
ಥತ್! ನಾನೇಕೆ ಹೀಗಾಗಿಹೋದೆ? ಒಂದು ಕಥೆ ಗೀಚುವುದಕ್ಕೆ ಹದಿನೈದು ದಿನಗಳಿಂದ ತಿಪ್ಪರಲಾಗ ಹಾಕುತ್ತಾ ಇದ್ದರೂ ಆಗುತ್ತಾ ಇಲ್ಲವಲ್ಲ. ಇಪ್ಪತ್ತೆಂಟು ಕುಂಟುನೆಪಗಳು. ತುಂಬಾ ಸೆಕೆ, ಮೂಡ್ ಇಲ್ಲ, ಮದುವೆಯ ರಿಸೆಪ್ಷನ್ಗೆ ಹೋಗಬೇಕು, ಸಣ್ಣಗೆ ತಲೆನೋವು ಇತ್ಯಾದಿ ಇತ್ಯಾದಿ. ಮುಖ್ಯವಾದ ಕಾರಣ ಸೋಂಬೇರಿತನವಾದರೂ ಅದನ್ನು ಒಪ್ಪಿಕೊಳ್ಳದೆ ನನ್ನ ಮನಸ್ಸಿಗೆ ನಾನೇ ವಂಚಿಸಿಕೊಳ್ಳುತ್ತಾ ಇದ್ದೇನೆ ಎಂದುಕೊಂಡರೂ ಕಥೆಗೆ ಒಂದು ಒಳ್ಳೆ ಪ್ಲಾಟ್ ಸಿಕ್ಕದಿರುವುದೇ ನ್ಯಾಯವಾದ ಕಾರಣ. ಪ್ರತಿಷ್ಠಿತ ಪತ್ರಿಕೆಯೊಂದರ ದೀಪಾವಳಿ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ಕಥೆಗಳನ್ನು ನಾನು ಬಹಳ ವರ್ಷಗಳಿಂದ ಸ್ಟಡಿ […]