“ಬೀದಿಗಿಂತ ದೊಡ್ಡ ಯೂನಿವರ್ಸಿಟಿ ಪ್ರಪಂಚದಲ್ಲಿ ಇಲ್ಲ. ಹಸಿವೆಗಿಂತ ದೊಡ್ಡ ಗುರುವಿಲ್ಲ. ಹೊಟ್ಟೆ ಹಸಿದಾಗಲೇ ತಲೆ ಓಡೋದು, ಅದು ಹೇಳಿದ ದಿಕ್ಕಲ್ಲಿ ಮಿಕ್ಕೆಲ್ಲ ಅಂಗಗಳು ಓಡೋದು.’’ ಮಾಸ್ಟರ್ ಹಿರಣ್ಣಯ್ಯನವರನ್ನು ನಾನು ಮೊದಮೊದಲು ಸಂಧಿಸಿದ ದಿನಗಳಲ್ಲಿ ಅವರು ನುಡಿದ ಮಾತುಗಳಿವು. ಉತ್ತರ ಕರ್ನಾಟಕದಲ್ಲಿ ಮೈಸೂರಿನ ಭಾಷೆಯು ನಡೆಯದಿದ್ದಾಗ ನಟರನ್ನು ಜನಗಳ ಮಧ್ಯೆ ಬಿಟ್ಟು, ಅವರ ಮಾತುಗಳನ್ನು ಗಮನಿಸಲು ಹೇಳಿ, ಜನರ ಆಡುನುಡಿಗಳನ್ನು ನಾಟಕಕ್ಕೆ ಅಳವಡಿಸಿಕೊಂಡಮೇಲೆಯೇ ಉತ್ತರ ಕರ್ನಾಟಕದಲ್ಲಿ ನಾಟಕಕ್ಕೆ ‘ದಕ್ಷಿಣೆ’ ದೊರೆತಿದ್ದು. ನಾಟಕವು ಕ್ಲಿಕ್ಕಾಗಲು ಡೈಲಾಗುಗಳು ಸಿಕ್ಕಿದ್ದು ಬೀದಿಯಲ್ಲೇ! ವರಕವಿ […]





