ಅದೇಕೋ ಆ ಮಾತು ನಾಲಗೆಯಿಂದ ಜಾರಿಬಿಟ್ಟಿತ್ತು. ಒಂದು ಕ್ಷಣ ಅವರು ತಬ್ಬಿಬ್ಬಾಗಿರಬೇಕು. ನಾನೇನು ಅವರ ಮುಖವನ್ನು ಹಿಂದಿರುಗಿ ನೋಡಲಿಲ್ಲ. ಆದರೆ ಅದರಲ್ಲಾಗಿರಬಹುದಾದ ಬದಲಾವಣೆಯನ್ನು ಹಾಗೆಯೇ ಚಿತ್ರಿಸಿಕೊಂಡೆ. ಅವರು ಏನೂ ಮಾತಾಡಲಿಲ್ಲ; ಮೌನವಾಗಿದ್ದರು… ಗೇಟು ತೆರೆದ ಸದ್ದಾಯಿತು, ಹಿಂದೆಯೇ ಸೈಕಲ್ಲಿನ ಚಕ್ರ ಉರುಳುವಾಗಿನ ಟಕ-ಟಕ ಸದ್ದು. ಮುಂಬಾಗಿಲು ತೆರೆದ ಸಪ್ಪಳ; ಅವರೇ ಇರಬೇಕು. ಇದು ಅವರು ಮನೆಗೆ ಬರುವ ಸಮಯ. “ಅಣ್ಣ ಬಂದ್ರು…. ಅಣ್ಣ ಬಂದ್ರು….!” – ಕಿರಣ ಚಪ್ಪಾಳೆ ತಟ್ಟಿ ಕೂಗುತ್ತಿದ್ದಾಳೆ. “ಕಿರಣಾ…. ಅಮ್ಮಾ ಇಲ್ಲಾ?” – […]
ಜೀವದ ರೇವು
Month : March-2018 Episode : Author : ಈಶ್ವರಚಂದ್ರ