
ಟಾರು ಕಾಣದ ರಸ್ತೆಯ ಸುತ್ತ ಮೂವತ್ತು, ನಲವತ್ತು ಮನೆಗಳು. ಅಲ್ಲೊಂದು ಇಲ್ಲೊಂದು ಗುಡಿಸಲು. ಅದರ ಮುಂದೆ ಕೋಳಿ, ದನ. ಊರ ಹೊರಗೆ ನೀಲಗಿರಿಯ ತೋಪು. ಅದರ ಪಕ್ಕದಲ್ಲಿ ತುಂಗಭದ್ರಾ ನದಿ. ಆದರೆ ಸೊರಗಿ ಹರಿಯುತ್ತಿದ್ದ ಅದನ್ನು ನದಿ ಅಂತ ಕರೆಯಲು ಕೂಡ ಹೆದರಿದಂತೆ ಆ ಊರಿನ ಜನ ಅದನ್ನು ‘ಹೊಳೆ’ ಅಂತಲೇ ಕರೆಯುತ್ತಿದ್ದರು. ತುಂಗಭದ್ರಾ ನೀರಿನ ಸವಿ ಉಂಡ ಭತ್ತ, ಕಬ್ಬುಗಳ ಹಸಿರು ನೋಡುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಊರೆಲ್ಲ ಸುತ್ತಿ, ಸಾಯಂಕಾಲದ ವೇಳೆಗೆ ಸಂಶೋಧಕರ ಟೆಂಟ್ […]