ಯುವಜನರು ಮಾತ್ರ ವಾಯುವಿಹಾರಕ್ಕೆ ಒಂಟಿಯಾಗಿಯೇ ಬರುವುದು. ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು, ಗಾಳಿಯ ಜೊತೆ ಗುದ್ದಾಡುವವರಂತೆ ತಾಸುಗಟ್ಟಲೆ ಹರಟುತ್ತ ಸುತ್ತು ಹೊಡೆಯುತ್ತಿರುತ್ತಾರೆ. ಇನ್ನು ಕೆಲವರು ಮೂಲೆಯೊಂದನ್ನು ಆಯ್ದುಕೊಂಡು ಮೊಬೈಲ್ ತೀಡುತ್ತ ಕುಳಿತಿರುತ್ತಾರೆ. ಎಷ್ಟೋ ಪ್ರೀತಿಗಳು ವಾಯುವಿಹಾರದಲ್ಲಿಯೇ ಅರಳಿ ಅಲ್ಲಿಯೇ ಮುರುಟಿಹೋಗುತ್ತವೆ. ಇವರ ಹಿಂದೆಮುಂದೆ ಸಂಚರಿಸುವ ವಿಹಾರಿಗಳು ಕೆಟ್ಟ ಕುತೂಹಲದಿಂದ ಇವರತ್ತ ಕಿವಿಗೊಟ್ಟರೆ ಇವರ ಮಾತುಕತೆ ಎರಡೂ ಅರ್ಥವಾಗುವುದಿಲ್ಲ. ಬರೀ ಎಸ್, ನೋ, ಐ ಸ್ವೇರ್, ಪ್ರಾಮಿಸ್ ಇಂಥವೇ ಶಬ್ದಗಳು ಕೇಳುತ್ತವೆಯೇ ಹೊರತಾಗಿ ವಾಕ್ಯಗಳಂತೂ ಒಂದೂ ಇಲ್ಲ. ಬರಬರುತ್ತ […]
ತರಾವರಿ ವಾಯುವಿಹಾರಿಗಳು
Month : May-2024 Episode : Author : ಗೌರಿ ಚಂದ್ರಕೇಸರಿ