
ಸ್ವಾತಂತ್ರ್ಯಾನಂತರದ ಕಾಲದಲ್ಲಿ ಮದ್ರಾಸ್ ರಾಜ್ಯದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯ ಬೆಳವಣಿಗೆಯ ಹಲವಾರು ವಿವರಗಳು ನಮಗೆ ಧರ್ಮಪಾಲ್ ಅವರ ವರದಿಯಲ್ಲಿ ಲಭ್ಯವಾಗುತ್ತವೆ. ಮದ್ರಾಸ್ ಪಂಚಾಯತ್ರಾಜ್ ಮಸೂದೆ ೧೯೫೮ರ ವಿವರಗಳು, ಅದನ್ನು ಕಾನೂನಾಗಿ ಅಳವಡಿಸಿಕೊಂಡ ನಂತರ ಇಡೀ ರಾಜ್ಯದಲ್ಲಿ ಯಾವ ಸಾಂಸ್ಥಿಕ ರೂಪವನ್ನು ಅದು ಪಡೆಯಿತು, ೧೯೫೮ರ ಕಾನೂನಿನನ್ವಯ ರಚಿತವಾದ ಪಂಚಾಯತಿಗಳು, ಪಂಚಾಯತಿ ಸಮಿತಿಗಳು, ತಾಲೂಕು ಮಂಡಳಿಗಳು, ಜಿಲ್ಲಾಡಳಿತ ವ್ಯವಸ್ಥೆ ಇವುಗಳ ನಡುವೆ ಇದ್ದ ಪರಸ್ಪರ ಸಂಬಂಧ, ರಾಜ್ಯ ಸರ್ಕಾರವು ಸ್ಥಳೀಯ ಆಡಳಿತಗಳ ಮೇಲೆ ಹೇಗೆ ನಿಯಂತ್ರಣ ಹೊಂದಿತ್ತು ಎನ್ನುವುದರ ಸವಿವರ […]