“ಇವಳೇ, ಸಂಕ್ರಣ್ಣ ಬಂದಿದ್ದಾರೆ. ಚಾ ತಾ ನೋಡುವಾ.”
ಆಗಷ್ಟೇ ತಟ್ಟೆಯಲ್ಲಿ ನೀರುದೋಸೆಗಳನ್ನು ಪೇರಿಸಿಕೊಂಡು ಉಸ್ಸಪ್ಪಾ ಎನ್ನುತ್ತ ತಿಂಡಿಗೆ ಕುಳಿತಿದ್ದ ಲಹರಿಗೆ ರಾಮಚಂದ್ರನ ಕರೆ ಕೇಳಿ ಒಮ್ಮೆಲೇ ಸಿಟ್ಟು ನೆತ್ತಿಗೇರಿತು. ’ಹತ್ತೂವರೆಗೆ ತಿಂಡಿ ತಿನ್ನಲಿಕ್ಕೆ ಕೂತರೂ ಸಹ, ಇವರದ್ದು ರಗಳೆ ಮುಗಿಯುವುದಿಲ್ಲಪ್ಪ’ ಎಂದು ಜೋರಾಗಿಯೇ, ಆದರೆ ಹೊರಗೆ ಕೇಳದಷ್ಟು ಗಟ್ಟಿಯಾಗಿ, ಗೊಣಗಿದ ಲಹರಿ ಸ್ಟವ್ ಮೇಲೆ ಅವಳ ಮನದ ಸಿಟ್ಟನ್ನು ಬಿಂಬಿಸುವಂತೆ ಸಣ್ಣಗೆ ಕುದಿಯುತ್ತಿದ್ದ ಚಹಾ ತೆಗೆದು ಸೋಸತೊಡಗಿದಳು. ಇದೇನು ಲಹರಿಗೆ ಹೊಸ ವಿಷಯವಲ್ಲ. ಊರಿನ ಬಹಳ ಮನೆಗಳ ಹಾದಿ ಇವರ ಮನೆಯ ಮುಂದೇ ಹಾದು ಹೋಗುವುದು. ಹೀಗಾಗಿ, ಹೆಚ್ಚಾಗಿ ಜಗಲಿಯ ಮೇಲೆ ಕೂತೇ ಇರುತ್ತಿದ್ದ ರಾಮಚಂದ್ರ, ಅತ್ತಲಾಗಿ ಸಾಗಿ ಹೋಗುವವರನ್ನೆಲ್ಲಾ ’ಓಯ್?’ ಎಂದು ಕರೆದು ನಿಲ್ಲಿಸುತ್ತಿದ್ದ.
“ಚಾ ಕುಡಕೊಂಡು ಹೋಗಿ ಮಾರಾಯ್ರೇ. ಅರ್ಜೆಂಟು ಎಂಥ?” ಎಂದು ಪಟ್ಟಾಂಗಕ್ಕೆ ಕರೆಯುತ್ತಿದ್ದ.
ಈಗಂತೂ, ರಾಮಚಂದ್ರ ತಾಲ್ಲೂಕು ಪಂಚಾಯತ್ ಚುನಾವಣೆಗೆ ನಿಲ್ಲುವುದು ಎಂದು ಆದಮೇಲೆ ಈ ರೀತಿ ಕಾರಣವಿಲ್ಲದೆ ಜಗಲಿ ಏರಿ ಕೂರುವವರ ಸಂಖ್ಯೆ ಮತ್ತ? ಹೆಚ್ಚಿದೆ. ಹೀಗಾಗಿ, ಇವಳ ಚಹಾದ ಪಾತ್ರೆ ದಿನವಿಡೀ ಒಲೆಯ ಮೇಲೆ ಸಣ್ಣಗೆ ಕುದಿಯುತ್ತಲೇ ಇರುತ್ತದೆ. ಎರಡು ಲೋಟ ಚಹಾ ಹಿಡಿದುಕೊಂಡು ಗಂಟು ಮುಖದೊಂದಿಗೆ ಹೊರ ಬಂದ ಲಹರಿಯನ್ನು ನೋಡಿ ಸಂಕ್ರಣ್ಣ, ಕವಳದಿಂದ ಕೆಂಪೋ ಕಪ್ಪೋ ಆಗಿದ್ದ ಬಾಯಿಯನ್ನು, ವಿಚಿತ್ರ ರೀತಿಯಲ್ಲಿ ಮೇಲೆತ್ತಿ, ದಡಬಡ ಜಗಲಿ ದಾಟಿ ಓಡಿದ. ಹೊರಗೆ ಅಂಗಳದ ಕೊನೆಯಲ್ಲಿ ಎಲೆ ಅಡಿಕೆ ಉಗಿದು ಪಂಚೆಯ ಕೆಳಗಿನ ತುದಿ ಎತ್ತಿ ಬಾಯಿ ಒರಸಿಕೊಳ್ಳುತ್ತಾ ಮರಳಿ ಬಂದವ, ಕಪ್ಪು ಹಲ್ಲು ಪ್ರದರ್ಶಿಸುತ್ತಾ “ಮತ್ತೆ ಎಂಥ ವಿಶೇಷ ಲಾರಿಅಕ್ಕ? ಸೌಖ್ಯವಾ?” ಎಂದ.
ಆತ ಲಾರಿಅಕ್ಕ ಎಂದೊಡನೆ ಲಹರಿಯೊಳಗೆ ಕುದಿಯುತ್ತಿದ್ದ ಕೋಪ ಮತ್ತೊಮ್ಮೆ ಭುಸುಗುಟ್ಟಿತು. ಅಷ್ಟೊಂದು ಸುಂದರವಾದ ತನ್ನ ಹೆಸರನ್ನು ಊರಿನ ಜನ ಈ ನಮೂನೆ ಹಾಳುಮಾಡುವುದು ಅವಳ ಸಂಕಟಕ್ಕೆ ಕಾರಣವಾಗಿತ್ತು. ಆದರೂ ನಕ್ಕೆನೋ ಇಲ್ಲವೋ ಎಂಬಂತಹ ಮುಖ ಮಾಡಿ “ಎಲ್ಲ ಮೂಮೂಲು, ವಿಶೇಷ ಎಂಥದ್ದು?” ಎಂದು ಚುಟುಕಾಗಿ ಉತ್ತರಿಸಿದವಳೆ, ಸರ್ರನೆ ಒಳಗೆ ನಡೆದಳು.
ಲಹರಿಗೆ ಹೆಸರು ಇಟ್ಟದ್ದು ಅವಳ ಅಪ್ಪ. ಶಾಲೆಯ ಹೆಡ್ಮಾಸ್ಟರಾಗಿದ್ದ ಅವರಿಗೆ, ಸ್ವಲ್ಪಮಟ್ಟಿನ ಸಾಹಿತ್ಯಾಸಕ್ತಿ ಇತ್ತು. ಹೀಗಾಗಿ, ಮಗಳು ಹುಟ್ಟಿದಾಗ ಹೆಂಡತಿಯೂ ಸೇರಿದಂತೆ ಮನೆಯಲ್ಲಿ ಎಲ್ಲರೂ ಕುಲದೇವತೆ ಮೂಕಾಂಬಿಕೆಯ ಹೆಸರಿಡಲು ನಿರ್ಧರಿಸಿದ್ದರೂ ಸಹ, ಇವರು ಹಠ ಹಿಡಿದು ಲಹರಿ ಎಂದು ನಾಮಕರಣ ಮಾಡಿದ್ದರು. ಆಗಿನ ಕಾಲಕ್ಕೆ ತಮ್ಮ ಊರಿನಮಟ್ಟಿಗೆ ವಿಶೇಷ ಮತ್ತು ಅಪರೂಪವೆನಿಸಿದ್ದ ತನ್ನ ಹೆಸರಿನ ಬಗ್ಗೆ ಲಹರಿಗೆ ತುಂಬಾ ಹೆಮ್ಮೆ. ಆದರೇನು ಮಾಡುವುದು ಗುರಿಕಾಡೆಂಬ ಆ ಹಳ್ಳಿಯಲ್ಲಿ ಅವಳ ಹೆಸರನ್ನು ಸರಿಯಾಗಿ ಕರೆಯುವವರು ಇಲ್ಲವೆನ್ನುವ? ಕಡಮೆ. ಗಂಡ ರಾಮಚಂದ್ರನೇನೋ ಮದುವೆಯಾದ ಹೊಸದರಲ್ಲಿ “ಲಹರಿ…” ಎಂದು ಮಧುರವಾಗಿ ಕರೆಯುತ್ತಿದ್ದನಾದರೂ, ಅವನ ಬಾಯಲ್ಲೂ ಲಹರಿ “ಇವಳೇ?” ಆಗಿ ಈಗ ದಶಕಗಳೇ ಕಳೆದಿದೆ.
* * * * *
ಲಹರಿ ಗಣಿತ ಎಂ.ಎಸ್ಸಿ. ಮುಗಿಸಿ ಸುಳ್ಯದಲ್ಲಿ ತಾನು ಓದಿದ ಕಾಲೇಜಿನಲ್ಲೇ ಅತಿಥಿ ಉಪನ್ಯಾಸಕಳಾಗಿ ಕೆಲಸ ಆರಂಭಿಸುವ ವೇಳೆಗಾಗಲೇ ಅವಳ ಅಮ್ಮನಿಗೆ ಮಗಳ ಮದುವೆಯ ಚಿಂತೆ ತಾರಾಮಾರ ಹೆಚ್ಚಿಬಿಟ್ಟಿತ್ತು. ಅದಕ್ಕೆ ಕಾರಣವೂ ಇತ್ತು. ಲಹರಿ ಜಾತಕದಲ್ಲಿನ ದೋಷದಿಂದಾಗಿ ಮಾವ ಇಲ್ಲದ ಮನೆ ಹುಡುಕಬೇಕಿತ್ತು. ನಾಲ್ಕು ವ?ಗಳಿಂದ ಗಂಡುಗಳ ಹುಡುಕಾಟ ನಡೆದಿದ್ದರೂ, ಯಾವುದೂ ಸರಿಗಟ್ಟು ಎನಿಸಿರಲಿಲ್ಲ. ಆ ಸಮಯದಲ್ಲೇ ರಾಮಚಂದ್ರನ ಕಡೆಯಿಂದ ಮದುವೆ ಪ್ರಸ್ತಾಪ ಬಂದಿತ್ತು.
ರಾಮಚಂದ್ರನ ಜಾತಕ ಹೊಂದುತ್ತದೆ ಎಂಬುದೇ ಅವಳ ಹೆತ್ತವರಿಗೆ ದೊಡ್ಡ ಸಂತಸದ ವಿ?ಯವಾಗಿತ್ತು. ಆದರೆ, ಬಿ.ಎ. ಪಾಸಾಗಿ ಹಳ್ಳಿಯಲ್ಲಿ ಅಡಿಕೆತೋಟ ನೋಡಿಕೊಳ್ಳುತ್ತಿದ್ದ ರಾಮಚಂದ್ರನನ್ನು, ಎಂ.ಎಸ್ಸಿ. ಮುಗಿಸಿ ಲೆಕ್ಚರರ್ ಎನಿಸಿಕೊಂಡಿರುವ ಲಹರಿ ಒಪ್ಪುವುದು ಕ? ಎಂಬುದು ಅವರಿಗೇ ಖಂಡಿತವಾಗಿತ್ತು. ಆದರೆ, ಇವರೆಲ್ಲರ ನಿರೀಕ್ಷೆ ತಲೆಕೆಳಗೆ ಮಾಡುವಂತೆ, ಲಹರಿ ರಾಮಚಂದ್ರನನ್ನು ತಟ್ಟನೆ ಮೆಚ್ಚಿ, ತನ್ನ ಒಪ್ಪಿಗೆ ಸೂಚಿಸಿಬಿಟ್ಟಳು.
ಮಗಳು ಒಪ್ಪಲಾರಳು ಎಂಬ ಚಿಂತೆಯಲ್ಲಿದ್ದ ನಾಗರಾಜ ಮಾಸ್ಟ್ರಿಗೆ, ಮಗಳು ಬೇ?ರತ್ ಒಪ್ಪಿಗೆ ಸೂಚಿಸಿದ ಮೇಲೆ ಬೇರೆ ರೀತಿಯ ಆತಂಕ ಶುರುವಾಗಿತ್ತು. ಸುಳ್ಯದಲ್ಲೇ ಬೆಳೆದ ಲಹರಿಗೆ ಹಳ್ಳಿಯಲ್ಲಿದ್ದುಕೊಂಡು ತೋಟ, ದನಕರುಗಳು, ದೊಡ್ಡ ಮನೆಯನ್ನು ನಿಭಾಯಿಸುವುದು ಸಾಧ್ಯವೇ ಇಲ್ಲ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಮಗಳಿಗೆ ಅಂತಹ ಜೀವನವೊಂದರ ಕ?ಕಾರ್ಪಣ್ಯದ ಅಂದಾಜಿಲ್ಲ ಎಂಬುದು ಗೊತ್ತಿದ್ದ ಅವರು “ತೋಟ, ಹಳ್ಳಿಯ ಮನೆ ಅಂದರೆ ಭಯಂಕರ ಕೆಲಸ ಮಾರಾಯ್ತಿ. ತೋಟ, ದನಕರು ಬಗ್ಗೆ ನಿನಗೆಂತ ಮಣ್ಣು ಗೊತ್ತುಂಟು? ಇನ್ನೂ ಒಳ್ಳೆಯ ಹುಡುಗ ಹುಡುಕುವ, ಆಗ್ದಾ?” ಎಂದು ತಿಳಿವಳಿಕೆ ಹೇಳಲು ಯತ್ನಿಸಿದ್ದರು.
ಆಗ, ಲಹರಿ ಚಿಕ್ಕ ಭಾ?ಣವನ್ನೇ ಮಾಡಿದ್ದಳು. ಹೇಗೆ ಎಲ್ಲ ಯುವಕರು ಹಳ್ಳಿ ಬಿಟ್ಟು ನಗರ ಸೇರುತ್ತಿದ್ದಾರೆ. ರಾಮಚಂದ್ರ ಅವರೆಲ್ಲರಿಗಿಂತ ಯಾವ ರೀತಿಯಲ್ಲಿ ಭಿನ್ನ, ಮತ್ತು ಹಳ್ಳಿಗೆ ಮದುವೆಯಾಗಿ ಹೋಗಲು ಒಪ್ಪದ ಯುವತಿಯರಿಗಿಂತ, ತಾನು ಯಾವ ರೀತಿ ಭಿನ್ನ. ಹಳ್ಳಿಗೆ ಹೋಗುವ ತನ್ನ ಆದರ್ಶದ ಹಿಂದಿನ ಉದ್ದೇಶ ಏನು ಎಂಬುದನ್ನೆಲ್ಲಾ ಹೇಳಿ, ತಾನು ರಾಮಚಂದ್ರನನ್ನೇ ಮದುವೆಯಾಗುವುದಾಗಿ ಅಚಲ ನಿರ್ಧಾರದಿಂದ ನುಡಿದಿದ್ದಳು.
ಅವಳು ಹೇಳಿದ ಈ ಯಾವ ಆದರ್ಶದ ಮಾತುಗಳೂ ಸುಮ್ಮನೇ ಬಾಯಿಬಡಾಯಿಯಾಗಿರಲಿಲ್ಲ. ಅವಳು ಅದನ್ನು ಮನಃಪೂರ್ವಕವಾಗಿ ನಂಬಿದ್ದಳು ಕೂಡ. ಜೊತೆಗೆ ರಾಮಚಂದ್ರನ ರೂಪಿಗೆ, ನಡೆಗೆ ಮಾರುಹೋಗಿದ್ದಳು. ತಾನು ಓದುವ ಕಾದಂಬರಿಗಳ ಶ್ರೀಮಂತ, ಧೀಮಂತ, ಎಸ್ಟೇಟ್ ನಾಯಕನಂತೆ
ರಾಮಚಂದ್ರ ಅವಳಿಗೆ ಕಂಡಿದ್ದು ಸುಳ್ಳಲ್ಲ. ಅವನೊಂದಿಗೆ ತೋಟದ ಮನೆಯಲ್ಲಿ ಕಾಲಕಳೆಯುವ ಕಲ್ಪನೆ
ರೊಮ್ಯಾಂಟಿಕ್ ಎನಿಸಿತ್ತು. ತನ್ನ ಆದರ್ಶ ಹಾಗೂ ಕನಸು ಎರಡೂ ಕೈಗೂಡುತ್ತಿರುವ ಈ ಸಂದರ್ಭವನ್ನು
ಬಿಟ್ಟುಕೊಡುವುದು ಅವಳಿಗೆ ಮೂರ್ಖತನವೆನಿಸಿತು.ಹಾಗಾಗಿಯೇ, ಅಪ್ಪ ಹೇಳಿದಂತೆ ಅಲ್ಲಿರಬಹುದಾದ ದೊಡ್ಡ ಜವಾಬ್ದಾರಿಗಳ ಬಗ್ಗೆಯಾಗಲೀ, ಮೈಮುರಿಯುವ ಕೆಲಸದ ಬಗ್ಗೆಯಾಗಲೀ ಯೋಚಿಸಲು ಲಹರಿ ಸುತಾರಾಂ ಸಿದ್ಧಳಿರಲಿಲ್ಲ.
ರಾಮಚಂದ್ರನದ್ದು ಆ ಪ್ರಾಂತಕ್ಕೆ ಸ್ವಲ್ಪ ಹೆಸರುವಾಸಿಯಾದ ಗುರಿಕಾಡು ಭಟ್ಟರ ಕುಟುಂಬ. ಮೊದಲಿನಂತೆ ನೂರಾರು ಎಕರೆಯಲ್ಲದಿದ್ದರೂ, ಸಾಕ? ಅಡಿಕೆತೋಟ ಈಗಲೂ ಅವರ ಸುಪರ್ದಿಯಲ್ಲಿತ್ತು. ರಾಮಚಂದ್ರನ ಅಪ್ಪ ಶಂಕರಭಟ್ಟರು ಅವರ ಕಾಲಕ್ಕೆ ದೊಡ್ಡ ಕುಳ. ಮೂವರು ಗಂಡುಮಕ್ಕಳ ಪೈಕಿ ಕಿರಿಯನಾದ ರಾಮಚಂದ್ರನಿಗೆ ಇನ್ನೂ ೧೫ ವ?ವಿರುವಾಗ ಶಂಕರಭಟ್ಟರು ಜ್ವರವೆಂದು ಮಲಗಿದವರು ಮತ್ತೆ ಏಳಲಿಲ್ಲ. ಅಂದಿನಿಂದ ಪತ್ನಿ ಕಮಲಮ್ಮನೇ ಇನ್ನೂ ಓದುತ್ತಿದ್ದ ಮಕ್ಕಳ ಸಹಾಯದೊಂದಿಗೆ ಸಮರ್ಥವಾಗಿ ಎಲ್ಲಾ ವ್ಯವಹಾರ ನಡೆಸಿಕೊಂಡು ಹೋಗಿದ್ದರು. ಆದರೆ, ಹಿರಿಯ ಮಕ್ಕಳಿಬ್ಬರೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟವರು, ನಂತರ ಒಳ್ಳೆಯ ಕೆಲಸ ಸಂಪಾದಿಸಿ ಶಾಶ್ವತವಾಗಿ ಬೆಂಗಳೂರಿನ ಪಾಲಾಗಿದ್ದರು.
ರಾಮಚಂದ್ರ ಪದವಿ ಮುಗಿಸಿ ಹಳ್ಳಿಯಲ್ಲೇ ಉಳಿಯಲು ನಿರ್ಧರಿಸಿದ್ದ. ಇದರಿಂದ ಕಮಲಮ್ಮನ
ಜವಾಬ್ದಾರಿಯೇನೂ ಕಡಮೆಯಾಗಲಿಲ್ಲ. ರಾಮಚಂದ್ರ ಅಮ್ಮ ಹೇಳಿದ ಕೆಲಸ ಮಾತ್ರ ಮಾಡಿಕೊಂಡು, ಸ್ನೇಹಿತರ ಜೊತೆಗೆ ಬೈಕಿನಲ್ಲಿ ಸುತ್ತುತ್ತ, ಆರಾಮವಾಗಿದ್ದ. ಕಮಲಮ್ಮನಿಗೆ ತನ್ನ ಜೊತೆಗೆ ಒಬ್ಬ ಮಗ ಇಲ್ಲೇ ಉಳಿದನಲ್ಲ ಎಂಬ ಸಮಾಧಾನವೇ ಹೆಚ್ಚಾಗಿತ್ತಾದ್ದರಿಂದ, ಅವರೂ ಕಿಂಚಿತ್ತೂ ಗೊಣಗದೆ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು.
ಇಂತಿಪ್ಪ ರಾಮಚಂದ್ರನ ಆರಾಮವಾದ ಜೀವನ, ಸಾಕ? ಕನಸು ಹೊತ್ತುಕೊಂಡು ನವವಧುವಾಗಿ ಬಂದ ಲಹರಿಗೂ ಖುಶಿ ಕೊಟ್ಟಿತ್ತು. ಮಾಡಲೇನೂ ಘನಂದಾರಿ ಕೆಲಸವಿಲ್ಲದ ರಾಮಚಂದ್ರ ಅವಳ ಹಿಂದೆ ಸುತ್ತುತ್ತಾ, ಅವಳನ್ನು ಬೈಕಿನಲ್ಲಿ ಸುತ್ತಿಸುತ್ತಾ ಅವಳ ಪರಮಪ್ರಿಯಪತಿಯಾದ. ತೋಟದ ಮತ್ತು ಆ ದೊಡ್ಡ ಮನೆಯ ಜವಾಬ್ದಾರಿಯನ್ನೂ ಸುಲಲಿತವಾಗಿ ನಿಭಾಯಿಸುವ ತನ್ನ ಅತ್ತೆಯ ಚಟುವಟಿಕೆ ಲಹರಿಯಲ್ಲಿ ಅಚ್ಚರಿಯ ಜೊತೆಜೊತೆಗೆ ಕೊಂಚ ನಾಚಿಕೆಯನ್ನೂ ಮೂಡಿಸುತ್ತಿತ್ತು. ಬೆಳಗ್ಗೆ ಐದು ಗಂಟೆಗೆ ಎದ್ದರೆ, ರಾತ್ರಿ ಹತ್ತೂವರೆವರೆಗೆ ಒಂದೇ ಸಮನೆ ದುಡಿಯುವ ಅವರ ಶಕ್ತಿ ಕಂಡು ಅವಳು ಬೆರಗಾಗಿದ್ದಳು. ಅವರು ಅ?ಂದು ಕೆಲಸ ಮಾಡುವಾಗ ತಾನು ಸುಮ್ಮನಿರುವುದು ಸರಿಯಲ್ಲವೆಂಬ ಮುಜುಗರದಿಂದ ಏನಾದರೂ ತನಗೆ ತಿಳಿದ ಕೆಲಸ ಮಾಡಲು ಮುಂದಾದರೆ, ತನ್ನ ಸೊಸೆ ತುಂಬಾ ಓದಿದ್ದಾಳೆ ಎಂದು ಹೆಮ್ಮೆಪಡುತ್ತಿದ್ದ ಕಮಲಮ್ಮ “ಎಂತದೂ ಬೇಡ. ಈಗ? ಮದುವೆಯಾಗಿದ್ದಲ್ವಾ. ಸ್ವಲ್ಪ ಆರಾಮ ಮಾಡು” ಎಂದುಬಿಡುತ್ತಿದ್ದರು.
ಸ್ವಭಾವತಃ ಕೊಂಚ ಆಲಸಿಯಾಗಿದ್ದ ಲಹರಿಗೆ ಇದರಿಂದ ಸಂತೋ?ವೇ ಆಗುತ್ತಿತ್ತು. ಅಂತೂ ಮದುವೆಯ ಮೊದಲ ಒಂದು ವ?ವನ್ನು ಅವಳು ಬಹುತೇಕ ರಾಮಚಂದ್ರನ ಹಿಂದೆ ಬೈಕಿನಲ್ಲಿ ಕುಳಿತೇ ಕಳೆದಳು ಎಂದರೆ ತಪ್ಪಲ್ಲ. ಅವರ ಈ ದೀರ್ಘ ಹನಿಮೂನಿಗೆ ಬ್ರೇಕ್ ಬಿದ್ದದ್ದು ಅವಳು ಗರ್ಭಿಣಿಯಾದಾಗ, “ಇನ್ನು ಮುಂದೆ ಬೈಕ್ನಲ್ಲಿ ನೀನು ಹೆಚ್ಚು ಸುತ್ತೂದು ಬೇಡ” ಎಂದು ಕಮಲಮ್ಮ ಹೇಳಿದಾಗ.
ಇವಳೇನೋ ಮನೆಯಲ್ಲೇ ಉಳಿದಳು. ಆದರೆ, ರಾಮಚಂದ್ರನ ಸುತ್ತಾಟವೇನೂ ಕಡಮೆಯಾಗಲಿಲ್ಲ. ತನ್ನನ್ನು ಕೂಡಿಸಿಕೊಂಡು ಇ? ದಿನ ಸುತ್ತಿದ ತನ್ನ ಗಂಡ, ಈಗ ತನ್ನ ಜೊತೆಗೆ ಮನೆಯಲ್ಲೇ ಉಳಿಯುತ್ತಾನೆ ಎಂಬ ಲಹರಿಯ ಪ್ರೇಮಾಂಧವಿಶ್ವಾಸ ಸುಳ್ಳಾಗಿತ್ತು. ಮದುವೆಯ ಹೊಸತನದ ಕಾವು ಇಳಿದದ್ದರ ಜೊತೆಗೆ, ಹೆಂಡತಿ ಇನ್ನು ಮುಂದೆ ತನ್ನೊಂದಿಗೆ ಮೊದಲಿನಂತೆ ಗುಣವನು ಕಾಯದೆ ತಿಳಿದವರು ಹಣವನು ಕಾಯುವರೆ ಶಾಶ್ವತವೆಂದುಪಣಕೊಡ್ಡದಿರು ಬರಪವನೆಂದಿಗುಗುಣವೆ ಮೆರೆಯಲಿ ಬರಹದಲಿ – ತಮ್ಮಪಣಕೊಡ್ಡದಿರು ಬರಪವ ಊರು ಸುತ್ತಲು ಸಾಧ್ಯವಿಲ್ಲ ಎಂಬುದನ್ನು ಅರಿತ ರಾಮಚಂದ್ರ, ತಮ್ಮ ಹಳೆಯ ಸ್ನೇಹಿತರತ್ತ ಮುಖ ಮಾಡಿದ. ಅದರಿಂದ ಲಹರಿಯಲ್ಲಿ ಅಸೂಯೆಭರಿತ ಸಿಟ್ಟು ಮೂಡಿ, ಅವಳಿಗೆ ಮೊಟ್ಟಮೊದಲ ಬಾರಿಗೆ “ಅರೆ! ತನ್ನ ಗಂಡ ಏನೂ ಕೆಲಸವನ್ನೇ ಮಾಡುವುದಿಲ್ಲವಲ್ಲ..” ಎನಿಸಿತು. ಏಕಾಏಕಿ ಜ್ಞಾನೋದಯವಾದಂತೆ “ಅತ್ತೆಗೆ ಎ? ಕ?ಗ್ತದೆ ಅಂತ ಕಾಣುದಿಲ್ವಾ. ಮನೆಯಲ್ಲೇ ಇದ್ದು ಅವರಿಗೆ ತೋಟದ ಕೆಲಸದಲ್ಲಿ ಸಹಾಯ ಮಾಡಿ” ಎಂದು ಗಂಡನಿಗೆ ಹೇಳತೊಡಗಿದಳು. ರಾಮಚಂದ್ರ ಹೆಂಡತಿಯ ಮಾತಿಗೆ ನಗುತ್ತಾ ’ಸರಿ’ ಎನ್ನುತ್ತಿದ್ದನಾದರೂ, ಹೊರಗೆ ಸುತ್ತುವ ತನ್ನ ಚಾಳಿ ಮಾತ್ರ ಬಿಡಲಿಲ್ಲ.
ತನ್ನ ಚೊಚ್ಚಲ ಬಾಣಂತನವನ್ನು ಮುಗಿಸಿಕೊಂಡು ಲಹರಿ ಗಂಡನ ಮನೆಗೆ ಮರಳಿದ ಆರೇ ತಿಂಗಳಿಗೆ ಅವಳ ಇದುವರೆಗಿನ ವೈವಾಹಿಕ ಜೀವನವನ್ನು ಏಕಾಏಕಿ ಬದಲಾಯಿಸುವಂತಹ ಘಟನೆ ನಡೆಯಿತು. ತೋಟದೊಳಗಿನ ಸಣ್ಣ ಕಣಿಯೊಳಗೆ ಜಾರಿ ಬಿದ್ದ ಅವಳ ಅತ್ತೆ ಸಂಪೂರ್ಣವಾಗಿ ಹಾಸಿಗೆ ಹಿಡಿದರು. ಆಸರೆಯಿಲ್ಲದೆ ನಡೆಯಲಾರದ ಪರಿಸ್ಥಿತಿ ತಲಪಿದರು. ಆಗ ಲಹರಿಗೆ ತಾನು ಅನುಭವಿಸುತ್ತಿದ್ದ ವೈವಾಹಿಕ ಜೀವನದ ಈ ಪರಮಸುಖದಲ್ಲಿ ತನ್ನ ಗಂಡನಿಗಿಂತ, ತನ್ನ ಅತ್ತೆಯ ಪಾತ್ರ ಎ? ದೊಡ್ಡದು ಮತ್ತು ಮಹತ್ತ್ವದ್ದೂ ಆಗಿತ್ತು ಎಂಬ ಅರಿವು ಮೂಡಿತು. ಲಹರಿ ದಿಢೀರನೇ ಗೃಹಿಣಿಯಾಗಿಬಿಟ್ಟಳು.
ಇತ್ತ ರಾಮಚಂದ್ರನ ಪರಿಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಬೆನ್ನೇರಿದ ಜವಾಬ್ದಾರಿಯಿಂದಾಗಿ ಕೆಲ ದಿನ ಅಧೀರನಾಗಿ ಕುಳಿತ ರಾಮಚಂದ್ರ, ನಂತರ ನಿಧಾನವಾಗಿ ತೋಟದತ್ತ ಗಮನಹರಿಸತೊಡಗಿದ. ಗಂಭೀರತೆ ಬೆಳೆಸಿಕೊಂಡ ಗಂಡ ತೋಟ ನೋಡಿಕೊಳ್ಳತೊಡಗಿದ್ದರಿಂದ, ಲಹರಿಗೆ ತಾನೊಬ್ಬಳೇ ಕ?ಪಡುತ್ತಿಲ್ಲ ಎಂಬ ಸಮಾಧಾನದ ಜೊತೆಗೆ, ಅವನ ಹೊರಗಡೆಯ ತಿರುಗಾಟಕ್ಕೆ ಕಡಿವಾಣ ಬಿತ್ತಲ್ಲ ಎಂದು ಸಂತಸವೂ ಆಯಿತು. ಆ ಮಧ್ಯೆಯೇ ಲಹರಿಯ ಎರಡನೇ ಬಾಣಂತನವೂ ಅತ್ತೆಯ ಮನೆಯಲ್ಲೇ ಅಮ್ಮ ಮತ್ತು ದೂರದ ಸಂಬಂಧಿ ಅಜ್ಜಿಯ ನೆರವಿನಲ್ಲಿ ನಡೆದುಹೋಗಿ, ಅವಳು ಮೈಮುರಿಯುವ ಕೆಲಸಕ್ಕೆ ಮತ್ತೆ ಸಜ್ಜಾಗುವ ವೇಳೆಗೆ ಹೆಚ್ಚು ಅಂತರವಿಲ್ಲದ ಎರಡು ಮಕ್ಕಳೂ ಮಡಿಲೇರಿಬಿಟ್ಟಿದ್ದವು.
ಗಂಡ ಜವಾಬ್ದಾರಿ ಕಲಿತ ಎಂಬ ಲಹರಿಯ ಸಮಾಧಾನ ಹೆಚ್ಚು ಸಮಯ ಉಳಿಯಲಿಲ್ಲ. ವ?ದೊಳಗೆ ತನ್ನೆಲ್ಲಾ ಜವಾಬ್ದಾರಿ ಮತ್ತು ಗಂಭೀರತೆಯ ಪೊರೆಯನ್ನು ಕೊಂಚಕೊಂಚವೇ ಕಳಚಿ ಹೊರಬಂದ ರಾಮಚಂದ್ರ ನಿಧಾನವಾಗಿ ಮತ್ತೆ ಹೊರಗೆ ಅಡ್ಡಾಡುವ ತನ್ನ ಹಿಂದಿನ ಚಾಳಿಗೆ ಮರಳಿದ. ಇದರಿಂದ ಲಹರಿಗೆ ಗಾಬರಿಯೇ ಆಯಿತು. ಏಕಾಂತದ ರಾತ್ರಿಗಳು ವೈಮನಸ್ಸಿನ ವಾದವಿವಾದಕ್ಕೆ ಮೀಸಲಾದಾಗ ರಾಮಚಂದ್ರ ಹೊರಹೋಗುವುದನ್ನು ಸ್ವಲ್ಪ ಕಡಮೆಮಾಡಿ, ಮನೆಯ ಜಗಲಿಯನ್ನೇ ತನ್ನ ಅಖಾಡ ಮಾಡಿಕೊಂಡು ಎಲೆಅಡಿಕೆ ಅಗಿಯುತ್ತಾ, ಚಹಾ ಹೀರುತ್ತಾ ಸ್ನೇಹಿತರೊಂದಿಗೆ ತನ್ನ ಒಡ್ಡೋಲಗ ಮುಂದುವರಿಸಿದ. ಇದರಿಂದ ಚಹಾ ಸಪ್ಲೈ ಮಾಡುವ ಹೆಚ್ಚುವರಿ ಕೆಲಸ ತಗಲಿ, ಲಹರಿಗೆ ಇವನು ಹೊರಗೆ ಹೋಗಿದ್ದರೇ ಉತ್ತಮವಿತ್ತು ಎನಿಸತೊಡಗಿದ್ದು ಸುಳ್ಳಲ್ಲ.
ಲಹರಿಗೆ ತೋಟದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ, ಅದರ ಪರಿಸ್ಥಿತಿ ಚೆನ್ನಾಗಿಲ್ಲವೆಂಬುದು ಮಾತ್ರ ಅರಿವಾಗಿತ್ತು. ರಾಮಚಂದ್ರ ದಿನಾ ಬೆಳಗ್ಗೆ ಹಾಗೊಮ್ಮೆ ತೋಟ ಅಡ್ಡಾಡಿ ಬರುವುದು ಬಿಟ್ಟರೆ, ಕೈ ಮಣ್ಣು ಮಾಡಿಕೊಳ್ಳಲು ಸಿದ್ಧನಿರಲಿಲ್ಲ. ಆ ಕೊರತೆ ತುಂಬಲು ಬೇಕಾದ ಕೆಲಸದ ಆಳುಗಳೂ ಸಿಗುತ್ತಿರಲಿಲ್ಲ. ಸಿಕ್ಕರೆ ಅವರಿಂದ ಸರಿಯಾದ ರೀತಿಯಲ್ಲಿ ಕೆಲಸ ತೆಗೆಯುವುದಾಗಲೀ, ಅವರಿಗೆ ಒಳ್ಳೆಯ ಕೂಲಿ ಕೊಡುವ ಧನಬಲವಾಗಲಿ ಅವನಲ್ಲಿ ಇರಲಿಲ್ಲ. ಅಡಿಕೆ ಕೊಯ್ಲಿಗೆ ಬಂದಾಗ ಕೊಂಚ ಆಸಕ್ತಿ ವಹಿಸುತ್ತಿದ್ದನೇ ಹೊರತು, ಉಳಿದ ಸಮಯದಲ್ಲಿ ತೋಟದ ಏಳಿಗೆಗಾಗಿ ಏನೂ ಮಾಡುತ್ತಿರಲಿಲ್ಲ. ಲಹರಿಗೆ, ಒಮ್ಮೊಮ್ಮೆ ತಾನೇ ಕೊಂಚ ತೋಟದ ಕಡೆಗೆ ಗಮನಕೊಟ್ಟರೆ ಹೇಗೆ ಎಂಬ ಯೋಚನೆ ಬರುತ್ತಿತ್ತಾದರೂ, ಹಾಗೇನಾದರೂ ತಾನು ತೋಟದ ಬಗ್ಗೆ ಕೊಂಚ ಆಸಕ್ತಿ ತೋರಿಸಿದರೂ, ರಾಮಚಂದ್ರ ಸಂಪೂರ್ಣವಾಗಿ ತೋಟವನ್ನು ತನ್ನ ಸುಪರ್ದಿಗೇ ಹೊರಿಸಿ, ಸೋಮಾರಿ ಸಂಘದ ಅಧ್ಯಕ್ಷನಾದಾನು ಎಂಬ ಭಯದಿಂದಲೂ, ತಾನೇ ಕಣ್ಣಾರೆ ಕಂಡಿದ್ದ ಅತ್ತೆಯ ಬಿಡುವಿರದ ಜೀವನದ ನೆನಪಿನಿಂದ ಹುಟ್ಟಿದ ನಡುಕದಿಂದಲೂ ಆ ಗೊಡವೆಯೇ ಬೇಡವೆಂದು ಸುಮ್ಮನಾಗಿದ್ದಳು.
* * * * *
ಇಂದು ಬೆಳಗ್ಗೆಯಿಂದಲೇ ಹೊರಗೆ ಚಾವಡಿಯಲ್ಲಿ ಯಾರೋ ನಾಲ್ಕು ಜನರ ಜೊತೆಗೆ ಕುಳಿತು ರಾಮಚಂದ್ರ ಗುಸುಗುಸು ಮಾತನಾಡುತ್ತಿದ್ದ. ದೊಡ್ಡ ಬಾಯಲ್ಲಿ ಹರಟುವ ಅವನು ಮತ್ತು ಅವನ ಸೋಮಾರಿ ಬಳಗ ಇಂದು ಪಿಸುದನಿಯಲ್ಲಿ ಸಮಾಲೋಚನೆ ನಡೆಸಿರುವುದು ಲಹರಿಗೆ ಕುತೂಹಲದ ಜೊತೆಗೆ ಕೊಂಚ ಆತಂಕವನ್ನೂ ಉಂಟುಮಾಡಿತು. ಏನೋ ಚುನಾವಣೆಗೆ ಸಂಬಂಧಿಸಿದ ವಿ?ಯವೇ ಆಗಿರುತ್ತದೆ ಎಂಬುದಂತೂ ಅವಳಿಗೆ ತಿಳಿದಿತ್ತು. ರಾಮಚಂದ್ರನನ್ನು ಹೊಕ್ಕಿದ್ದ ಈ ರಾಜಕೀಯದ ಹೊಸ ಹುಚ್ಚು ಅವಳಲ್ಲಿ ಅಸಹನೆ ಮೂಡಿಸಿತು. ಇಂದು ಒಂದು ಬಾರಿಯೂ ರಾಮಚಂದ್ರ ಚಹಾಕ್ಕೆ ಕರೆಕಳಿಸದೇ ಇರುವುದನ್ನು ಕಂಡು ಚಹಾವನ್ನೇ ಮರೆಸುವ?ರ ಮಟ್ಚಿಗಿನ ಗಹನವಾದ ಮಾತುಕತೆ ಏನಿರಬಹುದು ಎಂಬ ಆಶ್ಚರ್ಯ ಮೂಡಿ, ಮೊದಲ ಬಾರಿಗೆ ಅವನು ಕೇಳದೆಯೇ ಚಹಾ ತಂದಳು ಲಹರಿ. ನಡೆಯುತ್ತಿದ್ದ ಮಾತುಕತೆ ಚಕ್ಕನೆ ನಿಂತಿತು. ಇದರಿಂದ ಮತ್ತ? ಕುತೂಹಲ ಹೆಚ್ಚಿ, ಅವರೆಲ್ಲಾ ಹೊರಟೊಡನೆ ರಾಮಚಂದ್ರನನ್ನು ಈ ಬಗ್ಗೆ ಕೇಳಬೇಕೆಂದು ನಿರ್ಧರಿಸಿದಳು.
*****
ರಾಮಚಂದ್ರನಿಗೆ ಹೆಂಡತಿ ಕೇಳದೆಯೇ ಚಹಾ ತಂದಾಗಲೇ ತಾನು ಇನ್ನು ಅವಳ ಪ್ರಶ್ನೆ ಎದುರಿಸಲು
ಸಿದ್ಧನಾಗಬೇಕು ಎಂಬುದು ತಿಳಿಯಿತು. ಚಹಾ ಹೀರಿ ಅವನ ನಾಲ್ಕೂ ಮಂದಿ ಗೆಳೆಯರು ಹೊರಟಾಗ ಅವನೂ ಎದ್ದು ತೋಟದತ್ತ ಹೊರಟ. ಏನೋ ಕೆಲಸವಿತ್ತು ಎಂದಲ್ಲ; ಒಂಟಿಯಾಗಿ ಸಿಕ್ಕೊಡನೆ ಹೆಂಡತಿ ಕೇಳುವ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ, ಮತ್ತು ಸರಿಯಾದ ಉತ್ತರವಿನ್ನೂ ಅವನಲ್ಲಿ ಸಿದ್ಧವಾಗಿರಲಿಲ್ಲವಾದ್ದರಿಂದ ಅವಳಿಂದ ತಪ್ಪಿಸಿಕೊಳ್ಳಲು.
ಅಣ್ಣಂದಿರು ತೋಟದ ಜವಾಬ್ದಾರಿಯನ್ನು ಸಂಪೂರ್ಣ ಅವನಿಗೇ ಬಿಟ್ಟಿದ್ದರು. ಅದರ ಸಂಪಾದನೆಗೂ ಕೈ ಚಾಚುತ್ತಿರಲಿಲ್ಲ, ಅದರ ತೊಂದರೆಗೂ ತಲೆ ಒಡ್ಡುತ್ತಿರಲಿಲ್ಲ. ವ?ದಲ್ಲಿ ಒಂದೆರಡು ಬಾರಿ ರಜೆಯಿದ್ದಾಗ ಕುಟುಂಬದೊಂದಿಗೆ ಬಂದು ಕೆಲದಿನಗಳ ಮಟ್ಟಿಗೆ ಯಾರದೋ ಫಾರ್ಮ್ಹೌಸ್ನಲ್ಲಿ ಇದ್ದಂತೆ ಇದ್ದು ಹೋಗುತ್ತಿದ್ದರು. ಅವರಿಗೂ ಆ ತೋಟಕ್ಕೂ, ಆ ಮನೆಗೂ ಇದ್ದ ಸಂಬಂಧ ಅ? ಎಂಬಂತಾಗಿತ್ತು. ಹೀಗಾಗಿ, ತೋಟದ ಇಂದಿನ ಸ್ಥಿತಿ, ದುಃಸ್ಥಿತಿಗೆ ಅವನೇ ಸಂಪೂರ್ಣ ಜವಾಬ್ದಾರನಾಗಿದ್ದ.
ಅವನಿಗೆ ಅಪ್ಪನ ಕಾಲವೇ ಚೆನ್ನಾಗಿತ್ತು ಎನಿಸಿತು. ಈಗಿರುವುದಕ್ಕಿಂತ ಎರಡರ? ವಿಶಾಲವಾದ ತೋಟ, ಕೆಲಸಗಾರರ ದೊಡ್ಡ ಹಿಂಡು, ಅಂಗಳದ ತುಂಬ ಅಡಿಕೆ ರಾಶಿ….. ರಾಮಚಂದ್ರನ ಮನಸ್ಸು ಆ ವೈಭವದ ದಿನಗಳನ್ನು ನೆನೆಯತೊಡಗಿತು. ಶಂಕರಭಟ್ಟರೆಂದರೆ ಊರಿನಲ್ಲಿ ಎಂಥಾ ಮರ್ಯಾದೆ ಇತ್ತು. ಅವರನ್ನು ಕೇಳದೆ ಊರಲ್ಲಿ ಏನೂ ಕೆಲಸ ಕಾರ್ಯ ನಡೆಯುತ್ತಿರಲಿಲ್ಲ. ಊರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಬಹುತೇಕ ಆಭರಣಗಳು ತನ್ನಪ್ಪನ ಕೊಡುಗೆ ಎಂಬುದನ್ನು ನೆನೆದಾಗ ಅವನಿಗೆ ಹೆಮ್ಮೆ ಎನಿಸಿತು, ಅದಕ್ಕೇ ಈಗಲೂ ತಮ್ಮ ಮನೆಗೇ ಧರ್ಮದರ್ಶಿಯ ಪಟ್ಟ. ಆದರೆ, ಆ ಧರಣಪ್ಪ ಎಂತಹ ಕೊಬ್ಬಿನ ಮಾತು ಆಡಿದ….. ರಾಮಚಂದ್ರನಿಗೆ ಧರಣಪ್ಪ ಶೆಟ್ಟಿಯನ್ನು ನೆನೆದು ಕೋಪ ಉಕ್ಕಿತು.
ನವರಾತ್ರಿ ಉತ್ಸವದ ಬಳಿಕ ದೇವಸ್ಥಾನದ ಜೀರ್ಣೊದ್ಧಾರದ ಮಾತುಕತೆ ಸಂದರ್ಭದಲ್ಲಿ ಎಲ್ಲರ
ಎದುರಿಗೆ ಕುಹಕವಾಡಿದ್ದನಲ್ಲ…. “ಹಳೆಕಾಲ ಎಲ್ಲ ಆಯ್ತು, ದೇವಸ್ಥಾನಕ್ಕೆ ಯಾರಿಂದ ನಿಜವಾಗಿ ಸಹಾಯ ಆಗ್ತದೋ ಅವರನ್ನು ಜೀರ್ಣೋದ್ಧಾರ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ. ಅದು ಬಿಟ್ಟು, ಅಪ್ಪನ ಅಜ್ಜನ ಕಾಲದ ಕಥೆ ಹೇಳುವವರಿಗೆ ಅಧಿಕಾರ ಕೊಟ್ಟರೆ ಉಪಯೋಗ ಉಂಟಾ?” ಎಂದು ನಗೆಯಾಡಿದ್ದ.
ಈಗಾಗಲೇ ರಾಜಕೀಯದಲ್ಲಿ ಸಾಕ? ಹೆಸರು ಮಾಡಿದ್ದ, ಮುಂದೆ ಎಂ.ಎಲ್.ಎ. ಟಿಕೆಟ್ ಸಿಗುವ
ಎಲ್ಲ ಲಕ್ಷಣಗಳಿದ್ದ ಧರಣಪ್ಪನ ಮಾತನ್ನು ಎಲ್ಲರೂ ಮೌನವಾಗಿ ಒಪ್ಪಿ, ಕೊನೆಗೆ ಅವನನ್ನೇ ಅಧ್ಯಕ್ಷನನ್ನಾಗಿ ಮಾಡಿದ್ದರು.
ತನ್ನನ್ನೇ ನೇರವಾಗಿ ಗುರಿಯಾಗಿಸಿ ಹೇಳಿದ ಧರಣಪ್ಪನ ಮಾತಿನಿಂದ ರಾಮಚಂದ್ರನಲ್ಲಿ ಭುಗಿಲೆದ್ದ
ಸಿಟ್ಟು ಎ? ಹೆಚ್ಚಿತ್ತೆಂದರೆ, ಯಾರು ಏನೇ ಹೇಳಿದರೂ ಸಮಿತಿಯಲ್ಲಿ ಸದಸ್ಯನಾಗಲೂ ಆತ ಒಪ್ಪಲಿಲ್ಲ. ಜೊತೆಗೆ ಧರಣಪ್ಪ, ’ಮನೆ ನಡೆಸಲಿಕ್ಕೆ ಒದ್ದಾಡುತ್ತಿರುವವರು ದೇವಸ್ಥಾನ ರಿಪೇರಿ ಮಾಡಲಿಕ್ಕುಂಟಾ?’ ಎಂದು ಅವರಿವರ ಬಳಿ ಹೇಳಿದ್ದೂ ಇವನ ಕಿವಿಗೆ ಬಿದ್ದಿತ್ತು. ಅವಮಾನದಿಂದ ಕಂಗೆಟ್ಟ ಅವನಲ್ಲಿ ಹೇಗಾದರೂ ಮಾಡಿ ತಮ್ಮ ಮನೆಯ ಅಂತಸ್ತು ಗೌರವ ತನ್ನ ಅಪ್ಪನ ಕಾಲಕ್ಕೆ ಮುಗಿಯಲಿಲ್ಲ ಎಂಬುದನ್ನು ತೋರಿಸುವ ಛಲ ಹುಟ್ಟಿತ್ತು.ಬಣ್ಣಬಣ್ಣದಲಿ ಚೆಲುವ ತೋರುವ ಬೆಟ್ಟದಾವರೆಕಣ್ಣಿಗೆ ತಂಪನಿತ್ತರೇನು ಸುವಾಸನೆಯ ಸೂಸುವುದೇ? ಹೆಣ್ಣಿನಲು ಗಂಡಿನಲು ಒಂದೊಂದೂನವನಿಟ್ಟುನೆಣೆವಡುವುದೆ ವಿಧಿಯಾಟ – ತಮ್ಮವಿಧಿಯಾಟ
ಆದರೆ, ಧರಣಪ್ಪ ಹೇಳಿದ ಮಾತಂತೂ ನಿಜವಿತ್ತು. ಹಳೆಯ ಕಥೆ ಹೇಳಿಕೊಂಡು ಇನ್ನು ಮರ್ಯಾದೆ ಪಡೆಯುವುದು ಕ?. ಅದನ್ನು ಮತ್ತೆ ತಾನು ಸಂಪಾದಿಸಬೇಕಿದೆ. ಅಪ್ಪ ಇದ್ದಾಗ ಮನೆಯ ಅಂಗಳದಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ತಾಳಮದ್ದಲೆ, ಅಕ್ಕಪಕ್ಕದ ಊರಿನವರನ್ನೂ ಸೆಳೆಯುತ್ತಿದ್ದ ಹರಕೆ ಆಟ, ಊರಿಗೆಲ್ಲಾ ಊಟಕ್ಕೆ ಕರೆಯುವಂತಹ ಗಣಹೋಮ…. ಇವೆಲ್ಲಾ ಈಗ ನಿಂತೇ ಹೋಗಿತ್ತು. ಇವನ್ನೆಲ್ಲಾ ಮತ್ತೆ ಸಾಧಿಸಲು ಹಣ ಮತ್ತು ಅಧಿಕಾರ ಎರಡೂ ಬೇಕಿತ್ತು. ಅವೆರಡನ್ನೂ ಸಂಪಾದಿಸಲು ಇದ್ದ ಒಂದೇ ಮಾರ್ಗ ರಾಜಕೀಯ.
ಈಗಾಗಲೇ ಬ್ಯಾಂಕ್ನಲ್ಲಿ ಸಾಧ್ಯವಿರುವ ಎಲ್ಲ ಸಾಲ ತೆಗೆದುಕೊಂಡಿದ್ದ ಅವನ ಹಣಕಾಸಿನ ಸ್ಥಿತಿ ಹಗ್ಗದ ಮೇಲಿನ ನಡಿಗೆಯಾಗಿತ್ತು. ಹೀಗಿರುವಾಗ ಮತ್ತೆ ಸಾಲಪಡೆದು ಚುನಾವಣೆಗೆ ನಿಲ್ಲುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿಯೇ, ಕಳೆದು ಎರಡು ಮೂರು ವ?ಗಳಿಂದ ಮನದೊಳಗೆ ಆಗಾಗ ಹೆಡೆ ಎತ್ತುತ್ತಿದ್ದ ತೋಟ ಮಾರುವ ನಿರ್ಧಾರ ಗಟ್ಟಿ ರೂಪ ಪಡೆಯತೊಡಗಿದ್ದು. ಇವತ್ತು ಸದಾನಂದ ಹೇಳಿದ ಮಾತನ್ನು ನಂಬುವುದಾದರೆ ತನ್ನ ತೋಟಕ್ಕೆ ಒಳೆಯ ಬೆಲೆಯೇ ಸಿಗಲಿದೆ. ಯಾರೋ ಬೆಂಗಳೂರು ಗಿರಾಕಿ ತೋಟ ಕೊಂಡು ಮಣ್ಣಿಗೆ ಮರಳುವ ಹುಂಬ ಉತ್ಸಾಹದಲ್ಲಿದ್ದಾನೆ. ರಾಮಚಂದ್ರನ ಮುಖದಲ್ಲಿ ಹುಸಿನಗೆ ಮೂಡಿತು. ಎ.ಸಿ. ಆಫೀಸಿನಲ್ಲಿ ಕೂತು ಕೈತುಂಬಾ ಸಂಬಳ ಎಣಿಸಿಕೊಳ್ಳುವ ಬದಲು ಇಲ್ಲಿ ಬಂದು ಕತ್ತಿ ಹಿಡಿದು, ಬೆವರುತ್ತಾ ತೋಟ ಸುತ್ತುವುದು ಇಂದೆಂತಾ ಹುಚ್ಚಪ್ಪ ಕೆಲವರಿಗೆ…. ಬರಲಿ ಕೆಲಸದವರು ಸಿಗದೆ ಉದ್ದನೆ ಅಡಿಕೆಮರ ಎದೆ ಮೇಲೆ ಕುಳಿತಂತೆ ಎನಿಸುವಾಗ ಈ ಹಸಿರು, ಹಳ್ಳಿ, ಮಣ್ಣು ಎಂಬ ಭ್ರಮೆ ಹರಿಯುತ್ತದೆ ಎಂದುಕೊಂಡ.
*****
ರಾತ್ರಿ ಊಟ ಮುಗಿಸಿ ಅಡುಗೆಮನೆ ಚೊಕ್ಕ ಮಾಡುವ ಕೆಲಸ ನಾಳೆಗೆ ಮುಂದೂಡಿ ಲಹರಿ ರೂಮಿಗೆ ಬಂದಾಗ ರಾಮಚಂದ್ರ ಸೂರು ನೋಡುತ್ತಾ ಮಲಗಿದ್ದ. ಮಂಚ ಏರಿದವಳೇ ಈಗ ಹೇಳಿ ಎಂಬಂತೆ ಅವನನ್ನೇ ದಿಟ್ಟಿಸತೊಡಗಿದಳು. ರಾಮಚಂದ್ರ ಸುತ್ತಿ ಬಳಸದೆ ನೇರವಾಗಿ ’ತೋಟ ಮಾರುವ ಅಂತ ಇದ್ದೇನೆ’ ಎಂದ. ಲಹರಿ ಏನೇನೋ ಊಹಿಸಿದ್ದರೂ ಇದನ್ನು ಮಾತ್ರ ಊಹಿಸಿರಲೇ ಇಲ್ಲ. ತನ್ನ ಅಣ್ಣಂದಿರಂತೆ ಬೆಂಗಳೂರಿನ ಹಾದಿ ಹಿಡಿಯದೆ ರಾಮಚಂದ್ರ ಹಳ್ಳಿಯಲ್ಲೇ ಉಳಿದಿರುವುದಕ್ಕೆ ಮೊದಲಿಗೇನೋ ಅವಳು ಮಣ್ಣಿನ ಮೇಲಿನ ಪ್ರೀತಿ ಎಂದು ಊಹಿಸಿದ್ದಳು. ಆದರೆ, ನಿಧಾನವಾಗಿ ಅವನಿಗೆ ಬೆಂಗಳೂರಿನಂತಹ ನಗರದಲ್ಲಿ ಹೋರಾಡಿ ಬದುಕು ರೂಪಿಸಿಕೊಳ್ಳುವ ಕೆಚ್ಚಿಲ್ಲ ಎಂಬುದು ಅರಿವಾಗಿತ್ತು. ಗುರಿಕಾಡಿನಲ್ಲಿ ಅಪ್ಪ ಶಂಕರಭಟ್ಟರ ಹೆಸರಿನಲ್ಲಿ ಸಿಗುವ ರೆಡಿಮೇಡ್ ಮರ್ಯಾದೆಯನ್ನು ಬಿಟ್ಟು ಜಾತಿ, ಅಂತಸ್ತು, ಕುಟುಂಬ ಹಿನ್ನಲೆಗಳಿಂದ ಹುಟ್ಟಿದ ಅಹಂಅನ್ನು ಮಟ್ಟಸಗೊಳಿಸುವ ಬೆಂಗಳೂರಿನಲ್ಲಿ ಅನಾಮಧೇಯನಂತೆ ಬದುಕಬೇಕೆಂಬ ಕಲ್ಪನೆಯೇ ಅವನಿಗೆ ಗಾಬರಿ ಹುಟ್ಟಿಸುತ್ತಿತ್ತು. ಬೆಂಗಳೂರಿಗೆ ಹೋಗಿದ್ದಾಗೊಮ್ಮೆ ಅಲ್ಲಿನ ಯಾವುದೋ ಮಾಲ್ನಲ್ಲಿ ಸೆಕ್ಯುರಿಟ್ ಚೆಕ್ ಮಾಡಿದಾಗ ಅವನು
ತೀರಾ ಇರುಸುಮುರುಸುಗೊಂಡಿದ್ದ. ಊರಿನಲ್ಲಿ ಎಲ್ಲೇ ಹೋಗಲಿ ಇವನನ್ನು ಕಂಡು ಬನ್ನಿ ಎಂದು ಕೈಮುಗಿದು ಕರೆದು ಕುಳ್ಳಿರಿಸುವ ಜನಗಳಿಗೆ ಒಗ್ಗಿದವನು ಅವನು. ಬೆಂಗಳೂರಿನಲ್ಲಿ ಎಲ್ಲರನ್ನೂ ಕಳ್ಳರಂತೆ, ಕೊಲೆಗಾರರಂತೆ ಚೆಕ್ ಮಾಡುತ್ತಾರೆ ಎಂದು ಗೊಣಗಿದ್ದ.
ಇದೆಲ್ಲಾ ತಿಳಿದದ್ದರಿಂದಲೇ ಲಹರಿಗೆ ಅವನ ಹಳ್ಳಿ ಪ್ರೀತಿಗೆ ಕಾರಣವಾದ ಈ ಪೊಳ್ಳು ಮರ್ಯಾದೆ,
ಸಿದ್ಧ ಗುರುತು, ಮಂದಗತಿಯ ಬದುಕನ್ನು ಬಿಟ್ಟು ಎಂದೂ ಹೊರ ಹೋಗಲಾರ ಎಂಬುದು ಅವಳ ವಿಶ್ಲೇ?ಣೆಯಾಗಿತ್ತು. ಹೀಗಾಗಿ, ರಾಮಚಂದ್ರ ಈಗ ತೋಟ ಮಾರುತ್ತೇನೆಂದಾಗ ಅವಳು ಮೆಟ್ಟಿಬಿದ್ದಳು. ಇರುವ ತೋಟವನ್ನೂ ಮಾರಿ ಚುನಾವಣೆಗೆ ನಿಲ್ಲುವ ಅವನ ಯೋಚನೆ ಕೇಳಿದ್ದೇ ರೊಚ್ಚಿಗೆದ್ದಳು. “ಹುಚ್ಚಾ
ನಿಮಗೆ? ತೋಟ ಮಾರಿದರೆ ಹೊಟ್ಟೆಗೆ ಎಂತ ತಿನ್ನೂದು? ಅಲ್ಲಿ ಬಸ್ಟ್ಯಾಂಡ್ನಲ್ಲಿ ಬಿಡಾರ ಹಾಕೂದಾ?” ಎಂದು ಸ್ವಲ್ಪ ಕಿರುಚಿದಂತೆಯೇ ಕೇಳಿದಳು.
ರಾಮಚಂದ್ರ ಲಹರಿಗೆ ಇಷ್ಟವಾಗುವ ರೀತಿಯಲ್ಲಿ ತನ್ನ ಯೋಜನೆ ಬಿಚ್ಚಿಟ್ಟ. ತೋಟ ಮಾರಿ ಬಂದ ದುಡ್ಡಲ್ಲಿ ಎಲ್ಲಾ ಸಾಲ ತೀರಿಸುವುದು, ಚುನಾವಣೆಯ ವೆಚ್ಚಕ್ಕಾಗಿ ಕೊಂಚ ಎತ್ತಿ ಇಡುವುದು. ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿಡುವುದು. ಉಳಿದ ಹಣದಲ್ಲಿ ಸುಳ್ಯದಲ್ಲಿ ಒಂದು ಸಾಧಾರಣ ಮನೆ ಕೊಳ್ಳುವುದು. ತಾನು ಚುನಾವಣೆ ಗೆದ್ದ ನಂತರ ತಾಲ್ಲೂಕು ಕೇಂದ್ರದಲ್ಲಿ ಮನೆ ಮಾಡುವುದೇ ಹೆಚ್ಚು ಸೂಕ್ತ. ರಾಜಕೀಯದಲ್ಲಿ ಬೆಳೆಯಲು ಮತ್ತು ಯಾವುದಾದರೋ ಬ್ಯುಸಿನೆಸ್ ಆರಂಭಿಸಲು ಇದರಿಂದ ಸಹಾಯವಾಗುತ್ತದೆ. ಇವೆಲ್ಲದರ ಮಧ್ಯದಲ್ಲಿ ಈಗಾಗಲೇ ಲೆಕ್ಚರರ್ ಆಗಿ ಅನುಭವ ಇರುವ ಲಹರಿ ಸುಳ್ಯದಲ್ಲಿ ಮತ್ತೆ ಕೆಲಸಕ್ಕೆ ಸೇರಬಹುದು.
ಲಹರಿಗೆ ಕೂಡಲೇ ಏನು ಹೇಳಬೇಕೋ ತಿಳಿಯದಾಯಿತು. ತನ್ನ ಜೀವಮಾನ ಇನ್ನು ಏನಿದ್ದರೂ ಈ ಗುರಿಕಾಡೆಂಬ ಕೊಂಪೆಯಲ್ಲೇ ಎಂದು ರಾಜಿ ಮಾಡಿಕೊಂಡಿದ್ದವಳ ಮುಂದೆ ರಾಮಚಂದ್ರ ಊಹಿಸದಂತಹ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದ. ಲಹರಿಯ ನಿದ್ದೆ ಹಾರಿಹೋಗಿತ್ತು. ಹಳ್ಳಿಯ ಜೀವನದ ಬಗ್ಗೆ ರೊಮ್ಯಾಂಟಿಕ್ ಕಲ್ಪನೆಗಳಿದ್ದ ಲಹರಿಗೆ ಮದುವೆಯಾದ ಎರಡು ವ?ದಲ್ಲೇ ರಾಮಚಂದ್ರನ ಕೈಹಿಡಿದು ತಾನೆಂತಹ ಹಳ್ಳಕ್ಕೆ ಬಿದ್ದೆ ಎಂಬ ಅರಿವಾಗಿತ್ತು. ಅತ್ತೆ ಹಾಸಿಗೆ ಹಿಡಿದ ಮೇಲೆ ಒಂದುದಿನದ ಮಟ್ಟಿಗೆ ತವರಿಗೆ ಹೋಗುವುದೂ ಕೂಡ ಸಾಧ್ಯವಿಲ್ಲದಂತೆ ಆ ಹಳ್ಳಿಮನೆ ಅವಳನ್ನು
ಸಂಪೂರ್ಣ ಕಟ್ಟಿಹಾಕಿ, ಜೀತದಾಳನ್ನಾಗಿಸಿಕೊಂಡಿತ್ತು.
ಹಳ್ಳಿಯೊಳಗಿದ್ದೂ ಅದರೊಳಗೆ ಒಂದಾಗಲಾರದೆ, ಒಂದು ರೀತಿಯ ನಿರ್ಲಿಪ್ತ, ಭಾವರಾಹಿತ್ಯ ಸ್ಥಿತಿಯಲ್ಲಿ
ಬದುಕುತ್ತಿದ್ದ ಲಹರಿಗೆ ಈಗ ರಾಮಚಂದ್ರ ತೋರಿಸಿದ ಹೊಸ ಆಸೆಯನ್ನು ಸಾರಾಸಗಟಾಗಿ ತಳ್ಳಿಹಾಕುವುದು ಸಾಧ್ಯವಾಗಲಿಲ್ಲ.
ಅವಳಿಗೆ ಒಂದು ವಾಸ್ತವದ ಅರಿವಂತೂ ಇತ್ತು, ರಾಮಚಂದ್ರನಿಗೆ ರಾಜಕೀಯ ಅಥವಾ ಬ್ಯುಸಿನೆಸ್ಗೆ ಬೇಕಾದ ಬುದ್ಧಿಯಾಗಲೀ, ಅದಕ್ಕಾಗಿ ಶ್ರಮಿಸುವ ಹಠವಾಗಲೀ ಇರಲಿಲ್ಲ. ಗಂಡ ಇದನ್ನೆಲ್ಲ ಸಾಧಿಸಿಯಾನೂ ಎಂಬ ಭರವಸೆ ಅವಳಲ್ಲಿ ಕಿಂಚಿತ್ತೂ ಇರಲಿಲ್ಲ. ಆದರೆ, ತಾನು ಮತ್ತೆ ಕೆಲಸಕ್ಕೆ ಸೇರಬಹುದೆಂಬ ರಾಮಚಂದ್ರನ ಸಲಹೆ ಅವಳಲ್ಲಿ ಹೊಸ ಆಸೆ ಮೂಡಿಸಿತ್ತು. ಸುಳ್ಯದಲ್ಲೇ ಮನೆ ಮಾಡಿದರೆ, ಈ ಕತ್ತೆ ದುಡಿತದಿಂದ ಪಾರಾಗಿ, ತಾನು ಮತ್ತೆ ಲೆಕ್ಚರರ್ ಆಗಬಹುದು. ತವರುಮನೆ ಮತ್ತು ಮಕ್ಕಳ ಶಾಲೆ ಸುಳ್ಯವೇ ಆಗಿರುವುದರಿಂದ ಎಲ್ಲ ರೀತಿಯಲ್ಲೂ ಅನುಕೂಲವಾಗುತ್ತದೆ. ರಾಮಚಂದ್ರ ಏನಾದರೂ ಮಾಡಿಕೊಳ್ಳಲಿ, ತಾನು ಮಕ್ಕಳ ಜೀವನವನ್ನಂತೂ ರೂಪಿಸಿಬಲ್ಲೆ ಎಂಬ ವಿಶ್ವಾಸ ಅವಳಲ್ಲಿತ್ತು. ತಮ್ಮಲ್ಲಿಗೆ ಕೂಲಿಗೆ ಬರುವ ಸುಂದರಿಯ ಹಣಕಾಸು ಸ್ಥಿತಿಗಿಂತಲೂ ಹೀನಾಯವಾಗಿರುವ ತಮ್ಮ ಪರಿಸ್ಥಿತಿ; ಆದರೂ ಅದನ್ನು ಒಪ್ಪಿಕೊಳ್ಳಲಾಗದ, ಕಾಪಾಡಿಕೊಳ್ಳಲೇಬೇಕಾದ ಪೊಳ್ಳು ಪ್ರತಿ?, ಇವುಗಳಿಂದೆಲ್ಲ ಮುಕ್ತಿದೊರಕುವ….ಉಸಿರು, ಬಣ್ಣ, ನಾದ ಒಂದೂ ಇಲ್ಲದ ಈ ಜೀವನದಿಂದ ಪಾರಾಗುವ ಅವಕಾಶ ಬಂದಿದೆ ಎಂಬ ಭಾವನೆಯೇ ಅವಳಲ್ಲಿ ನವಿರಾದ ಕಂಪನ ತಂದಿತು. ಹೊಸ ಕನಸುಗಳೊಂದಿಗೆ ಲಹರಿ ನಿದ್ದೆಗೆ ಜಾರಿದಾಗ ರಾತ್ರಿ ಒಂದು ದಾಟಿತ್ತು.
*****
ಮರುದಿನ ಬೆಳ್ಳಂಬೆಳಗ್ಗೆಯೇ ರಾಮಚಂದ್ರ ಕಮಲಮ್ಮನ ಕೋಣೆಗೆ ಹೋದಾಗ ಅವರು ಕೊಂಚ ಆಶ್ಚರ್ಯದಿಂದಲೇ “ಎಂತ ಮಾಣಿ?” ಎಂದರು. ರಾಮಚಂದ್ರ ನಿಧಾನವಾಗಿ ತೋಟದ ಸ್ಥಿತಿ, ಹೆಚ್ಚುತ್ತಿರುವ ಸಾಲ, ಊರಿನಲ್ಲಿ ತಮ್ಮ ಕುಟುಂಬದ ಬಗ್ಗೆ ಕಡಮೆಯಾಗುತ್ತಿರುವ ಮರ್ಯಾದೆ…. ಹೀಗೆ ಒಂದಕ್ಕೊಂದು ಕೊಂಡಿ ಸೇರಿಸುತ್ತಾ ಮಾತನಾಡತೊಡಗಿದ. ತಮ್ಮ ಮಗ ಮೈಮುರಿದು ದುಡಿಯುವವನಲ್ಲ ಎಂಬುದು ಅವರಿಗೆ ಮೊದಲಿಂದ ತಿಳಿದಿದ್ದ ವಿ?ಯವೇ. ಆದರೆ, ಈಗ ತೋಟದ ಸ್ಥಿತಿಯ ಬಗ್ಗೆ ಅವನ ಬಾಯಿಂದಲೇ ಕೇಳಿದ ಮೇಲೆ ಇದೇ ಮೊದಲ ಬಾರಿಗೆ ಕಮಲಮ್ಮ ರೇಗಿದರು.
ಅಮ್ಮನ ಬೈಗುಳವನ್ನೆಲ್ಲಾ ಸುಮ್ಮನೆ ಕೇಳಿದ ರಾಮಚಂದ್ರ. ಕೊನೆಗೆ ಕಮಲಮ್ಮನವರಿಗೆ ಮುಂದೇನು ಎಂಬ ಬಗ್ಗೆ ಯೋಚಿಸಬೇಕು ಎಂಬ ಅರಿವಾಗಿ “ಈಗ ಎಂಥ ಮಾಡಬೇಕು ಹೇಳಿ ಇದ್ದೀಯ?” ಎಂಬ ಪ್ರಮುಖ ಪ್ರಶ್ನೆ ಹಾಕಿದರು. ರಾಮಚಂದ್ರ ತೋಟ ಮಾರಲು ಯೋಚಿಸಿರುವ ಸಂಗತಿ ಅರುಹಿಬಿಟ್ಟ. ನಗನಾಣ್ಯ ಮಾರಬೇಕಾದೀತು ಎಂಬ ಯೋಚನೆಯಲ್ಲಿದ್ದ ಕಮಲಮ್ಮ ನಿರೀಕ್ಷಿಸದ ಈ ಆಘಾತಕ್ಕೆ ತತ್ತರಿಸಿದರು. “ಅಯ್ಯೋ ರಾಮನೇ! ಎಂತ ಮಾಣಿ ನೀನು ಹೇಳುದು? ತೋಟ ಮಾರೂದಾ?” ಎಂದು ದೊಡ್ಡ ಕಂಠದಲ್ಲಿ ಕಿರುಚಿದರು.
ಅದು ಅಡುಗೆಮನೆಯಲ್ಲಿದ್ದ ಲಹರಿಯ ಕಿವಿಯನ್ನೂ ಮುಟ್ಟಿ, ಅವಳು ರೂಮಿನ ಬಾಗಿಲ ಬಳಿ ನಿಂತು ನೋಡತೊಡಗಿದಳು. “ಅಮ್ಮ ಪೂರಾ ಕೇಳು ಮಾರಾಯ್ತಿ” ಎಂದು ಅನುನಯದ ಮೆಲುದನಿಯಲ್ಲಿ ಹೇಳಿದ ರಾಮಚಂದ್ರ, ತೋಟದ ಮೇಲೆ ತಾನು ತೆಗೆದಿರುವ ಸಾಲ ಈಗ ಬೆಳೆದು ನಿಂತಿದ್ದು, ತೀರಿಸದೇ ಹೋದರೆ ತೋಟ ಹರಾಜಾಗುವ ಸ್ಥಿತಿಯಲ್ಲಿ ಇದೆ ಎಂದ. ಅದು ಹರಾಜಾಗಿ ಮಾನಹೋಗುವ ಮೊದಲೇ ತಾವೇ ತೋಟ ಮಾರಿ ಸಾಲ ತೀರಿಸಿದರೆ ಮರ್ಯಾದೆಯಾದರೂ ಉಳಿದೀತು ಎಂದ.
ರಾಮಚಂದ್ರನ ಮಾತು ಕೇಳಿದ್ದೇ ಕಮಲಮ್ಮನ ಕಣ್ಣಿನಿಂದ ನೀರು ಸುರಿಯತೊಡಗಿತು. ಅತ್ತೆಯ ಮುಖ ನೋಡಿದ ಲಹರಿಗೆ ಸಂಕಟವಾಯಿತು. ಅವಳೆಂದೂ ಅತ್ತೆ ಅಳುವುದನ್ನು ನೋಡಿದವಳಲ್ಲ. ಅತ್ಯಂತ ಗಟ್ಟಿ ಹೆಂಗಸಾದ ಅವಳ ಅತ್ತೆ ಶಾಶ್ವತವಾಗಿ ಹಾಸಿಗೆ ಹಿಡಿದಾಗಲೂ ತಮ್ಮ ಸ್ಥಿತಿಯನ್ನು ನೆನೆದು ಕಣ್ಣೀರಿಟ್ಟವರಲ್ಲ. ರಾಮಚಂದ್ರನಿಗೂ ಅಮ್ಮ ಒಮ್ಮೆಲೇ ಸುಮ್ಮನಾದದ್ದು, ಕಣ್ಣೀರು ಸುರಿಸಲು ಆರಂಭಿಸಿದ್ದು ನೋಡಿ ಬಾಯಿ ಕಟ್ಟಿಹೋಯಿತು. ಕೆಲ ಕಾಲ ಸುಮ್ಮನೆ ಅಮ್ಮನ ಕೈ ಹಿಡಿದು ಕುಳಿತವನು ನಂತರ ಎದ್ದು ಹೊರಗೆ ನಡೆದ.
ಲಹರಿ ತಿಂಡಿ ತಂದಾಗಲೂ ಕಮಲಮ್ಮ ಒಂದಿಂಚೂ ಕದಲದಂತೆ ಹಾಗೆಯೇ ಕುಳಿತಿದ್ದರು. ಲಹರಿ ಹತ್ತಿರ ಹೋಗಿ “ಅತ್ತೆ, ತಿಂಡಿ ತಕ್ಕೊಳಿ” ಎಂದಾಗಲೂ ಕಮಲಮ್ಮ ಪ್ರತಿಕ್ರಿಯಿಸಲಿಲ್ಲ. ಏನು ಮಾತಾಡಬೇಕೋ ಅರಿಯದೆ ಸುಮ್ಮನೆ ಅಲ್ಲೇ ನಿಂತಳು ಲಹರಿ. ಕಮಲಮ್ಮ “ಮಾಣಿ ಹೇಳಿದ್ದು ನಿಜವಾ?” ಎಂದು ಮೆಲ್ಲನೆ ಕೇಳಿದರು. ಈ ಪ್ರಶ್ನೆಯಿಂದ ಲಹರಿ ಗಲಿಬಿಲಿಗೊಂಡಳು. ಹರಾಜಿನ ಬಗ್ಗೆ ರಾಮಚಂದ್ರ ಹೇಳಿದ್ದು ಸುಳ್ಳು, ಅತ್ತೆಯನ್ನು ಒಪ್ಪಿಸಲು ಹಾಗೆ ಹೇಳಿದ್ದಾನೆ ಎಂಬುದು ಅವಳಿಗೆ ತಿಳಿದಿತ್ತು. ಆದರೆ, ತನ್ನ ಗಂಡ ಅತ್ತೆಯನ್ನು ಮೋಸದಿಂದ ಒಪ್ಪಿಸಲು ಯತ್ನಿಸುತ್ತಿದ್ದಾನೆ ಎಂಬುದನ್ನು ಹೇಗೆ ಒಪ್ಪಿಕೊಳ್ಳಲಿ ಎಂಬ ನಾಚಿಕೆ ಕಾಡಿತು. ಎಲ್ಲಕ್ಕಿಂತ ಮುಖ್ಯವಾಗಿ ಒಳಮನಸ್ಸಿನಲ್ಲೆಲ್ಲೋ ಅತ್ತೆ ತೋಟ ಮಾರಲು ಒಪ್ಪದಿದ್ದರೆ, ಈ ಹಳ್ಳಿಯಿಂದ ಬಿಡುಗಡೆ ಹೊಂದುವ ದಾರಿ ಮುಚ್ಚಿದಂತೆ ಎಂಬ ಎಚ್ಚರಿಕೆಯೂ ಕಾಡುತ್ತಿತ್ತು.
ಹೀಗಾಗಿ, ಲಹರಿ “ಎಂತದೋ ಅತ್ತೆ, ನನಗೆ ಇದೆಲ್ಲಾ ಗೊತ್ತಿಲ್ಲ” ಎಂದಳು. ಆದರೆ, ತಮ್ಮ ಆರ್ಥಿಕಸ್ಥಿತಿ ಚೆನ್ನಾಗಿಲ್ಲ ಎಂಬುದು ಮಾತ್ರ ಸತ್ಯ. ಈ ವ? ಮಕ್ಕಳ ಫೀಸಿಗೆ ತಾನು ಅಪ್ಪ ಅಮ್ಮನ ಬಳಿ ಹಣ ಕೇಳಿದ್ದೆ ಎಂಬುದನ್ನು ತಿಳಿಸಿದಳು. ಅನಂತರ ಲಹರಿಗೆ ತಾನು ಈ ವಿ?ಯ ಹೇಳಬಾರದಿತ್ತು ಎಂಬ ಅರಿವು ಮೂಡಿತು.
ಸೊಸೆ ತವರಿನಿಂದ ಹಣ ಪಡೆದಿದ್ದಾಳೆ ಎಂಬ ಮಾತು ಅವರ ಆತ್ಮಗೌರವಕ್ಕೆ ಮತ್ತು ಅವರು ನಂಬಿಕೊಂಡು ಬಂದಿರುವ ಕುಟುಂಬದ ಗೌರವಕ್ಕೆ ದೊಡ್ಡ ಪೆಟ್ಟು ಕೊಟ್ಟೀತು ಎಂಬ ಜ್ಞಾನೋದಯವಾಯಿತು. ತಪ್ಪು ಮಾಡಿದ ಭಾವದಲ್ಲಿ ಲಹರಿ ಅಲ್ಲಿಂದ ಹೊರಬಂದಳು.
*****
ಒಂದು ದಿನ ಕಳೆದರೂ ಅಮ್ಮ ಮತ್ತೆ ಆ ಕುರಿತು ಏನೂ ಮಾತನಾಡಲೇ ಇಲ್ಲವಲ್ಲ ಎಂಬ ಯೋಚನೆ ರಾಮಚಂದ್ರನಿಗೆ ಹಲವು ಬಾರಿ ಬಂತು. ಆದರೆ, ಒಂದು ರೀತಿಯಲ್ಲಿ ಆಕೆ ಮಾತನಾಡದೇ ಮೌನವಾಗಿ ಉಳಿದು ಬಿಡುವುದು, ಆ ಮೌನವನ್ನೇ ಸಮ್ಮತಿಯಂತೆ ತಾನು ಭಾವಿಸಿಕೊಳ್ಳುವುದೇ ಒಳ್ಳೆಯದು ಎನಿಸಿ ಅವನೂ ಮತ್ತೆ ಆ ವಿ?ಯ ಕೆದಕಲು ಹೋಗಲಿಲ್ಲ. ಲಹರಿಗೆ ಮಾತ್ರ ಅತ್ತೆ ವಿಚಿತ್ರ ರೀತಿಯಲ್ಲಿ ಮೌನವಾಗಿಬಿಟ್ಟದ್ದು ತೋಟ ಮಾರಾಟ ಮಾಡದಂತೆ ರಾಮಚಂದ್ರನ ಮನ ಒಲಿಸುವ ಪ್ರಯತ್ನಕ್ಕೆ ಕೈಹಾಕದೆ ಸುಮ್ಮನಾದದ್ದು ನೋಡಿ ಅರಿವಾಗದಂತಹ ಸಂಕಟವೊಂದು ಕಾಡಿತು. ಅರೆ…. ಇಲ್ಲಿನ ಜೀವನವನ್ನು ದ್ವೇಷಿಸುವ ನನಗೆ ಇವೆಲ್ಲವನ್ನು ತೊರೆದುಹೋಗುವುದು ಕ?ವಾಗುತ್ತಿದೆಯಲ್ಲ. ಏನೇ ಇದ್ದರೂ ಕ?ವೋ ಸುಖವೋ, ಇ?ವೋ ಇಲ್ಲವೋ ಇದೇ ಮನೆಯಲ್ಲಿ ತನ್ನ ಜೀವನದ ಹದಿನೈದು ವ? ಕಳೆದಿರುವುದು ಸುಳ್ಳಲ್ಲ. ಒಂದು ರೀತಿಯ ಅಭ್ಯಾಸವಾಗಿಬಿಟ್ಟಿದೆ…. ಬಂಧವೊಂದು ಬೆಳೆದುಬಿಟ್ಟಿದೆ… ಬದಲಾವಣೆ ಒಳ್ಳೆಯದೇ ಆಗಿದ್ದರೂ ಹಳೆಯದನ್ನು ಬಿಡುವ ಸಂಕಟ ಇದ್ದೇ ಇರುತ್ತದೆ ಎಂಬ ಸಮಜಾಯಿಷಿ ಕೊಟ್ಟುಕೊಂಡಳು.
ಈ ಮಧ್ಯೆ, ಮಧ್ಯವರ್ತಿ ಬಾಬಣ್ಣನೊಂದಿಗೆ ಬೆಂಗಳೂರಿನ ಮಂದಿ ತೋಟ ನೋಡಲು ಬಂದರು. ತೋಟ ಸುತ್ತಿ ಬಂದ ನಂತರ, ಮನೆ ನೋಡುವ ಸಲುವಾಗಿ ಮೆಟ್ಟಿಲೇರತೊಡಗಿದಾಗ ಲಹರಿಗೇಕೋ ಪೆಚ್ಚೆನ್ನಿಸಿತು. ಅವರು ಮನೆ ನೋಡುವ ಮೂಲಕ ನಮ್ಮೊಳಗೆ ಇದುವರೆಗೆ ಅಡಗಿಸಿಟ್ಟುಕೊಂಡಿದ್ದ ಮತ್ಯಾವುದೋ ರಹಸ್ಯ ಗುಪ್ತದ್ವಾರವನ್ನು ತೆರೆದು ಎಲ್ಲವನ್ನೂ ಬಟಾಬಯಲಾಗಿಸಲಿದ್ದಾರೆ ಎಂಬಂತಹ
ವಿಚಿತ್ರ ತಳಮಳ ಅವಳನ್ನು ಕಾಡತೊಡಗಿತು. ಆದರೆ, ಅವರೇಕೋ ಮನೆ ನೋಡಲು ಹಿಂಜರಿದರು. ’ಪರವಾಗಿಲ್ಲ ಬಿಡಿ. ಮುಂದೆ ಸಂಸಾರದ ಜೊತೆಗೆ ಬಂದಾಗ ನೋಡ್ತೇವೆ’ ಎಂದರು. ಲಹರಿಗೇನೋ
ನಿರಾಳವಾದಂತಾಯಿತು.
ಅವರೊಂದಿಗೇ ಹೊರಗೆಹೋದ ರಾಮಚಂದ್ರ ಮನೆಗೆ ಬಂದಾಗ ರಾತ್ರಿಯಾಗಿತ್ತು. “ಪಾರ್ಟಿಗೆ ತೋಟ
ಇ? ಆಗಿದೆ. ಅವರು ನಾಳೆ ರಾತ್ರಿ ಬೆಂಗಳೂರಿಗೆ ಹೊರಡ್ತಾರೆ. ಅವರ ಜೊತೆಯೇ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಅಣ್ಣಂದಿರ ಜೊತೆ ಮಾತುಕತೆ ನಡೆಸಿ ನಿರ್ಧಾರಕ್ಕೆ ಬರುವ ಅಂತ ಇದ್ದೇನೆ” ಎಂದು ಲಹರಿಯನ್ನು ಉದ್ದೇಶಿಸಿ, ಆದರೆ ಅಮ್ಮನಿಗೂ ಕೇಳುವಂತೆ ಹೇಳಿದ.
ಆಗಷ್ಟೇ ಮುಟ್ಟಾಗಿ ಚಾವಡಿಯ ಮೂಲೆ ಆಕ್ರಮಿಸಿಕೊಂಡಿದ್ದ ಲಹರಿಗೆ ಕಳೆದ ಕೆಲವು ದಿನಗಳಿಂದ
ಹೊಟ್ಟೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಂಕಟ ಮತ್ತೆ ಕಾಡತೊಡಗಿತು. ರಾಮಚಂದ್ರ ತನ್ನ ಅನುಮತಿ ಕೇಳುತ್ತಿದ್ದಾನೋ, ಸಲಹೆ ಬಯಸುತ್ತಿದ್ದಾನೋ ಅಥವಾ ಸುಮ್ಮನೆ ವಿ?ಯ ತಿಳಿಸುತ್ತಿದ್ದಾನೋ ಅರಿಯದೆ ಗೊಂದಲವಾಗಿ, ಏನು ಹೇಳಬೇಕೋ ತಿಳಿಯದೆ ಸುಮ್ಮನೆ ಕುಳಿತಳು. ಅವಳ ಮೌನ ಕಂಡು ರಾಮಚಂದ್ರ ಜ್ವಾಲಾಮುಖಿಯಂತೆ ಸಿಡಿದ – “ಎಂಥ ಆಗಿದೆ ಎಲ್ಲರಿಗೂ? ಅಲ್ಲಿ ಅಮ್ಮ ಮಾತಾಡೂದಿಲ್ಲ. ಇಲ್ಲಿ ನಿನ್ನ ಮಾತಿಲ್ಲ. ತೋಟ ಮಾರುವುದು ಬೇಡ ಅಂದ್ರೆ ಬಾಯಿಬಿಟ್ಟು ಹೇಳಿಯಲ್ಲ…..” ಎಂದೂ ಸಿಟ್ಟಿಗೇಳದ ರಾಮಚಂದ್ರನ ಇಂದಿನ ವರ್ತನೆಗೆ ಲಹರಿ ಬೆರಗಾದಳು. ಅವನು ಹೇಳಿದ್ದೇನು? ಬೇಡದಿದ್ದರೆ ಹೇಳಿ ಮಾರುವುದಿಲ್ಲ ಎಂದನಲ್ಲ. ಅತ್ತೆ ಅ? ಬಾರಿ ಹೇಳಿದಾಗಲೂ ಕೇಳದವನು ಯಾಕೆ ಈ ಮಾತು ಅಂದ? ಸಿಟ್ಟಿನ ಭರದಲ್ಲೋ ಅಥವಾ ನಿಜವಾಗಿಯೂ ಅವನಿಗೇ ಈಗ ಮಾರುವುದು ಬೇಡ ಎನಿಸಿದೆಯೋ. ನಾವು ಯಾರಾದರೂ ಸುಡುವುದು ವನದಲಿ ಪುಟ್ಟಿದ ಕಿಚ್ಚುಸುಡುವುದುದರದಲಿ ಪುಟ್ಟಿದ ಕಿಚ್ಚುಸುಡುವುದದು ವನವನಿದು ಮನವಬಿಡಿಭೇದವದೇನುಭಯದಲಿ? – ತಮ್ಮಭೇದವೇನು?
ಬೇಡ ಎನ್ನಲಿ, ಪಟ್ಟು ಹಿಡಿಯಲಿ. ಆಗ ವ್ಯವಹಾರ ಮುಂದುವರಿಸದೇ ಇರುವುದಕ್ಕೆ ಕಾರಣ ಸಿಕ್ಕೀತು ಎಂಬ ಯೋಚನೆಯಲ್ಲಿದ್ದಾನೆಯೇ? ಅವಳಿಗೆ ಯೋಚಿಸಿದ? ರಾಮಚಂದ್ರ ತೋಟ ಮಾರಾಟ ಮಾಡದಿರಲು ಬೇಕಾದ ಕಾರಣ ಹುಡುಕುತ್ತಿದ್ದಾನೆ. ವ್ಯವಹಾರ ಗಟ್ಟಿಯಾಗುವ ಹಂತಕ್ಕೆ ಬಂದಾಗ ಹೆದರಿದ್ದಾನೆ ಎಂಬುದೇ ನಿಜವೆನಿಸತೊಡಗಿತು. ಅವಳಿಗೂ ಯಾಕೋ ಅತ್ತೆ ಒಂದೇ ಒಂದು ಬಾರಿ ಮಾರಬೇಡ ಎಂದು ಬಿಡಲಿ. ಅಲ್ಲಿಗೆ ಎಲ್ಲ ಮುಗಿಯುತ್ತದೆಂಬ ಹಪಾಹಪಿ ಶುರುವಾಯಿತು.
ಅವಳಿಗೆ ನಿಧಾನವಾಗಿ ಸತ್ಯವೊಂದು ಗೋಚರವಾಯಿತು. ಈ ಹಳ್ಳಿಯಿಂದ ತಪ್ಪಿಸಿಕೊಂಡು ಹೊರ ಹೋಗುವ ಸ್ವಾತಂತ್ರ್ಯವೇನೋ ತನಗೆ ಬೇಕಿದೆ. ಆದರೆ, ಹೊರನಡೆದು ಹೊಸದಾಗಿ ಬದುಕು ಕಟ್ಟಿಕೊಳ್ಳಬಲ್ಲೆ ಎಂಬ ಧೈರ್ಯ ಬರುತ್ತಿಲ್ಲ. ಅಲ್ಲಿ ಎದುರಿಸಬೇಕಾದ ಹೊಸ ಸಮಸ್ಯೆ ಸವಾಲುಗಳ ಎದುರು, ಈ ಹಳೆಯ ತೊಂದರೆಗಳೇ ಆಪ್ತವೆನಿಸುತ್ತಿವೆ. ತನ್ನೊಳಗೆ ಅಡಗಿರುವ ಸೋಲುವ ಭಯ, ಬದಲಾವಣೆಯನ್ನು ಒಪ್ಪಿಕೊಂಡು ಸ್ವಾಗತಿಸಲು ಹಿಂಜರಿಯುತ್ತಿದೆ. ಸ್ವತಂತ್ರವಾದ ಭವಿ?ಕ್ಕಿಂತ, ಬಂಧನದ ಈ ಬಾಳೇ ಹೆಚ್ಚು ಅಪ್ಯಾಯಮಾನವೆನಿಸುತ್ತಿದೆ. ರಾಮಚಂದ್ರನೂ ಇದೇ ಮನಸ್ಥಿತಿಯಲ್ಲಿದ್ದಾನೆ. ವ್ಯವಹಾರವನ್ನೇನೋ ಉತ್ಸಾಹದಿಂದ ಆರಂಭಿಸಿದ್ದ. ಆದರೆ, ಅದು ಅಂತಿಮಗೊಳ್ಳುತ್ತಿರುವ ಹಂತದಲ್ಲಿ ಹೆದರಿ ಕೂತಿದ್ದಾನೆ. ತಾನೇ ಆರಂಭಿಸಿದ್ದ ಈ ಪ್ರಕ್ರಿಯೆಯನ್ನು ನಿಲ್ಲಿಸಲಾರದೆ ಅಸಹಾಯನಾಗಿದ್ದ, ಇನ್ಯಾರಾದರೋ ಬಂದು ಜಬ್ಬರಿಸಿ ಕೇಳಲಿ. ನಿಲ್ಲಿಸು… ಎಂದು ಆಜ್ಞೆ ಮಾಡಲಿ ಎಂದು ಕಾಯುತ್ತಿದ್ದಾನೆ. ನಾನು ರಾಮಚಂದ್ರ ಇಬ್ಬರೂ ಹೇಡಿಗಳೇ. ಇಲ್ಲಿದ್ದು ಹೋರಾಡುವ ಛಾತಿಯೂ ಇಲ್ಲ, ಬಿಟ್ಟು ಓಡುವ ಧೈರ್ಯವೂ ಇಲ್ಲ.
*****
ಮರುದಿನ ರಾತ್ರಿ ಬೆಂಗಳೂರಿಗೆ ಹೊರಡಲು ಸಿದ್ಧನಾದ ರಾಮಚಂದ್ರ ಅಮ್ಮನ ಕೋಣೆಗೆ ಹೋದ. ಎರಡು ದಿನದಿಂದ ಮಾತು ನಿಲ್ಲಿಸಿದ್ದ ಕಮಲಮ್ಮ ಹೊದ್ದು ಮಲಗಿದ್ದರು. “ಅಮ್ಮ ಬೆಂಗಳೂರಿಗೆ ಹೊರಟೆ. ನೇರ ದೊಡ್ಡಣ್ಣನ ಮನೆಗೆ ಹೋಗ್ತೇನೆ. ಎಲ್ಲ ನಿರ್ಧರಿಸಿ ಬರಲಿಕ್ಕೆ ಒಂದು ವಾರ ಆದೀತು” ಎಂದ. ಪ್ರತಿಕ್ರಿಯೆ ಬರದಾಗ ಸುಮ್ಮನೆ ಎದ್ದು ಹೊರಬಂದ.
ಕೆಲ ಹೊತ್ತಿನಲ್ಲೇ ಬಂದ ಗಾಡಿ ಅವನನ್ನು ಹತ್ತಿಸಿಕೊಂಡು ಕತ್ತಲಲ್ಲಿ ಮರೆಯಾಯಿತು. ಆಗಲೇ ಒಳಗಿನ ಕೋಣೆಯಿಂದ ಏನೋ ಧಡಾರನೆ ಬಿದ್ದ ಸದ್ದು ಕೇಳಿತು. ಬೆಕ್ಕಿರಬೇಕು ಎಂದು ಭಾವಿಸಿದ ಲಹರಿ ಅಡುಗೆಮನೆಗೆ ಹೋಗಿ ನೋಡುವಂತೆ ಮಗನಿಗೆ ಹೇಳಿ ಚಾವಡಿಯ ಬಾಗಿಲಿನಿಂದಲೇ ಒಳ ಇಣುಕುತ್ತಾ ನಿಂತಳು.
ಮಗ ಸಿದ್ಧಾರ್ಥ “ಎಂತದೂ ಇಲ್ಲಪ್ಪ ಇಲ್ಲಿ?” ಎಂದು ಅಡುಗೆಮನೆಯಿಂದ ಹೊರಗೆ ಬಂದವನೇ, ಅದೇಕೋ ಅಜ್ಜಿಯ ರೂಮಿನತ್ತ ಕಣ್ಣು ಹಾಯಿಸಿದ. ಕಮಲಮ್ಮ ತಮ್ಮ ರೂಮಿನ ಬಾಗಿಲ ಬಳಿ ಬಿದ್ದಿದ್ದರು. ಸಿದ್ಧಾರ್ಥ “ಅಜ್ಜೀ..” ಒಂದು ಕಿರುಚಿದಾಗ ಬೆಚ್ಚಿದ ಲಹರಿ, ತಾನು ಚಾವಡಿ ದಾಟಿ ಒಳಹೋಗುವಂತಿಲ್ಲ, ದೇವರಮನೆ ಅಲ್ಲೇ ನಡುಮನೆಯಲ್ಲಿದೆ. ಅತ್ತೆಯ ರೂಮಿಗೆ ಹೋಗಲು ಕೆಲಸದಾಕೆ ಬಳಸುವ ಹೊರ ಬಾಗಿಲೊಂದಿದೆ ಎಂಬುದನ್ನೆಲ್ಲಾ ಮರೆತು ಅತ್ತೆಯ ಬಳಿ ಓಡಿದಳು. ಕಮಲಮ್ಮ ಮುಖ ಮೇಲಾಗುವಂತೆ ಬಿದ್ದಿದ್ದರು, ಕಳೆದ ಹನ್ನೆರಡು ವ?ದಿಂದ ಇನ್ನೊಬ್ಬರ ಸಹಾಯವಿಲ್ಲದೆ ಮಂಚ ಬಿಟ್ಟು ಇಳಿದಿರದ ಅವರು ಬಾಗಿಲವರೆಗೆ ಹೇಗೆ ಬಂದರು ಎಂಬ ಯೋಚನೆಯಲ್ಲೇ “ಅತ್ತೆ, ಅತ್ತೇ..” ಎಂದು ಅವರನ್ನು ಹಿಡಿದು ಅಲುಗಿಸಿದಳು ಲಹರಿ.
ಉಸಿರಾಡುತ್ತಿರುವ ಲಕ್ಷಣ ಕಾಣಲಿಲ್ಲ. ಎದೆಬಡಿತದ ಸೂಚನೆಯೂ ಇರಲಿಲ್ಲ. ನೀರು ಚುಮುಕಿಸಿ, ನೀರು ಕುಡಿಸಲು ನೋಡಿದಳು. ತನ್ನ ಅತ್ತೆ ಇನ್ನಿಲ್ಲ ಎಂಬ ಸತ್ಯ ನಿಧಾನವಾಗಿ ಅವಳ ಅರಿವಿಗೆ ಬರತೊಡಗಿತು. ಸಿದ್ಧಾರ್ಥ ಸತತವಾಗಿ ಪ್ರಯತ್ನಿಸುತ್ತಲೇ “ಅಪ್ಪನ ಫೋನ್ ನಾಟ್ ರೀಚೆಬಲ್?” ಎಂದ. ರಾಮಚಂದ್ರ ಹೆಚ್ಚು ದೂರ ಹೋಗಿಲ್ಲ. ಆದರೂ, ಕೈಗೆ ಸಿಗುವಂತಿಲ್ಲ. ಅವನ ಫೋನು ಯಾವಾಗ ಸಿಗುತ್ತದೋ ಗೊತ್ತಿಲ್ಲ. ಸಿದ್ಧಾರ್ಥನನ್ನು ಪಕ್ಕದ ತೋಟದ ಐತಾಳರನ್ನು ಕರೆತರುವಂತೆ ಕಳುಹಿಸಿ, ಅತ್ತೆಯನ್ನು ಸರಿಯಾಗಿ ಮಲಗಿಸಿ ಕೈ ಹಿಡಿದು ಕುಳಿತಳು. ಯಾಕೆ ಎದ್ದು ಬಂದರು? ರಾಮಚಂದ್ರನನ್ನು ಕಳಿಸಲೆಂದು ಗೇಟಿನ ಬಳಿ ಹೋಗಿದ್ದ ನಮಗೆ ಕಾರಿನ ಶಬ್ದದಲ್ಲಿ ಅವರು ಕರೆದದ್ದು ಕೇಳಲಿಲ್ಲವೇ? ರಾಮಚಂದ್ರನನ್ನು ಕರೆಯಲು ಬಂದದ್ದೇ ಆಗಿದ್ದರೆ ಏನು ಹೇಳಲು ಬಯಸಿದ್ದರು? ತೋಟ ಮಾರುವುದು ಬೇಡವೆಂದೇ? ನಿರಂತರವಾಗಿ ಕಾಡುತ್ತಿದ್ದ ಪ್ರಶ್ನೆಗಳ ಜೊತೆಗೆ ಅತ್ತೆಯ ದೇಹದ ಪಕ್ಕ ಕುಳಿತು, ತಾನು ಈ ಮನೆ ಸೇರಿದ ಮೇಲೆ ಕಂಡ ಮೊದಲ ಸಾವು ಇದು ಎಂಬ ಪ್ರಜ್ಞೆಯೊಂದಿಗೆ, ಯಾರಾದರೂ ಬೇಗ ಬರಬಾರದೇ ಎಂಬ ನಿರೀಕ್ಷೆಯಲ್ಲಿ ಕಾಯತೊಡಗಿದಳು ಲಹರಿ.