“ಮಹಾರಾಣಿಯವರೆ, ಬಾಲಕರೆಲ್ಲ ತಮ್ಮ ಬರುವಿಗಾಗಿ ಕಾದಿದ್ದಾರೆ” – ವಿನಯದಿಂದ ಅರಿಕೆ ಮಾಡಿದಳು ಪರಿಚಾರಿಕೆ. ಮುಚ್ಚಿದ್ದ ಕಣ್ಣನ್ನು ಪ್ರಯತ್ನಪೂರ್ವಕ ತೆರೆದಳು ಡಿದ್ದಾ ರಾಣಿ. ಪರಿಚಾರಿಕೆ ಹೇಳಿದ್ದುದು ಅವಳಿಗೆ ಅರ್ಥವಾದಂತಿರಲಿಲ್ಲ. ತಾನು ಹೇಳಿದ್ದುದನ್ನು ಮತ್ತೆ ನಿವೇದಿಸಿದಳು, ಪರಿಚಾರಿಕೆ. ಮಹಾರಾಣಿ ಕೇಳಿದಳು – ನರವಾಹನ ಮಂತ್ರಿಗಳ ಭೋಜನ ಆಯಿತೆ? ಹಾಗಾದರೆ ನಾನೂ ಭೋಜನವನ್ನು ಮುಗಿಸುತ್ತೇನೆ. ಪರಿಚಾರಿಕೆಯರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಪರಿಚಾರಿಕೆಯರಲ್ಲೊಬ್ಬಳು ಮುಂದುವರಿಸಿದಳು – ಮಹಾರಾಣಿಯವರೆ, ಕಶ್ಮೀರ ರಾಜ್ಯಕ್ಕೆ ಯುವರಾಜನಿಯುಕ್ತಿಯ ಬಗೆಗೆ ಮಾತನಾಡಲು ತಾವು ತಮ್ಮ ಸೋದರರ ಪುತ್ರರಿಗಾಗಿ ಕರೆ […]
ಕಶ್ಮೀರ ರಾಣಿ ಡಿದ್ದಾದೇವಿ
Month : June-2016 Episode : ರಾಜತರಂಗಿಣಿ ಕಥಾವಳಿ - 13 Author : ಎಸ್.ಆರ್. ರಾಮಸ್ವಾಮಿ