ದೊಡ್ಡದಾದ ಬಾಳೆಲೆ ಹರಡಿದ್ದರು. ಮಿಂದು ಬಂದು ಮಡಿಯಾದ ವಸ್ತ್ರದಲ್ಲಿದ್ದ ಅಪ್ಪಣ್ಣನೆದುರು ಊಟದೆಲೆ ಹಾಕಿದಾಗ ಘಂಟೆ ಇನ್ನೂ ಹನ್ನೊಂದು. ದೂರದಲ್ಲಿ ಕಂಬದ ಅಡ್ಡದಿಂದ, ಗೋಡೆಯ ಮಗ್ಗುಲಿಂದ, ಬಾಗಿಲ ಬುಡದಲ್ಲಿ, ಚಪ್ಪರದ ಮರೆಯಿಂದ, ಅಪ್ಪಣ್ಣನ ಊಟದ ವೈಖರಿಯನ್ನು ಕಾಣಲು ಹತ್ತಿಪ್ಪತ್ತು ಜೊತೆ ಕಣ್ಣುಗಳು ಇಣುಕುತ್ತಿದ್ದವು. ಮನೆಯ ಹಿರಿಯ ಯಜಮಾಂತಿ ಎಲೆಗೆ ಬೆಳ್ತಿಗೆ ಅನ್ನದ ರಾಶಿಯನ್ನೇ ಹಾಕಿದಳು. ಹಿಂದೆಯೇ ಆಕೆಯ ಮಗಳು ವ್ಯಂಜನದ ಪಾತ್ರೆಗಳನ್ನು ಒಂದೊಂದಾಗಿ ಅಮ್ಮನ ಕೈಗೆ ನಿಲುಕುವ ಹಾಗೆ ಇರಿಸುತ್ತ ದೃಷ್ಟಿಯನ್ನು ಆತನ ಎಲೆಯತ್ತಲೇ ತಿರುಗಿಸಿದಳು. ಅವಳ? ಅಲ್ಲ; […]
ಕರುಣಾಳು ಭಾ ಬೆಳಕೆ
Month : March-2018 Episode : Author : ಕೃಷ್ಣವೇಣಿ ಕಿದೂರು