ಇಂದಿನ ಭಾರತದ ರಾಜಸ್ಥಾನ ರಾಜ್ಯದ ಮೇವಾರ-ಚಿತ್ತೂರುಗಢ ಪ್ರದೇಶಗಳನ್ನು ಆಳಿದ ರಜಪೂತರಲ್ಲಿ ಪ್ರಸಿದ್ಧನಾದವನು ಮಹಾರಾಣಾ ಕುಂಭಕರ್ಣ ಅಥವಾ ರಾಣಾ ಕುಂಭ. ಈತನು ಸನಾತನ ಧರ್ಮದ ಅನುಯಾಯಿಯಾಗಿದ್ದು, ಅದರ ಉಳಿವಿಗಾಗಿ ಹೋರಾಡಿದಂತಹ ಪರಾಕ್ರಮಶಾಲಿ ರಾಜ. ಈತನ ಮೊಮ್ಮಗನಾದ ರಾಣಾ ಸಂಗ ಅಥವಾ ಸಂಗ್ರಾಮಸಿಂಹನು ಕೂಡ ಇಂತಹುದೇ ಉದ್ಯಮವನ್ನು ಕೈಗೊಂಡವನು. ಸಂಗನಿಂದ ಐದನೆಯವನಾದ ಮಹಾರಾಣಾ ಪ್ರತಾಪನು ಭಾರತದೇಶದ ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಮೊಘಲರೊಂದಿಗೆ ನಿರಂತರವಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಮಹಾನುಭಾವ. ಒಟ್ಟಾರೆಯಾಗಿ ಈ ವಂಶದವರು ಸನಾತನ ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರು. ದೇವಾಲಯಗಳನ್ನು, […]




