ಕೆರೆಗಳ ಏರಿಯ ಮ್ಯಾಲೆ ಮಾನವನ ಮರ್ಕಟ ಲೀಲೆ ಕೆರೆಗಳ ಒಡಲನ್ನು ಮಣ್ಣಿಂದ ಮುಚ್ಚಿ ಮೇಲೊಂದು ಸೌಧ ಕಟ್ಟಿ ಕುಳಿತಿದ್ದ ಕಣ್ಮುಚ್ಚಿ ನಿಂಬೆಯ ಹಣ್ಣಂಗೆ ತುಂಬಿದ್ದ ಕೆರೆಗಳಿಂದು ತೀರದ ಮಾನವನ ದಾಹಕ್ಕೆ ಸೋತು ಕುಡಿದು ಎಸೆದ ಎಳೆನೀರಿನ ಚಿಪ್ಪುಗಳಾಗಿವೆ ರೋಗಕಾರಕ ಮಲಿನ ಗುಂಡಿಗಳಾಗಿವೆ ಕೋಟಿ ಜೀವಗಳ ಒಡಲು ತಣಿಸಿದ್ದ ಕೆರೆಯಿಂದು ತನ್ನ ಒಡಲಲ್ಲಿ ಕಸ-ಕಡ್ಡಿ ತಾಜ್ಯ ತುಂಬ್ಕೊಂಡು ಜೀವಚ್ಛವವಾಗಿ ಮಲಗಿದೆ ಹೂಳೆಂಬ ಮುಸುಕನ್ನು ಹೊದ್ಕೊಂಡು ಕೆರೆಯ ಏರಿಯ ಮೇಲೆ ಕುರಿಮರಿ ಮೇಯುವುದ ಕಂಡು ಬಣ್ಣಿಸಿದ ಕವಿಯಿಂದು ಕೆರೆಗೂ ಏರಿಗೂ […]
ಕೆರೆಯೊಡಲಿನ ಕೂಗು
Month : January-2018 Episode : Author : ಪ್ರಶಾಂತ್ ಅರೆಶಿರೂರ್