ರಾಮಜನ್ಮಭೂಮಿಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದ್ದಾಗ ರಾಮಭದ್ರಾಚಾರ್ಯರು ಮಹತ್ತ್ವದ ಪಾತ್ರ ವಹಿಸಿದ್ದರು. ೨೦೦೩ರಲ್ಲಿ ಅಲಹಾಬಾದ್ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ರಾಮಭದ್ರಾಚಾರ್ಯರು ಅಯೋಧ್ಯೆಯೇ ರಾಮನ ಜನ್ಮಭೂಮಿ ಎನ್ನುವುದನ್ನು ಸ್ಪಷ್ಟವಾದ ದಾಖಲೆಗಳಿಂದ ಪ್ರತಿಪಾದಿಸಿದರು. ಸ್ಕಾಂದಪುರಾಣದಲ್ಲಿ ರಾಮಮಂದಿರದ ಭೌಗೋಳಿಕ ವಿವರಣೆಯಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇವರು ಪ್ರತಿಪಾದಿಸಿದ ಅನೇಕ ವಿಷಯಗಳು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲಿಖಿತವಾಗಿವೆ. ಕಣ್ಣಿಲ್ಲದವರೂ ಜಗತ್ತಿಗೆ ಬೆಳಕಾಗಬಹುದು ಎಂಬುದರ ಉದಾಹರಣೆಯಾಗಿ ರಾಮಭದ್ರಾಚಾರ್ಯರು ನಮ್ಮ ಮುಂದೆ ನಿಲ್ಲುತ್ತಾರೆ. ಮನುಸ್ಮೃತಿಯಲ್ಲಿನ ‘ಯೋಽನೂಚಾನಃ ಸ ನೋ ಮಹಾನ್’ ಎಂಬ ವಾಕ್ಯವು ಮಹಾತ್ಮರ ಲಕ್ಷಣವನ್ನು ತಿಳಿಸುತ್ತದೆ. […]
ಯೋಽನೂಚಾನಃ ಸ ನೋ ಮಹಾನ್ ಸ್ವಾಮಿ ರಾಮಭದ್ರಾಚಾರ್ಯರು
Month : June-2024 Episode : Author : ಡಾ. ಲಕ್ಷ್ಮೀನಾರಾಯಣ ಪಾಂಡೇಯ