
ಇದು ನಡೆದದ್ದು ಸುಮಾರು ಎರಡು ವರ್ಷಗಳ ಹಿಂದೆ. ಕುಂದಾಪುರದ ಕಾಲೇಜಿನಲ್ಲಿ ನನ್ನ ಜೊತೆಯಲ್ಲಿ ಕೆಲಸ ಮಾಡುವ ಸಹದ್ಯೋಗಿಯೊಬ್ಬಳೊಂದಿಗೆ ಜೊತೆ ಮಂಗಳೂರಿಗೆ ಹೋಗಿದ್ದೆ. ಎರಡು ದಿನ ರಜೆ ಇದ್ದುದರಿಂದ ಮಂಗಳೂರಿನಲ್ಲೇ ಒಂದು ರಾತ್ರಿ ಉಳಿದುಕೊಂಡು, ಮನಸ್ಸು ತುಂಬುವಷ್ಟು ಪೇಟೆ ಸುತ್ತಿ, ಸಾಕೆನಿಸುವಷ್ಟು ವಿಂಡೋ-ಶಾಪಿಂಗ್ ಮಾಡಿ, ಸಾಗರದ ನೀರಿನಲ್ಲಿ ಆಡಿ, ಹೊರಳಾಡಿ, ಹೊಸ ಹೊಸ ಹೋಟೆಲಿನ ಹೊಸ ಹೊಸ ತಿನಿಸುಗಳನ್ನು ಸವಿದು ಬರುವ ಯೋಚನೆ ನಮ್ಮದು. ಅಂದುಕೊಂಡಂತೆ ಸಿಟಿಸೆಂಟರ್ ಮಾಲ್ನ ಹತ್ತಿರದ, ನಮ್ಮ ಪರಿಚಯದವರ ಒಳ್ಳೆಯ ಲಾಡ್ಜ್ನಲ್ಲಿ ಕೋಣೆಯೊಂದನ್ನು ಬಾಡಿಗೆ […]