ಗುರುಗಳೇ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ನಿರ್ಮಿಸಿದ್ದ ಶ್ರೀ ಚಂದ್ರಶೇಖರಭಾರತೀ. ಮಹಾಸ್ವಾಮಿಗಳ ಶಿಲ್ಪವೊಂದಿತ್ತು. ಅದರ ಸನಿಹದಲ್ಲಿ, ಕುರ್ಚಿಯಲ್ಲಿ ಕುಳಿತುಕೊಂಡು ಪಾಠ ಮಾಡುತ್ತಿದ್ದರು. ಪಾಠದ ಆರಂಭಕ್ಕೂ ಮೊದಲು ನಾವು ಒಬ್ಬೊಬ್ಬರಾಗಿ ಅವರಿಗೆ ನಮಸ್ಕಾರ ಮಾಡುತ್ತಿದ್ದೆವು; ಆಗ ಅವರು ನಿಂತಿರುತ್ತಿದ್ದರು. ಎಲ್ಲರೂ ನಮಸ್ಕರಿಸಿದಮೇಲೆ ಸ್ವಾಮಿಗಳ ಪ್ರತಿಮೆಯ ಕಡೆಗೆ ತಿರುಗಿ “ಇದೆಲ್ಲವೂ ಅವರಿಗೆ” ಎನ್ನುತ್ತಿದ್ದರು. ಗುರುಗಳು ಸ್ವಾಮಿಗಳನ್ನು ಗುರುಗಳು ಎಂದೇ ಸ್ವೀಕರಿಸಿದ್ದರು. ಮಾತ್ರವಲ್ಲ, ಜ್ಞಾನ ಎನ್ನುವುದು ಅಪೌರುಷೇಯತತ್ತ್ವ ಎಂದು ಒಪ್ಪಿದವರು ಗುರುಗಳು; ಹೀಗಾಗಿ ‘ನಾನೇ ಗುರು’ ಎಂಬ ಅಹಂ ಹುಟ್ಟುವುದಕ್ಕೆ ಅವರಲ್ಲಿ ಅವಕಾಶವಾದರೂ […]
ಬದುಕಿಗೆ ಬೆಳಕಾಗಿ ಒದಗಿದ ಗುರು
Month : September-2024 Episode : Author : ಎಸ್. ಸೂರ್ಯಪ್ರಕಾಶ್ ಪಂಡಿತ್