ಮಾರನೆಯ ಸಂಜೆ ಕತ್ತಲೇರುತ್ತಿದ್ದಂತೆ ರಾಚನನ್ನು ಹುಡುಕಿಕೊಂಡು ಅವನು ಕುಳಿತುಕೊಳ್ಳುವ ಸ್ಥಳಕ್ಕೆ ಹೋದೆ. ಅಲ್ಲಿ ಅವನಿರಲಿಲ್ಲ. ಹಾಗೇ ಅವನ ಗುಡಿಸಿಲ ಕಡೆ ತಿರುಗಿದೆ. ಒಬ್ಬನೇ ನಡೆದೆ. ದಾರಿ ಗೊತ್ತಿತ್ತು. ಗುಡಿಸಿಲೂ ಕಾಣಿಸಿತು. ಆದರೆ ಒಳಗಣಿಂದ ಬೆಳಕು ಬರುತ್ತಿರಲಿಲ. “ಬನ್ನಿ, ಮಾಸಾಮಿ.” “ಏನೋ, ಸರಿಯಾಗಿ….?” “ವ್ಙೂ…. ಬುಡಿ ನನ್ನೊಡ್ಯ, ಕಳ್ಚಿ” “ಎಷ್ಟು ಕೊಡ್ಬೇಕೋ?” “ಐ…. ಕೆಲ್ಸ ನೋಡ್ಬಾರ್ದಾ ಶಿವ?” “ಅದಿರ್ಲಿ, ನೀ ಹೇಳೋ.” “ತಮ್ಸಂತೋಸ ಬುದ್ದೀ.” “ಲೇ ಲೇ,…. ಆ ಕೊನೆ ಸ್ವಲ್ಪ ಚೆನ್ನಾಗಿ….” “ವೊಸಿ ಸುಮ್ಕಿರಿ ದ್ಯಾವ್ರೇ.” ’ಅಲ್ಲಿ […]
ಮೋಚಿ
Month : March-2018 Episode : Author : ಭಾರತೀಪ್ರೀಯ