ಎಷ್ಟೋ ಬಾರಿ ಪ್ರಗಲ್ಭ ವಿದ್ವಾಂಸರೆಂದೆನಿಸಿಕೊಂಡವರ ಬರವಣಿಗೆಗಳು ಪಂಡಿತರಿಗೆ ಮಾತ್ರ ಪ್ರಿಯವಾಗುವಂತೆ ಇರುವುದನ್ನು ನೋಡುತ್ತೇವೆ. ಅಂತಹವರು ಸಾಮಾನ್ಯ ಜನರಿಗೆ ಎಟುಕುವಂತಹ ಭಾಷೆಯಲ್ಲಿ ವಿಷಯನಿರೂಪಣೆಯನ್ನು ಮಾಡುವ ಕೌಶಲವನ್ನೇ ಪಡೆದಿಲ್ಲವೇನೋ ಎಂಬಂತೆ ತೋರುತ್ತದೆ. ಆದರೆ ಇಂತಹ ಕೊರತೆ ರಾಮಚಂದ್ರರಾಯರು ರಚಿಸಿದ ಗ್ರಂಥರಾಶಿಯಲ್ಲಿ ಎಲ್ಲಿಯೂ ಕಾಣದು; ದೇವಾಲಯಸಂಸ್ಕೃತಿಗೆ ಸಂಬಂಧಪಟ್ಟಂತೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನೂ, ಕೃತಿಶ್ರೇಣಿಗಳನ್ನೂ ರಾಯರು ರಚಿಸಿರುವರು. ಎಲ್ಲ ಹಂತಗಳ ವಿದ್ಯಾರ್ಥಿಗಳಿಗೂ ಸಾಮಾನ್ಯಜನರಿಗೂ ಸಂಶೋಧಕರಿಗೂ ಪ್ರಯೋಜನವಾಗುವಂತಹ ವಿವಿಧ ಗಾತ್ರಗಳ ಗ್ರಂಥಗಳನ್ನು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಬರೆದಿರುವರು. ಓದುಗರನ್ನು ಗಮನದಲ್ಲಿರಿಸಿಕೊಂಡು ಗಹನವಾದ ವಿಷಯಗಳನ್ನೂ ತಿಳಿಯಾದ […]
ದೇವಾಲಯ ಸಂಸ್ಕೃತಿ, ಮೂರ್ತಿಶಿಲ್ಪ, ವಾಸ್ತುಶಿಲ್ಪಗಳ ಅಧ್ಯಯನ: ಎಸ್.ಕೆ. ರಾಮಚಂದ್ರರಾಯರ ಹೊಳಹುಗಳು
Month : September-2024 Episode : Author : ಅರ್ಜುನ ಭಾರದ್ವಾಜ್