
ಸುಮಾರು ೯೩ ವರ್ಷಗಳ ಸುದೀರ್ಘ ಲವಲವಿಕೆಯ ಜೀವನವನ್ನು ನಡೆಸಿ ೧೯೯೭ರಲ್ಲಿ ನಿಧನರಾದ ಡಿ.ಆರ್. ದೇಶಪಾಂಡೆ ಅವರು ಸಾಂಗ್ಲಿ ಸಂಸ್ಥಾನದಲ್ಲಿ ಪ್ರಥಮ ಚುನಾಯಿತ ಪ್ರತಿನಿಧಿಯಾಗಿ, ಅನಂತರ ಸಚಿವ ಸಂಪುಟಕ್ಕೆ ಆಯ್ಕೆಯಾಗಿ ಶಿಕ್ಷಣ, ನಾಗರಿಕ ಪೂರೈಕೆ ಮುಂತಾದ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಜನಾನುರಾಗಿ ಮಂತ್ರಿಯಾಗಿ ಖ್ಯಾತರಾಗಿದ್ದರು. ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ಸಾಂಗ್ಲಿ ಸಂಸ್ಥಾನವೂ ಭಾರತದ ಒಕ್ಕೂಟದಲ್ಲಿ ಪ್ರಥಮ ಸಂಸ್ಥಾನವಾಗಿ ವಿಲೀನವಾಯಿತು. ಆಗ ಸಿಗಬಹುದಾಗಿದ್ದ ಯಾವುದೇ ದೊಡ್ಡ ಹುದ್ದೆಗಳನ್ನು ವಿನಯದಿಂದ ನಿರಾಕರಿಸಿದ ದೇಶಪಾಂಡೆ ಸ್ವಂತ ಊರು ಶಿರಹಟ್ಟಿ(ಅವಿಭಜಿತ ಧಾರವಾಡ ಜಿಲ್ಲೆಯ […]