ಹೆಲಿಕಾಪ್ಟರ್ ಎಂದು ಹೆಸರಿಟ್ಟು ಚಕ್ಕಡಿ ಬಂಡಿಯನ್ನೇನು ಕೊಟ್ಟಿಲ್ಲವಲ್ಲ. ಮಾತಿಗೆ ಅರ್ಥ ಇರಬೇಕು. ಹೆಲಿಕಾಪ್ಟರನ್ನು ತಯಾರಿಸಿದುದು ಅಗಸ್ಟಾ ಕಂಪೆನಿ ಅಲ್ಲ, ಸಬ್-ಕಾಂಟ್ರ್ಯಾಕ್ಟ್ ಪಡೆದ ಇಂಗ್ಲೆಂಡಿನ ಕಂಪೆನಿ. ಸಂಧಾನದ ವೇಳೆ ತೋರಿಸಿದ್ದ ಹೆಲಿಕಾಪ್ಟರ್ ಒಂದು, ಸರಬರಾಜಾಗಿರುವುದು ಇನ್ನೊಂದು – ಎಂದು ಮತ್ತೊಂದು ಆಕ್ಷೇಪ. ಯಾವುದಾದರೆ ಏನಂತೆ? ಅದೂ ಹೆಲಿಕಾಪ್ಟರೇ, ಇದೂ ಹೆಲಿಕಾಪ್ಟರೇ ತಾನೆ! ಎಷ್ಟು ವಯಸ್ಸಾದರೂ ಇದ್ದ ಊರಿಗಿಂತ ಹುಟ್ಟಿದ ಊರು ಹೆಚ್ಚಿನದೇ ಅಲ್ಲವೆ? ಮಾಮೂಲು ಹೆಣ್ಣಾದರೇನು, ಮಹಾರಾಜ್ಞಿಯಾದರೇನು. ಇದು ಕಾಲಾತೀತ ಸತ್ಯ. ಇದನ್ನು ಗಂಡಸರು ಎಂದಿಗಾದರೂ ಅರ್ಥಮಾಡಿಕೊಂಡಾರೆ? ಇದನ್ನು […]