
“ಇವಳೇ, ಸಂಕ್ರಣ್ಣ ಬಂದಿದ್ದಾರೆ. ಚಾ ತಾ ನೋಡುವಾ.” ಆಗಷ್ಟೇ ತಟ್ಟೆಯಲ್ಲಿ ನೀರುದೋಸೆಗಳನ್ನು ಪೇರಿಸಿಕೊಂಡು ಉಸ್ಸಪ್ಪಾ ಎನ್ನುತ್ತ ತಿಂಡಿಗೆ ಕುಳಿತಿದ್ದ ಲಹರಿಗೆ ರಾಮಚಂದ್ರನ ಕರೆ ಕೇಳಿ ಒಮ್ಮೆಲೇ ಸಿಟ್ಟು ನೆತ್ತಿಗೇರಿತು. ’ಹತ್ತೂವರೆಗೆ ತಿಂಡಿ ತಿನ್ನಲಿಕ್ಕೆ ಕೂತರೂ ಸಹ, ಇವರದ್ದು ರಗಳೆ ಮುಗಿಯುವುದಿಲ್ಲಪ್ಪ’ ಎಂದು ಜೋರಾಗಿಯೇ, ಆದರೆ ಹೊರಗೆ ಕೇಳದಷ್ಟು ಗಟ್ಟಿಯಾಗಿ, ಗೊಣಗಿದ ಲಹರಿ ಸ್ಟವ್ ಮೇಲೆ ಅವಳ ಮನದ ಸಿಟ್ಟನ್ನು ಬಿಂಬಿಸುವಂತೆ ಸಣ್ಣಗೆ ಕುದಿಯುತ್ತಿದ್ದ ಚಹಾ ತೆಗೆದು ಸೋಸತೊಡಗಿದಳು. ಇದೇನು ಲಹರಿಗೆ ಹೊಸ ವಿಷಯವಲ್ಲ. ಊರಿನ ಬಹಳ ಮನೆಗಳ […]