮರದು ಶೇ. ೩೫ ಏರಿತು. ಅಂದಿನಿಂದ ಕೇರಳದ ಹಿಂದುಗಳ ಶೇಕಡಾವಾರು ಸಂಖ್ಯೆ ಇಳಿಯುತ್ತಲೇ ಇದೆ; ಮುಸ್ಲಿಮರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ೨೦೦೧-೧೧ ನಡುವೆ ಹಿಂದುಗಳ ಸಂಖ್ಯೆಯಲ್ಲಿ ಶೇ. ೨.೨೯ ಏರಿಕೆಯಾದರೆ ಮುಸ್ಲಿಮರದ್ದು ಶೇ. ೧೨.೮೪ ಏರಿಕೆಯಾಯಿತು. ೨೦೧೧ರ ಜನಗಣತಿಯ ಪ್ರಕಾರ ಕೇರಳದಲ್ಲಿ ಹಿಂದೂಗಳು ಶೇ. ೫೫.೦೫; ಮುಸ್ಲಿಮರು ಶೇ. ೨೬.೫೬ ಮತ್ತು ಕ್ರೈಸ್ತರು ಶೇ. ೧೮ ಇದ್ದರು.
ಅಂತಹ ಸನ್ನಿವೇಶದಲ್ಲಿ ರಾಜ್ಯದಲ್ಲಿ ೨೦೧೬ರಲ್ಲಿ ಒಂದು ಹೊಸ ಬೆಳವಣಿಗೆ ದಾಖಲಾಯಿತು. ಆ ವ? ರಾಜ್ಯದಲ್ಲಿ ಜನಿಸಿದ ಹಿಂದು ಶಿಶುಗಳಿಗಿಂತ ಮುಸ್ಲಿಂ ಶಿಶುಗಳ ಸಂಖ್ಯೆ ಜಾಸ್ತಿ. ಆ ವ? ರಾಜ್ಯದಲ್ಲಿ ಜನಿಸಿದ ಒಟ್ಟು ಮಕ್ಕಳಲ್ಲಿ ಶೇ. ೪೨.೫೫ ಮುಸ್ಲಿಂ ಕುಟುಂಬದಲ್ಲಿ ಜನಿಸಿದವೆಂದು ಕೇರಳ ಅರ್ಥಶಾಸ್ತ್ರ ಮತ್ತು ಅಂಕಿಅಂಶ ಇಲಾಖೆ ದಾಖಲಿಸಿತ್ತು. ಆಗ ಹಿಂದೂ ಶಿಶುಗಳ ಜನನ ಒಟ್ಟು ಜನನದ ಶೇ. ೪೧.೮೮ ಭಾಗವಿತ್ತು. ಅಂದರೆ ಮುಸ್ಲಿಂ ಕುಟುಂಬಗಳಲ್ಲಿ ೨.೧೧ ಲಕ್ಷ ಮತ್ತು ಹಿಂದುಕುಟುಂಬಗಳಲ್ಲಿ ೨.೦೭ ಲಕ್ಷ ಶಿಶುಗಳು ಜನಿಸಿದ್ದವು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳು ಜಾಸ್ತಿ ಇದ್ದರೂ ಜನನ ಪ್ರಮಾಣ ಮುಸ್ಲಿಮರದ್ದೇ ಅಧಿಕ.
ಜನನ ಪ್ರಮಾಣವು ಇದೇ ರೀತಿ ಮುಂದುವರಿದರೆ ೨೦೩೦ರ ಹೊತ್ತಿಗೆ ಕೇರಳದ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. ೪೦ ಆಗುತ್ತಾರೆ. ಸಾಧ್ಯವಾದ? ಬೇಗ ಆ ಸಂಖ್ಯೆಯನ್ನು ಶೇ. ೫೦ನ್ನು ದಾಟಿಸಬೇಕೆನ್ನುವ ಪ್ರಯತ್ನ ಒಳಗಿಂದೊಳಗೆ ನಡೆಯುತ್ತಿದೆ. ಅದಕ್ಕಾಗಿಯೇ ಕೇರಳದಲ್ಲಿ ಲವ್ ಜಿಹಾದ್ಗಳು ಬಹಳ? ನಡೆಯುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರೆಂದು ವರದಿಯಾಗಿದೆ.
ತುಷ್ಟೀಕರಣ ನೀತಿ
ಇನ್ನು ರಾಜಕೀಯದ ತುಷ್ಟೀಕರಣ ನೀತಿ ಕೇರಳದಲ್ಲಿ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಮತ್ತು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ನೇತೃತ್ವದ ಎಡಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಎರಡರಿಂದಲೂ ಮುಸ್ಲಿಂ ಸಮುದಾಯಕ್ಕೆ ಉತ್ತಮ ಪೋ?ಣೆ ಸಿಗುತ್ತಿದೆ. ಯುಡಿಎಫ್ನಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಮುಖ ಪಕ್ಷವಾಗಿದೆ. ಎರಡೂ ಸರ್ಕಾರಗಳಲ್ಲಿ ಮುಸ್ಲಿಮರನ್ನು ಪ್ರತಿನಿಧಿಸುವ ಸದಸ್ಯರಿಗೆ ಪ್ರಮುಖ ಖಾತೆಗಳು ಸಿಗುತ್ತಿವೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಇಂಧನ (ವಿದ್ಯುತ್), ಶಿಕ್ಷಣ, ಪಂಚಾಯತ್, ನಗರಾಭಿವೃದ್ಧಿಯಂತಹ ಉತ್ತಮ ಖಾತೆಗಳನ್ನು ಅವರು ಆರಿಸಿಕೊಳ್ಳುತ್ತಾರೆ. ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆ ಸಿಕ್ಕಿದವರಿಗೆ ಇರುವ ಲಾಭವೆಂದರೆ ಕೇಂದ್ರಸರ್ಕಾರದ ಹೆಚ್ಚಿನ ಅನುದಾನಗಳು ಈ ಖಾತೆಗಳಿಗೇ ಬರುತ್ತವೆ. ಅದನ್ನು ಸಂಬಂಧಪಟ್ಟ ಮಂತ್ರಿ ತನ್ನ ಪಕ್ಷದ ಬೆಳವಣಿಗೆಗೆ ಅಥವಾ ತನ್ನ ಸ್ವಂತ ಯೋಜನೆಗಳಿಗೆ ಬಳಸಿಕೊಳ್ಳಬಹುದು. ತನ್ನ ಕ್ಷೇತ್ರದ ಮುಸ್ಲಿಂ ಮತದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬಹುದು. ಮುಸ್ಲಿಂ ಲೀಗ್ ನಿಯಂತ್ರಣದಲ್ಲಿರುವ ಪಂಚಾಯತ್ಗಳಿಗೆ ಮತ್ತು ಮುಸ್ಲಿಮರು ನಡೆಸುವ ಶಾಲೆಗಳಿಗೆ ಹೆಚ್ಚು ಅನುದಾನ ಅಥವಾ ಅನುಕೂಲ ಒದಗಿಸಬಹುದು. ಈಗಿನ ಎಲ್ಡಿಎಫ್ ಸರ್ಕಾರದಲ್ಲಿ ಎ.ಸಿ. ಮೊದೀನ್ ಅವರು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದು ಆತ ಮುಸ್ಲಿಂ ಸಮುದಾಯದವರಿಗೆ ಹೆಚ್ಚು ಅನುಕೂಲ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ. ಮುಖ್ಯವಾಗಿ ಮಲಪ್ಪುರಂ, ಕಾಸರಗೋಡು, ಕಣ್ಣೂರು, ಕೋಜಿಕೋಡ್ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ಬಹಳ? ಹೆಚ್ಚಾಗಿದ್ದು, ಅದರಿಂದ ಕ್ರೈಸ್ತರು ಕೂಡ ಒತ್ತಡಕ್ಕೆ ಗುರಿಯಾಗಿದ್ದಾರೆ.
೧೯೫೬ರಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿದ ಕನ್ನಡದ ಭೂಭಾಗ ಕಾಸರಗೋಡು ಜಿಲ್ಲೆಯಲ್ಲಿ ಇನ್ನೊಂದು ಕಾರಣಕ್ಕಾಗಿ ಕೂಡ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿನ ನಿವಾಸಿಗಳಾದ ಕನ್ನಡಿಗರೂ, ಉದ್ಯೋಗ, ಶಿಕ್ಷಣ ಮತ್ತಿತರ ಕಾರಣದಿಂದ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರ ಮನೆ-ಜಮೀನುಗಳು ಬಹಳ? ಗಲ್ಫ್ ಹಣದ ಸೌಕರ್ಯವಿರುವ ಮುಸ್ಲಿಮರ ಕೈಸೇರುತ್ತಿವೆ. ಮೇಲೆ ಹೇಳಿದ ಜಿಲ್ಲೆಗಳಲ್ಲಿನ ಮುಸ್ಲಿಂ ಯುವಕರು ಉಗ್ರ ಸಲಫಿ ಸಿದ್ಧಾಂತದತ್ತ ಆಕರ್ಷಿತರಾಗುತ್ತಿದ್ದಾರೆ. ಅವರು ನಡೆಸುವ ಲವ್ ಜಿಹಾದ್ ಮತ್ತಿತರ ಚಟುವಟಿಕೆಗಳಿಗೆ ಗಲ್ಫ್ ರಾ?ಗಳ ಹಣದ ಬೆಂಬಲ ದೊರೆಯುತ್ತದೆ ಎಂದು ನಂಬಲಾಗಿದೆ.
ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಹತ್ತಕ್ಕೂ ಹೆಚ್ಚು ಹಿಂದುಗಳ ಕೊಲೆ ನಡೆದಿದ್ದು ಅದರ ಹಿಂದೆ ಪಿಎಫ್ಐ ಹೆಸರು ಕೇಳಿಬಂದಿತ್ತು. ಕರ್ನಾಟಕದಲ್ಲಿ ಹತ್ಯೆ ನಡೆಸಿ ಕೇರಳದಲ್ಲಿ ಅವಿತುಕೊಳ್ಳುವ ಪ್ರವೃತ್ತಿ ಸ್ಪ?ವಾಗಿ ಕಂಡುಬಂದಿತ್ತಾದರೂ ಆ ಕೊಲೆಗಳ ತನಿಖೆ ಸರಿಯಾಗಿ ನಡೆಯಲಿಲ್ಲ ಮತ್ತು ಪಿಎಫ್ಐಯಂತಹ ಸಂಘಟನೆಗಳನ್ನು ನಿ?ಧಿಸುವ ವಿಚಾರ ಪ್ರಸ್ತಾವ,
ಶಿಫಾರಸಿಗಿಂತ ಮುಂದೆ ಹೋಗಲಿಲ್ಲ. ಕೇರಳದ ಹಲವೆಡೆ ಹಿಂದುಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡುವ ಪ್ರವೃತ್ತಿ ಕಂಡುಬಂದಿದೆ. ಎರಡು ವ?ಗಳ ಹಿಂದೆ ಹಿಂದುಗಳು ಶ್ರೀಕೃ? ಜಯಂತಿ ಮೆರವಣಿಗೆ ನಡೆಸಿದಾಗ ಆ ಶಕ್ತಿಗಳಿಂದ ತೀವ್ರ ವಿರೋಧ ಬಂದಿತ್ತು. ಅವರಿಂದ ಪ್ರಾಧ್ಯಾಪಕರ ಕೈ ಕತ್ತರಿಸಿದಂತಹ ಅತಿರೇಕದ ಕೃತ್ಯಗಳು ಕೂಡ ನಡೆದಿವೆ.
ಕ್ರೈಸ್ತರ ದೂರು
ಉತ್ತರ ಕೇರಳದ ಒಂದು ಕ್ರೈಸ್ತ ಕುಟುಂಬದ ಪ್ರಕಾರ ಆ ಪ್ರದೇಶದ ಮುಸ್ಲಿಮೇತರರಿಗೆ ಸಲಫಿಸಂನ ಬೆಳವಣಿಗೆ ಕಳವಳಕಾರಿ ವಿ?ಯವಾಗಿದೆ. ಮುಸ್ಲಿಂ ಯುವಕರು ಇಸ್ಲಾಮಿಕ್ ಸ್ಟೇಟ್(ಐಎಸ್)ನಂತಹ ಸಂಘಟನೆಗಳನ್ನು ಬೆಂಬಲಿಸುತ್ತಾರೆ. ೨೦೧೬ರ ಜುಲೈನಲ್ಲಿ ಈ ಭಾಗದ ೨೧ ಜನ ಸಿರಿಯಾದಲ್ಲಿ ಐಎಸ್ ಸೇರಲು ಹೋದರು. ಅವರೆಲ್ಲ ವಿದ್ಯಾವಂತರು, ಪ್ರಭಾವಿ ಹಿನ್ನೆಲೆಯಿಂದ ಬಂದವರು; ಕೆಲವರು ಡಾಕ್ಟರ್ಗಳು. ಐಎಸ್ ನಿಯಂತ್ರಣದ ಪ್ರದೇಶದಲ್ಲಿ ’ಒಳ್ಳೆಯ ಹುದ್ದೆ’ಗಳನ್ನು ನೀಡುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಅವರಲ್ಲಿ ಕನಿ? ನಾಲ್ವರು ಈಗಾಗಲೆ ಮೃತಪಟ್ಟಿದ್ದಾರೆ. ಉಳಿದ ೧೭ ಮಂದಿ ಏನಾದರೋ ಗೊತ್ತಿಲ್ಲ.
ದುರದೃ?ವೆಂದರೆ, ನ್ಯಾಯಾಲಯಗಳು ಈ ವಿ?ಯವನ್ನು ಸಾಕ? ಗಂಭೀರವಾಗಿ ಪರಿಗಣಿಸುತ್ತಿಲ್ಲ. ಐಎಸ್ ಹಿಡಿತದಲ್ಲಿದ್ದ ಯುದ್ಧಪೀಡಿತ ಪ್ರದೇಶದಿಂದ ಗಡೀಪಾರಾಗಿ ಬಂದ ಇಬ್ಬರನ್ನು ಕೇರಳ ಹೈಕೋರ್ಟ್ ದೋ?ಮುಕ್ತಗೊಳಿಸಿತು. ಅಂತಹ (ಐಎಸ್) ಭಯೋತ್ಪಾದಕ ಸಿದ್ಧಾಂತಕ್ಕೆ ಬೆಂಬಲ ನೀಡುವುದು ರಾಜದ್ರೋಹವಲ್ಲ ಎಂದು ಕೂಡ ಹೇಳಿತು. ಲವ್ ಜಿಹಾದ್ನ ವಿ?ಯದಲ್ಲಿ ಕೂಡ ನ್ಯಾಯಾಲಯಗಳು ಮೃದುಧೋರಣೆಯನ್ನು ತೋರಿಸುವುದು ಕಂಡುಬಂದಿದೆ. ಹಾದಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಂದು ಮುಖ್ಯವಿ?ಯವನ್ನು ಗಮನಿಸಲೇ ಇಲ್ಲ. ಹಾದಿಯಾಳ ಮೂಲ ಹೆಸರು ಅಖಿಲಾ ಅಶೋಕನ್. ಆಕೆಯ ತಂದೆ ಕೇರಳ ಹೈಕೋರ್ಟ್ನಲ್ಲಿ ದಾವೆ ಹೂಡಿದಾಗ ಕೋರ್ಟ್ ಆ ಮದುವೆಯನ್ನು ವಜಾ ಮಾಡಿತು. ಆದರೆ ಸುಪ್ರೀಂಕೋರ್ಟ್ ಅದನ್ನು ಬದಲಿಸಿ ಮದುವೆಯನ್ನು ಸಿಂಧುಗೊಳಿಸಿತು. ಇದು ಪ್ರೇಮವಿವಾಹ ಆಗಿರಲಿಲ್ಲ. ಹೆತ್ತವರಿಗೆ ತಿಳಿಸದೆ ಓರ್ವ ಪೋ?ಕಿ (ಕೇರ್ಟೇಕರ್) ಮಾಡಿಸಿದ ಮದುವೆಯಾಗಿತ್ತು. ಆಹೊತ್ತಿಗೆ ಅಖಿಲಾ ಜೈಲಾ ಬಾ ಎನ್ನುವ ಮಹಿಳೆಯ ಆಶ್ರಯದಲ್ಲಿದ್ದು ಆಕೆಗೆ ಪಿಎಫ್ಐ ಸಂಪರ್ಕವಿತ್ತು. ಆಕೆ ಅಖಿಲಾಳನ್ನು
ಶಫಿನ್ ಜೆಹಾನ್ ಎನ್ನುವ ಮುಸ್ಲಿಮನಿಗೆ ಮದುವೆ ಮಾಡಿಕೊಟ್ಟಿದ್ದಳು. ಹೈಕೋರ್ಟ್ ತೀರ್ಪನ್ನು ಬದಿಗೊತ್ತಿದ ಸುಪ್ರೀಂಕೋರ್ಟ್ ಹಾದಿಯಾಳನ್ನು ಜೆಹಾನ್ ಜೊತೆಗೆ ಕಳುಹಿಸಿಕೊಟ್ಟಿತು. ಒಬ್ಬಳು ಹುಡುಗಿಯನ್ನು ಓರ್ವ ಕೇರ್ಟೇಕರ್ ಹೆತ್ತವರಿಗೆ ಕೂಡ ತಿಳಿಸದೆ ಮದುವೆ ಮಾಡಿಕೊಡುವುದು ಎ? ನ್ಯಾಯ? ಅಂತಹ ಮದುವೆ ಪ್ರೇಮವಿವಾಹವೂ ಅಲ್ಲದಿರುವಾಗ ಹೇಗೆ ಸಿಂಧುವಾಗುತ್ತದೆ?
ಶಬರಿಮಲೆ
ಶಬರಿಮಲೆಗೆ ಮಹಿಳಾಪ್ರವೇಶವನ್ನು ಕೂಡ ಜನಸಂಖ್ಯಾ ಸ್ವರೂಪದ ಬದಲಾವಣೆಯ ಪರಿಣಾಮ ಮತ್ತು ರಾಜ್ಯದ ಎಲ್ಡಿಎಫ್ ಸರ್ಕಾರದ ತುಷ್ಟೀಕರಣದ ಪ್ರತೀಕ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈಚೆಗೆ ಮೊತ್ತಮೊದಲಿಗೆ ಶಬರಿಮಲೆ ದೇವಾಲಯ ಪ್ರದೇಶಕ್ಕೆ ಹೋದವರಲ್ಲಿ ರೆಹನಾ ಫಾತಿಮಾ ಎನ್ನುವ ಮುಸ್ಲಿಂ ಮಹಿಳೆ ಇದ್ದರು. ದೇವಾಲಯದ ಪ್ರಾಚೀನ ಸಂಪ್ರದಾಯವನ್ನು ಮುರಿಯಲು ಸರ್ಕಾರ ಆಕೆಯನ್ನು ಬಳಸಿದಂತಿತ್ತು. ಪಿಣರಾಯಿ ವಿಜಯನ್ ಸರ್ಕಾರದ ಪೊಲೀಸ್ ಪಡೆ ಆಕೆಯ ಬೆಂಬಲಕ್ಕಿತ್ತು. ಆಕೆಯ ದುರದೃ?ಕ್ಕೆ ದೇವಳ ಪ್ರವೇಶ ಸಾಧ್ಯವಾಗಲಿಲ್ಲ. ಮಹಿಳೆಯರ ದೇವಾಲಯ ಪ್ರವೇಶವನ್ನು ಬೆಂಬಲಿಸಿ ಬೃಹತ್ ಮಾನವ ಸರಪಳಿಯನ್ನು ನಡೆಸಲಾಗಿದ್ದು, ಅದರಲ್ಲಿ ಹಿಂದುಯೇತರರೂ ಭಾಗವಹಿಸಿದ್ದರು ಮತ್ತು ಅದರಲ್ಲೂ ತುಷ್ಟೀಕರಣ ನೀತಿಯ ಕೈವಾಡ ಇತ್ತೆಂದು ನಂಬಲಾಗಿದೆ. ಕೇರಳದಲ್ಲಿ ಒಂದೆಡೆ ಮುಸ್ಲಿಮರ ಸಂಖ್ಯೆ ಏರುತ್ತಿದ್ದರೆ ಇನ್ನೊಂದೆಡೆ ಸರ್ಕಾರದ ಎರಡೂ ರಂಗಗಳು ತುಷ್ಟೀಕರಣದ ರಾಜಕೀಯವನ್ನು ನಡೆಸುತ್ತಿವೆ. ಇದರಿಂದ ಆಕ್ರಮಣಕಾರಿ ಇನ್ನ? ಉಗ್ರನಾಗುತ್ತಾನೆ. ಅವರ ಜನಸಂಖ್ಯೆ ಶೇ. ೨೭ ಇದ್ದಾಗಲೇ ಹೀಗಾದರೆ ಇನ್ನು ಶೇ. ೩೦, ೪೦ನ್ನು ದಾಟಿದಾಗ ಏನಾಗಬಹುದು ಎಂಬುದು ಚಿಂತೆಗೀಡು ಮಾಡುತ್ತದೆ.
ತುಷ್ಟೀಕರಣ: ಒಂದೆರಡು ಮಾದರಿಗಳು
ನಮ್ಮ ದೇಶದಲ್ಲಿ ರಾಜಕಾರಣಿಗಳನ್ನು ದ್ವೇಷಿಸುವ? ಅಥವಾ ತಿರಸ್ಕಾರದಿಂದ ಕಾಣುವ? ಜನ ಬೇರೆ ಯಾರನ್ನೂ ಕಾಣಲಾರರು ಎನಿಸುತ್ತದೆ. ಅವರನ್ನು ಓತಿಕ್ಯಾತನಿಗೆ ಹೋಲಿಸುವುದು ಏನೇನೂ ಸಾಲದು ಎಂದರೆ ತಪ್ಪಲ್ಲ. ಅವರಲ್ಲಿ ಬಹಳ? ಜನ ವೋಟಿಗಾಗಿ ದೇಶವನ್ನೇ ಮಾರಲು ಸಿದ್ಧರಿರುತ್ತಾರೆ. ದೇಶದ ಆಂತರಿಕ ವಿ?ಯಕ್ಕೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಶತ್ರುರಾ?ದ ಸಹಕಾರವನ್ನು ಕೂಡ ಕೇಳುತ್ತಾರೆ. ತುಷ್ಟೀಕರಣ ಅಥವಾ ಓಲೈಕೆ ರಾಜಕಾರಣವು ಅದರ ಒಂದು ಭಾಗ. ಅದರಲ್ಲಿ ಯಾವ ಮಟ್ಟಕ್ಕೆ ಹೋಗುತ್ತಾರೆಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ನೆನಪಿಸಬಹುದು.
ಕಳೆದ (೨೦೧೪) ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಗೃಹಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರು ಅಲ್ಪಸಂಖ್ಯಾತ ಸಮುದಾಯದವರು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅವರನ್ನು ಬಂಧಿಸುವ ಮುನ್ನ ಎಚ್ಚರ ವಹಿಸಿ. ಆ ಸಮುದಾಯದ ಯುವಕರು ಬಂಧಿತರಾಗಿ ಸೆರೆಮನೆಯಲ್ಲಿದ್ದರೆ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ಎಂದು ರಾಜ್ಯಸರ್ಕಾರಗಳಿಗೆ ಅಧಿಕೃತವಾಗಿಯೇ ಸೂಚನೆ ನೀಡಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ತತ್ತ್ವಕ್ಕೆ ಕಾಂಗ್ರೆಸಿನ ಈ ನಾಯಕರು ವಿದಾಯ ಹೇಳಿರುವುದು ಸ್ಪ?. ಕೋಮುಗಲಭೆ ನಡೆದರೆ ಸಹಜವಾಗಿ ಅದರ ಆರೋಪ ಬಹುಸಂಖ್ಯಾತರ ಮೇಲೆ ಬರುವಂತೆ ಹೊಸ ಕಾನೂನನ್ನು ತರುವುದಕ್ಕೂ ಆಗ ಸಿದ್ಧತೆ ನಡೆದಿತ್ತು.
ಇನ್ನು ಸಾಚಾರ್ ಸಮಿತಿ ವರದಿಯನ್ನು ಹಿಡಿದುಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಏನೆಲ್ಲ ಮಾಡಲು ಮುಂದಾಯಿತೆನ್ನುವುದು ಇನ್ನೂ ನಮ್ಮನ್ನು ದುಃಸ್ವಪ್ನದಂತೆ ಕಾಡುತ್ತಿದೆ. ದೇಶದ ಸಂಪನ್ಮೂಲಗಳ ಮೊದಲ ಹಕ್ಕುದಾರರು ಅಲ್ಪಸಂಖ್ಯಾತರು ಎನ್ನುವ ಅಂದಿನ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರ ಮಾತನ್ನು ಅಕ್ಷರಶಃ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಚಾರ್ ಸಮಿತಿ ಶಿಫಾರಸುಗಳು ಜಾರಿಯಾಗುವ ಹಂತಕ್ಕೆ ಬಂದಿದ್ದವು. ಅಲ್ಪಸಂಖ್ಯಾತರಿಗಾಗಿ (ಮುಸ್ಲಿಮರಿಗಾಗಿ) ಪ್ರತ್ಯೇಕ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳು- ಬ್ಯಾಂಕುಗಳ ಸ್ಥಾಪನೆ, ಪರಿಶಿ? ಜಾತಿ-ಪಂಗಡದವರನ್ನೂ ಮೀರಿಸುವ? ವಿದ್ಯಾರ್ಥಿವೇತನಗಳು, ಸಾಲಸೌಲಭ್ಯಗಳ ನೀಡಿಕೆ ಇವೆಲ್ಲ ಜಾರಿಯಾಗುವ ಪ್ರಕ್ರಿಯೆಯಲ್ಲಿದ್ದವು. ಮುಸ್ಲಿಮರಿಗಾಗಿ ದೇಶದ ವಿವಿಧೆಡೆ ಆಲಿಘರ್ ಮಾದರಿಯ ವಿಶ್ವವಿದ್ಯಾಲಯಗಳು, ಟಿಪ್ಪುಸುಲ್ತಾನ್ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯ ಇವೆಲ್ಲ ಪ್ರಸ್ತಾವಿತ ಕಾರ್ಯಕ್ರಮಗಳಾಗಿದ್ದವು.
ಈ ತುಷ್ಟೀಕರಣದ ಒಂದು ಅತಿರೇಕ ಗುಜರಾತಿನಿಂದ ವರದಿಯಾಗಿತ್ತು. ಕೇಂದ್ರ ಗುಪ್ತಚರ ಇಲಾಖೆಯ ಭದ್ರತಾ ಸಹಾಯಕರಾಗುವವರು ಉದ್ಯೋಗಕ್ಕೆ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿಗಳ ಜೊತೆಗೆ ೨೦೦೨ರಲ್ಲಿ ಗುಜರಾತಿನಲ್ಲಿ ನಡೆದ ಕೋಮುಗಲಭೆಯ ಸಂತ್ರಸ್ತರಾಗಿರಬೇಕು ಎಂಬ ಅಂಶವನ್ನು ಕೂಡ ಸೇರಿಸಲಾಗಿತ್ತು. ಹುದ್ದೆಗೆ ಅರ್ಜಿ ಕರೆದಾಗ ಅದರಲ್ಲಿ ನೀವು ಗುಜರಾತ್ ಗಲಭೆಯ ಸಂತ್ರಸ್ತರೆ? ಎಂಬ ಕಾಲಂ ನೀಡಿದ್ದಲ್ಲದೆ, ಆ ಗಲಭೆ ಸಂತ್ರಸ್ತರಿಗೆ ವಯೋಮಾನವನ್ನು ಐದು ವ? ಸಡಿಲಿಸಲಾಗಿತ್ತು. ಅಯೋಧ್ಯೆಯಿಂದ ಮರಳುತ್ತಿದ್ದ ೫೮ ಜನ ಕರಸೇವಕರನ್ನು ರೈಲಿಗೆ ಬೆಂಕಿಹಚ್ಚಿ ಸುಟ್ಟದ್ದು ಅಪರಾಧವಲ್ಲ; ಬದಲಾಗಿ ಮುಂದೆ ನಡೆದ ಕೋಮುಗಲಭೆಯಲ್ಲಿ ಭಾಗಿಯಾದವರು ಮಾತ್ರ ಅಪರಾಧಿಗಳು – ಎನ್ನುವ ಈ ವಾದವೇ ಆ ’ಸಂತ್ರಸ್ತ’ರನ್ನು ತಯಾರು ಮಾಡಿತ್ತು.
ಈಶಾನ್ಯ ಭಾರತ
ಬಂಗ್ಲಾದೇಶದಲ್ಲಿ ೧೯೫೧ರಲ್ಲಿ (ಅಂದಿನ ಪೂರ್ವ ಪಾಕಿಸ್ತಾನ) ಹಿಂದುಗಳ ಸಂಖ್ಯೆ ಶೇ. ೨೨ರಷ್ಟಿತ್ತು; ೨೦೧೧ರ ಹೊತ್ತಿಗೆ ಅದು ಶೇ. ೧೦ಕ್ಕೆ ಇಳಿಯಿತು. ಕಾರಣ ಅದರಲ್ಲಿ ದೊಡ್ಡ ಪಾಲು ಭಾರತಕ್ಕೆ ವಲಸೆ ಬಂದದ್ದಾಗಿದೆ. ಹಿಂದುಗಳಲ್ಲದೆ ಬಂಗ್ಲಾದ ಮುಸ್ಲಿಮರು ಕೂಡ ಬಹುದೊಡ್ಡ ಸಂಖ್ಯೆಯಲ್ಲಿ ಭಾರತಕ್ಕೆ ಬರುತ್ತಿದ್ದಾರೆ. ಭಾರತದಲ್ಲಿ, ಮುಖ್ಯವಾಗಿ ಬಂಗ್ಲಾದೇಶದ ಗಡಿರಾಜ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಏರುತ್ತಿರುವುದಕ್ಕೆ ಅದು ಪ್ರಮುಖ ಕಾರಣವಾಗಿದೆ. ಈ ಜನಸಂಖ್ಯಾ ದಾಳಿಯಿಂದಾಗಿ ಹಿಂದುಗಳ ಶೇಕಡಾವಾರು ಸಂಖ್ಯೆ ಇಳಿಯುತ್ತಿದೆ. ಮುಸ್ಲಿಂ ಜನಸಂಖ್ಯೆಯ ಏರಿಕೆ/ ಇಳಿಕೆಗಳಿಗೆ ವಲಸೆ, ಮತಾಂತರಗಳಲ್ಲದೆ ಜನನ/ ಮರಣಗಳ ಪ್ರಮಾಣವೂ ಕಾರಣವಾಗುತ್ತದೆ. ಮುಸ್ಲಿಮರಿಗೆ ಹೋಲಿಸಿದರೆ ಸಾಮಾನ್ಯವಾಗಿ ಹಿಂದುಗಳ ಜನನ ಕಡಮೆ ಮತ್ತು ಮರಣ ಜಾಸ್ತಿ. ಇದರಿಂದಾಗಿ ಭಾರತ ಮತ್ತು ಬಂಗ್ಲಾ ಎರಡೂ ಕಡೆ ಹಿಂದುಗಳ ಸಂಖ್ಯೆ ಇಳಿಯುತ್ತಿದೆ.
ಬಂಗ್ಲಾದೇಶದಲ್ಲಿ
ಈಗ ಬಂಗ್ಲಾದೇಶ ಇರುವ ಭೂಭಾಗದಲ್ಲಿ ೧೯೦೧ರಲ್ಲಿ ಹಿಂದುಗಳು ಶೇ. ೬೭ರಷ್ಟಿದ್ದರು. ೧೯೪೧ರಲ್ಲಿ ಅದು ಶೇ. ೨೮ಕ್ಕೆ ಇಳಿದಿತ್ತು. ದೇಶವಿಭಜನೆಯ ಅನಂತರ ೧೯೫೧ರಲ್ಲಿ ಹಿಂದುಗಳ ಸಂಖ್ಯೆ ಮತ್ತ? ಇಳಿದು ಶೇ. ೨೨ ಆಯಿತು. ಇಲ್ಲಿ ಪಶ್ಚಿಮ ಪಾಕಿಸ್ತಾನದಂತಹ ಭೀಕರ ಪರಿಸ್ಥಿತಿ ಇರಲಿಲ್ಲ. ಅಲ್ಲಿ ಹಿಂದುಗಳನ್ನು ಮತ್ತು ಸಿಖ್ಖರನ್ನು ಭಾರೀ ಸಂಖ್ಯೆಯಲ್ಲಿ ಕೊಂದರು, ಮತಾಂತರ ಮಾಡಿದರು. ಅಥವಾ ಹೊರಹಾಕಿದರು. ಪೂರ್ವ ಪಾಕಿಸ್ತಾನದ ಗಡಿಯಲ್ಲಿ ಹಾಗಾಗಲಿಲ್ಲ. ಅದರ ಹಿಂದೆ ಗಾಂಧಿಯವರ ಪ್ರಯತ್ನವೂ ಇತ್ತು. ವಿಭಜನೆಯ ವೇಳೆ ಅವರು ಸ್ವತಃ ಅಲ್ಲಿದ್ದು ಹಿಂಸೆ, ಉದ್ರೇಕಕ್ಕೆ ಹೋಗದಂತೆ ತಡೆದರು. ಆದರೆ ಅದು ತಡವಾದ್ದು ಮಾತ್ರವ?. ಮುಂದೆ ಆರಂಭಗೊಂಡ ಹಿಂದುಗಳ ಕೊಲೆ ಮತಾಂತರ, ಉಚ್ಚಾಟನೆ(ಗಡೀಪಾರು)ಗಳು ದಶಕಗಳ ಕಾಲ ಮುಂದುವರಿದವು.
ಬಂಗ್ಲಾದಲ್ಲಿ ದಶಕದಿಂದ ದಶಕಕ್ಕೆ ಹಿಂದುಗಳ ಸಂಖ್ಯೆ ಇಳಿಯುತ್ತ ಬಂದಿತು. ೧೯೭೪ರ ಬಂಗ್ಲಾ ಜನಗಣತಿಯ ವರೆಗೆ ಅದು ಬಹಳ ವೇಗವಾಗಿ ಇಳಿಯಿತು. ಅದಕ್ಕೆ ಕಾರಣ ಜನರೇ ನಡೆಸುತ್ತಿದ್ದ ಹಿಂಸಾಚಾರ ಒಂದಾದರೆ ೧೯೬೦ರ ದಶಕದ ಕೊನೆಯ ಹೊತ್ತಿಗೆ ಸ್ವಾತಂತ್ರ್ಯ ಬಯಸಿದ ಪೂರ್ವ ಪಾಕಿಸ್ತಾನದ ಜನತೆಯನ್ನು ಪಶ್ಚಿಮದಲ್ಲಿದ್ದ ಪಾಕಿಸ್ತಾನ ಸರ್ಕಾರ ಮತ್ತು ಸೇನೆಗಳು ಬಗೆಬಗೆಯಲ್ಲಿ ಹಿಂಸಿಸಿದವು; ೧೯೭೧ರ ಆರಂಭದ ಬಂಗ್ಲಾ ಯುದ್ಧದ ವೇಳೆ ಅಲ್ಲಿಂದ ಭಾರತಕ್ಕೆ ವಲಸೆ ಲಕ್ಷ ದಾಟಿ ಕೋಟಿ ಸಂಖ್ಯೆಯಲ್ಲಿತ್ತು. ೧೯೭೪ರ ಅನಂತರದ ನಾಲ್ಕು ದಶಕಗಳಲ್ಲಿ ಕೂಡ ಬಂಗ್ಲಾದಲ್ಲಿ ಹಿಂದುಗಳ ಸಂಖ್ಯೆ ಕುಸಿದಿದೆ. ೧೯೭೪ರಲ್ಲಿ ಶೇ. ೧೩.೫ ಇದ್ದುದು ೨೦೧೧ರಲ್ಲಿ ಶೇ. ೮.೫ ಆಗಿತ್ತು.
ಬಂಗ್ಲಾದೇಶದ ಗಡಿಯಲ್ಲಿರುವ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ಮುಸ್ಲಿಮರು ಹಾಗೂ ಹಿಂದುಗಳ ಸಂಖ್ಯೆಯಲ್ಲಿ ಬಹಳ? ಏರುಪೇರಾದುದನ್ನು ಗಮನಿಸಿರಬಹುದು. ಆ ರಾಜ್ಯಗಳಲ್ಲಿ ಉಂಟಾದ ವ್ಯತ್ಯಾಸದಲ್ಲೂ ವಿಭಿನ್ನತೆಯಿದೆ. ಅದೇ ಹೊತ್ತಿಗೆ ಬಂಗ್ಲಾದಲ್ಲಿ ಹಿಂದುಗಳ ಸಂಖ್ಯೆ ಇಳಿಯುತ್ತಿರುವ ರೀತಿಯಲ್ಲಿ ಈ ರಾಜ್ಯಗಳ ಹಿಂದುಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿಲ್ಲ.
ಈ ಮೂರು ರಾಜ್ಯಗಳಲ್ಲದೆ ಮೇಘಾಲಯ, ಮಿಜೋರಾಂಗಳಿಗೂ ಬಂಗ್ಲಾದೇಶದ ಜೊತೆ ಉದ್ದವಾದ ಗಡಿಯಿದೆ; ಆದರೆ ಆ ರಾಜ್ಯಗಳ ಪರಿಸ್ಥಿತಿ ಸ್ವಲ್ಪ ಭಿನ್ನವಾದ್ದು.
ಅಸ್ಸಾಂ ಸಮಸ್ಯೆ
ಅಸ್ಸಾಂನಲ್ಲಿ ಹಿಂದೂ-ಮುಸ್ಲಿಮರ ಸಂಖ್ಯೆಯ ಏರಿಳಿತದ ಮೇಲೆ ದೇಶದ ವಿಭಜನೆ ಮತ್ತು ಅನಂತರ ಹಿಂದುಗಳನ್ನು ಅಲ್ಲಿಂದ ಹೊರಹಾಕಿದ್ದರ ಪರಿಣಾಮ ಅ?ಗಿ ಕಾಣುವುದಿಲ್ಲ. ಏಕೆಂದರೆ ವಿಭಜನೆಗಿಂತ ಮೊದಲು ಕೂಡ ರಾಜ್ಯದಲ್ಲಿ ಮುಸ್ಲಿಮರ ಪಾಲು ಏರುತ್ತಿತ್ತು ಮತ್ತು ಹಿಂದುಗಳ ಪಾಲು ಇಳಿಯುತ್ತಿತ್ತು; ೧೯೦೧ರಿಂದಲೇ ಆ ಪ್ರವೃತ್ತಿ ಇತ್ತು. ೧೯೪೧-೭೧ರ ನಡುವೆ ಅಸ್ಸಾಮಿನ ಮುಸ್ಲಿಂ ಜನಸಂಖ್ಯೆಯಲ್ಲಿ ಸುಮಾರು ಶೇ. ೨೫ರ? ಏರಿಕೆಯಾಗಿದೆ. ಅದೇ ಅವಧಿಯಲ್ಲಿ ಹಿಂದುಗಳ ಪಾಲು ಶೇ. ೭೪.೩ರಿಂದ ೭೨.೮ಕ್ಕೆ ಇಳಿಯಿತು. ೧೯೭೧ರ ಬಳಿಕ ಮುಸ್ಲಿಮರ ಸಂಖ್ಯೆ ವೇಗವಾಗಿ ಏರುತ್ತಿದೆ. ೧೯೭೧ರಲ್ಲಿ ಶೇ. ೨೪.೬ ಇದ್ದುದು ೨೦೧೧ರಲ್ಲಿ ಶೇ. ೩೪.೨ ಆಗಿದೆ. ರಾಜ್ಯದ ಕೆಲವು ಗಡಿಜಿಲ್ಲೆಗಳಲ್ಲಿ ಈಗಾಗಲೇ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಬಂಗ್ಲಾದಿಂದ ನಡೆದ ಮುಸ್ಲಿಮರ ವಲಸೆ ಎಂಬುದು ಪ್ರಶ್ನಾತೀತ. ೨೦ನೇ ಶತಮಾನದ ಆರಂಭದಲ್ಲೇ ಅದು ಶುರುವಾಗಿತ್ತು. ವಿಭಜನೆ ನಡೆದು ನಡುವೆ ಅಂತಾರಾಷ್ಟ್ರೀಯ ಗಡಿ ಬಂದ ಬಳಿಕವೂ ಅದು ಮುಂದುವರಿಯಿತು. ಇದನ್ನು ಗಮನಿಸಿದರೆ ದೇಶದ ವಿಭಜನೆ ಆಗಿಯೇ ಇಲ್ಲವೇನೋ ಅನ್ನಿಸುತ್ತದೆ. ಅಸ್ಸಾಮಿನಲ್ಲಿ ಮುಸ್ಲಿಮರ ಜನನ ಪ್ರಮಾಣ ಅಧಿಕವಿರುವುದು ಕೂಡ ಆ ರಾಜ್ಯದ ಮುಸ್ಲಿಂ ಜನಸಂಖ್ಯೆ ಏರಿಕೆಗೆ ತನ್ನ ಕೊಡುಗೆಯನ್ನು ನೀಡುತ್ತಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ೧೯೦೧-೪೧ ನಡುವೆ ಮುಸ್ಲಿಮರ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ. ೩೦ ಇತ್ತು. ವಿಭಜನೆಯಾದ ಬೆನ್ನಿಗೆ ಅವರ ಪಾಲು ಶೇ. ೧೦ರ? ಇಳಿಯಿತು. ಕಾರಣ ಬಂಗ್ಲಾದೇಶದಿಂದ ಹಿಂದುಗಳು ಬಂದದ್ದು ಮತ್ತು ಮುಸ್ಲಿಮರ ಒಂದು ಸಣ್ಣ ಪಾಲು ಪಶ್ಚಿಮಬಂಗಾಳದಿಂದ ಅಂದಿನ ಪೂರ್ವ ಪಾಕಿಸ್ತಾನಕ್ಕೆ ಹೋದದ್ದು. ೧೯೫೧ರ ಬಳಿಕ ಮುಸ್ಲಿಮರ ಪಾಲು ಏರತೊಡಗಿತು. ೧೯೭೧ರ ನಂತರ ಅದು ಇನ್ನ? ತೀವ್ರವಾಯಿತು. ಪರಿಣಾಮವಾಗಿ ವಿಭಜನೆಯಿಂದ ಮುಸ್ಲಿಮರ ಶೇಕಡಾವಾರು ಪಾಲಿನ ಮೇಲೆ ಏನು ಪರಿಣಾಮವಾಗಿತ್ತೋ (ಇಳಿಕೆ) ಅದು ಸ್ಥಗಿತವಾಯಿತು. ಶೇ. ೧೦ ಇಳಿಕೆಯಲ್ಲಿ ಮುಸ್ಲಿಮರು ಶೇ. ಎಂಟನ್ನು ಪುನಃ ಗಳಿಸಿಕೊಂಡರು. ವಿಭಜನೆಯ ಅನಂತರದ ದಶಕಗಳಲ್ಲಿ ಪೂರ್ವ ಪಾಕಿಸ್ತಾನವನ್ನು ಬಿಟ್ಟ ಹಿಂದುಗಳಲ್ಲಿ ಕೆಲವರು ಪಶ್ಚಿಮಬಂಗಾಳಕ್ಕೆ ಬಂದಿರಬೇಕು. ಆದರೆ ಮುಸ್ಲಿಮರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ; ಮತ್ತು ಬಂಗ್ಲಾದೊಂದಿಗೆ ಭಾರೀ ಉದ್ದದ ಗಡಿಯನ್ನು ಹೊಂದಿರುವ ಈ ರಾಜ್ಯದ ಗಡಿಜಿಲ್ಲೆಗಳಲ್ಲಿ ನೆಲಸಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಏರಲು ಈ ಸಮುದಾಯದಲ್ಲಿನ ಅಧಿಕ ಜನನ ಪ್ರಮಾಣ ಕೂಡ ಕಾರಣವೆಂದು ಮೂಲಗಳು ತಿಳಿಸಿವೆ.
ತ್ರಿಪುರಾದಲ್ಲಿ
ಬಂಗ್ಲಾಗಡಿಯ ಅಸ್ಸಾಂ, ಪಶ್ಚಿಮಬಂಗಾಳ ಮತ್ತು ತ್ರಿಪುರಾದಲ್ಲಿ ಹಿಂದುಗಳ ವಲಸೆಯ ಪರಿಣಾಮ ಕಾಣುವ ಏಕೈಕ ರಾಜ್ಯ ತ್ರಿಪುರಾ. ಇಲ್ಲಿ ಅತ್ಯಂತ ಮಹತ್ತ್ವದ ಬದಲಾವಣೆ ಕಂಡದ್ದು ೧೯೬೧- ೭೧ರ ಅವಧಿಯಲ್ಲಿ. ಆಗ ಹಿಂದುಗಳ ಪಾಲು ಶೇ. ೭೯ರಿಂದ ೯೨ಕ್ಕೇರಿತು; ಮತ್ತು ಮುಸ್ಲಿಮರದ್ದು ಶೇ. ೨೦.೧ರಿಂದ ೬.೭ಕ್ಕೆ ಇಳಿಯಿತು. ಪೂರ್ವ ಪಾಕಿಸ್ತಾನದ ಚಿತ್ತಗಾಂಗ್ ಪ್ರದೇಶದ ಹಿಂದುಗಳು ಮತ್ತು ಬೌದ್ಧರು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ವಲಸೆ ಬಂದು ಈ ರಾಜ್ಯದಲ್ಲಿ ನೆಲೆಸಿದ್ದು ಅದಕ್ಕೆ ಕಾರಣ. ಪಶ್ಚಿಮಬಂಗಾಳ, ಅಸ್ಸಾಂಗಳಿಗೆ ಹೋಲಿಸಿದರೆ ಇಲ್ಲಿ ಹಿಂದುಗಳ ಪಾಲಿನ ಮೇಲಾದ ಪ್ರಭಾವ ಜೋರಾಗಿ ಕಾಣಿಸುತ್ತದೆ. ಕಾರಣ ರಾಜ್ಯದ ಜನಸಂಖ್ಯೆಯೇ ಕಡಮೆ. ಸಂಖ್ಯೆಯನ್ನು ಗಮನಿಸಿದರೆ, ೧೯೬೧-೭೧ರ ಅವಧಿಯಲ್ಲಿ ಹಿಂದುಗಳು ಮತ್ತು ಬೌದ್ಧರ ಸಂಖ್ಯೆಯಲ್ಲಾದ ಏರಿಕೆ ೫.೩ ಲಕ್ಷ ಮಾತ್ರ. ಅದರಲ್ಲಿ ಸಹಜ ಏರಿಕೆ ಮತ್ತು ವಲಸೆ ಎರಡೂ ಸೇರಿವೆ. ಅ?ರಿಂದಲೇ ಹಿಂದುಗಳ ಪ್ರಮಾಣ ಶೇ. ೧೩ರ? ಏರಿತು.
೧೯೬೧-೭೧ರ ಇಳಿಕೆಯ ಆನಂತರ ರಾಜ್ಯದ ಮುಸ್ಲಿಮರ ಸಂಖ್ಯೆ ನೆರೆರಾಜ್ಯಗಳಂತೆಯೇ ಏರತೊಡಗಿತು. ಬಂಗ್ಲಾದೇಶದಿಂದ ಹಿಂದುಗಳನ್ನು ಹೊರಹಾಕಿದರೂ ಕೂಡ ಭಾರತದಲ್ಲಿ ಸಾಮಾನ್ಯವಾಗಿ ಅವರ ಪಾಲು ಏರುತ್ತಿಲ್ಲ. ಆ ಒಂದು ದಶಕದಲ್ಲಿ ತ್ರಿಪುರಾದಲ್ಲಿ ಮಾತ್ರ ಏರಿದ್ದು ಕಂಡುಬರುತ್ತದೆ. ಮುಸ್ಲಿಮರ ಸಂಖ್ಯೆಗೆ ಹೋಲಿಸಿದಾಗ ಈ ಒಂದು ಪ್ರಶ್ನೆ ಬಂದೇ ಬರುತ್ತದೆ: ’ಹಿಂದುಗಳಿಗೆ ಏನಾಗುತ್ತಿದೆ?’
ಕ್ಷೇತ್ರವಾರು ಅಲ್ಪಸಂಖ್ಯಾತರು
ಕಳೆದ ಲೋಕಸಭಾ ಚುನಾವಣೆಗೆ ಮುನ್ನ ೨೦೧೪ರ ಮಾರ್ಚ್ನಲ್ಲಿ ನೀಡಿದ ಒಂದು ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ಅವರು, ೨೦೧೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ (ಮುಸ್ಲಿಮರ ಎಂದು ಓದಿಕೊಳ್ಳಬೇಕು) ಬೆಂಬಲದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ೭೬ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ನಿರ್ಣಾಯಕರಾಗಿದ್ದಾರೆ. ಈ ವರ್ಗದ ಅಭ್ಯುದಯ ಬಾಯಿಮಾತಿನಲ್ಲಿ ಉಳಿಯಬಾರದು. ಈ ಬಜೆಟ್ನಲ್ಲಿ (ಅಲ್ಪಸಂಖ್ಯಾತರಿಗೆ) ೮೦೦ ಕೋಟಿ ತೆಗೆದಿರಿಸಲಾಗಿದೆ. ಅದನ್ನು ೧೦೦೦ ಕೋಟಿಗೆ ಏರಿಸಬೇಕು ಎಂದು ಆಗ್ರಹಿಸಿದ್ದರು.
ಕರ್ನಾಟಕದಲ್ಲಿ ೭೬ ಕ್ಷೇತ್ರಗಳೆಂದರೆ ಒಂದು ಕ್ಷಣ ಆಶ್ಚರ್ಯವೆನಿಸಬಹುದು. ಆದರೆ ಅದು ವಾಸ್ತವಕ್ಕೆ ಹೊರತಾದ ಮಾತಲ್ಲ. ಬಹುತೇಕ ಒಂದೇ ಪಕ್ಷಕ್ಕೆ ಮತನೀಡಬಹುದಾದ ಒಂದು ಸಮುದಾಯದ ಮತದಾರರು ಒಂದು ಕ್ಷೇತ್ರದಲ್ಲಿ ಶೇಕಡಾ ಹತ್ತರ? ಇದ್ದರೂ ಕೂಡ ಚುನಾವಣೆಯ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಬಹುದು; ನಿರ್ಣಾಯಕ ಆಗಲೂಬಹುದು. ಅದರಂತೆ ೨೦೦೯ರ ಚುನಾವಣೆಯ ಹೊತ್ತಿಗೆ ದೇಶದ ಒಟ್ಟು ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ೧೬೭ರಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದರು. ಎಂಟು ಕ್ಷೇತ್ರಗಳಲ್ಲಿ ಅವರು ಶೇ. ೭೦ರಷ್ಟಿದ್ದರೆ ಮತ್ತೆ ಎಂಟು ಕ್ಷೇತ್ರಗಳಲ್ಲಿ ಶೇ. ೫೦-೭೦ರಷ್ಟಿದ್ದರು. ಶೇ. ೪೦-೫೦ರ? ಅಲ್ಪಸಂಖ್ಯಾತ ಮತದಾರರಿದ್ದ ಕ್ಷೇತ್ರಗಳು ಕೂಡ ಎಂಟು. ೧೬ ಕ್ಷೇತ್ರಗಳಲ್ಲಿ ಶೇ. ೩೦-೪೦ರ? ಮುಸ್ಲಿಂ ಮತದಾರರಿದ್ದರೆ ೪೦ ಕ್ಷೇತ್ರಗಳಲ್ಲಿ ಶೇ. ೨೦-೩೦ ಮತ್ತು ೮೭ ಕ್ಷೇತ್ರಗಳಲ್ಲಿ ಶೇ. ೧೦-೨೦ರ? ಮುಸ್ಲಿಂ ಮತದಾರರು. ಈಗ ಈ ಸಂಖ್ಯೆಗಳಲ್ಲಿ ಇನ್ನ? ಏರಿಕೆಯಾಗಿರಬಹುದು. ಇಳಿಕೆಯಂತೂ ಆಗುವುದೇ ಇಲ್ಲ.
ಜನಸಂಖ್ಯೆಯ ತಾರತಮ್ಯ
೧೯೨೧ರ ಜನಗಣತಿಯಂತೆ ಅವಿಭಜಿತ ಭಾರತದ ಒಟ್ಟು ಜನಸಂಖ್ಯೆ ೩೦.೫೭ ಕೋಟಿ. ಅದರಲ್ಲಿ ಹಿಂದುಗಳು ೨೩.೦೨ ಕೋಟಿಯಾದರೆ(ಶೇ. ೭೫.೩೦) ಮುಸ್ಲಿಮರು ೭.೧೦ ಕೋಟಿ (ಶೇ. ೨೩.೨೩). ೧೯೩೧ರ ಜನಗಣತಿಯ ಪ್ರಕಾರ ಹಿಂದುಗಳು ಶೇ. ೭೪.೭೪ ಇದ್ದರೆ ಮುಸ್ಲಿಮರು ಶೇ. ೨೩.೪೯ ಇದ್ದರು. ೧೯೪೧ರ ಜನಗಣತಿಯಂತೆ ಹಿಂದುಗಳು ಶೇ. ೭೩.೮೧ ಮತ್ತು ಮುಸ್ಲಿಮರು ಶೇ. ೨೪.೨೮. ಹೀಗೆ ಸ್ವಾತಂತ್ರ್ಯಪೂರ್ವದಲ್ಲೂ ಮುಸ್ಲಿಮರ ಜನಸಂಖ್ಯೆಯ ಏರಿಕೆ ನಿರಂತರವಾಗಿ ಹಿಂದುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲೇ ಇತ್ತು. ಸ್ವಾತಂತ್ರ್ಯಕ್ಕೆ ಮುನ್ನ ಆಗಸ್ಟ್ ೧೩, ೧೯೪೭ರಂದು ಅವಿಭಜಿತ ಭಾರತದ ಒಟ್ಟು ಜನಸಂಖ್ಯೆ ೪೧.೭೬ ಕೋಟಿ. ಅದರಲ್ಲಿ ಹಿಂದುಗಳು ೨೮.೭೧ ಕೋಟಿ ಮತ್ತು ಮುಸ್ಲಿಮರು ೯.೪೪ ಕೋಟಿ. ಸ್ವತಂತ್ರ ಭಾರತದಲ್ಲಿ ಉಳಿದುಕೊಂಡ ಒಟ್ಟು ಮುಸ್ಲಿಮರು ೩.೬೦ ಕೋಟಿ.
ಸ್ವಾತಂತ್ರ್ಯಾನಂತರದ ಮೊದಲ ಜನಗಣತಿ ೧೯೫೧ರಲ್ಲಿ ನಡೆದಾಗ ದೇಶದ ಒಟ್ಟು ಜನಸಂಖ್ಯೆ ೩೬.೧೧ ಕೋಟಿ ಇದ್ದು, ಅದರಲ್ಲಿ ಹಿಂದುಗಳು ೩೧.೪೯ ಕೋಟಿ (ಶೇ. ೮೭.೨೨) ಮತ್ತು ಮುಸ್ಲಿಮರು ೩.೭೭ ಕೋಟಿ ಇದ್ದರು (ಶೇ. ೧೦.೬೯). ೧೯೭೧ರ ಜನಗಣತಿಯಂತೆ ದೇಶದ ಜನಸಂಖ್ಯೆಯಲ್ಲಿ ಹಿಂದುಗಳು ಶೇ. ೮೬.೨೦ ಮತ್ತು ಮುಸ್ಲಿಮರು ಶೇ. ೧೧.೩೧. ೧೯೮೧ರಲ್ಲಿ ಹಿಂದುಗಳು ೮೬.೨೨ ಮತ್ತು ಮುಸ್ಲಿಮರು ಶೇ. ೧೧.೩೪. ೧೯೯೧ರಲ್ಲಿ ಇವು ಅನುಕ್ರಮವಾಗಿ ಶೇ. ೮೫.೫೪ ಮತ್ತು ಶೇ. ೧೨.೧೨. ೧೯೮೧-೯೧ರ ಅವಧಿಯಲ್ಲಿ ಜನಸಂಖ್ಯೆಯ ಒಟ್ಟು ಏರಿಕೆ ಶೇ. ೨೬.೦೫. ಅದರಲ್ಲಿ ಹಿಂದುಗಳ ಏರಿಕೆ ಶೇ. ೨೫.೦೬ ಆದರೆ ಮುಸ್ಲಿಮರದ್ದು ಶೇ. ೩೪.೫೬. ಪ್ರಾಯಶಃ ಶಿಕ್ಷಣ ಮತ್ತು ಕುಟುಂಬಯೋಜನೆಯ ಬಗೆಗಿನ ಪ್ರಜ್ಞೆಯ ಕಾರಣದಿಂದ ಹಿಂದುಗಳ ಜನಸಂಖ್ಯೆ ಏರಿಕೆಯ ವೇಗ ಕಡಮೆಯಾದರೆ ಮುಸ್ಲಿಮರ ಏರಿಕೆಯ ವೇಗ ಹೆಚ್ಚಾದದ್ದು ಇಲ್ಲಿ ದಾಖಲಾಗಿದೆ.
೨೦೦೧ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆ ೧೦೩ ಕೋಟಿ. ಅದರಲ್ಲಿ ಹಿಂದುಗಳು ಶೇ. ೮೪.೨೨ ಆದರೆ ಮುಸ್ಲಿಮರು ೧೩.೪೩. ೧೯೯೧- ೨೦೦೧ರ ಅವಧಿಯಲ್ಲಿ ಒಟ್ಟು ಏರಿಕೆ ಶೇ. ೨೨.೬೬. ಅದರಲ್ಲಿ ಹಿಂದುಗಳ ಏರಿಕೆ ಶೇ. ೨೦.೭೭ ಆದರೆ ಮುಸ್ಲಿಮರದ್ದು ಶೇ. ೩೬.೦೨. ೨೦೧೧ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆ ೧೨೧ ಕೋಟಿ. ಅದರಲ್ಲಿ ಹಿಂದುಗಳು ಶೇ. ೮೨.೮೭ ಮತ್ತು ಮುಸ್ಲಿಮರು ಶೇ. ೧೪.೬೬. ೨೦೦೧-೧೧ರ ಅವಧಿಯಲ್ಲಿ ಒಟ್ಟು ಜನಸಂಖ್ಯೆಯ ಏರಿಕೆ ಶೇ. ೧೭.೬೫. ಅದರಲ್ಲಿ ಹಿಂದುಗಳ ಏರಿಕೆ ಶೇ. ೧೫.೭೬ ಆದರೆ ಮುಸ್ಲಿಮರದ್ದು ಶೇ. ೨೮.೪೦ಯ? ಅಧಿಕ ಪ್ರಮಾಣದಲ್ಲಿದೆ. ಹಿಂದುಗಳ ಜನಸಂಖ್ಯೆ ಏರಿಕೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದರೆ ಮುಸ್ಲಿಂ ಸಂಖ್ಯೆ ಏರಿಕೆಯ ಪ್ರಮಾಣ ಹಿಂದಿನಂತೆಯೇ ಮುಂದುವರಿದದ್ದು ತಿಳಿಯುತ್ತದೆ. ಇದೇ ರೀತಿ ಮುಂದುವರಿದರೆ ೨೦೭೧ರ ಹೊತ್ತಿಗೆ ದೇಶದ ಮುಸ್ಲಿಂ ಜನಸಂಖ್ಯೆ ಹಿಂದುಗಳನ್ನು ಹಿಂದೆ ಹಾಕಿ ಭಾರತ ಮುಸ್ಲಿಂ ಬಹುಸಂಖ್ಯಾತ ದೇಶವಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾದ ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವಾಗ ಮೇಲಿನ ವಿ?ಯಗಳು ನಮ್ಮನ್ನು ಮತ್ತೊಮ್ಮೆ ಕಳವಳಕ್ಕೀಡುಮಾಡುತ್ತವೆ. ಇದರಲ್ಲಿ ಅಪಾಯಕಾರಿ ಅಂಶವೆಂದರೆ, ರಾ?-ರಾಜ್ಯಮಟ್ಟದಲ್ಲಿ ಮತ್ತು ಸಮಾಜದಲ್ಲಿ ಎದುರಿಗೆ ನಡೆಯುತ್ತಿರುವ ವಿಚಾರಗಳೇ ಬೇರೆ; ಒಳಗೊಳಗೆ ರಹಸ್ಯವಾಗಿ ಮುದುವರಿಯುತ್ತಿರುವ ವಿದ್ಯಮಾನಗಳೇ ಬೇರೆ. ತುಷ್ಟೀಕರಣ ಅಥವಾ ಓಲೈಕೆ ರಾಜಕೀಯವು ಚುನಾವಣೆ ಬಂದಾಗ ಹೆಚ್ಚಿನ ಚಾಲನೆಯನ್ನು ಪಡೆದುಕೊಳ್ಳುತ್ತದೆ. ಸಮಾನ ನಾಗರಿಕ ಸಂಹಿತೆಯು ಇನ್ನೂ ದೂರವಿರುವಂತೆ ತೋರುತ್ತದೆ. ತ್ರಿವಳಿ ತಲಾಕ್ನಂತಹ ಅಮಾನವೀಯ ಪದ್ಧತಿಯನ್ನು ಕೂಡ ಸಮರ್ಥಿಸುವುದಕ್ಕೆ ನಮ್ಮ ಪ್ರಮುಖ ರಾಜಕೀಯ ಪಕ್ಷಗಳಿಗೆ ಕಾರಣ ಸಿಗುತ್ತದೆ. ಬಂಗ್ಲಾದಿಂದ ಎರಡು- ಮೂರು ಕೋಟಿ ಜನ ಅಕ್ರಮವಾಗಿ ನುಸುಳಿಬಂದು ನಮ್ಮೊಳಗೆ ಸೇರಿಕೊಂಡರೂ ನಾವು ಎಚ್ಚರಾಗಲಿಲ್ಲ. ಅವರಿಗೆ ಮತದಾರರ ಚೀಟಿ, ಆಧಾರ್ಕಾರ್ಡ್ ನೀಡಿ ವೋಟು ಗಿಟ್ಟಿಸಿಕೊಳ್ಳುವ ವಿಧ್ವಂಸಕಾರಿ ಪ್ರಯತ್ನ ಈ ಚುನಾವಣೆಯಲ್ಲೂ ಮುಂದುವರಿಯಬಹುದು, ಈ ಬೇಸರ ತರಿಸುವ ಸನ್ನಿವೇಶದಲ್ಲಿ ದೇಶದ ಮತದಾರ ಪ್ರಭುವಿನ ಲೆಕ್ಕಾಚಾರ ಏನಿದೆಯೋ ಗೊತ್ತಿಲ್ಲ.