ಶ್ರದ್ಧಾನಂದರ ಪ್ರೇರಣೆ ಕಲ್ಲೇಶಿಯ ಅಂತಃಸತ್ತ್ವವನ್ನು ಕಲಕಿತ್ತು. ‘ತಾನು ಏನನ್ನಾದರೂ ನಿಜವಾಗಿಯೂ ಮಾಡಬಲ್ಲೆನೆ?’ ಎಂಬ ಎಂದೂ ಕಾಡದ ಆಲೋಚನೆಯಲ್ಲಿ ಹಲವಾರು ದಿನಗಳ ಕಾಲ ಮುಳುಗಿಹೋದ. ಕೊನೆಗೆ ತನ್ನ ತಾಯಿ ಅವನು ಚಿಕ್ಕವನಾಗಿದ್ದಾಗ ಅವನನ್ನು ಜೊತೆಯಲ್ಲಿ ಸೇರಿಸಿಕೊಂಡು ಮಾಡುತ್ತಿದ್ದ ಉದ್ಯೋಗ ನೆನಪಾಯಿತು. ಭಿಕ್ಷಾಟನೆಯಲ್ಲಿ ಉಳಿಸಿಟ್ಟಿದ್ದ ಹಣದಿಂದ ಹೂವಿನ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲ್ಲೇಶಿ. ಮೊದಲನೆಯ ಹೂವಿನ ಹಾರವನ್ನು ಆಲಯದ ದೇವರಿಗೆ ಅರ್ಪಿಸಿ ಯಶಸ್ಸಿಗಾಗಿ ಪ್ರಾರ್ಥಿಸಿದ. ದಿನಗಳುರುಳಿದಂತೆ ಅವನ ವ್ಯಾಪಾರ ಸೊಗಸಾಗಿ ಸಾಗಿ ಆತನಲ್ಲಿ ಹಣ ಸಂಗ್ರಹಣೆಯಾಗತೊಡಗಿತು. ಪ್ರಗತಿಪುರದ ತ್ರಯಂಬಕೇಶ್ವರನ […]
ಅಮೂಲ್ಯ ಭಿಕ್ಷೆ
Month : August-2023 Episode : Author : ಕೆ.ಎನ್. ಸುಬ್ಬರಾವ್, ವರ್ತೂರು