
‘ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಬರೆದುಕೊಟ್ಟು ಬಿಡುಗಡೆಯಾಗಿ ಹೊರಬಂದ ಸಾವರಕರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ಹಿಂದುಗಳಿಗೆ “ನೀವೆಲ್ಲ ಹೆಚ್ಚುಹೆಚ್ಚು ಸೈನ್ಯಕ್ಕೆ ಸೇರಿಕೊಳ್ಳಿ. ಆಗ ನಮ್ಮಲ್ಲಿ ಹೋರಾಟದ ಮನೋಭಾವ (fighting spirit) ಮೂಡುತ್ತದೆ. ಜೊತೆಗೆ ಬಂದೂಕು ಹಿಡಿಯುವುದು, ಹಿಡಿದು ನಾವೇನು ಮಾಡಬೇಕು ಎನ್ನುವುದು ತಿಳಿಯುತ್ತದೆ. ಇದು ಸ್ವಾತಂತ್ರ್ಯ ಚಳವಳಿಯನ್ನು ಮಾಡುವ ಹೊಸ ರೀತಿಯನ್ನು, ಹೊಸ ಮಾರ್ಗವನ್ನು ನಮಗೆ ತೋರಿಸಬಹುದು” – ಎಂದು ಕರೆಕೊಟ್ಟರು. ಸಾವರಕರ್ ಬಗೆಗಿನ ಅಪಪ್ರಚಾರಗಳು ಹಸಿಸುಳ್ಳುಗಳ ಕಂತೆಯೇ ಸರಿ. ಹೀಗೆ ಪ್ರಚಾರ ಮಾಡುವವರು ಸಾವರಕರರನ್ನು ಯಾರಿಗೆ ಹೋಲಿಸುತ್ತಾರೆ? […]