ಎಸ್.ಕೆ.ಆರ್. ಅವರ ವಿವೇಚನೆಯಲ್ಲಿ ಪಾಂಡಿತ್ಯವಿದೆ. ಆದರೆ ಈ ಪಾಂಡಿತ್ಯ ವಿವರಗಳ ಪ್ರದರ್ಶನದ ಆಡಂಬರಕ್ಕೆ ಎಡೆಗೊಡದೆ ಪ್ರತಿಯೊಂದು ಹಂತದಲ್ಲಿಯೂ ಸಾರ್ಥಕತೆಯ (‘ಸ+ಅರ್’) ಕಡೆಗೆ ಚಲಿಸುತ್ತದೆ. ಹಾಗೆ ನೋಡಿದರೆ, ಆಲಂಕಾರಿಕ ಪಾಂಡಿತ್ಯದ ನಿರಾಕರಣೆ ಒಂದು ಮೌಲ್ಯವೆಂಬಂತೆ ಅವರಲ್ಲಿ ಸ್ಥಾಪಿತವಾಗುತ್ತದೆ. ಇದನ್ನು ಹರಿದಾಸರ ಧೋರಣೆಯನ್ನು ಗ್ರಹಿಸುವಲ್ಲಿ ಒಂದು ಪ್ರಧಾನವಾದ ಕೀಲಿಕೈಯಾಗಿ ಅವರು ಬಳಸಿಕೊಳ್ಳುತ್ತಾರೆ. ದಾಸಸಾಹಿತ್ಯ ಅನುಸಂಧಾನಕ್ಕೆ ಎಸ್.ಕೆ. ರಾಮಚಂದ್ರರಾಯರ ಕೊಡುಗೆ ಏನೆಂಬುದನ್ನು ಪರಿಶೀಲಿಸುವುದಕ್ಕೆ ಮೊದಲು ನಮ್ಮಲ್ಲಿ ದಾಸಸಾಹಿತ್ಯ ಅನುಸಂಧಾನವನ್ನು ಅನುಕೂಲಕರವನ್ನಾಗಿ ಮಾಡಿಕೊಂಡಿರುವ ದಾರಿಗಳಿವೆಯೆಂಬುದನ್ನು ಹೇಳಬೇಕು. ಇವರಲ್ಲಿ ಕೆಲವರು ದಾಸಸಾಹಿತ್ಯವನ್ನು ‘ಒಳಗಿ’ನಿಂದ ನೋಡುವವರು; […]
ದಾಸಸಾಹಿತ್ಯ ಅನುಸಂಧಾನಕ್ಕೆ ಎಸ್.ಕೆ. ರಾಮಚಂದ್ರರಾಯರ ಕೊಡುಗೆ
Month : September-2024 Episode : Author : ಡಾ.ಎಚ್.ಎನ್. ಮುರಳೀಧರ