
ವಿಂಧ್ಯದ ತಪ್ಪಲಲ್ಲಿ ಇರುವಂತಹ ನಿರ್ಜನ ಪ್ರದೇಶ. ಕಣ್ಣುಮುಚ್ಚಿಕೊಂಡು ಮೊದಲಮಳೆಗೆ ತೋಯ್ದ ಇಳೆಯ ಮಣ್ಣಿನ ಸುಗಂಧವನ್ನು ಆಸ್ವಾದಿಸುತ್ತಿದ್ದಾಳೆ ಲೇಖಾ. ಮೊತ್ತಮೊದಲ ಬಾರಿಗೆ ಈ ರೀತಿಯಾಗಿ ಒಬ್ಬಳೇ ಎಲ್ಲೋ ಬಂದಿರುವುದು. ಮನಸ್ಸಿನಲ್ಲಿ ತುಸು ದುಗುಡವಿದ್ದರೂ, ಏನೋ ಒಂದು ಥರಾ ನಿರುಮ್ಮಳ. ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ನದಿಯಾಗಿ ಹರಿದುಹೋಗುವ ಅದಮ್ಯ ಬಯಕೆ. ಆದರೆ ಆಗುತ್ತಿಲ್ಲ. ಏನೋ ಕಳವಳ. ಏನೋ ಗೊಂದಲ. ತನ್ನದಲ್ಲದ ತಪ್ಪಿಗೆ ತಾನು ಬಲಿಯಾಗುತ್ತಿರುವುದರ ಬಗ್ಗೆ ಅತೀವ ವಿಷಾದ. ಎಲ್ಲೋ ಮೆದುಳಿನಲ್ಲಿ ಏಳುವ ಅಲೆಗಳು ಮೈತುಂಬಾ ಹರಿದಾಡಿ, ಕೊನೆಗೆ ಫಕ್ಕೆಂದು ಹೃದಯವನ್ನು […]