ಹೆಲಿಕಾಪ್ಟರ್ ಎಂದು ಹೆಸರಿಟ್ಟು ಚಕ್ಕಡಿ ಬಂಡಿಯನ್ನೇನು ಕೊಟ್ಟಿಲ್ಲವಲ್ಲ. ಮಾತಿಗೆ ಅರ್ಥ ಇರಬೇಕು. ಹೆಲಿಕಾಪ್ಟರನ್ನು ತಯಾರಿಸಿದುದು ಅಗಸ್ಟಾ ಕಂಪೆನಿ ಅಲ್ಲ, ಸಬ್-ಕಾಂಟ್ರ್ಯಾಕ್ಟ್ ಪಡೆದ ಇಂಗ್ಲೆಂಡಿನ ಕಂಪೆನಿ. ಸಂಧಾನದ ವೇಳೆ ತೋರಿಸಿದ್ದ ಹೆಲಿಕಾಪ್ಟರ್ ಒಂದು, ಸರಬರಾಜಾಗಿರುವುದು ಇನ್ನೊಂದು – ಎಂದು ಮತ್ತೊಂದು ಆಕ್ಷೇಪ. ಯಾವುದಾದರೆ ಏನಂತೆ? ಅದೂ ಹೆಲಿಕಾಪ್ಟರೇ, ಇದೂ ಹೆಲಿಕಾಪ್ಟರೇ ತಾನೆ!
ಎಷ್ಟು ವಯಸ್ಸಾದರೂ ಇದ್ದ ಊರಿಗಿಂತ ಹುಟ್ಟಿದ ಊರು ಹೆಚ್ಚಿನದೇ ಅಲ್ಲವೆ? ಮಾಮೂಲು ಹೆಣ್ಣಾದರೇನು, ಮಹಾರಾಜ್ಞಿಯಾದರೇನು. ಇದು ಕಾಲಾತೀತ ಸತ್ಯ. ಇದನ್ನು ಗಂಡಸರು ಎಂದಿಗಾದರೂ ಅರ್ಥಮಾಡಿಕೊಂಡಾರೆ? ಇದನ್ನು ಗ್ರಹಿಸದೆ ಪದೇಪದೇ ಗುಲ್ಲೆಬ್ಬಿಸುತ್ತಾರೆ.
ಅಗಸ್ಟಾ ವೆಸ್ಟ್ಲೆಂಡ್ ಹೆಲಿಕಾಪ್ಟರಿನ ಖರೀದಿಯಲ್ಲಿ ಭಾರೀ ಕುಂಭಕೋಣ ನಡೆದಿದೆಯೆಂದು ಎಲ್ಲರೂ ಆಕೆಯ ಬಗೆಗೆ ಆಡಿಕೊಳ್ಳುತ್ತಿದ್ದಾರೆ. ಆಕೆ ಮಾಡಿದ ಘೋರ ಅಪರಾಧವಾದರೂ ಏನು? ಭಾರತಕ್ಕೆ ವಿ.ವಿ.ಐ.ಪಿ.ಗಳ ಬಳಕೆಗಾಗಿ ಹೆಲಿಕಾಪ್ಟರು ಬೇಕು. ಹೇಗೂ ಅದು ಇಲ್ಲಿ ತಯಾರಾಗುವ ಸಂಭವ ಇಲ್ಲ. ಯಾವುದಾದರೂ ದೇಶದಿಂದ ಕೊಂಡು ತರಲೇಬೇಕಲ್ಲವೆ? ಎಲ್ಲೆಲ್ಲಿಂದಲೋ ತರುವುದಕ್ಕೆ ಬದಲು ಮಾತೃದೇಶ ಇಟಲಿಗೆ ಸೇರಿದ ಅಗಸ್ಟಾ ಕಂಪೆನಿಯಿಂದ ತರಿಸಿದರೆ ಒಳ್ಳೆಯದೆಂದು ಭಾವಿಸಿರಬೇಕು. ನಾವು ಯಾವುದೇ ಪದಾರ್ಥ ಕೊಳ್ಳಬೇಕಾದರೂ ಪರಿಚಿತರೊಡನೆ ವ್ಯವಹರಿಸಲು ಇಷ್ಟಪಡುವುದು ಸಹಜ ತಾನೇ? ಇಟಲಿ ಆಕೆಗೆ ಚೆನ್ನಾಗಿ ತಿಳಿದ ದೇಶ, ಮತ್ತು ತನ್ನ ಹುಟ್ಟೂರು. ಆದರೆ ಇಲ್ಲಿ ನಮ್ಮದಾದರೊ ದೊಡ್ಡ ಪ್ರಜಾಪ್ರಭುತ್ವ ದೇಶವಾಯಿತಲ್ಲ. ಪ್ರತಿ ಕೆಲಸವೂ ಪದ್ಧತಿಯಂತೆ ನಡೆಯಬೇಕಾಗಿದೆ. ಅದಕ್ಕೆ ಏನೇನೋ ಕಠಿಣ ನಿಯಮಗಳು ಇರುತ್ತವೆ. ಹೀಗಿರುವಾಗ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿರುವವರೂ ನೆಹರು ಕುಟುಂಬಕ್ಕೆ ಸೇರಿದವರೂ ಆದ ಆಕೆ ವಿಧಿನಿಯಮಗಳನ್ನು ಹೇಗೆ ಉಲ್ಲಂಘಿಸಿಯಾರು? ಅದಕ್ಕಾಗಿ ಜಾಗ್ರತೆ ವಹಿಸಿದರು. ಯಾವುದೇ ಉಲ್ಲಂಘನೆಯನ್ನು ನಿವಾರಿಸಲು ಎರಡು ದಾರಿಗಳಿವೆ: ನಿಯಮಗಳಿಗೆ ಅನುಗುಣವಾಗಿ ವ್ಯವಹರಿಸುವುದು; ಇಲ್ಲವೇ ನಿಯಮಗಳನ್ನೇ ಬದಲಾಯಿಸಿಬಿಡುವುದು. ಈ ಸಂದರ್ಭದಲ್ಲಿ ಆಕೆ ಎರಡನೇ ದಾರಿಯನ್ನು ಆಯ್ದುಕೊಂಡರು. ಅಗಸ್ಟಾ ಕಂಪೆನಿಗೆ ಮಾತ್ರವೇ ಟೆಂಡರ್ ದೊರೆಯುವಂತೆ ನಿಬಂಧನೆಗಳನ್ನು ಬದಲಾಯಿಸಿದರು. ಇದರಲ್ಲಿ ತಪ್ಪು ಏನಿದೆ?
ಹೆಲಿಕಾಪ್ಟರಿನ ಕ್ಯಾಬಿನಿನ ಎತ್ತರ ಭಾರತದಲ್ಲಿ ನಿಗದಿಯಾಗಿರುವುದಕ್ಕಿಂತ ಹೆಚ್ಚು ಇದ್ದಿತೆಂದೂ ಅ? ಅನಾವಶ್ಯಕವೆಂದೂ ತಜ್ಞರು ಹೇಳಿದರು. ಈಗಲೂ ನಾವು ಯಾವುದೋ ಕಾಲದ ಮಾನಸಿಕತೆಯಲ್ಲಿ ಇದ್ದೇವೆ. ಯಾರೋ ಎಂದೋ ಮಾಡಿದ ನಿಯಮಗಳಿಗೆ ನೇತುಬಿದ್ದಿರುವುದು ನಮ್ಮ ಅಭ್ಯಾಸ. ಮುಂದಿನ ದಿನಗಳ ಅಗತ್ಯವನ್ನು ಯಾರು ಕಂಡಿದ್ದಾರೆ? ನಮ್ಮ ದೇಶಕ್ಕೆಂದು ಕಡಮೆ ಎತ್ತರದ ಕ್ಯಾಬಿನಿನ ಹೆಲಿಕಾಪ್ಟರು ಮಾಡಿದರೆ ಮುಂದೆ ಆ ಎತ್ತರ ಸಾಲದೆಹೋದರೆ ಏನು ಮಾಡಬೇಕು? ಈಗ ಎಲ್ಲವೂ ಅಂತರರಾಷ್ಟ್ರೀಯ ಸ್ಟ್ಯಾಂಡರ್ಡುಗಳ, ಬ್ರ್ಯಾಂಡುಗಳ ಕಾಲ. ಇದನ್ನು ಅರ್ಥಮಾಡಿಕೊಳ್ಳದೆ ಕ್ಯಾತೆ ತೆಗೆಯುವವರಿಗೆ ಏನು ಹೇಳೋಣ?
ಅಗಸ್ಟಾ ಹೆಲಿಕಾಪ್ಟರಿಗೆ ಎರಡರಷ್ಟು ಬೆಲೆ ಕೊಟ್ಟಿದ್ದಾರೆಂದು ರಕ್ಷಣಾಮಂತ್ರಿ ಹೇಳಿದರಂತೆ. ಯಾರಿಗಾದರೂ ಏನನ್ನಾದರೂ ನಾವು ಕೊಡಲು ಬಯಸಿದರೆ, ಒಂದೋ ಎರಡೋ ರೂಪಾಯಿ ಹೆಚ್ಚನ್ನು ನಾವು ಲೆಕ್ಕ ಹಾಕುತ್ತೇವೆಯೆ, ಗುಂಜಲಾಡುತ್ತೇವೆಯೆ? ತನ್ನ ಹುಟ್ಟೂರಿನಿಂದ ಬಂದ ವಸ್ತುವಿಗೆ ಏನೋ ಒಂದ? ಹೆಚ್ಚು ಹಣ ಪಾವತಿ ಮಾಡಿದರೆ ತಪ್ಪೆ? ಇನ್ನು ಅವರು ಪಡೆದ ಹೆಚ್ಚಿನ ಹಣವನ್ನು ಅವರೇನು ಉಳಿಸಿಕೊಳ್ಳಲಿಲ್ಲವಲ್ಲ, ನಮ್ಮವರಿಗೇ ಉಡುಗೊರೆಯಾಗಿ ಕೊಟ್ಟಿದ್ದಾರಲ್ಲ. ಗಾಂಧಿ ಲೆಕ್ಕಕ್ಕೆ, ಅವರ ರಾಜಕೀಯ ಕಾರ್ಯದರ್ಶಿಗೆ, ವೈಮಾನಿಕದಳ ಪ್ರಮುಖರಿಗೆ – ಇವರಿಗೆಲ್ಲ ಪ್ರೀತಿಪೂರ್ವಕ ಕೊಟ್ಟಿರುವುದನ್ನು ಅಗಸ್ಟಾ ಲೆಕ್ಕಿಗರೇ ಬರೆದಿಟ್ಟಿದ್ದಾರಲ್ಲ. ಇದಕ್ಕಾಗಿ ಕಂಪೆನಿಯವರಿಗೆ ವಂದನೆ ಹೇಳುವುದಕ್ಕೆ ಬದಲಾಗಿ ಆಕ್ಷೇಪಿಸುವುದೆ, ರಾದ್ಧಾಂತ ಎಬ್ಬಿಸುವುದೆ?
ಖರೀದಿಯ ನಿಯಮಗಳನ್ನು ಬದಲಾಯಿಸಿದುದು ಅದೇನು ದೊಡ್ಡ ವಿಷಯವೆ? ಅವರಿಂದ ಬಂದ ಹಣವನ್ನು ತಮ್ಮ ಹೆಣ್ಣುಮಗಳಿಗೆ ಕೊಟ್ಟ ಬಾಗಿನ ಎಂದುಕೊಳ್ಳಬಾರದೆ?
ಇಷ್ಟಾಗಿ ಹೆಲಿಕಾಪ್ಟರನ್ನು ತಯಾರಿಸಿದುದು ಅಗಸ್ಟಾ ಕಂಪೆನಿ ಅಲ್ಲ, ಸಬ್-ಕಾಂಟ್ರ್ಯಾಕ್ಟ್ ಪಡೆದ ಇಂಗ್ಲೆಂಡಿನ ಕಂಪೆನಿ ಎನ್ನುತ್ತಿದ್ದಾರೆ. ಬೇರೆಬೇರೆಯವರಿಗೆ ಅವಕಾಶಗಳನ್ನು ಕಲ್ಪಿಸುವುದು ಲೋಕರೂಢಿಯಲ್ಲವೆ? ಹತ್ತು ವರ್ಷ ಆಳಿರುವವರೇ ಈಗಲೂ ಆಳಲಿ ಎಂದರೆ ನಡೆದೀತೆ? ಯಾರಾದರೆ ಏನು, ಕೆಲಸ ನಡೆಯುವುದು ಮುಖ್ಯ, ಅಲ್ಲವೆ? ಸಂಧಾನದ ವೇಳೆ ತೋರಿಸಿದ್ದ ಹೆಲಿಕಾಪ್ಟರ್ ಒಂದು, ಸರಬರಾಜಾಗಿರುವುದು ಇನ್ನೊಂದು – ಎಂದು ಮತ್ತೊಂದು ಆಕ್ಷೇಪ. ಯಾವುದಾದರೆ ಏನಂತೆ? ಅದೂ ಹೆಲಿಕಾಪ್ಟರೇ, ಇದೂ ಹೆಲಿಕಾಪ್ಟರೇ. ಹೆಲಿಕಾಪ್ಟರ್ ಎಂದು ಹೆಸರಿಟ್ಟು ಚಕ್ಕಡಿ ಬಂಡಿಯನ್ನೇನು ಕೊಟ್ಟಿಲ್ಲವಲ್ಲ. ಮಾತಿಗೆ ಅರ್ಥ ಇರಬೇಕು.
ಅಗಸ್ಟಾ ಒಪ್ಪಂದದಲ್ಲಿ ಅಕ್ರಮ ನಡೆದಿದೆಯೆಂದೂ ಲಂಚ ವಿತರಣೆ ಆಗಿದೆಯೆಂದೂ ಆಕೆಯ ದೇಶದ ಜಡ್ಜಿ ತೀರ್ಪು ಕೊಟ್ಟಿದ್ದಾರೆ. ಆಕೆಯ ಪಕ್ಷಕ್ಕೆ ಸೇರಿದ ನಿ?ಗರಿ? ಆಂಟೋನಿಯವರೂ ಉಡುಗೊರೆ ಸ್ವೀಕರಿಸಿದ್ದಾರೆ ಎಂದು ಹುಯಿಲೆದ್ದಿದೆ. ಇದೆಲ್ಲ ಅವರ ಖಾಸಗಿ ವ್ಯವಹಾರ ಕ್ಷೇತ್ರಕ್ಕೆ ಸೇರಿದ್ದಲ್ಲವೆ? ಬೇರೆಯವರೇಕೆ ಹುಯಿಲಿಡಬೇಕು? ಹಿಂದೆ ರಾಜೀವಗಾಂಧಿ ಹಯಾಮಿನಲ್ಲಿ ಬೋಫೋರ್ಸ್ ಶತಘ್ನಿಗಳನ್ನು ಕೊಂಡಾಗಲೂ ಅಕ್ರಮ ನಡೆದಿತ್ತೆಂದೂ ಮಹಾರಾಜ್ಞಿಯ ಪರಿವಾರದ ಕ್ವಟ್ರೋಚಿ ಎಂಬ ಇಟಾಲಿಯನ್ ಮಹಾಶಯನ ಪಾತ್ರ ಅದರಲ್ಲಿ ಇದ್ದಿತೆಂದೂ ಗದ್ದಲ ಹಚ್ಚಿದ್ದರು. ಅದಕ್ಕಾಗಿ ಪಾಪ ರಾಜೀವಗಾಂಧಿ ಅಧಿಕಾರವನ್ನೂ ಕಳೆದುಕೊಳ್ಳಬೇಕಾಯಿತು. ಗಂಡು ಆಸರೆ ಇಲ್ಲದೆ ಒಂದೆಡೆ ಅಭಾಶುಭಾ ತಿಳಿಯದ ಎಳೆಯನನ್ನು ಸಾಕುತ್ತ ಇನ್ನೊಂದುಕಡೆ ಪಕ್ಷವನ್ನೂ ದೇಶವನ್ನೂ ಪಾಲನೆ ಮಾಡಿದುದು ಸಾಮಾನ್ಯದ ಮಾತೆ? ಅಂಥವರನ್ನು ಹೀಗೆ ಸತಾಯಿಸುವುದು ಧರ್ಮವೆ? ಇದು ಭಾರತೀಯ ಸಂಪ್ರದಾಯವೆ?
ಅಸಲು ಈ ಭಾನಗಡಿಗೆಲ್ಲ ಕಾರಣ ಸುಬ್ರಹ್ಮಣ್ಯನ್ ಸ್ವಾಮಿ ಎಂಬ ತರಳೆ ಮನು?. ಆತ ಹಾರ್ವರ್ಡಿನಲ್ಲಿ ಪ್ರೊಫೆಸರ್ ಆಗಿದ್ದನಂತೆ. ಮೂರುಹೊತ್ತೂ ಕೇಸುಗಳನ್ನು ಜಡಿಯುವುದೇ ಆತನ ಅಭ್ಯಾಸ.
ಗಾಂಧಿ ಕುಟುಂಬದ ಸ್ವಿಸ್ಬ್ಯಾಂಕ್ ಖಾತೆ ವಿವರಗಳು, ಲಂಡನ್ ಕಂಪೆನಿಗಳ ವ್ಯವಹಾರ ವಿವರಗಳು ತನ್ನಲ್ಲಿ ಇವೆ ಎನ್ನುತ್ತಿದ್ದಾನೆ ಆತ. ಪಾಪ ಈಕೆಗೆ ಇನ್ನೇನು ಕ?ಗಳು ಕಾದಿವೆಯೊ! ದೇವರು ಕಾಪಾಡಲಿ.
ಕೃ.ತಿ. (’ಆಂಧ್ರಜ್ಯೋತಿ’ ದೈನಿಕದಲ್ಲಿ)