ಅಷ್ಟಾಂಗವೆಂಬುದು ಆಯುರ್ವೇದಶಾಸ್ತ್ರಕ್ಕೆ ಪರ್ಯಾಯಭೂತವಾದದ್ದು. ಕಾಯಚಿಕಿತ್ಸೆ, ಶಲ್ಯತಂತ್ರ, ಶಾಲಾಕ್ಯತಂತ್ರ, ಕೌಮಾರಭೃತ್ಯ, ಭೂತವಿದ್ಯೆ, ಅಗದತಂತ್ರ, ರಸಾಯನ, ಮತ್ತು ವಾಜೀಕರಣ – ಎಂಬಿವೇ ಎಂಟು ಅಂಗಗಳು. ಇವೆಂಟು ಅಂಗಗಳು ಮನುಷ್ಯನು ಸುಖವಾಗಿರಲು ಬೇಕಾದ ಎಲ್ಲ ಅಂಶಗಳನ್ನೂ ಒಳಗೊಳ್ಳುತ್ತವೆ. ಹೀಗಾಗಿ ಆಯುರ್ವೇದವು ಮನುಷ್ಯರ ಪೂರ್ಣವಾದ ಆರೋಗ್ಯದ ಸಾಧನೆಯ ದೃಷ್ಟಿಯಿಂದ ಭಾರತದ ಪ್ರಾಚೀನರು ತಂದಿರುವ ವ್ಯವಸ್ಥೆಯಾಗಿದೆ. ಮನುಷ್ಯನಿಗೆ ಆವಶ್ಯಕವಾದ ರೋಗರಾಹಿತ್ಯ ಹಾಗೂ ಪಾರಲೌಕಿಕವಾದ ಸುಖ – ಇವೆರಡಂಶಗಳನ್ನೂ ಗಮನಿಸಿ ಅದಕ್ಕೆ ವ್ಯವಸ್ಥೆಯನ್ನು ಕಲ್ಪಿಸುವ ಸಂಕಲ್ಪವೂ ಯತ್ನಗಳೂ ವೇದಕಾಲದಿಂದಲೇ ನಡೆದುಬಂದಿವೆ. ಹೀಗಾಗಿ ಆಯುರ್ವೇದವು ಸುಮಾರು ಏಳು […]
ಸಾ.ಕೃ. ರಾಮಚಂದ್ರರಾಯರ ಆಯುರ್ವೇದ ಅನುಸಂಧಾನ
Month : September-2024 Episode : Author : ಡಾ. ಕೆ.ಎಸ್. ಕಣ್ಣನ್